ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಾರ್ಥಕತೆ ಎಂದರೆ ಇದು: ಹೆತ್ತವರ ಮೊದಲ ವಿಮಾನ ಪ್ರಯಾಣದ ಕನಸು ನನಸು ಮಾಡಿದ ಮಗ; ಭಾವನಾತ್ಮಕ ಕ್ಷಣದ ವಿಡಿಯೊ ವೈರಲ್‌

Viral Video: ಯುವಕನೊಬ್ಬ ತನ್ನ ಹೆತ್ತವರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದು ಈ ಭಾವನಾತ್ಮಕ ಕ್ಷಣದ ವಿಡಿಯೊ ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಈ ವಿಡಿಯೊ ಸಾಮಾನ್ಯ ಮಧ್ಯಮ ವರ್ಗದ ಕನಸು ನನಸಾದ ಕ್ಷಣವನ್ನು ಪ್ರತಿಫಲಿಸಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಹೆತ್ತವರನ್ನು ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮಗ

ಹೆತ್ತವರನ್ನು ವಿಮಾನದಲ್ಲಿ ಕರೆದೊಯ್ದ ಮಗ -

Profile
Pushpa Kumari Jan 9, 2026 5:07 PM

ನವದೆಹಲಿ, ಡಿ‌. 9: ಹೆಚ್ಚಿನವರಿಗೆ ತಂದೆ ತಾಯಿಯ ಜತೆ ಟ್ರಿಪ್ ಹೋಗಬೇಕು, ಅವರನ್ನು ಖುಷಿ ಪಡಿಸಬೇಕು ಎನ್ನುವ ಆಸೆ ಇರುತ್ತದೆ. ಅದರಲ್ಲೂ ಭಾರತೀಯ ಮಧ್ಯಮ ವರ್ಗದ ಯುವಕರಿಗೆ ಹೆತ್ತವರನ್ನು ವಿಮಾನದಲ್ಲಿ ಕರೆದೊಯ್ಯುವುದು ದೊಡ್ಡ ಕನಸಾಗಿರುತ್ತದೆ. ಇದೀಗ ಯುವಕನೊಬ್ಬ ತನ್ನ ಹೆತ್ತವರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದು, ಈ ಭಾವನಾತ್ಮಕ ಕ್ಷಣದ ವಿಡಿಯೊ ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಈ ವಿಡಿಯೊ (Viral Video) ಸಾಮಾನ್ಯ ಮಧ್ಯಮ ವರ್ಗದ ಕನಸನ್ನು ವ್ಯಕ್ತ ಪಡಿಸುವುದರಿಂದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ವಿಷ್ಣು ಎಂಬ ಯುವಕ ತನ್ನ ತಂದೆ-ತಾಯಿಯನ್ನು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಈ ದೃಶ್ಯ ಅನೇಕರನ್ನು ಭಾವುಕರನ್ನಾಗಿಸಿದೆ. ವಿಡಿಯೊದ ಆರಂಭದಲ್ಲಿ ವಿಷ್ಣು ತನ್ನ ಹೆತ್ತವರೊಂದಿಗೆ ರನ್‌ವೇಯಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೊದಲ್ಲಿ ಇಂಡಿಗೋ ವಿಮಾನದ ಮುಂದೆ ನಿಂತಿರುವ ಪೋಷಕರ ಮುಗ್ಧ ನಗು ನೋಡುಗರ ಕಣ್ಣು ತಂಪಾಗಿಸಿದೆ.‌ ವಿಮಾನ ನಿಲ್ದಾಣದ ಒಳಗೆ, ಅವರು ನಿಧಾನವಾಗಿ ನಡೆಯುವ, ಕುತೂಹಲದ ಕಣ್ಣುಗಳು ಮತ್ತು ಸಂಕೋಚದ ನಗು ಗಮನ ಸೆಳೆದಿದೆ.

ವಿಡಿಯೊ ನೋಡಿ:

ಇನ್‌ಸ್ಟಾಗ್ರಾಮ್‌ನಲ್ಲಿ ವಿಷ್ಣು ವಿಡಿಯೊ ಶೇರ್ ಮಾಡಿಕೊಂಡಿದ್ದು, ಇದು ಪ್ರತಿಯೊಬ್ಬ ಹುಡುಗನ ಕನಸು... ಅಂತಿಮವಾಗಿ ಇದನ್ನು ಸಾಧಿಸಿದೆ...ಪೋಷಕರಿಗೆ ಅವರ ಮೊದಲ ವಿಮಾನ ಅನುಭವವನ್ನು ನೀಡಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಜವಾದ ಯಶಸ್ಸು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದು ಹೆಮ್ಮೆಯ ಕ್ಷಣ. ಈ ದೃಶ್ಯ ನೋಡಲು ತುಂಬ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳ ಏಳಿಗೆಗಾಗಿ ಪಟ್ಟ ಶ್ರಮ ಮತ್ತು ತ್ಯಾಗಕ್ಕೆ ಈ ಪ್ರಯಾಣವು ಒಂದು ಗೌರವದ ಕ್ಷಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದ 3 ವರ್ಷದ ಮಗು

ಇದೇ ಸಂದರ್ಭದಲ್ಲಿ ಮತ್ತೊಂದು ವಿಮಾನ ಪ್ರಯಾಣದ ವಿಡಿಯೊ ವೈರಲ್ ಆಗುತ್ತಿದೆ. ಅದರಲ್ಲಿ ಮಹಿಳೆಯೊಬ್ಬರು ತನ್ನ ಮಾವನನ್ನು ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದಿದ್ದಾರೆ. ಯೌವನದಲ್ಲಿ ಯಾವುದಕ್ಕೂ ಹೆದರದ ಆ ವ್ಯಕ್ತಿ, ವಿಮಾನ ಹಾರಾಟ ಆರಂಭವಾದಾಗ ಅತಿಯಾದ ಭಯದಿಂದ "ಇದು ನಿಜವಾಗಿಯೂ ಸುರಕ್ಷಿತವೇ?" ಎಂದು ಕೇಳಿದ್ದು ಗಮನ ಸೆಳೆದಿದೆ.