ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅನಾರೋಗ್ಯ ಪೀಡಿತ ಬೀದಿ ನಾಯಿಯನ್ನು ಸೈಕಲ್‌ ನಲ್ಲಿ ಕೂರಿಸಿ ಚಿಕಿತ್ಸೆ ಕೊಡಿಸಿದ ವ್ಯಕ್ತಿ; ವಿಡಿಯೋ ನೋಡಿದ್ರೆ ಕಣ್ತುಂಬಿ ಬರುತ್ತೆ

Viral Video: ಮುಂಬೈ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದ ದೃಶ್ಯ ಎಲ್ಲರ ಹೃದಯ ಗೆದ್ದಿದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬೀದಿ ನಾಯಿಯನ್ನು ವ್ಯಕ್ತಿಯೊಬ್ಬರು ಸೈಕಲ್ ನಲ್ಲಿ ಕೂರಿಸಿ ಚಿಕಿತ್ಸೆ ನೀಡಲು ಕರೆದೊಯ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗೆ ಚಿಕಿತ್ಸೆ ನೀಡಿದ ಮುಂಬೈ ವ್ಯಕ್ತಿ

ನಾಯಿಗೆ ಚಿಕಿತ್ಸೆ ನೀಡಿದ ಮುಂಬೈ ವ್ಯಕ್ತಿ -

Profile
Pushpa Kumari Apr 24, 2026 6:24 PM

ಮುಂಬೈ,ಏ.24: ಇಂದಿನ ಆಧುನಿಕ ಯುಗದಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮುಂದೆ ಬರುವವರು ಕಡಿಮೆ ಎಂದೇ ಹೇಳಬಹುದು. ಅದರಲ್ಲೂ ಮಾನವೀಯತೆ, ಸಂಸ್ಕಾರದ ಕೊರತೆಗಳು ಕಡಿಮೆಯಾಗಿದ್ದು ಜನರು ಜೀವನ ಮೌಲ್ಯಗಳನ್ನೇ ಮರೆತು ಬಿಟ್ಟಿದ್ದಾರೆ. ಆದ್ರೆ ಇವೆಲ್ಲದರ ನಡುವೆ ಮುಂಬೈ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದ ದೃಶ್ಯ ಎಲ್ಲರ ಹೃದಯ ಗೆದ್ದಿದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬೀದಿ ನಾಯಿಯನ್ನು ವ್ಯಕ್ತಿಯೊಬ್ಬರು ಸೈಕಲ್ ನಲ್ಲಿ ಕೂರಿಸಿ ಚಿಕಿತ್ಸೆ ನೀಡಲು ಕರೆದೊಯ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.

ಹೌದು ಮಾನವೀಯತೆ ಮರೆಯಾದ ಈ ಕಾಲದಲ್ಲೂ ವ್ಯಕ್ತಿಯ ಸಹಾಯ ಮಾನೋಭಾವ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಮುಂಬೈನ ಬೀದಿಯಲ್ಲಿ ನಾಯಿಯೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಈ ನಾಯಿಯನ್ನು ಅತ್ಯಂತ ಎಚ್ಚರಿಕೆಯಿಂದ ಅದಕ್ಕೆ ನೋವಾಗದಂತೆ ಮೇಲಕ್ಕೆ ಎತ್ತಿ ಸೈಕಲ್ ನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ವೈದ್ಯಕೀಯ ನೆರವಿಗಾಗಿ ನಾಯಿಯನ್ನು ಕರೆದೊಯ್ದು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ವಿಡಿಯೋ ನೋಡಿ:

ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ್ ಕುಡಾಲ್ಕರ್ ಈ ಹೃದಯಸ್ಪರ್ಶಿ ವೀಡಿಯೊ ಶೇರ್ ಮಾಡಿದ್ದಾರೆ. ವ್ಯಕ್ತಿಯೂ ಅಸ್ವಸ್ಥಗೊಂಡ ನಾಯಿಯನ್ನು ನಿಧಾನವಾಗಿ ತನ್ನ ಸೈಕಲ್‌ ಮೇಲೆ ಎತ್ತುವುದನ್ನು ಗಮನಿಸಬಹುದು. ಕಾರು ಅಥವಾ ವಿಶೇಷ ವಾಹನ ಇಲ್ಲದೆಯೇ ಆತ ತನ್ನ ಸೈಕಲ್ ಮೂಲಕವೇ ನಾಯಿಗೆ ಚಿಕಿತ್ಸೆ ನೀಡಲು ಕರೆದೊಯ್ದರು. ದಯೆಗೆ ಸಂಪತ್ತು ಅಗತ್ಯವಲ್ಲ ಕೇವಲ ಸಹಾಯ ಮಾಡುವ ಮನಸ್ಸಿದ್ದರೆ ಸಾಕು ಎಂಬುದನ್ನು ಈ ವಿಡಿಯೊ ಸಾರುವಂತೆ ಮಾಡಿದೆ.

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಆ ವ್ಯಕ್ತಿಯೂ ಯಾವುದೇ ಅಧಿಕಾರಿಗಳು ಆಗಲಿ ಅಥವಾ ಪ್ರಾಣಿ ಕಲ್ಯಾಣ ಸಂಸ್ಥೆಗಳು ಬರುವವರೆಗೆ ಕಾಯಲಿಲ್ಲ. ನಾಯಿ ಸಂಕಷ್ಟ ದಲ್ಲಿದೆ ಎಂದು ಅರಿತು ಸ್ವತಃ ನಾಯಿಯನ್ನು ಸಾಗಿಸಲು ನಿರ್ಧರಿಸಿದರು. ಸೈಕಲ್‌ನಲ್ಲಿ ಎಚ್ಚರಿಕೆಯಿಂದ ನಾಯಿಯನ್ನು ಕರೆದೊಯ್ದಿದ್ದಾರೆ. ಈ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ಸಂಯತೆ ಬಳಕೆದಾರರು ಮನುಷ್ಯನ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿದ್ದಾರೆ. ನೆಟ್ಟಿಗರೊಬ್ಬರು ಇಂತಹ ಮನೋಭಾವ ಬಡ ವ್ಯಕ್ತಿಯ ಹೃದಯದಲ್ಲಿ ಬರಲು ಮಾತ್ರ ಸಾಧ್ಯ ಎಂದಿದ್ದಾರೆ. ಮತ್ತೊಬ್ಬರು ನಿಜಕ್ಕೂ ಹೃದಯಸ್ಪರ್ಶಿ ದೃಶ್ಯ, ಈತನ ಕಾರ್ಯವೈಖರಿಗೆ ದೇವರು ಕೂಡ ಮೆಚ್ಚಿರಬಹುದು ಎಂದು ಬರೆದಿದ್ದಾರೆ.