ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನೆ ನೋಡಲು ಹೋದ ದಂಪತಿ ಮೇಲೆ ಪಿಟ್‌ಬುಲ್ ಶ್ವಾನದ ದಾಳಿ! ಭಯಾನಕ ವಿಡಿಯೊ ವೈರಲ್‌

Viral Video: ಪಂಜಾಬ್‌ನ ಪಟಿಯಾಲದ ಮನೆಯೊಂದರ ಹೊರಗೆ ಪಿಟ್‌ಬುಲ್ ಶ್ವಾನ ನಡೆಸಿದ ದಾಳಿಯಲ್ಲಿ ದಂಪತಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಅಂಕಿತ್ ಸಭರ್ವಾಲ್ ಮತ್ತು ಅವರ ಪತ್ನಿ ಶಿಫಾಲಿ ಬಾಡಿಗೆ ಮನೆಯನ್ನು ನೋಡಲು ತೆರಳಿದಾಗ ಈ ಘಟನೆ ನಡೆದಿದೆ. ದಂಪತಿ ಗೇಟ್ ತೆರೆದ ಕ್ಷಣದಲ್ಲಿ ಸಾಕು ನಾಯಿ ಓಡಿ ಬಂದು ದಾಳಿ ಮಾಡಿದೆ.

ಬಾಡಿಗೆ ಮನೆ ನೋಡಲು ಹೋದ ದಂಪತಿ ಮೇಲೆ ಪಿಟ್‌ಬುಲ್ ದಾಳಿ

ಪಂಜಾಬ್‌ನಲ್ಲಿ ದಂಪತಿ ಮೇಲೆ ದಾಳಿ ನಡೆಸಿದ ಪಿಟ್‌ಬುಲ್ ನಾಯಿ -

Profile
Pushpa Kumari Aug 13, 2026 4:47 PM

ಚಂಡೀಗಢ, ಆ. 13: ಇತ್ತೀಚಿಗೆ ಸಾಕು ನಾಯಿಗಳು ನಾಗರಿಕರ ಮೇಲೆ ದಾಳಿ ನಡೆಸುವ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಪಂಜಾಬ್‌ನ ಪಟಿಯಾಲದ ಮನೆಯ ಹೊರಗೆ ಪಿಟ್‌ಬುಲ್ ನಾಯಿ ನಡೆಸಿದ ದಾಳಿಯಲ್ಲಿ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಅಂಕಿತ್ ಸಭರ್ವಾಲ್ ಮತ್ತು ಅವರ ಪತ್ನಿ ಶಿಫಾಲಿ ಬಾಡಿಗೆ ಮನೆಯನ್ನು ನೋಡಲು ತೆರಳಿದಾಗ ಈ ದಾಳಿ ನಡೆದಿದೆ.‌ ದಂಪತಿ ಗೇಟ್ ತೆರೆದ ಕ್ಷಣದಲ್ಲಿ ಸಾಕು ನಾಯಿ ಓಡಿ ಬಂದು ದಾಳಿ ಮಾಡಿದೆ. ನಾಯಿ ಆಕೆಯ ತೋಳು ಮತ್ತು ದೇಹದ ಇತರ ಭಾಗಗಳ ಮೇಲೆ ದಾಳಿ ಮಾಡುವುದರಿಂದ ತೀವ್ರ ಗಾಯಗಳಾಗಿವೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ಪಿಟ್‌ಬುಲ್ ನಾಯಿ ಅಪರಿಚಿತರ ಮೇಲೆ ದಾಳಿ ಮಾಡಿದ ಅನೇಕ ಘಟನೆಗಳು ವರದಿಯಾಗಿವೆ. ಪಟಿಯಾಲದ ಘುಮನ್ ನಗರದಲ್ಲಿ ಬಾಡಿಗೆ ಮನೆ ಹುಡುಕಿಕೊಂಡು ಪ್ರಾಪರ್ಟಿ ಡೀಲರ್ ಜತೆ ದಂಪತಿ ಮಾಲಕರ ಮನೆಗೆ ತೆರಳಿದ ವೇಳೆ ಈ ಪಿಟ್‌ಬುಲ್ ನಾಯಿಯ ಕ್ರೂರ ದಾಳಿ ನಡೆದಿದೆ.

ವಿಡಿಯೊ ನೋಡಿ:



ವಿಡಿಯೊದಲ್ಲಿ ಮನೆಯ ಗೇಟ್ ತೆರೆದ ತಕ್ಷಣ ಪಿಟ್‌ಬುಲ್‌ ನಾಯಿ ಶಿಫಾಲಿಯ ಮೇಲೆ ದಾಳಿ ಮಾಡುವುದು ಕಂಡು ಬಂದಿದೆ. ಅವರ ಕೈ ಮತ್ತು ದೇಹದ ಇತರ ಭಾಗಗಳಿಗೆ ತೀವ್ರವಾಗಿ ಕಚ್ಚಿದೆ. ಪತ್ನಿಯನ್ನು ರಕ್ಷಿಸಲು ಮುಂದಾದ ಅಂಕಿತ್ ಮೇಲೆಯೂ ನಾಯಿ ದಾಳಿ ನಡೆಸಿದೆ. ಮನೆಯಲ್ಲಿದ್ದ ಮಹಿಳೆ ಹಾಗೂ ಸ್ಥಳೀಯರು ಕೋಲು ಹಿಡಿದು ನಾಯಿಯನ್ನು ಓಡಿಸಲು ಯತ್ನಿಸಿದರೂ ಮತ್ತಷ್ಟು ಕೆರಳಿದೆ.

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ

ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ʼʼನಾವು ಬಾಡಿಗೆ ಮನೆ ಪರಿಶೀಲಿಸಲು ಹೋಗಿದ್ದೆವು. ಪಿಟ್‌ಬುಲ್ ಇದ್ದಕ್ಕಿದ್ದಂತೆ ಬಂದು ನಮ್ಮ ಮೇಲೆ ದಾಳಿ ಮಾಡಿತು. ನನ್ನ ಪತ್ನಿಗೆ ಗಂಭೀರ ಗಾಯವಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು" ಎಂದು ಅಂಕಿತ್ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ನಾಯಿಯನ್ನು ಮುಕ್ತವಾಗಿ ತಿರುಗಾಡಲು ಬಿಟ್ಟಿದ್ದಕ್ಕಾಗಿ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಅಂಕಿತ್ ಹೇಳಿದ್ದಾರೆ.

ಪಿಟ್‌ಬುಲ್‌ನಂತಹ ಕ್ರೂರ ತಳಿಯ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲಾಗಿದೆ. ಈ ಘಟನೆ ಅತ್ಯಂತ ಕಳವಳಕಾರಿಯಾಗಿದ್ದು, ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.