ಘರ್ ವಾಪಸಿ: ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್; ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುವ ವಿಡಿಯೊ ವೈರಲ್
Viral Video: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 'ಮೊಹಮ್ಮದ್ ಅಲಿ' ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಪ್ರಸಿದ್ಧ ಉದ್ಯಮಿಯ ಪುತ್ರ ಆಯುಷ್ ಮಲಿಕ್ ಈಗ ಮತ್ತೆ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಆಯುಷ್ ಮಲಿಕ್ ತಮ್ಮ ಹೆತ್ತವರೊಂದಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಉದ್ಯಮಿ ಪುತ್ರ ಆಯುಷ್ ಮಲಿಕ್ -
ಲಖನೌ, ಜು. 1: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಚರ್ಚೆಯ ವಿಚಾರವಾಗಿದ್ದ ಆಯುಷ್ ಮಲಿಕ್ ಮತಾಂತರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮೊಹಮ್ಮದ್ ಅಲಿ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಪ್ರಸಿದ್ಧ ಉದ್ಯಮಿಯ ಪುತ್ರ ಆಯುಷ್ ಮಲಿಕ್ ಈಗ ಮತ್ತೆ ಸ್ವಇಚ್ಛೆಯಿಂದ ಹಿಂದು ಧರ್ಮಕ್ಕೆ ಮರಳಿದ್ದಾರೆ. ಆಯುಷ್ ಮಲಿಕ್ ತಮ್ಮ ಹೆತ್ತವರೊಂದಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ ವೈರಲ್ (Viral Video) ಆಗಿದೆ.
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮೊಹಮ್ಮದ್ ಅಲಿ ಎಂದು ಹೆಸರು ಬದಲಾಯಿಸಿಕೊಂಡಿದ್ದ ಔಷಧ ಉದ್ಯಮಿಯ ಪುತ್ರ ಆಯುಷ್ ಮಲಿಕ್ ಈಗ ಸನಾತನ ಧರ್ಮಕ್ಕೆ ಮರಳಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಅವರು ತಮ್ಮ ಕುಟುಂಬಕ್ಕೆ ಕ್ಷಮೆಯಾಚಿಸುತ್ತಿದ್ದು, ಇನ್ಮುಂದೆ ಪೋಷಕರ ಆಶ್ರಯದಲ್ಲೇ ಇರಬಯಸುತ್ತೇನೆ ಎಂದು ಹೇಳಿದ್ದಾರೆ. ಮನೆಯ ದೇವರ ಕೋಣೆಯಲ್ಲಿ ಪೋಷಕರೊಂದಿಗೆ ಕುಳಿತು ಹನುಮಾನ್ ಚಾಲೀಸಾ ಪಠಿಸುತ್ತಿರುವ ಆಯುಷ್ ಅವರ ವಿಡಿಯೊ ಭಾರಿ ವೈರಲ್ ಆಗುತ್ತಿದೆ.
ವಿಡಿಯೊ ನೋಡಿ:
UP- शामली का आयुष मलिक अब मुसलमान से फिर हिंदू हो गया है. आयुष का एक वीडियो आज सामने आया है.
— Narendra Pratap (@hindipatrakar) June 29, 2026
इस वीडियो में आयुष हकलाती आवाज में खुद के पुन: हिंदू बनने की बात कह रहा है और माफी मांग रहा है. वह घर के मंदिर में पूजा कर रहा है और परिवार के साथ बैठा है. उसके पेरेन्ट्स फिर से उसके… https://t.co/iQVNuI7Hyu pic.twitter.com/Aa2OO5fI4e
ಏನಿದು ಪ್ರಕರಣ?
ಶಾಮ್ಲಿಯ ದಯಾನಂದ ನಗರ ಪ್ರದೇಶದ ಉದ್ಯಮಿಯ ಪುತ್ರ ಆಯುಷ್ ಮಲಿಕ್ ತಾವು ಇಸ್ಲಾಂಗೆ ಮತಾಂತರಗೊಂಡಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಆ ಸಮಯದಲ್ಲಿ ಅವರು ಅಲಿ ಮೊಹಮ್ಮದ್ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು. ವಿಡಿಯೊಗಳಲ್ಲಿ ಗಡ್ಡ ಮತ್ತು ಇಸ್ಲಾಮಿಕ್ ಉಡುಪನ್ನು ಧರಿಸಿರುವುದು ಕಂಡುಬಂದಿತ್ತು.
ಬಿ-ಫಾರ್ಮಾ ಪದವೀಧರರಾಗಿರುವ ಆಯುಷ್ ಮಲಿಕ್, 2018ರಲ್ಲಿ ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುವಾಗ ಸ್ಥಳೀಯ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಹಾಗೂ ಜಿಮ್ ಟ್ರೈನರ್ ಆಗಿದ್ದ ಚಾಂದ್ನಿ ಖುರೇಷಿ ಎಂಬಾಕೆಯ ಸ್ನೇಹ ಬೆಳೆಸಿಕೊಂಡಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಚಾಂದ್ನಿ ಹಾಗೂ ಆಕೆಯ ಕುಟುಂಬದ ಮೇರೆಗೆ ಆಯುಷ್ 2023ರಲ್ಲಿ ದೆಹಲಿಗೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನಿಕಾಹ್ ಮೂಲಕ ಚಾಂದಿನಿ ಖುರೇಷಿ ಅವರನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದರು
ಬಿಕಾನೆರ್ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ನೀರು ಸೋರಿಕೆ
ಇದು ಉತ್ತರ ಪ್ರದೇಶದ ಇತರ ಭಾಗಗಳಲ್ಲಿ ವ್ಯಾಪಕ ವಿವಾದಕ್ಕೆ ಕಾರಣವಾಯಿತು. ಹಲವು ಹಿಂದೂ ಸಂಘಟನೆಗಳು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು. ಆಯುಷ್ ಅವರ ತಂದೆ ದೇವ್‌ರಾಜ್ ಮಲಿಕ್ ಪೊಲೀಸರಿಗೆ ದೂರು ನೀಡಿ, ಚಾಂದ್ನಿ ಖುರೇಷಿ ಮತ್ತು ಆಕೆಯ ಕುಟುಂಬ ತಮ್ಮ ಮಗನನ್ನು ಬಲವಂತದಿಂದ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಚಾಂದ್ನಿ ಖುರೇಷಿ ಹಾಗೂ ಆಕೆಯ ತಂದೆ ಸೇರಿ ನಾಲ್ವರನ್ನು ಬಂಧಿಸಿದ್ದರು.
ಇದೀಗ ಆಯುಷ್, ʼʼನನ್ನ ನಿರ್ಧಾರದಿಂದ ಪೋಷಕರು ನೊಂದಿದ್ದು ನಾನು ಸ್ವಇಚ್ಛೆಯಿಂದ ಮರಳಿ ಸನಾತನ ಧರ್ಮಕ್ಕೆ ಬರುತ್ತಿದ್ದೇನೆ. ನನ್ನನ್ನು ಕ್ಷಮಿಸಿ, ಇನ್ಮುಂದೆ ಪೋಷಕರ ಆಶ್ರಯದಲ್ಲೇ ಇರಬಯಸುತ್ತೇನೆʼʼ ಎಂದು ಹೇಳಿದ್ದಾರೆ. ಸದ್ಯ ಆಯುಷ್ ಮರಳಿ ಬಂದಿರುವುದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.