ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 56 ವರ್ಷಗಳ ನಂತರ ಈ ಕುಟುಂಬದಲ್ಲಿ ಹೆಣ್ಣು ಮಗು ಜನನ; ಇವ್ರ ಸಂಭ್ರಮ ನೋಡೋಕೆ ಕಣ್ಣೆರಡು ಸಾಲದು!

56 ವರ್ಷಗಳ ನಂತರ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವನ್ನು ಆ ಮನೆಯವರು ಬಹಳ ಅದ್ಧೂರಿಯಾಗಿ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.ಈ ವಿಡಿಯೊ ಎಂಟು ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ

56 ವರ್ಷಗಳ ನಂತ್ರ ಹೆಣ್ಣು ಮಗು ಜನನ-ಈ ಕುಟುಂಬದ ಸಂಭ್ರಮ ನೋಡಿ

Profile pavithra Jun 16, 2025 7:00 PM

ಮಕ್ಕಳಿರಲ್ವ ಮನೆ ತುಂಬಾ... ಎಂಬ ಮಾತಿನಂತೆ ಮಕ್ಕಳು ಮನೆಯಲ್ಲಿದ್ದರೆ ಆ ಮನೆ ನಗು, ಸಂತೋಷದಿಂದ ತುಂಬಿರುತ್ತದೆ.ಈಗಂತೂ ಮಗು ಹುಟ್ಟಿದಾಗ ಅದನ್ನು ಮನೆಗೆ ಬರಮಾಡಿಕೊಳ್ಳುವಾಗ ಏನೇನೋ ತಯಾರಿ ಮಾಡುತ್ತಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಅಂಥದ್ದೇ ಒಂದು ವಿಡಿಯೊ ವೈರಲ್‌(Viral Video) ಆಗಿದೆ. 56 ವರ್ಷಗಳ ನಂತರ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ಆ ಮನೆಯವರು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಹೌದು ಬಲೂನ್‌ಗಳಿಂದ ಅಲಂಕರಿಸಲ್ಪಟ್ಟ ಕಾರಿನಲ್ಲಿ ಮಗುವನ್ನು ಕರೆದುಕೊಂಡು ಬಂದು ಖುಷಿಯಿಂದ ಆ ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ನವಜಾತ ಶಿಶುವನ್ನು ಸ್ವಾಗತಿಸಲು ಬೀದಿಯಲ್ಲಿ ಪಟಾಕಿಗಳನ್ನು ಸಿಡಿಸಿ ಹಬ್ಬದ ವಾತಾವರಣವನ್ನೇ ಅಲ್ಲಿ ಸೃಷ್ಟಿಸಿರುವುದು ಸೆರೆಯಾಗಿದೆ. ಇನ್ನು ಮನೆಯ ಪ್ರವೇಶದ್ವಾರದಲ್ಲಿ ಗುಲಾಬಿ ಬಣ್ಣದ ಬಲೂನ್ ಕಮಾನುಗಳು, ಹೂವಿನ ಹಾರಗಳು ಮತ್ತು ಹೂವಿನ ದಳಗಳಿಂದ ಅಲಂಕರಿಸಲಾಗಿತ್ತು. ಒಳಗೆ, ನೆಲದ ಮೇಲೆ ಬಣ್ಣ ಬಣ್ಣದ ಹೂವುಗಳ ದಳಗಳನ್ನು ಹಾಸಿ "ವೆಲ್‍ಕಂ ಬೇಬಿ" ಎಂಬ ಸಂದೇಶವನ್ನು ಬರೆಯಲಾಗಿತ್ತು.ಹಾಗೇ ಮಗುವಿನ ಪುಟ್ಟ ಪಾದಗಳನ್ನು ಕುಂಕುಮದ ನೀರಿನಲ್ಲಿ ನಿಧಾನವಾಗಿ ಅದ್ದಿ ಆ ಪಾದಗಳನ್ನು ಬಿಳಿ ಹಾಳೆಯ ಮೇಲೆ ಅಚ್ಚೊತ್ತಿದ್ದಾರೆ.

ಹೆಣ್ಣುಮಗುವಿಗೆ ಸ್ವಾಗತ ಕೋರಿದ ವಿಡಿಯೊ ಇಲ್ಲಿದೆ ನೋಡಿ...

ಇನ್ನು ಮನೆಯ ಪ್ರವೇಶದ್ವಾರದಲ್ಲಿ ಅಕ್ಕಿ ತುಂಬಿದ ಸಣ್ಣ ಕಲಶವನ್ನು ಇರಿಸಲಾಗಿತ್ತು. ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡ ತಂದೆ ನಿಧಾನವಾಗಿ ಅವಳ ಪಾದದಿಂದ ಅಕ್ಕಿದ ತುಂಬಿದ ಸೇರನ್ನು ದೂಡಿ ಆ ಮಗುವನ್ನು ಮನೆಯ ಒಳಗೆ ಕರೆದುಕೊಂಡು ಹೋಗಿದ್ದಾನೆ.

ಈ ಮುದ್ದಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಂಟು ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ಅನೇಕರು ಮಗುವನ್ನು ಹೃತ್ಪೂರ್ವಕವಾಗಿ ಸ್ವಾಗತ ಮಾಡಿದ್ದಕ್ಕಾಗಿ ಕುಟುಂಬವನ್ನು ಹೊಗಳಿದ್ದಾರೆ. "ಒಬ್ಬ ಮಗಳಿಗೆ ಈ ರೀತಿಯ ಸ್ವಾಗತ ನೋಡಿ ತುಂಬಾ ಸಂತೋಷವಾಯಿತು, ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಗುವನ್ನು ಹರಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಪ್ರತಿಯೊಬ್ಬ ಹುಡುಗಿಯೂ ಈ ರೀತಿಯ ಸ್ವಾಗತಕ್ಕೆ ಅರ್ಹಳು. ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಫ್ಲೈಓವರ್‌ನ ನಟ್‌ ಬೋಲ್ಟ್‌ ಕಿತ್ತ ಮಕ್ಕಳು- ಶಾಕಿಂಗ್‌ ವಿಡಿಯೊ ವೈರಲ್‌

ಕಳೆದ ವರ್ಷ, ನವರಾತ್ರಿಯ ಹಬ್ಬದ ಶುಭ ಸಮಯದಲ್ಲಿ ಹೆಣ್ಣು ಮಗು ಜನಿಸಿದಾಗ ಇದೇ ರೀತಿಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಆಸ್ಪತ್ರೆಯ ವೈದ್ಯರು ಆಕೆಗೆ "ಮಾ ಅಂಬೆ"ಯ ವೇಷ ಧರಿಸಿ, ತಲೆಗೆ ಸಣ್ಣ ಕಿರೀಟವನ್ನು ಧರಿಸಿ, ದುರ್ಗಾ ದೇವಿಯನ್ನು ಹೋಲುವ ಸಾಂಪ್ರದಾಯಿಕ ಕೆಂಪು ಉಡುಪಿನಲ್ಲಿ ಸುತ್ತಿದ್ದರು.