ಮುಂಬೈನಲ್ಲಿ ಜಲಾವೃತಗೊಂಡ ರೈಲು ಹಳಿಗಳ ಮೇಲೆ ಮೀನುಗಳ ಈಜಾಟ: ವಿಡಿಯೊ ವೈರಲ್
Viral Video: ರೈಲ್ವೆ ಹಳಿಗಳ ನಡುವೆ ಸಂಗ್ರಹವಾಗಿದ್ದ ಮಳೆನೀರಿನ ಮೂಲಕ ಹಲವಾರು ಮೀನುಗಳು ಓಡಾಡುತ್ತಿವೆ. ಈ ಅಸಾಮಾನ್ಯ ಕ್ಲಿಪ್ ವೀಕ್ಷಕರನ್ನು ರಂಜಿಸಿದ್ದು ಆಶ್ಚರ್ಯಚಕಿತಗೊಳಿಸಿದೆ.. ಭಾರೀ ಮಳೆಯಿಂದ ರಸ್ತೆಗಳು ಮತ್ತು ರೈಲ್ವೆ ಹಳಿಗಳು ಮುಳುಗಿ ಹೋಗಿ ರೈಲು ಸೇವೆ ಅಸ್ತವ್ಯಸ್ತಗೊಂಡಿತ್ತು. ಆದರೆ ಮೀನುಗಳು ಈ ನಿಂತ ನೀರಿನಲ್ಲಿ ಈಜಡುತ್ತಾ ಓಡಾಡುತ್ತಿವೆ..
ಮುಂಬೈನಲ್ಲಿ ಜಲವೃತಗೊಂಡ ರೈಲು ಹಳಿಗಳ ಮೇಲೆ ಮೀನುಗಳ ಈಜಾಟ -
ಮುಂಬೈ,ಜು.10: ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಅಲ್ಲಲ್ಲಿ ನೆರೆ ತುಂಬಿ ಕೊಂಡಿದೆ. ಕೆಲವೆಡೆ ರಸ್ತೆಗಳು ಕೂಡ ಬ್ಲಾಕ್ ಆಗಿದ್ದು ಸಂಚಾರಕ್ಕೆ ಅಭಾವ ಉಂಟಾಗಿದೆ. ಈ ತೀವ್ರ ಮಳೆಯ ನಡುವೆಯೂ ಅಪರೂಪದ ದೃಶ್ಯವೊಂದು ಕಂಡು ಬಂದಿದ್ದು ರೈಲ್ವೆ ನಿಲ್ದಾಣದ ಹಳಿಗಳ ಮೇಲೆ ಮೀನುಗಳು ಈಜಾಡುತ್ತಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಇದೊಂದು ಆಕರ್ಷಕ ದೃಶ್ಯ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರೈಲ್ವೆ ಹಳಿಗಳ ನಡುವೆ ಸಂಗ್ರಹವಾಗಿದ್ದ ಮಳೆನೀರಿನ ಮೂಲಕ ಹಲವಾರು ಮೀನುಗಳು ಓಡಾಡುತ್ತಿವೆ. ಈ ಅಸಾಮಾನ್ಯ ಕ್ಲಿಪ್ ವೀಕ್ಷಕರನ್ನು ರಂಜಿಸಿದ್ದು ಆಶ್ಚರ್ಯಚಕಿತಗೊಳಿಸಿದೆ. ಭಾರೀ ಮಳೆಯಿಂದ ರಸ್ತೆಗಳು ಮತ್ತು ರೈಲ್ವೆ ಹಳಿಗಳು ಮುಳುಗಿ ಹೋಗಿ ರೈಲು ಸೇವೆ ಅಸ್ತವ್ಯಸ್ತ ಗೊಂಡಿತ್ತು. ಆದರೆ ಮೀನುಗಳು ಈ ನಿಂತ ನೀರಿನಲ್ಲಿ ಈಜಡುತ್ತಾ ಓಡಾಡುತ್ತಿವೆ.
ವಿಡಿಯೋ ನೋಡಿ:
मछली पकडनें के लिए अब नदी-तालाब या फिर समुंदर किनारे जाने की जरुरत नहीं है ।
— Dr. Kiran J Patel (@kiranpatel1977) July 10, 2026
मुंबई में रेल की पटरी पर भी जा सकतें है..!! pic.twitter.com/kk5DNLn4Vp
ಮುಂಬೈನಲ್ಲಿ ಮಳೆ ಆರ್ಭಟ ಮತ್ತೆ ಮುಂದುವರೆದಿದೆ. ಅಲ್ಲಲ್ಲಿ ನೀರಿನಿಂದ ಆವೃತ್ತಗೊಂಡಿರುವುದರಿಂದ ಲಕ್ಷಾಂತರ ಪ್ರಯಾಣಿಕರು ಪರದಾಡುವಂತ ಸಂದರ್ಭ ಬಂದಿದೆ. ಮುಂಬೈ, ಠಾಣೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ. ಮಳೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರೂ, ಹಳಿಗಳ ಮೇಲೆ ಪ್ರತ್ಯಕ್ಷವಾದ ದೃಶ್ಯ ಮಾತ್ರ ಜನರಿಗೆ ಕೊಂಚ ನಗು ತರಿಸಿದೆ.
Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರೊಬ್ಬರು "ಜಪಾನ್‌ನ ಚರಂಡಿಗಳಲ್ಲಿ ಮೀನು ನೋಡಿದ್ದೀರಿ, ಈಗ ಭಾರತದ ರೈಲ್ವೆ ಹಳಿಗಳಲ್ಲಿ ಮೀನು ಹಿಡಿಯಿರಿ" ಎಂದು ವ್ಯಂಗ್ಯವಾಡಿದರು. ಮತ್ತೊಬ್ಬರು ನೀವು ಇನ್ನು ಮುಂದೆ ಮೀನು ಹಿಡಿಯಲು ಮುಂಬೈ ರೈಲು ನಿಲ್ದಾಣಕ್ಕೆ ಬನ್ನಿ ಎಂದು ಹಾಸ್ಯ ಮಾಡಿದ್ದಾರೆ.