Viral News: ಪತ್ನಿಯ ಕೈಗೆ ಗೆಳತಿಯ ಜತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮಹಿಳೆಯೊಬ್ಬಳು ತನ್ನ ಪತ್ನಿ ಮತ್ತು ಅವನ ಗೆಳತಿಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿದು ಗಲಾಟೆ ಮಾಡಿದ್ದಾಳೆ. ಇದಕ್ಕೆ ಆಕೆಯ ಪತಿ ಹಾಗೂ ಗೆಳತಿ ಆಕೆಯನ್ನು ನಡುರಸ್ತೆಯಲ್ಲಿ ಥಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಲಖನೌ: ವಿವಾಹಿತ ಮಹಿಳೆ ಹಾಗೂ ಪುರುಷರು ತಮ್ಮ ಸಂಗಾತಿಗೆ ಮೋಸ ಮಾಡಿ ಅನೈತಿಕ (Illegal Relationship) ಸಂಬಂಧ ಇಟ್ಟುಕೊಂಡ ಹಲವು ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿತ್ತು. ಹಾಗೇ ಈ ಕಾರಣಕ್ಕೆ ಸಾಕಷ್ಟು ಕೊಲೆಗಳು ಕೂಡ ನಡೆದಿವೆ. ಇದೀಗ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮಹಿಳೆಯೊಬ್ಬಳು ತನ್ನ ಪತ್ನಿ ಮತ್ತು ಅವನ ಗೆಳತಿಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿದು ಗಲಾಟೆ ಮಾಡಿದ್ದಾಳೆ. ಆಕೆಯ ಪತಿ ಹಾಗೂ ಗೆಳತಿ ಆಕೆಯನ್ನು ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಪತಿ, ಪತ್ನಿ ಮೋಹಿನಿಯನ್ನು ಹೊಡೆದು, ಒದೆಯುತ್ತಾ, ಆಕೆಯನ್ನು ನಿಂದಿಸುವುದು ಸೆರೆಯಾಗಿದೆ. ಶಿವಂ ಯಾದವ್‌ನ ಗೆಳತಿ ಕೂಡ ಮೋಹಿನಿಯ ಕೂದಲನ್ನು ಹಿಡಿದು ರಸ್ತೆಯ ಮಧ್ಯದಲ್ಲಿ ಎಳೆದುಕೊಂಡು ಹೋಗಿದ್ದಾಳೆ. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಮೋಹಿನಿಯನ್ನು ಥಳಿಸಿದ ನಂತರ, ಶಿವಂ ಮತ್ತು ಆತನ ಗೆಳತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಕುರಿತು ಮಾಹಿತಿ ಹಂಚಿಕೊಂಡ ಮೋಹಿನಿ, ತನ್ನ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಖರೀದಿಸಲು ಹೊರಗೆ ಹೋಗಿದ್ದಾಗ ಶಿವಂ ಮತ್ತು ಅವನ ಗೆಳತಿಯನ್ನು ನೋಡಿದೆ ಎಂದು ಹೇಳಿದ್ದಾಳೆ. ಇವರ ಸಂಬಂಧದ ಕುರಿತು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಇಬ್ಬರೂ ಕೋಪಗೊಂಡು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾಳೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಮೋಹಿನಿ ಗಾಯಗೊಂಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪೊಲೀಸ್ ದೂರು ದಾಖಲಿಸಿದ್ದಾಳೆ. ಮೋಹಿನಿ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಡ್ರೈವ್ ಮಾಡ್ತಿದ್ದಾಗಲೇ ಬಸ್ ಚಾಲಕನಿಗೆ ಹೃದಯಾಘಾತ- ಆಮೇಲೆ ನಡೆದಿದ್ದೇ ಒಂದು ಪವಾಡ!!
ಇತ್ತೀಚೆಗಷ್ಟೇ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ತನ್ನ ಗೆಳೆಯನನ್ನು ಇನ್ನೊಬ್ಬ ಹುಡುಗಿಯ ಜತೆ ಹೋಟೆಲ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಹುಡುಗಿಯೊಬ್ಬಳು ಕೋಪಗೊಂಡು ಆತನನ್ನು ನಡು ರಸ್ತೆಯಲ್ಲಿ ಮಲಗಿಸಿ ಸಾರ್ವಜನಿಕರ ಎದುರಿನಲ್ಲಿ ಬಟ್ಟೆ ಬಿಚ್ಚಿಸಿ ಚಪ್ಪಲಿಯಲ್ಲಿ ಹೊಡೆದಿದ್ದಳು. ಇದರಿಂದಾಗಿ ಅವನು ಹೆದರಿ ಮುಜುಗರಕ್ಕೊಳಗಾಗಿದ್ದನು. ಅಲ್ಲಿದ್ದ ಜನರು ಇಡೀ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದು, ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹುಡುಗಿಯ ರೌದ್ರಾವತಾರ ಕಂಡು ನೆಟ್ಟಿಗರು ಶಾಕ್ ಆಗಿದ್ದರು. ಆದರೆ ಈ ವಿಷಯದಲ್ಲಿ ಯಾವುದೇ ಪೊಲೀಸ್ ಕ್ರಮ ಕೈಗೊಂಡ ಬಗ್ಗೆ ಯಾವುದೇ ವರದಿಗಳಿಲ್ಲ.