ಐಫೋನ್ ಕಳವು: ತಡೆಯಲು ಯತ್ನಿಸಿದ ಅಂಗಡಿ ಮಾಲೀಕನನ್ನು 15 ಮೀಟರ್‌ಗಳಷ್ಟು ಎಳೆದೊಯ್ದ ಕಳ್ಳ!
Viral Video: ಪಂಜಾಬ್ ನ ಲುಧಿಯಾನದಲ್ಲಿ ಈ ಘಟನೆ ನಡೆದಿದ್ದು ಅಂಗಡಿ ಮಾಲೀಕನು ಮೊಬೈಲ್ ವಾಪಸ್ಸು ಪಡೆಯಲು ಹರಸಾಹಸ ಪಟ್ಟಿದ್ದಾರೆ. ಆರೋಪಿಯು ಸ್ಕೂಟರ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದು ಅಂಗಡಿಕಾರರು ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ ದೃಶ್ಯ ಸಿಸಿಟಿವಿ ದೃಶ್ಯಾವಳಿ ಯಲ್ಲಿ ಸೆರೆಯಾಗಿದೆ. ಅಂತಿಮವಾಗಿ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡಿದ್ದು ಕದ್ದ ಫೋನ್ ಹಾಗೂ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ..
ಐಫೋನ್ ಕಳವು ತಡೆಯಲು ರೋಚಕ ಸಾಹಸ ಮೆರೆದ ಆಂಗಡಿ ಮಾಲೀಕ -
ಪಂಜಾಬ್,ಅ.12: ಅಂಗಡಿಯಿಂದ ಐಫೋನ್ 17 ಪ್ರೊ ಮ್ಯಾಕ್ಸ್ ಕದ್ದ ವ್ಯಕ್ತಿಯೊಬ್ಬನನ್ನು ತಡೆಯಲು ಯತ್ನಿಸಿದ ಅಂಗಡಿಕಾರರೊಬ್ಬರನ್ನು ಸುಮಾರು 15 ಮೀಟರ್‌ಗಳಷ್ಟು ದೂರಕ್ಕೆ ಎಳೆದೊಯ್ದಿರುವ ಆಘತಕಾರಿ ಘಟನೆಯೊಂದು (Viral News) ನಡೆದಿದೆ. ಪಂಜಾಬ್‌ನ ಲುಧಿಯಾನದಲ್ಲಿ ಈ ಘಟನೆ ನಡೆದಿದ್ದು ಅಂಗಡಿ ಮಾಲೀಕನು ಮೊಬೈಲ್ ವಾಪಸ್ಸು ಪಡೆಯಲು ಹರಸಾಹಸ ಪಟ್ಟಿದ್ದಾರೆ. ಆರೋಪಿಯು ಸ್ಕೂಟರ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದು ಅಂಗಡಿಕಾರರು ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅಂತಿಮವಾಗಿ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡಿದ್ದು ಕದ್ದ ಫೋನ್ ಹಾಗೂ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
'ಮೀಟ್' ಎಂದು ಗುರುತಿಸಲಾದ ಅಂಗಡಿಕಯ ಮಾಲೀಕರು ಮೊಬೈಲ್ ಕದ್ದ ಆರೋಪಿಯನ್ನು ಹಿಡಿಯಲು ಆತನ ಸ್ಕೂಟರ್‌ನ ಹಿಂಭಾಗದ ಕ್ಯಾರಿಯರ್ ಅನ್ನು ಹಿಡಿದುಕೊಂಡಿದ್ದರು. ಆದರೆ ಆರೋಪಿ ಅವರನ್ನು ರಸ್ತೆಯ ಮೇಲೆ ಸುಮಾರು 10 ರಿಂದ 15 ಮೀಟರ್‌ಗಳಷ್ಟು ದೂರಕ್ಕೆ ಎಳೆದುಕೊಂಡು ಹೋಗಿದ್ದಾನೆ. ಈ ರೋಚಕ ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ವಿಡಿಯೋ ನೋಡಿ:
A Ludhiana shopkeeper was dragged around 10–15 metres while trying to stop a man who allegedly fled with an iPhone 17 Pro Max. The incident occurred in BRS Nagar and was captured on CCTV. #Ludhiana #Punjab #CrimeNews #sanewsmadhyapradesh https://t.co/crGkqrog23
— SA News Madhya Pradesh (@SAnewsMP) October 11, 2026
ಆರೋಪಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಂಗಡಿಗೆ ಭೇಟಿ ನೀಡಿ ಇನ್‌ಸ್ಟಾಲ್‌ಮೆಂಟ್ ಮೂಲಕ ಐಫೋನ್ ಖರೀದಿಸುವ ಬಗ್ಗೆ ವಿಚಾರಿಸಿದ್ದ. ಖರೀದಿಯ ಕುರಿತು ಚರ್ಚಿಸಿದ ನಂತರ ಆತ ಅಂಗಡಿಯಿಂದ ಹೊರಹೋಗಿದ್ದಾರೆ. ಮಧ್ಯಾಹ್ನ 2:55ರ ವೇಳೆಗೆ ಮತ್ತೆ ಅಂಗಡಿಗೆ ಬಂದ ಕಳ್ಳ ಯಾರಿಗೂ ಕಾಣದಂತೆ ಒಂದು ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ಶರ್ಟ್ ಒಳಗೆ ಕದ್ದು ಇಟ್ಟುಕೊಂಡು ಒಮ್ಮಿದೊಮ್ಮಲೆ ಓಡಿಹೋಗಿದ್ದಾನೆ.
ಅಂಗಡಿಯ ಹೊರಗೆ ನಿಲ್ಲಿಸಿದ್ದ 'ಆಕ್ಟಿವಾ' ಸ್ಕೂಟರ್‌ನಲ್ಲಿ ಪರಾರಿಯಾಗಲು ಯತ್ನಿಸಿದಾಗ, ಮಾಲೀಕ ಮೀಟ್' ಅವನನ್ನು ಹಿಂಬಾಲಿಸಲು ಗಾಡಿಯ ಹಿಂಭಾಗದ ಕ್ಯಾರಿಯರ್ ಅನ್ನು ಹಿಡಿದುಕೊಂಡಿದ್ದಾರೆ. ಆದರೆ ಆರೋಪಿ ಸ್ಕೂಟರ್ ನಿಲ್ಲಿಸುವ ಬದಲು, ವೇಗವನ್ನು ಹೆಚ್ಚಿಸಿದ್ದಾನೆ. ಆಗ ಮಾಲೀಕ 'ಮೀಟ್' ಸ್ಕೂಟರ್ ಅನ್ನು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಹಲವಾರು ಮೀಟರ್‌ಗಳವರೆಗೆ ಎಳೆಯಲ್ಪಟ್ಟಿದ್ದಾರೆ.
ಕೈಕಾಲುಗಳಿಗೆ ತೀವ್ರ ಪೆಟ್ಟಾದರೂ ಅವರು ಬಿಡದೆ ಸಾಹಸ ಪಟ್ಟಿದ್ದಾರೆ. ಅಂತಿಮವಾಗಿ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದಾಗ, ಕಳ್ಳ ಕಳವು ಮಾಡಿದ್ದ ಐಫೋನ್ ಹಾಗೂ ತನ್ನ ಸ್ಕೂಟರ್ ಎರಡನ್ನೂ ಅಲ್ಲೇ ಬಿಟ್ಟು ಓಡಿದ್ದಾನೆ. ಈ ಘಟನೆಯಲ್ಲಿ 'ಮೀಟ್' ಅವರ ಮೊಣಕಾಲುಗಳಿಗೆ ಗಾಯಗಳು ಆಗಿವೆ. ಅಲ್ಲದೆ, ಹತ್ತಿರದಲ್ಲಿದ್ದ ಹಲವಾರು ಅಂಗಡಿಕಾರರು ಈ ಬೆನ್ನಟ್ಟುವಿಕೆಯನ್ನು ಗಮನಿಸಿದ್ದರೂ ಯಾರೂ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ ಎಂಬ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.