ಆಂಟಿಗಳ ಎಸ್ಕೇಪ್, ಅಂಕಲ್ʼಗಳ ಪರದಾಟ
ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಜಿಮ್ ಟ್ರೈನರ್‌ನ ಪತ್ನಿ, ಪತಿಯ ಸ್ನೇಹಿತ ನೊಂದಿಗೆ ಓಡಿ ಹೋಗಿದ್ದಾಳೆ. ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲಾಗಿದ್ದಾಳೆ. ಅಣ್ಣ ಅಣ್ಣ ಅಂತ ಕರೆಯುತ್ತಿದ್ದವಳು ಈಗ ಪ್ರೀತಿಸಿ ಮದುವೆಯಾಗಿದ್ದ ಗಂಡನಿಗೆ ಕೊಟ್ಟು ಕೈಕೊಟ್ಟು ಪರಾರಿ ಯಾಗಿದ್ದಾಳೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಮಹಿಳೆ ಓಡಿಹೋಗಿರುವುದು ಕುತೂಹಲಕ್ಕೆ ಕಾರಣ ವಾಗಿದೆ.
-
ಪ್ರಕರಣ 1: ಕಾಡಿಬೇಡಿ ಮದುವೆ, ನಂತರ ಪತಿಯ ಗೆಳೆಯನೊಂದಿಗೆ ಪರಾರಿ
ಪ್ರಕರಣ 2: ಅಣ್ಣಾ ಎಂದು ಕರೆದವನ ಜತೆ ಓಡಿ ಹೋದ ವಿವಾಹಿತ ಮಹಿಳೆ
ಪತಿಯನ್ನು ಬಿಟ್ಟು ಪರಪುರುಷನೊಂದಿಗೆ ಓಡಿ ಹೋಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದೆ. ಸಮಾನತೆ, ಶಿಕ್ಷಣದ ಜೊತೆಗೆ ಸ್ವಾತಂತ್ರ್ಯದ ಅಡಿ ಸ್ವೇಚ್ಛೆಯೂ ಸೇರಿ ಕೌಟುಂಬಿಕ ಮೌಲ್ಯಗಳು ಅಧಃಪತನದತ್ತ ಸಾಗಿದೆ. ಬೆಂಗಳೂರಲ್ಲಿ ಪ್ರಿಯತಮೆ ಪ್ರಿಯಕರನನ್ನು ಸುಟ್ಟು ಹಾಕಿ ಕೊಂದಿದ್ದಲ್ಲದೆ, ಕೊಲೆಗೂ ಮುಂಚೆ ಆತನಿಗೆ ವಿದೇಶಿ ಶೈಲಿಯಲ್ಲಿ ಪ್ರೇಮನಿವೇದನೆ ಮಾಡುವ ನಾಟಕವಾಡಿದ್ದಾಳೆ. ಇದೆಲ್ಲವನ್ನೂ ವಿಡಿಯೋ ಮಾಡಿಟ್ಟುಕೊಂಡಿದ್ದಾಳೆ.
ಅದೇ ರೀತಿ ಗಂಡನ ಸ್ನೇಹಿತನನ್ನು ‘ಅಣ್ಣಾ, ಅಣ್ಣಾ’ ಎಂದು ಕರೆಯುತ್ತಲೇ, ರಾತ್ರೋರಾತ್ರಿ ಪತಿಯನ್ನು ಬಿಟ್ಟು ಪರಾರಿಯಾಗಿ ಪರರ ನಾರಿಯಾದ ಕಥೆಯೂ ರೋಚಕವಾಗಿದೆ. ಇದರೊಂದಿಗೆ ಪ್ರಿಯಕರನೊಂದಿಗೆ ಎರಡು ಮಕ್ಕಳ ತಾಯಿಯೊಬ್ಬಳು ಪರಾರಿಯಾಗಿದ್ದಾಳೆ.
ಪ್ರೀತಿಸಿ ಕಾಡಿ ಬೇಡಿ ಮದುವೆಯಾದವಳು ಎರಡು ವರ್ಷದ ಬಳಿಕ ಗಂಡನ ಸ್ನೇಹಿತನ ಜೊತೆ ಓಡಿ ಹೋಗಿರುವ ಎರಡು ಪ್ರಕರಣ ಮಂಡ್ಯದಲ್ಲಿ ದಾಖಲಾಗಿದೆ.
ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಜಿಮ್ ಟ್ರೈನರ್‌ನ ಪತ್ನಿ, ಪತಿಯ ಸ್ನೇಹಿತನೊಂದಿಗೆ ಓಡಿ ಹೋಗಿದ್ದಾಳೆ. ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲಾಗಿ ದ್ದಾಳೆ. ಅಣ್ಣ ಅಣ್ಣ ಅಂತ ಕರೆಯುತ್ತಿದ್ದವಳು ಈಗ ಪ್ರೀತಿಸಿ ಮದುವೆಯಾಗಿದ್ದ ಗಂಡನಿಗೆ ಕೊಟ್ಟು ಕೈಕೊಟ್ಟು ಪರಾರಿಯಾಗಿದ್ದಾಳೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಮಹಿಳೆ ಓಡಿ ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಕೆವಟನ ಭಕ್ತಿ ಮತ್ತು ಪಾದಪೂಜೆ
ಮತ್ತೊಂದು ಪ್ರಕರಣದಲ್ಲಿ ಪ್ರಿಯಕರನೊಂದಿಗೆ ಎರಡು ಮಕ್ಕಳ ತಾಯಿ ಪರಾರಿಯಾಗಿ ಪತಿ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂ ರಲ್ಲಿ ನಡೆದಿದೆ. ಕಸ ಎಸೆದು ಬರುವುದಾಗಿ ಹೇಳಿ ತಡರಾತ್ರಿ ಪ್ರಿಯಕರನೊಂದಿಗೆ ಎರಡು ಮಕ್ಕಳ ತಾಯಿ ಪರಾರಿಯಾಗಿದ್ದಾಳೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪತಿ ನೀಡಿದ ದೂರು ಆಧರಿಸಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪತ್ನಿ ಲತಾ (ಹೆಸರು ಬದಲಿ ಸಲಾಗಿದೆ) ನಾಪತ್ತೆಯಾಗಿರುವುದಾಗಿ ಪತಿ ರಮೇಶ್ ಕುಮಾರ್ (ಹೆಸರು ಬದಲಿಸ ಲಾಗಿದೆ) ಎಂಬವರು ದೂರು ನೀಡಿದ್ದಾರೆ.
ಚಿಕ್ಕಮಗಳೂರಿನ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿ. ಏ.11ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಪತಿಗೆ ಪತ್ನಿ ಊಟ ಬಡಿಸಿದ್ದರು. ರಾತ್ರಿ 11.30ರ ಸುಮಾರಿಗೆ ಕಸ ಎಸೆದು ಬರುವು ದಾಗಿ ಪತಿಗೆ ಹೇಳಿ ಪತ್ನಿ ಹೋಗಿzರೆ. ಸಾಕಷ್ಟು ಹೊತ್ತಾದರೂ ಬರದ ಕಾರಣ ಪತಿ ಎಡೆ ಶೋಧ ನಡೆಸಿದ್ದಾರೆ. ಮೊಬೈಲ್ʼಗೆ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿತ್ತು.
ತಮಗೆ ಪ್ರಭು ಎಂಬಾತನ ಮೇಲೆ ಅನುಮಾನವಿದ್ದು, ಆತ ನೊಂದಿಗೆ ಹೋಗಿರುವ ಬಗ್ಗೆ ಪತಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಗಂಡನಿಗೆ ಕೈಕೊಟ್ಟು ಸ್ನೇಹಿತನ ಜೊತೆ ಪತ್ನಿ ಎಸ್ಕೇಪ್ ಆಗುವುದು ಈಗ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಹನಿಮೂನ್‌ಗೆ ಹೋದ ಗಂಡನನ್ನೇ ಕೊಲೆ ಮಾಡಿದ ವಿಚಾರ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಇದಾದ ನಂತರ ಈಗ ಮಹಿಳೆಯರಿಗೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎನ್ನುವುದು ಕೂಡ ಮನೋವೈಜ್ಞಾನಿಕ ವಿಚಾರವಾಗಿದೆ. ಈ ಹಿಂದೆಲ್ಲ ಹುಡುಗಿ ಓಡಿ ಹೋದಳು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈಗ ಮದುವೆಯಾದ ಮಹಿಳೆಯೇ ಪರಪುರುಷನೊಂದಿಗೆ ಹೆಜ್ಜೆ ಹಾಕಿದಳು ಎಂಬುದು ಸ್ಚೇಚ್ಛೆಯ ಹೆಸರಲ್ಲಿ ಹೊಸ ಗಾದೆಯ ರೂಪ ಪಡೆದುಕೊಳ್ಳುತ್ತಿದೆ.
ಗಂಡನಿಗೆ ಚಮಕ್ ಕೊಟ್ಟ ಪತ್ನಿ
ಕಾಲೇಜಿಗೆ ಹೋಗುವಾಗ ಆಟೋ ಡ್ರೈವರ್ ಮೇಲೆ ಕ್ರಶ್ ಆಗಿ, ಪ್ರೀತಿಸುವಂತೆ ಕಾಡಿ ಬೇಡಿ, ಕೊನೆಗೆ ಮನೆ ಬಿಟ್ಟು ಬಂದು ಪ್ರೇಮವಿವಾಹವಾದ ಮಹಿಳೆಯೋರ್ವರು ಮದುವೆಯಾದ ಎರಡೇ ವರ್ಷಕ್ಕೆ ಪತಿಯ ಸ್ನೇಹಿತನೊಂದಿಗೆ ಪರಾರಿಯಾಗಿರುವ ಘಟನೆ ಮಂಡ್ಯದ ಗ್ರಾಮಾಂತರ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ. ಇಷ್ಟೇ ಅಲ್ಲದೆ ತಾನು ಹೋಗುವಾಗ ಗಂಡನ ಕಷ್ಟದ ಸಂಪಾದನೆಯ ಹಣ ಹಾಗೂ ಒಡವೆಯನ್ನೂ ದೋಚಿಕೊಂಡ ಹೋಗಿರುವ ಆರೋಪ ಓಡಿ ಹೋದವಳ ಇತಿಹಾಸ ದಲ್ಲಿದೆ.
ಇದಕ್ಕೂ ವಿಚಿತ್ರವೇನೆಂದರೆ ಸ್ನೇಹಿತನೊಂದಿಗೆ ಮದುವೆಯಾಗಿರುವ ಫೋಟೋವನ್ನು ಸ್ಟೇಟಸ್‌ಗೆ ಹಾಕಿದ್ದಲ್ಲದೆ ಗಂಡನ ವಾಟ್ಸ್‌ಆಪ್‌ಗೂ ಕಳುಹಿಸಿ ಮಜಾ ತಗೊಂಡಿದಾಳೆ. ಮಂಡ್ಯ ಜಿಲ್ಲೆಯ ಬನ್ನಂಗಾಡಿ ಗ್ರಾಮದ ನಿವಾಸಿ ಆಟೋ ಚಾಲಕರಾಗಿರುವ ಸಾಗರ್ ಎಂಬುವರೇ ಪತ್ನಿಯಿಂದ ಮೋಸ ಹೋದವರು. ಸಾಗರ್‌ನ ಸ್ನೇಹಿತನಾದ ಇಂದ್ರ ಎಂಬಾತ ಆಗಾಗ ಮನೆ ಬರುತ್ತಿದ್ದ. ಈಕೆಯನ್ನು ತಂಗಿತಂಗಿ ಎಂದು ಕರೆಯುತ್ತದ್ದ, ಈ ಅಣ್ಣ ತಂಗಿ, ಭಾವ ನಾದಿನಿ ಸಂಬಂಧದ ಹಿಂದೆ ಕಳ್ಳಾಟ ನಡೆದಿದ್ದು, ಸಾಗರ್ ಈಗ ಪೊಲೀಸ್ ಠಾಣೆ ಮೆಟ್ಟಿಳೇರಿದ್ದಾರೆ.
ಪ್ರೇಮ ನಿವೇದನೆ ಹೆಸರಿನಲ್ಲಿಪೆಟ್ರೋಲ್ ಸುರಿದು ಕೊಲೆ!
ಬೆಂಗಳೂರಲ್ಲಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮಾಜಿ ಪ್ರೇಯಸಿ ಜೊತೆ ಸಂಪರ್ಕ ದಲ್ಲಿದ್ದು ಅಂತರ ಕಾಯ್ದುಕೊಂಡಿದ್ದರಿಂದ ಕೊಲೆಗೆ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ತಾಯಿ ಮತ್ತು ಅಣ್ಣ ಇಲ್ಲದಾಗ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಮೊದಲೇ ಯೋಜಿಸಿದ್ದಂತೆ ಕಿರಣ್‌ನ ಕೈಕಾಲು ಕಟ್ಟಿ ಹಾಕಿ ನಂತರ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾಳೆ. ಇದಕ್ಕಿಂತಲೂ ಮೊದಲು ಆತನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಇವೆಲ್ಲವನ್ನೂ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ.
ಕುಸಿದ ಮೌಲ್ಯಗಳು
ಮನಸ್ತಾಪ ಪ್ರಕರಣಗಳು ಹೆಚ್ಚಲು ಕಾರಣವಾಗಿರುವುದು ಸಾಮಾಜಿಕ ಜಾಲತಾಣಗಳು ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವುತ್ತಿರುವ ಇಂಟರ್‌ನೆಟ್‌ನಿಂದ ಎನ್ನುವ ವಾದವಿದೆ. ಈ ಹಿಂದೆ ಏನೇ ಕೌಟುಂಬಿಕ ಸಮಸ್ಯೆಗಳಾದರೂ ಕುಟುಂಬದೊಳಗೆ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ವಾಗುವಂತಹ ಪರಿಸ್ಥಿತಿ ಇತ್ತು. ಕಳೆದ ಒಂದು ದಶಕದಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲು ಏರುತ್ತಿರುವುದು ಕೂಡ ಶೇ.75ರಷ್ಟು ಹೆಚ್ಚಾಗಿರುವುದು ಕೂಡ ಭಾರತೀಯ ಮೌಲ್ಯ, ಕೌಟುಂಬಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಕಾಳಜಿ ವ್ಯಕ್ತವಾಗಿದೆ.