ಇಸ್ಕಾನ್ ದೇವಸ್ಥಾನಕ್ಕೆ ಟ್ಯಾಕ್ಸಿ ಬುಕ್ ಮಾಡಿ ಚಾಲಕನಿಗೆ ಗ್ರಾಹಕ ಕಳುಹಿಸಿದ ಮೆಸೇಜ್ ಏನು ಗೊತ್ತಾ?
Viral News: ಸಾರಿಗೆ ಮತ್ತು ಟ್ಯಾಕ್ಸಿ ಸೇವೆಗಳಲ್ಲಿ ಚಾಲಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿರುವ ಘಟನೆ ಯೊಂದು ನಡೆದಿದೆ. ಗುರುಗ್ರಾಮ್‌ನಲ್ಲಿ ದೇವಸ್ಥಾನಕ್ಕೆ ಟ್ಯಾಕ್ಸಿ ಬುಕ್ ಮಾಡಿದ ಗ್ರಾಹಕನೊಬ್ಬ ಅಶ್ಲೀಲ ಸಂದೇಶ ಕಳಿಸಿದ್ದು ಇದನ್ನು ಕೇಳಿ ಚಾಲಕನೇ ಶಾಕ್ ಆಗಿದ್ದಾನೆ. ಈ ಬಗ್ಗೆ ಆತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.
ಟ್ಯಾಕ್ಸಿ ಬುಕ್ ಮಾಡಿದ ಗ್ರಾಹಕನಿಂದ ಅಶ್ಲೀಲ ಮೆಸೇಜ್ -
ಗುರುಗ್ರಾಮ,ಫೆ.11: ಇತ್ತೀಚೆಗೆ ಟ್ಯಾಕ್ಸಿ ಚಾಲಕರು ಹಾಗೂ ಪ್ರಯಾಣಿಕರ ಜೊತೆಗಿನ ಕಿರುಕುಳದ ಘಟನೆಗಳು ಹೆಚ್ಚು ಸುದ್ದಿಯಾಗುತ್ತಿವೆ. ದುಬಾರಿ ಹಣ ವಸೂಲಿ, ದೈಹಿಕ ಹಲ್ಲೆ ಮತ್ತು ಕಿರುಕುಳದ ವಿಡಿಯೋಗಳು ಕೂಡ ಆಗಾಗ ವೈರಲ್ (Viral Video) ಆಗುತ್ತವೆ. ಈ ನಡುವೆ ಸಾರಿಗೆ ಮತ್ತು ಟ್ಯಾಕ್ಸಿ ಸೇವೆಗಳಲ್ಲಿ ಚಾಲಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿರುವ ಘಟನೆಯೊಂದು ನಡೆದಿದೆ. ಗುರುಗ್ರಾಮ್‌ನಲ್ಲಿ ದೇವಸ್ಥಾನಕ್ಕೆ ಟ್ಯಾಕ್ಸಿ ಬುಕ್ ಮಾಡಿದ ಗ್ರಾಹಕನೊಬ್ಬ ಅಶ್ಲೀಲ ಸಂದೇಶ ಕಳಿಸಿದ್ದು ಇದನ್ನು ಕೇಳಿ ಚಾಲಕನೇ ಶಾಕ್ ಆಗಿದ್ದಾನೆ. ಈ ಬಗ್ಗೆ ಆತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.
ಈ ಘಟನೆಯೂ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಇಸ್ಕಾನ್ ದೇವಸ್ಥಾನಕ್ಕೆ ಹೋಗಲು ರೈಡ್ ಬುಕ್ ಮಾಡಿದ ಗ್ರಾಹಕನೊಬ್ಬ, ಉಬರ್ ಚಾಲಕನಿಗೆ ಅಪ್ಲಿಕೇಶನ್ ಮೂಲಕವೇ ಅಶ್ಲೀಲ ಸಂದೇಶವೊಂದನ್ನು ಕಳುಹಿಸಿದ್ದಾನೆ. ನಂತರ ಆತನ ವಾಟ್ಸಾಪ್ ಸಂಖ್ಯೆಯನ್ನು ಕೇಳಿದ್ದು ಚಾಲಕ ನಿರಾಕರಿಸಿದ ನಂತರ, ಗ್ರಾಹಕ ಕ್ಷಮೆಯಾಚಿಸಿ ಸವಾರಿಯನ್ನು ರದ್ದುಗೊಳಿಸಿದ್ದಾನೆ.
इस वीडियो को देखने के बाद मेरा दिमाग हिल गया कि ऐसे लोग भी हैं दुनिया में।
— Jaiky Yadav (@JaikyYadav16) February 11, 2026
Instagram पर विशाल नाम के एक कैब ड्राइवर ने एक लाइव बुकिंग की वीडियो डाली जिसमें
एक कस्टमर पहले Iskcon Temple के लिए राइड बुक करती है और मैसेज करती है, hello bro! S** करोगे? अगर इंट्रेस्टेड हो तो… pic.twitter.com/W6girBexRd
ವಿಶಾಲ್ ಎನ್ನುವ ಉಬರ್ ಚಾಲಕ ಈ ಅನುಭವವನ್ನು ವೀಡಿಯೋ ಮೂಲಕ ಶೇರ್ ಮಾಡಿದ್ದಾರೆ. ವೀಡಿಯೊದಲ್ಲಿ, ಚಾಲಕನು ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಚಾಟ್‌ನಿಂದ ಗ್ರಾಹಕನ ಸಂದೇಶ ಗಳನ್ನು ಹಂಚಿಕೊಳ್ಳುತ್ತಾನೆ. "ಹಲೋ ಬ್ರೋ," ಎಂದು ಗ್ರಾಹಕ ಕಳುಹಿಸುತ್ತಾನೆ. ಅದಕ್ಕೆ ಚಾಲಕನು, ಹಾಯ್ ಎಂದು ಉತ್ತರಿಸುತ್ತಾನೆ. ಇದಾದ ನಂತರ, ಗ್ರಾಹಕರು, "ಬ್ರೋ ಸೆಕ್ಸ್ ಕರೋಗೆ?" ಎಂದು ಬರೆಯುತ್ತಾರೆ. ನಂತರ ಗ್ರಾಹಕನು ಚಾಲಕನಿಗೆ ಆಸಕ್ತಿ ಇದ್ದರೆ ತನ್ನ ವಾಟ್ಸಾಪ್ ಸಂಖ್ಯೆಯನ್ನು ಹಂಚಿಕೊಳ್ಳಲು ಕೇಳುತ್ತಾರೆ. ಚಾಲಕ "ಇಲ್ಲ" ಎಂದು ಉತ್ತರಿಸುತ್ತಾನೆ. ಸಂದೇಶ ನೋಡಿದ ತಕ್ಷಣ, ಕೆಲವೇ ಸೆಕೆಂಡುಗಳಲ್ಲಿ ಗ್ರಾಹಕ ಕ್ಷಮಿಸಿ ಎಂದು ಸವಾರಿಯನ್ನು ರದ್ದುಗೊಳಿಸಿದ್ದಾನೆ.
viral video: ಬಾಂಗ್ಲಾದಲ್ಲಿ ನಿಲ್ಲದ ದೌರ್ಜನ್ಯ; ಹಿಂದೂ ಶಿಕ್ಷಕನ ಮನೆಗೆ ಬೆಂಕಿ
ಈ ವಿಚಾರ ಚಾಲಕ ಶೇರ್ ಮಾಡುತ್ತಿದ್ದಂತೆ ಗ್ರಾಹಕನ ವಿರುದ್ಧ ಕ್ರಮ ಕೈಗೊಳ್ಳಲು ನೆಟ್ಟಿಗರು ಒತ್ತಾಯಿಸಿದ್ದಾರೆ. ಪವಿತ್ರವಾದ ದೇವಸ್ಥಾನಕ್ಕೆ ಹೋಗಲು ಟ್ಯಾಕ್ಸ್ ಬುಕ್ ಮಾಡಿ ಇಂತಹ ಅಸಭ್ಯ ಮಾತು ಆಡುವುದು ತಪ್ಪು ಎಂದು ಗ್ರಾಹಕನ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ