ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

200 ರುಪಾಯಿಯ ಮೀನು ಊಟಕ್ಕೆ 300 ರುಪಾಯಿ ಬಿಲ್: ರಣರಂಗವಾಯ್ತು ಹೋಟೆಲ್‌; ಗ್ರಾಹಕ- ಸಿಬ್ಬಂದಿಯ ಮಾರಾಮಾರಿಯ ವಿಡಿಯೊ ವೈರಲ್‌

Viral News: ಹೋಟೆಲ್‌ಗೆ ಬಂದ ಗ್ರಾಹಕರಿಗೆ ಮೀನಿನ ಖಾದ್ಯ ಆರ್ಡರ್ ಮಾಡುವಾಗ 200 ರುಪಾಯಿ ಎಂದು ಹೇಳಲಾಗಿತ್ತು. ಆದರೆ ಊಟ ಮುಗಿಸಿ ಬಿಲ್ ನೋಡಿದಾಗ 300 ರುಪಾಯಿ ಎಂದು ನಮೂದಿಸಲಾಗಿತ್ತು. ಇದರಿಂದ ಕೆರಳಿದ ಗ್ರಾಹಕ ಹೋಟೆಲ್‌ ಸಿಬ್ಬಂದಿ ಜತೆ ಜಗಳ ಆರಂಭಿಸಿದ್ದಾನೆ. ಘಟನೆಯಲ್ಲಿ ಹಲವು ಮಂದಿ ಜನರು ಗಾಯಗೊಂಡಿದ್ದು, ಪೀಠೋಪಕರಣಗಳು ಹಾನಿಗೊಳಗಾಗಿವೆ.

200 ರುಪಾಯಿಯ ಊಟಕ್ಕೆ 300 ರುಪಾಯಿ ಬಿಲ್; ಮುಂದೇನಾಯ್ತು?

ಕೇರಳಂನ ಹೋಟೆಲ್‌ನಲ್ಲಿ ಸಿಬ್ಬಂದಿ ಹಾಗೂ ಗ್ರಾಹಕನ ನಡುವೆ ಭುಗಿಲೆದ್ದ ಜಗಳ -

Profile
Pushpa Kumari Aug 13, 2026 5:23 PM

ತಿರುವನಂತಪುರಂ, ಆ. 13: ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚುವರಿ ಹಣ ವಸೂಲಿ ಮಾಡಿದ್ದಾರೆಂದು ಗ್ರಾಹಕ ಮತ್ತು ಹೋಟೆಲ್‌ ಸಿಬಬದಿ ನಡುವೆ ಜಗಳ ಭುಗಿಲೆದ್ದ ಘಟನೆ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೇರಲಂ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ಗೆೆ ಬಂದಿದ್ದ ಗ್ರಾಹಕ ಮೀನಿನ ಖಾದ್ಯ ಆರ್ಡರ್ ಮಾಡುವಾಗ 200 ರುಪಾಯಿ ಎಂದು ಹೇಳಲಾಗಿತ್ತು. ಆದರೆ ಊಟ ಮುಗಿಸಿ ಬಿಲ್ ನೋಡಿದಾಗ 300 ರುಪಾಯಿ ಎಂದು ನಮೂದಿಸಲಾಗಿತ್ತು. ಇದರಿಂದ ಕೆರಳಿದ ಗ್ರಾಹಕ ಹೋಟೆಲ್‌ ಸಿಬ್ಬಂದಿ ಜತೆ ಜಗಳ ಆರಂಭಿಸಿದ್ದಾನೆ. ಬಳಿಕ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಹೋಡೆಲ್‌ನ ಪೀಠೋಪಕರಣಗಳು ಹಾನಿಗೊಳಗಾಗಿವೆ. ಈ ಘಟನೆಯ ದೃಶ್ಯ ಭಾರಿ ವೈರಲ್ (Viral News) ಆಗಿದೆ.

ಕೇರಳದ ಮಲಪ್ಪುರಂನ ಕುಟ್ಟಿಪ್ಪುರಂನಲ್ಲಿರುವ ಜನಪ್ರಿಯ ಚೋರಿಮ್‌ ಮೀನುಮ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಬಿಲ್‌ನ ವ್ಯತ್ಯಾಸವು ಗ್ರಾಹಕ ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬಿಲ್‌ಗೆ ಸಂಬಂಧಿಸಿದ ವಿವಾದ ಶೀಘ್ರದಲ್ಲೇ ತೀವ್ರಗೊಂಡು ಘರ್ಷಣೆಗೆ ಕಾರಣವಾಯಿತು.

ವಿಡಿಯೊ ನೋಡಿ:



ಊಟಕ್ಕೂ ಮುನ್ನ ಹೇಳಿದ ಬೆಲೆಗಿಂತ ಬಿಲ್‌ನಲ್ಲಿ ಹೆಚ್ಚುವರಿ ಹಣ ನಮೂದಿಸಲಾಗಿದೆ ಎಂದು ಗ್ರಾಹಕ ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ಭಾರಿ ಗಲಾಟೆ ನಡೆದಿದೆ. 100 ರುಪಾಯಿ ಹೆಚ್ಚುವರಿ ಮೊತ್ತ ವಿಧಿಸಿದ್ದನ್ನು ಗ್ರಾಹಕ ಪ್ರಶ್ನಿಸಿದಾಗ ಸಿಬ್ಬಂದಿ ಮತ್ತು ಆತನ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಯಿತು. ಬಳಿಕ ರೆಸ್ಟೋರೆಂಟ್ ನೌಕರರು ಮತ್ತು ಗ್ರಾಹಕರ ನಡುವೆ ಘರ್ಷಣೆ ಭುಗಿಲೆದ್ದಿತು. ಘಟನೆಯಲ್ಲಿ ಹಲವು ಜನರು ಗಾಯಗೊಂಡಿದ್ದು, ಜನನಿಬಿಡ ಉಪಾಹಾರ ಗೃಹದೊಳಗಿನ ಪೀಠೋಪಕರಣಗಳು ಹಾನಿಗೊಳಗಾಗಿವೆ.

ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ

ಗಲಾಟೆಯಲ್ಲಿ ಹೋಟೆಲ್‌ನಲ್ಲಿದ್ದ ಕುರ್ಚಿ ಮತ್ತು ಟೇಬಲ್‌ಗಳು ಪುಡಿಪುಡಿ ಆಗಿವೆ. ಘಟನೆ ವೇಳೆ ಸ್ತಳದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ಹಲವು ಗ್ರಾಹಕರಿದ್ದರು. ಏಕಾಏಕಿ ನಡೆದ ಈ ರಾದ್ಧಾಂತದಿಂದ ಭಯಗೊಂಡ ಗ್ರಾಹಕರು ಹೊರಗೆ ಓಡಿದ್ದಾರೆ. ಈ ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗ್ರಾಹಕರ ಸಂರಕ್ಷಣಾ ಕಾಯ್ದೆಯ ಪ್ರಕಾರ, ಆಹಾರ ಪದಾರ್ಥಗಳ ಬೆಲೆಯನ್ನು ಗ್ರಾಹಕರು ಆರ್ಡರ್ ಮಾಡುವ ಮೊದಲು 'ಮೆನು ಕಾರ್ಡ್' ಮೂಲಕ ಸ್ಪಷ್ಟವಾಗಿ ತಿಳಿಸುವುದು ಹೋಟೆಲ್‌ಗಳ ಕರ್ತವ್ಯ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಒಬ್ಬರು, ʼʼನೂರು ರುಪಾಯಿಗೆ ಇಷ್ಟೊಂದು ಜಗಳವೇ? ಹೋಟೆಲ್ ಸಿಬ್ಬಂದಿ ತಾಳ್ಮೆಯಿಂದ ಸಮಸ್ಯೆ ಬಗೆಹರಿಸಬಹುದಿತ್ತುʼʼ ಎಂದಿದ್ದಾರೆ.