Viral Video: 3 ವರ್ಷದಿಂದ ಶ್ವಾಸಕೋಶದಲ್ಲಿ 8 ಸೆಂ.ಮೀ ಉದ್ದದ ಚಾಕು ಇದ್ರೂ ವ್ಯಕ್ತಿ ಜೀವಂತ- ಏನಿದು ಘಟನೆ?
24 ವರ್ಷದ ವ್ಯಕ್ತಿಯೊಬ್ಬನ ಬಲ ಶ್ವಾಸಕೋಶದಲ್ಲಿ ಬರೋಬ್ಬರಿ ಎಂಟು ಸೆಂಟಿಮೀಟರ್ ಉದ್ದದ ಮುರಿದ ಚಾಕುವಿನ ತುಂಡೊಂದು ಸಿಲುಕಿದ್ದು, ಒಡಿಶಾದ ಬೆರ್ಹಾಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ ಶ್ವಾಸಕೋಶದಿಂದ ಚಾಕುವನ್ನು ಹೊರತೆಗೆದಿದ್ದಾರೆ. ಆತ ಈಗ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ಸುದ್ದಿ ಇದೀಗ ವೈರಲ್(Viral News) ಆಗಿದೆ.


ನವದೆಹಲಿ: ಮಕ್ಕಳು ಆಟವಾಡುವಾಗ ಗಂಟಲಿನೊಳಗೆ ಹೇರ್ ಪೀನ್, ಕ್ಲಿಪ್, ನಾಣ್ಯದಂತಹ ವಸ್ತುಗಳು ಸಿಕ್ಕಿ ಅಪಾಯಕ್ಕೆ ತುತ್ತಾದ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಇದೀಗ ಒಡಿಶಾದ ಬೆರ್ಹಾಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ ಶ್ವಾಸಕೋಶದಿಂದ ಎಂಟು ಸೆಂಟಿಮೀಟರ್ ಉದ್ದದ ಚಾಕು ಹೊರತೆಗೆದಿದ್ದಾರೆ. ಚಾಕು ಹೇಗೆ ಶ್ವಾಸಕೋಸದೊಳಗೆ ಸೇರಿದೆ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ....? ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತಕ್ಕೊಳಗಾಗಿದ್ದನಂತೆ. ಕೊನೆಗೆ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆದಿದ್ದಾರಂತೆ. ಈ ಸುದ್ದಿ ಇದೀಗ ವೈರಲ್(Viral News) ಆಗಿದೆ.
24 ವರ್ಷದ ಸಂತೋಷ್ ದಾಸ್ ಇತ್ತೀಚೆಗೆ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಲ ಥೊರಾಕೊಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ವೈದ್ಯರು ಅವನ ಶ್ವಾಸಕೋಶದಿಂದ ಹರಿತವಾದ ಚಾಕುವನ್ನು ತೆಗೆದುಹಾಕಿದ್ದಾರೆ. ಇದು 2.5 ಸೆಂ.ಮೀ ಅಗಲ ಮತ್ತು 3 ಮಿ.ಮೀ ದಪ್ಪವಾಗಿತ್ತು ಎನ್ನಲಾಗಿದೆ.
ವರದಿ ಪ್ರಕಾರ, ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯಿಂದ ಸಂತೋಷ್ ದಾಸ್ ಚಾಕು ಇರಿತಕ್ಕೊಳಗಾಗಿದ್ದನಂತೆ. ಆ ವೇಳೆ ಕುತ್ತಿಗೆಗೆ ಚಾಕು ಚುಚ್ಚಿದ ಕಾರಣ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮುಂದಿನ ಎರಡು ವರ್ಷಗಳ ಕಾಲ ಆರೋಗ್ಯವಾಗಿದ್ದಾನೆ. ಆದರೆ ಚಾಕುವಿನ ಮುರಿದ ತುಂಡೊಂದು ಮೂರು ವರ್ಷಗಳಿಂದ ವ್ಯಕ್ತಿಯ ಶ್ವಾಸಕೋಶದಲ್ಲಿ ಉಳಿದಿದೆ. ಇದರಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ, ಅವನು ಒಣ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದಾನಂತೆ. ಕೊನೆಗೆ ಅವನು ರಕ್ತ ಕೆಮ್ಮಲು ಶುರುಮಾಡಿದಾಗ ಅವನ ಕುಟುಂಬವು ಅವನನ್ನು ಆಸ್ಪತ್ರೆಗೆ ಕರೆದೊಯ್ದಿದೆ.
ಅಲ್ಲಿ ವೈದ್ಯರು ಆತನಿಗೆ ಎಕ್ಸ್-ರೇ ಮಾಡಿದಾಗ ಅವನ ಬಲ ಶ್ವಾಸಕೋಶದೊಳಗೆ ಹರಿತವಾದ ಚಾಕುವನ್ನು ಪತ್ತೆಮಾಡಿದ್ದಾರೆ. ನಂತರ ಇದನ್ನು ಸಿಟಿ ಸ್ಕ್ಯಾನ್ ಮತ್ತು ಬ್ರಾಂಕೋಸ್ಕೋಪಿ ಮೂಲಕ ದೃಢಪಡಿಸಲಾಯಿತು. ಹೀಗಾಗಿ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯಲಾಗಿದೆ. ಆದರೆ ಈ ವೇಳೆ ಅವನಿಗೆ ಯಾವುದೇ ಸಮಸ್ಯೆಯಾಗಲಿಲ್ಲ ಮತ್ತು ಆತ ಈಗ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ‘ಉಯಿ ಅಮ್ಮ’ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ ಯುವತಿ; ವಿಡಿಯೊ ವೈರಲ್
ಈ ಹಿಂದೆ, ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಗುದದ್ವಾರದಿಂದ 16 ಇಂಚಿನ ಸೋರೆಕಾಯಿ ಅನ್ನು ತೆಗೆದುಹಾಕಿದ ನಂತರ ಇದೇ ಕಾರಣಕ್ಕಾಗಿ ಸುದ್ದಿಯಾಗಿದ್ದನು. 60 ವರ್ಷದ ರೈತ ತೀವ್ರ ಹೊಟ್ಟೆನೋವಿನ ಬಗ್ಗೆ ದೂರು ನೀಡಿ ವೈದ್ಯರ ಬಳಿಗೆ ಬಂದಿದ್ದನು. ಅಲ್ಲಿ ವೈದ್ಯರು ಎಕ್ಸ್-ರೇ ಮಾಡಿದ್ದಾಗ ಅವನ ಗುದನಾಳದಲ್ಲಿ ಸೋರೆಕಾಯಿ ಇರುವುದು ಕಂಡುಕೊಂಡಿದ್ದಾರೆ. ಆದರೆ ಈ ತರಕಾರಿ ಅವನ ಗುದದ್ವಾರದಲ್ಲಿ ಹೇಗೆ ಸಿಲುಕಿಕೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ, ಆ ವ್ಯಕ್ತಿ ಈ ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಅವನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ವೈದ್ಯರು ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಅದನ್ನು ತೆಗೆದುಹಾಕಿದ್ದರು.