ರೈಲಿನ ಸೀಟ್ ಕವರ್ ಕಿತ್ತು ಹಾಕಿ ಪುಂಡಾಟ ಮೆರೆದ ಯುವಕರು; ದಂಡ ವಸೂಲಿ ಮಾಡಿ ಎಂದ ನೆಟ್ಟಿಗರು
Viral Video: ಇಲ್ಲೊಂದು ಯುವಕರ ಗುಂಪು ವೈರಲ್ ಆಗುವ ಉದ್ದೇಶದಿಂದ ಸಾರ್ವಜನಿಕ ವಸ್ತುವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಸೀಟು ಹರಿದು ಹಾಕಿ ಹುಚ್ಚಾಟ ಮರೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರೈಲಿನ ಸೀಟ್ ಕವರ್ ಕಿತ್ತು ಹಾಕಿ ಹುಚ್ಚಾಟ ಮೆರೆದ ಯುವಕರು -
ನವದೆಹಲಿ, ಮೇ 4: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಕೆಲವರು ವಿಚಿತ್ರ ವರ್ತನೆ ತೋರುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ. ರಸ್ತೆ ಮಧ್ಯೆ ಸ್ಟಂಟ್ ಮಾಡುವುದು, ರೈಲ್ವೆ ಹಳಿಯಲ್ಲಿ ರೀಲ್ಸ್ ಮಾಡುವುದು ಹೀಗೆ ಅಪಾಯಕಾರಿ ಪ್ರದರ್ಶನ ಕೈಗೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಯುವಕರ ಗುಂಪು ವೈರಲ್ ಆಗುವ ಉದ್ದೇಶದಿಂದ ಸಾರ್ವಜನಿಕ ವಸ್ತುವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಸೀಟ್ ಹರಿದು ಹಾಕಿ ಹುಚ್ಚಾಟ ಮರೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ನೆಟ್ಟಿಗರು ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ.
ಭಾರತೀಯ ರೈಲ್ವೆ ಬೋಗಿಯನ್ನು ಯುವಕರ ಗುಂಪೊಂದು ಧ್ವಂಸಗೊಳಿಸುತ್ತಿರುವುದು ಕಂಡು ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಕ್ಲಿಪ್‌ನಲ್ಲಿ ಜನದಟ್ಟಣೆಯ ನಡುವೆ ಜನರಲ್ ಕೋಚ್‌ನೊಳಗಿನ ವ್ಯಕ್ತಿಯೊರ್ವ ನೀಲಿ ಬಣ್ಣದ ಸೀಟ್ ಕವರನ್ನು ಹರಿದು ಹಾಕುತ್ತಿರುವುದನ್ನು ತೋರಿಸಲಾಗಿದೆ. ಆದರೆ ಇನ್ನೊಬ್ಬ ವ್ಯಕ್ತಿ ಈ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾನೆ.
ವಿಡಿಯೊ ನೋಡಿ:
How stupid one has to be to do this?
— Tarun Gautam (@TARUNspeakss) May 2, 2026
See his smile while his friend is tearing the train seat cover apart. They think they achieved something here.
This goes beyond civic sense. This is a punishable offense. pic.twitter.com/t2Sq1MJtpH
ಕೋಚ್‌ನೊಳಗೆ ವೈರಲ್ ಆಗುವ ಉದ್ದೇಶದಿಂದ ರೈಲಿನ ಸೀಟನ್ನೆ ಹರಿದು ಹಾಕಿದ್ದಾರೆ ಎನ್ನಲಾಗಿದೆ. ಗುಲಾಬಿ ಶರ್ಟ್ ಮತ್ತು ಡೆನಿಮ್ ಜೀನ್ಸ್ ಧರಿಸಿರುವ ಯುವಕ ಕ್ಯಾಮೆರಾಕ್ಕೆ ಉದ್ದೇಶಪೂರ್ವಕವಾಗಿ ಪೋಸ್ ನೀಡುತ್ತಾ ನಗುತ್ತ ಸೀಟ್ ಕವರ್ ಹರಿದು ಹಾಕಿದ್ದಾನೆ.
ಅಕ್ಷಯ್ ಖನ್ನಾ ವೈರಲ್ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ
ಈ ವ್ಯಕ್ತಿಯನ್ನು ಅಂಕಿತ್ ಟೊಪ್ಪೊ ಎಂದು ಗುರುತಿಸಲಾಗಿದೆ. ವಿಡಿಯೊ ವೇಗವಾಗಿ ವೈರಲ್ ಆಗುತ್ತಿದ್ದಂತೆ ಹಲವರು ಬಳಕೆದಾರರು ಯುವಕನ ಪ್ರೊಫೈಲ್ ಅನ್ನು ಟ್ಯಾಗ್ ಮಾಡಿದ್ದಾರೆ. ಕೇವಲ ಸೀಟು ಹರಿದು ಹಾಕಿದ್ದು ಅಲ್ಲದೆ ರೈಲು ಚಲಿಸುತ್ತಿರುವಾಗ ಕೋಚ್ ಫಿಟ್ಟಿಂಗ್‌ಗಳ ಮೇಲೆ ಯುವಕರು ಹತ್ತುವುದು ಮತ್ತು ಕಂಪಾರ್ಟ್‌ಮೆಂಟ್ ಒಳಗೆ ಅಜಾಗರೂಕತೆಯಿಂದ ಓಡಾಡುವುದನ್ನು ಕಾಣಬಹುದು. ಈ ನಡವಳಿಕೆಯು ಅಲ್ಲಿದ್ದ ಜನರಿಗೆ ಆತಂಕಕ್ಕೀಡು ಮಾಡಿದೆ. ರೈಲು ವೇಗವಾಗಿ ಚಲಿಸುತ್ತಿರುವಾಗ ಇಂತಹ ವರ್ತನೆಗಳು ಪ್ರಾಣ ಹಾನಿಗೂ ಕಾರಣವಾಗಬಹುದು ಎಂದು ಹಲವರು ಎಚ್ಚರಿಸಿದ್ದಾರೆ.
ಭಾರತೀಯ ಕಾನೂನಿನ ಪ್ರಕಾರ, ರೈಲ್ವೆ ಆಸ್ತಿಗೆ ಹಾನಿ ಮಾಡುವುದು ರೈಲ್ವೆ ಕಾಯ್ದೆ ಮತ್ತು ಜೈಲು ಶಿಕ್ಷೆ ಸೇರಿದಂತೆ ಇತರ ಕ್ರಿಮಿನಲ್ ನಿಬಂಧನೆಗಳ ಅಡಿಯಲ್ಲಿ ದಂಡವನ್ನು ವಿಧಿಸಬಹುದು. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದು ಇಂತಹ ದುಷ್ಕರ್ಮಿಗಳು ನಮ್ಮ ಸಮಾಜಕ್ಕೆ ಮಾರಕ, ಇಂತವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಕಮೆಂಟ್ ಮಾಡಿದ್ದಾರೆ. ಒಬ್ಬರು, ʼʼರೀಲ್ಸ್ ಮಾಡುವ ಉದ್ದೇಶದಿಂದ ಈ ಮಟ್ಟಕ್ಕೆ ಇಳಿಯುವುದು ತಪ್ಪುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.