ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೆಟ್ರೋದೊಳಗೆ ಹಾವಿದೆ ಎಂಬ ವದಂತಿ- ಬೆದರಿದ ಮಹಿಳೆಯರ ರಂಪಾಟವನ್ನೊಮ್ಮೆ ನೋಡಿ

ದೆಹಲಿ ಮೆಟ್ರೋದ ಮಹಿಳಾ ಬೋಗಿಯೊಳಗೆ ಹಾವೊಂದು ಕಾಣಿಸಿಕೊಂಡ ವದಂತಿಯೊಂದು ಹರಡಿದೆ. ಇದರಿಂದ ಮಹಿಳೆಯರು ಕಿರುಚುತ್ತಾ ಸೀಟುಗಳ ಮೇಲೆ ಹತ್ತಿ ನಿಂತಿದ್ದಾರೆ. ಈ ಗೊಂದಲಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಮೆಟ್ರೋದೊಳಗೆ ನಾಗರಾಜನ ಎಂಟ್ರಿ; ಮಹಿಳೆಯರ ರಂಪಾ ನೋಡಿ

Profile pavithra Jun 21, 2025 9:58 AM

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಮಹಿಳಾ ಬೋಗಿಯೊಳಗೆ ಹಾವೊಂದು ಪತ್ತೆಯಾಗಿದೆ ಎಂಬ ವದಂತಿ ಹರಡಿದ ನಂತರ ಭಾರೀ ಗೊಂದಲ ಉಂಟಾಗಿದೆ. ಬೋಗಿಯೊಳಗೆ ಹಾವು(Snake) ಇದೆ ಎಂದ ತಕ್ಷಣ ಅಲ್ಲಿದ್ದ ಮಹಿಳೆಯರು ಕಿರುಚುತ್ತಾ ಸೀಟುಗಳ ಮೇಲೆ ಹಾರಲು ಶುರುಮಾಡಿದ್ದಾರೆ. ಪ್ರಯಾಣಿಕರೊಬ್ಬರು ಬೋಗಿಯೊಳಗಿನ ಗದ್ದಲದ ವಿಡಿಯೊವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಬೋಗಿಯೊಳಗೆ ಹಾವಿರುವ ವದಂತಿ ಹರಡಿದ ನಂತರ ಗದ್ದಲ ನಡೆದಿರುವುದು ಸೆರೆಯಾಗಿದೆ. ಆದರೆ ವಿಡಿಯೊದಲ್ಲಿ ಎಲ್ಲಿಯೂ ಹಾವು ಕಾಣಿಸಲಿಲ್ಲ. ಆದರೆ ಕಂಪಾರ್ಟ್‌ಮೆಂಟ್ ಒಳಗೆ ಹಾವು ಇದೆ ಎಂದು ನಂಬಿದ್ದರಿಂದ ಮಹಿಳಾ ಪ್ರಯಾಣಿಕರು ಭಯಭೀತರಾಗಿ ಸೀಟಿನ ಮೇಲೆ ಹತ್ತಿ ನಿಂತಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ಘಟನೆ ನಡೆದ ನಿಖರವಾದ ಸ್ಥಳ ತಿಳಿದಿಲ್ಲ. ಆದರೆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೊ ನೋಡಿದ ನೆಟ್ಟಿಗರು ಘಟನೆಯ ಬಗ್ಗೆ ತಮಾಷೆ ಮಾಡಿದ್ದಾರೆ. ನೆಟ್ಟಿಗರೊಬ್ಬರು, “ಅದು ನನ್ನ ಬಾಸ್, ದಯವಿಟ್ಟು ಜಾಗರೂಕರಾಗಿರಿ ಇಲ್ಲದಿದ್ದರೆ ನನಗೆ ಸಂಬಳ ಸಿಗುವುದಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು,"ದೆಹಲಿ ಮೆಟ್ರೊ ವನ್ಯಜೀವಿ ಸಫಾರಿಯಂತಿದೆ" ಎಂದು ಮೆಟ್ರೋ ಪ್ರಯಾಣವನ್ನು ಅರಣ್ಯ ಸಫಾರಿಗೆ ಹೋಲಿಸಿದ್ದಾರೆ. ಮತ್ತೊಬ್ಬರು, "ದೆಹಲಿ ಮೆಟ್ರೋ, ಇನ್ನು ಮುಂದೆ ಮೆಟ್ರೋ ಅಲ್ಲ, ಅದು ಸರ್ಕಸ್" ಎಂದು ತಮಾಷೆ ಮಾಡಿದ್ದಾರೆ. ಈ ಘಟನೆಯ ಬಗ್ಗೆ ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನೂ ಓದಿ:Viral Video: ಇಂತಹ ಕ್ಲಾಕ್ ಟವರ್‌ ನೀವು ನೋಡಿಯೇ ಇರಲ್ಲ; ಏನಿದು ವೈರಲ್‌ ಸ್ಟೋರಿ!

ಈ ಹಿಂದೆ ನವದೆಹಲಿಯಿಂದ ಹೊರಟ ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನ ಶೌಚಾಲಯದಲ್ಲಿ ಹಾವು ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ರೈಲ್ವೆ ಸಿಬ್ಬಂದಿಯೊಬ್ಬರು ಪ್ಲಾಸ್ಟಿಕ್ ಚೀಲವನ್ನು ಬಳಸಿ ಹಾವನ್ನು ಸುರಕ್ಷಿತವಾಗಿ ಹೊರತೆಗೆದು ಚಲಿಸುವ ರೈಲಿನಿಂದ ಹೊರಗೆ ಎಸೆದರು. ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು.