ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೀಲ್ಸ್‌ ಹುಚ್ಚಾಟಕ್ಕೆ ಕಾರ್‌ ಸ್ಟಂಟ್‌; ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ಬಿದ್ದ ದಂಡವೆಷ್ಟು ಗೊತ್ತಾ?

Viral Video: ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ರೀಲ್ಸ್ ಕ್ರೇಜ್ ಗೆ ಅವನೇ ದಂಡ ಕಟ್ಟುವ ಪರಿಸ್ಥಿತಿ ಒದಗಿ ಬಂದಿದೆ. ವಿದ್ಯಾರ್ಥಿಯು 2002 ರ ಹೋಂಡಾ ಸಿಟಿ ಕಾರನ್ನು ರೂ. 70,000 ಗೆ ಖರೀದಿ ಸಿದ್ದು ಇದೆ ಹಳೆಯ ಕಾರಿಗೆ ಬೆಂಗಳೂರು ಪೊಲೀಸರು ಬರೋಬ್ಬರಿ 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ..ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದೆ.

ಯುವಕನ ರೀಲ್ಸ್ ಹುಚ್ಚಾಟ್ಟಕ್ಕೆ‌ ಡಬಲ್ ಮೊತ್ತದ ದಂಡ ವಿಧಿಸಿದ ಪೊಲೀಸರು!

ರೀಲ್ಸ್ ಹುಚ್ಚಾಟ್ಟಕ್ಕೆ‌ ಡಬಲ್ ಮೊತ್ತದ ದಂಡ ವಿಧಿಸಿದ ಪೊಲೀಸರು -

Profile
Pushpa Kumari Jan 16, 2026 5:55 PM

ಬೆಂಗಳೂರು,ಜ. 16: ಇತ್ತೀಚೆಗೆ ಹೆಚ್ಚಿನವರಿಗೆ ರೀಲ್ಸ್ ಕ್ರೇಜ್ ಹೆಚ್ಚಾಗಿದೆ.‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಬೇಕು, ಫೇಮ್ ಗಿಟ್ಟಿಸಿಕೊಳ್ಳಬೇಕೆಂದು ಕೆಲವರು ನಾನಾ ರೀತಿಯ ಸಾಹಸ ಮಾಡುತ್ತಲೇ ಇದ್ದಾರೆ. ಅಪಾಯಕಾರಿ ಸ್ಟಂಟ್‌ಗಳು, ಮಾರಕಾಸ್ತ್ರಗಳನ್ನು ಪ್ರದರ್ಶಿಸುವುದು, ವೀಲಿಂಗ್ ಮಾಡುವುದು ಇತ್ಯಾದಿ. ಆದರೆ, ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ರೀಲ್ಸ್ ಕ್ರೇಜ್ ಗೆ ಅವನೇ ದಂಡ ಕಟ್ಟುವ ಪರಿಸ್ಥಿತಿ ಒದಗಿ ಬಂದಿದೆ. ವಿದ್ಯಾರ್ಥಿಯು 2002 ರ ಹೋಂಡಾ ಸಿಟಿ ಕಾರನ್ನು ರೂ. 70,000 ಗೆ ಖರೀದಿಸಿದ್ದು ಇದೆ ಹಳೆಯ ಕಾರಿಗೆ ಬೆಂಗಳೂರು ಪೊಲೀಸರು ಬರೋಬ್ಬರಿ 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಕೇರಳದ ಯುವ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರೀಲ್ಸ್ ಕ್ರೇಜ್ ಗಾಗಿ ಈ ಸಾಹಸ ಮಾಡಲು ಹೋಗಿದ್ದಾನೆ. 2002ರ ಮಾಡೆಲ್‌ನ ಹಳೆಯ ಹೋಂಡಾ ಸಿಟಿ ಕಾರನ್ನು ಈತ ಕೇವಲ‌ 70,000ಕ್ಕೆ ಖರೀದಿಸಿದ್ದನು. ಆ ಕಾರನ್ನು ಸಂಪೂರ್ಣವಾಗಿ ಮಾರ್ಪಾಡು ಮಾಡಿ ಹಲವು ರೀತಿಯ ಬದಲಾವಣೆ ಗಳನ್ನು ಮಾಡಿದ್ದಾನೆ. ಬಣ್ಣ ಬದಲಾವಣೆಯಿಂದ ಹಿಡಿದು ಟ್ಯಾಂಪರ್ಡ್ ಸೈಲೆನ್ಸರ್, ಜೊತೆಗೆ "ಬ್ಯಾಂಗರ್" ಎಂದು ಬರೆಯುವ ಮೂಲಕ ಸಂಪೂರ್ಣ ಲುಕ್ ಚೆಂಜ್ ಮಾಡಿದ್ದಾನೆ. ಆದರೆ ಇದೇ ಕಾರಿನ ಎಕ್ಸಾಸ್ಟ್‌ನಿಂದ ಹೊರಬರುವ ಜ್ವಾಲೆಗಳು ಹೈಲೈಟ್ ಆಗಿ ಪರಿಣಮಿಸಿದೆ.

ವಿಡಿಯೋ ನೋಡಿ:



ಇದೇ ಕಾರಿನಲ್ಲಿ ಆತ ಹೊಸ ವರ್ಷದ ಸಂಭ್ರಮಾಚರಣೆಗಾಗಿ ತನ್ನ ಸ್ನೇಹಿತರೊಂದಿಗೆ‌ ಬೆಂಗಳೂರಿಗೆ ಬಂದಿದ್ದನು. ಆದರೆ ಈ ಕಾರು ಸಾಮಾನ್ಯ ಕಾರಿನಂತಿರಲಿಲ್ಲ. ಇದರ ಸೈಲೆನ್ಸರ್‌ನಿಂದ ಬೆಂಕಿ ಹೊರಬರುವಂತೆ ಮಾರ್ಪಾಡು ಮಾಡಲಾಗಿತ್ತು. ಎಕ್ಸಾಸ್ಟ್‌ನಿಂದ ತೀವ್ರವಾದ ಜ್ವಾಲೆಗಳು ಹೊರಬರುತ್ತಿದ್ದವು. ಬೆಂಕಿಯ ಹೊರಸೂಸುವಿಕೆ ಮತ್ತು ತೀವ್ರವಾದ ಶಬ್ದದಿಂದ ಬೇಸತ್ತ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ‌ ಬೆಂಗಳೂರು ಸಂಚಾರಿ ಪೊಲೀಸರು ಮತ್ತು ಯಲಹಂಕ ಆರ್‌ಟಿಒ ಅಧಿಕಾರಿಗಳು ಯುವಕನ ಕಾರನ್ನು ಪತ್ತೆಹಚ್ಚಿದ್ದಾರೆ.

Viral Video: ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ! ವಿಡಿಯೋ ನೋಡಿ

ಪೊಲೀಸರ ಪ್ರಕಾರ, ಗದ್ದಲದ ವಾಹನದ ಬಗ್ಗೆ ಅವರಿಗೆ ಹಲವಾರು ದೂರುಗಳು ಬಂದಿವೆ. ಅತಿ ಯಾದ ಶಬ್ದದ ಜೊತೆಗೆ, ಎಕ್ಸಾಸ್ಟ್‌ನಿಂದ ಜ್ವಾಲೆಗಳು ಹೊರಬರುತ್ತಿದ್ದವು, ಇದು ಗಂಭೀರ ಅಪಾಯ ವನ್ನುಂಟು ಮಾಡಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಲಹಂಕ ಆರ್‌ಟಿಒ ವಾಹನವನ್ನು ಪರಿಶೀಲಿಸಿ, ದಂಡ ವಿಧಿಸಿದ್ದಾರೆ.ವಿದ್ಯಾರ್ಥಿ ಕಾರನ್ನು ಖರೀದಿಸಿದ್ದು ಕೇವಲ ರೂ 70,000 ಕ್ಕೆ ಆಗಿದ್ದು ಆದರೆ ಪೊಲೀಸರು ಹಾಕಿದ ದಂಡದ ಮೊತ್ತ‌1,11,000 ರೂಪಾಯಿ ಆಗಿತ್ತು. ಅಂದರೆ ಕಾರಿನ ಮೂಲ ಬೆಲೆಗಿಂತ ಸುಮಾರು 41 ಸಾವಿರ ರೂಪಾಯಿ ಹೆಚ್ಚು ದಂಡ ಪಾವತಿ ಮಾಡುವಂತೆ ಆಗಿದೆ.