ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MI vs CSK: ತಂಡದ ಕಳಪೆ ಬ್ಯಾಟಿಂಗ್‌ ಕಂಡು ಪಂದ್ಯದ ಮಧ್ಯೆ ಮೈದಾನ ತೊರೆದ ಆಕಾಶ್ ಅಂಬಾನಿ; ವಿಡಿಯೊ ವೈರಲ್‌

IPL 2026: ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಎಸ್‌ಕೆ 6 ವಿಕೆಟ್‌ಗೆ 207 ರನ್‌ ಗಳಿಸಿತು. ಸಂಜು ಸ್ಯಾಮ್ಸನ್‌ 54 ಎಸೆತಗಳಲ್ಲಿ ಔಟಾಗದೆ 101 ರನ್‌ ಸಿಡಿಸಿದರು. ಇದು ಅವರ ಸಿಎಸ್‌ಕೆ ಪರ 2ನೇ ಶತಕ. ಉಳಿದಂತೆ ಋತುರಾಜ್‌ 22, ಬ್ರೆವಿಸ್‌ 21 ರನ್‌ ಬಾರಿಸಿದರು.

ಪಂದ್ಯದ ಮಧ್ಯೆ ಮೈದಾನ ತೊರೆದ ಆಕಾಶ್ ಅಂಬಾನಿ; ಕಾರಣವೇನು?

akash ambani -

Abhilash BC
Abhilash BC Apr 24, 2026 6:09 PM

ಮುಂಬಯಿ, ಎ.24: ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌(MI vs CSK) ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ 103 ರನ್‌ ಅಂತರದ ಹೀನಾಯ ಸೋಲು ಕಂಡಿತ್ತು. ತಂಡದ ಕಳಪೆ ಬ್ಯಾಟಿಂಗ್‌ ಕಂಡು ರೊಚ್ಚಿಗೆದ್ದ ಮಾಲೀಕ ಆಕಾಶ್ ಅಂಬಾನಿ(Akash Ambani), ಪಂದ್ಯ ಪೂರ್ತಿಯಾಗುವ ಮೊದಲೇ ಸ್ಟೇಡಿಯಂನಿಂದ ಹೊರನಡೆದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಆಕಾಶ್ ಅಂಬಾನಿ ಪಂದ್ಯದ ಮಧ್ಯೆ ತವರಿನ ಪ್ರೇಕ್ಷಕರಿಗೆ ಕೈ ಬೀಸಿ ಪಂದ್ಯ ನೋಡಿದ್ದು ಸಾಕು ಎನ್ನುವಂತೆ ಸನ್ನೆ ಮಾಡಿ ಬಳಿಕ ತಾವು ಕೂಡ ಮೈದಾನ ತೊರೆದರು. ಮೈದಾನದಿಂದ ಹೊರಡುವಾಗ ಮುಂಬೈ ತಂಡದ ಡಗೌಡ್‌ನ ಮುಂಭಾಗದಲ್ಲೆ ನಡೆದುಕೊಂಡು ಬಂದ ಅವರು ಆಟಗಾರರ ಕಡೆ ನೋಡದೆ ಹೊರನಡೆದರು. ಅವರ ವರ್ತನೆಯಲ್ಲೇ ತಂಡದ ಕಳಪೆ ಪ್ರದರ್ಶನದ ಆಕ್ರೋಶ ಎದ್ದು ಕಾಣುತ್ತಿತ್ತು.

ವೈರಲ್‌ ವಿಡಿಯೊ ಇಲ್ಲಿದೆ



ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಎಸ್‌ಕೆ 6 ವಿಕೆಟ್‌ಗೆ 207 ರನ್‌ ಗಳಿಸಿತು. ಸಂಜು ಸ್ಯಾಮ್ಸನ್‌ 54 ಎಸೆತಗಳಲ್ಲಿ ಔಟಾಗದೆ 101 ರನ್‌ ಸಿಡಿಸಿದರು. ಇದು ಅವರ ಸಿಎಸ್‌ಕೆ ಪರ 2ನೇ ಶತಕ. ಉಳಿದಂತೆ ಋತುರಾಜ್‌ 22, ಬ್ರೆವಿಸ್‌ 21 ರನ್‌ ಬಾರಿಸಿದರು.

DC vs PBKS: ಅಜೇಯ ಪಂಜಾಬ್‌ ಕಿಂಗ್ಸ್‌ ಗೆಲುವಿನ ಓಟಕ್ಕೆ ಬ್ರೇಕ್ ಹಾಕೀತೇ ಡೆಲ್ಲಿ ಕ್ಯಾಪಿಟಲ್ಸ್‌?

ಬೃಹತ್‌ ಗುರಿ ಬೆನ್ನತ್ತಿದ ಮುಂಬೈ ಆರಂಭದಲ್ಲೇ ಕುಸಿತ ಕಂಡಿತು. ಯಾವುದೇ ಹಂತದಲ್ಲಿಯೂ ಪ್ರತಿ ಹೋರಾಟ ನಡೆಸದೆ ಪೆವಿಲಿಯನ್‌ ಪರೇಡ್‌ ನಡೆಸಿದರು. ಯಾವುದೇ ಆಟಗಾರನಲ್ಲಿಯೂ ಪಂದ್ಯ ಗೆಲ್ಲುವ ಜಿದ್ದು ಕಾಣಿಸಲೇ ಇಲ್ಲ. ಪವರ್‌ಪ್ಲೇನಲ್ಲಿ 3 ವಿಕೆಟ್‌ ಕಳೆದುಕೊಂಡು ಅದಾಗಲೇ ಸೋಲು ಖಿತಪಡಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 104 ರನ್‌ಗೆ ಆಲೌಟಾಯಿತು. ತಿಲಕ್‌ 37, ಸೂರ್ಯ 36 ರನ್‌ ಗಳಿಸಿದ್ದು ತಂಡದ ಪರ ಅತ್ಯಧಿಕ ವೈಯಕ್ತಿಕ ಮೊತ್ತ. ವಿಂಡೀಸ್‌ನ ಸ್ಪಿನ್ನರ್‌ ಅಕೀಲ್‌ ಹೊಸೈನ್‌ 4 ಓವರ್‌ನಲ್ಲಿ 17 ರನ್‌ಗೆ 4 ವಿಕೆಟ್‌ ಕಿತ್ತರು.

ಐಪಿಎಲ್ ಇತಿಹಾಸದಲ್ಲಿ ರನ್‌ಗಳ ಆಧಾರದ ಮೇಲೆ ಮುಂಬೈ ತಂಡವು ಚೆನ್ನೈ ವಿರುದ್ಧ ಕಂಡ ಅತಿದೊಡ್ಡ ಸೋಲು ಇದಾಗಿದೆ.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ 20 ಓವರ್‌ನಲ್ಲಿ 207/6 (ಸಂಜು ಔಟಾಗದೆ 101, ಘಜಾನ್ಫರ್‌ 2-25), ಮುಂಬೈ 19 ಓವರ್‌ನಲ್ಲಿ 104 (ತಿಲಕ್ 37, ಸೂರ್ಯ 36, ಅಕೇಲ್‌ 4-17, ನೂರ್‌ 2-24).