Viral Video: ಇಂತಹ ಕ್ಲಾಕ್ ಟವರ್ ನೀವು ನೋಡಿಯೇ ಇರಲ್ಲ; ಏನಿದು ವೈರಲ್ ಸ್ಟೋರಿ!
ಭೋಪಾಲ್‍ನ ಪಾಲಿಟೆಕ್ನಿಕ್ ಸ್ಕ್ವೇರ್‌ನಲ್ಲಿ ಅಳವಡಿಸಲಾದ ಡಿಜಿಟಲ್ ಕ್ಲಾಕ್ ಟವರ್ ನಾಲ್ಕು ಬದಿಗಳಲ್ಲಿ ಒಂದೊಂದು ರೀತಿಯಲ್ಲಿ ಸಮಯವನ್ನು ತೋರಿಸಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.ಹಾಗೇ ಅದನ್ನು ವಿಚಿತ್ರ ಕ್ಲಾಕ್ ಟವರ್ ಎಂದು ಟ್ರೋಲ್ ಮಾಡಿದೆ. ಇದು ಈಗ ವೈರಲ್(Viral Video) ಆಗಿದೆ.


ಭೋಪಾಲ್: ಇತ್ತೀಚೆಗಷ್ಟೇ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಹೊಸದಾಗಿ ನಿರ್ಮಿಸಲಾದ 90 ಡಿಗ್ರಿ ಫ್ಲೈಓವರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಭೋಪಾಲ್ ಮತ್ತೆ ಸುದ್ದಿಯಲ್ಲಿದೆ. ಹೌದು ಅದೇನೆಂದರೆ ಪಾಲಿಟೆಕ್ನಿಕ್ ಸ್ಕ್ವೇರ್‌ನಲ್ಲಿ ಅಳವಡಿಸಲಾದ ಡಿಜಿಟಲ್ ಕ್ಲಾಕ್ ಟವರ್ ಒಂದೇ ರೀತಿಯ ಸಮಯ ತೋರಿಸುವ ಬದಲು ಬೇರೆ ಬೇರೆ ರೀತಿಯಲ್ಲಿ ಸಮಯವನ್ನು ತೋರಿಸಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿಚಿತ್ರ ಕ್ಲಾಕ್ ಟವರ್(Clock Tower)ಎಂದು ಟ್ರೋಲ್ ಮಾಡಿದೆ.
ವೈರಲ್ ಆದ ವಿಡಿಯೊದಲ್ಲಿ ಡಿಜಿಟಲ್ ಕ್ಲಾಕ್ ಟವರ್ ಒಂದು ಭಾಗ ರಾತ್ರಿ 8:58 ತೋರಿಸಿದರೆ, ಇನ್ನೊಂದು ಭಾಗ ರಾತ್ರಿ 9:05 ತೋರಿಸಿರುವುದು ಸೆರೆಯಾಗಿದೆ. ಕೇರಳ ಕಾಂಗ್ರೆಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಗಡಿಯಾರವನ್ನು ಟ್ರೋಲ್ ಮಾಡಿ, "ವಿಶ್ವಪ್ರಸಿದ್ಧ ರೂ.40 ಲಕ್ಷ ಮೌಲ್ಯದ ಬಿಹಾರ ಶರೀಫ್ ಕ್ಲಾಕ್ ಟವರ್ ವಿಶ್ರಾಂತಿ ಪಡೆಯುತ್ತಿದೆ. ಭೋಪಾಲ್ ಕ್ಲಾಕ್ ಟವರ್ ಅದಕ್ಕೆ ಸಹಾಯ ಮಾಡಲು ಇಲ್ಲಿದೆ!" ಎಂದು ವ್ಯಂಗ್ಯ ಮಾಡಿದೆ.
ವಿಡಿಯೊ ಇಲ್ಲಿದೆ ನೋಡಿ...
The world famous ₹40 Lakh clock tower of Bihar Sharif can take rest. Bhopal clock tower is here to help! pic.twitter.com/sNHUdq7OzM
— Congress Kerala (@INCKerala) June 16, 2025
ನಗರದ ಸೌಂದರ್ಯವನ್ನು ಹೆಚ್ಚಿಸಲು ಫೆಬ್ರವರಿ 2025ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಸಮಯದಲ್ಲಿ ಕ್ಲಾಕ್ ಟವರ್ ಅನ್ನು ನಿರ್ಮಿಸಲಾಯಿತು. ಆದರೆ, ಈಗ ಈ ಕ್ಲಾಕ್ ಟವರ್ ಸರಿಯಾಗಿ ಸಮಯ ತೋರಿಸದ ಕಾರಣ ಅದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಪಹಾಸ್ಯಕ್ಕೆ ಗುರಿಯಾಗಿದೆ. ಸೋಶಿಯಲ್ ಮೀಡಿಯಾದವರು ಇದನ್ನು ತಮಾಷೆಯಾಗಿ 'ಟೈಮ್ ಟ್ರಾವೆಲ್ ಡಿವೈಸ್' ಎಂದು ಕರೆಯುತ್ತಿದ್ದಾರೆ ಮತ್ತು ಇದನ್ನು ಭೋಪಾಲ್‌ನ ಒಂಬತ್ತನೇ ಅದ್ಭುತ ಎಂದೂ ಕರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಂಗಡಿಯ ನೇಮ್ ಬೋರ್ಡ್‌ನಲ್ಲಿ ಕನ್ನಡವಿಲ್ಲವೆಂದು ಕ್ಯಾತೆ ತೆಗೆದ ಹಿರಿಯ ನಾಗರಿಕ
ಈ ಹಿಂದೆ ಬಿಹಾರದ ಶರೀಫ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಿಹಾರದ ಕ್ಲಾಕ್ ಟವರ್ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಮುಖ್ಯಮಂತ್ರಿಯವರ ಪ್ರಗತಿ ಯಾತ್ರೆಯ ಸಮಯದಲ್ಲಿ ಈ ಟವರ್ ಅನ್ನು ತರಾತುರಿಯಲ್ಲಿ ಕಾರ್ಯರೂಪಕ್ಕೆ ತರಲಾಯಿತು ಎಂದು ವರದಿಯಾಗಿದೆ. ಆದರೆ, ಮರುದಿನವೇ ಕಳ್ಳರು ಟವರ್‌ನ ಕ್ಲಾಕ್‍ನಲ್ಲಿರುವ ತಾಮ್ರದ ತಂತಿಗಳನ್ನು ದೋಚಿದ್ದರಿಂದ ಅದು ಸಮಯ ತೋರಿಸುವುದನ್ನು ನಿಲ್ಲಿಸಿತ್ತು.