Advocate K N Bhat Interview: ಮಂದಿರದ ಪೂರ್ಣಾಧಿಕಾರ ಚಂಪತ್‌ಗೆ ನೀಡಿದ್ದೇ ತಪ್ಪು
ರಾಮಮಂದಿರ ಹುಂಡಿಹಣ ಕಳವು ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಮಮಂದಿರ ಟ್ರಸ್ಟ್‌ನ ವಿಶ್ವಾಸಾರ್ಹತೆಗೇ ಭಾರೀ ಹಾನಿಯಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ, ಹಲವರ ಬಂಧನವೂ ಆಗಿದೆ. ದೀರ್ಘಕಾಲ ರಾಮಮಂದಿರ ನಿರ್ಮಾಣಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಾದ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲ ಕೆ.ಎನ್.ಭಟ್, ವಿಶ್ವವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ
-
ಸಂದರ್ಶನ: ರಾಘವ ಶರ್ಮ ನಿಡ್ಲೆ
ರಾಮ ಮಂದಿರ ಹುಂಡಿ ಕಳವಲ್ಲಿ ಯೋಗಿಯೇ ಪ್ರಧಾನ ಗುರಿ
ಮಂದಿರಕ್ಕಾಗಿ ಹೋರಾಟ ನಡೆಸಿದ ಕೆ.ಎನ್.ಭಟ್ ಸಂದರ್ಶನ
ರಾಮಮಂದಿರ ಹುಂಡಿಹಣ ಕಳವು ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಕಾರಣ ವಾಗಿದೆ. ರಾಮಮಂದಿರ ಟ್ರಸ್ಟ್‌ನ ವಿಶ್ವಾಸಾರ್ಹತೆಗೇ ಭಾರೀ ಹಾನಿಯಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ, ಹಲವರ ಬಂಧನವೂ ಆಗಿದೆ. ದೀರ್ಘಕಾಲ ರಾಮಮಂದಿರ ನಿರ್ಮಾಣ ಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಾದ ನಡೆಸಿದ್ದ ಸರ್ವೋಚ್ಚ ನ್ಯಾಯಾಲ ಯದ ಹಿರಿಯ ವಕೀಲ ಕೆ.ಎನ್.ಭಟ್, ವಿಶ್ವವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಸಂದರ್ಶನದ ಆಯ್ದಭಾಗ ಇಲ್ಲಿದೆ.
ಪ್ರಶ್ನೆ: ಅಯೋಧ್ಯೆ ಜಮೀನು ಕೇಸ್ ಅಲಹಾಬಾದ್ ಹೈಕೋರ್ಟ್‌ನಲ್ಲಿದ್ದಾಗ ನೀವು ಭಗವಾನ್ ಶ್ರೀರಾಮನ ಪ್ರತಿನಿಧಿಯ (ತ್ರಿಲೋಕಿನಾಥ್ ಪಾಂಡೆ) ವಕೀಲರಾಗಿದ್ದವರು. ರಾಮಮಂದಿರ ಚಳುವಳಿ, ಕಾನೂನು ಹೋರಾಟ ಎಲ್ಲವನ್ನು ಹತ್ತಿರದಿಂದ ನೋಡಿದ್ದೀರಿ. ಈಗಿನ ರಾಮಮಂದಿರ ಹುಂಡಿ ಕಳವು ಪ್ರಕರಣವನ್ನು ಹೇಗೆ ನೋಡ್ತೀರಿ?
ಕೆ.ಎನ್.ಭಟ್: ತುಂಬಾ ತುಂಬಾ ಬೇಸರ ಆಗುತ್ತಿದೆ. ಮನಸ್ಸಿಗೆ ನೋವಾಗುತ್ತಿದೆ. ಸೂತಕದ ಛಾಯೆ ಬಂದ ಹಾಗನಿಸುತ್ತಿದೆ. ನಾನು 2003ನೇ ಇಸವಿಯಿಂದ 2011ರ ತನಕ ಅಯೋಧ್ಯೆ ಜಮೀನು ವಿವಾದ ಪ್ರಕರಣದಲ್ಲಿ ವಕೀಲಿಕೆ ಮಾಡಿದ್ದೆ. ಕಾನೂನು ಹೋರಾಟದ ವೇಳೆ ನಾನು ಚಂಪತ್ ರಾಯ್ 7 ವರ್ಷ ಒಟ್ಟಿಗೆ ಕೆಲಸ ಮಾಡಿದ್ದೆವು. ಆಗ ಚಂಪತ್ ರಾಯ ನನ್ನಲ್ಲಿಗೆ ಸಲಹೆ ಕೇಳಲು ಬರುತ್ತಿ ದ್ದರು. ಹಾಗಾಗಿ ನನಗೆ ಚಂಪತ್ ರಾಯ್ ಅವರ ನಿಕಟ ಪರಿಚಯವಿದೆ.
ಪ್ರಶ್ನೆ: ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ್ ರಾಯ, ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಅವರ ಮೇಲೂ ಆರೋಪಗಳಿವೆ. ದೊಡ್ಡ ತಿಮಿಂಗಿಲಗಳ ಕಣ್ಗಾವಲು ಇಲ್ಲದೆ ಈ ರೀತಿಯ ಕೃತ್ಯ ನಡೆಯಲಿಕ್ಕೆ ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ...
ಕೆ.ಎನ್.ಭಟ್: ಟ್ರಸ್ಟಿನಲ್ಲಿ ಸಾಧು-ಸಂತರು, ನಮ್ಮ ಪೇಜಾವರ ಸ್ವಾಮಿಯವರು ಸೇರಿ ಹಲ ವರಿzರೆ. ಆದರೆ ಆಡಳಿತದ ವಿಚಾರದಲ್ಲಿ ತಿಳಿದವರು ಯಾರಾದರೂ ಇರಬೇಕಿತ್ತು. ಮಾಜಿ ಐಎಎಸ್ ಆಫೀಸರ್ ಅಥವಾ ತಜ್ಞರು, ಆಡಳಿತದ ಅನುಭವಿಗಳನ್ನು ನೇಮಿಸದೆ ಚಂಪತ್ ರಾಯ್‌ಗೆ ಸಂಪೂರ್ಣ ಅಧಿಕಾರ ಕೊಟ್ಟರು. ಪ್ರಧಾನ ಕಾರ್ಯದರ್ಶಿಗೆ ಪೂರ್ಣ ಅಧಿಕಾರ ನೀಡಿ, ಎಲ್ಲವನ್ನೂ ಮಾಡಲು ಅವಕಾಶ ಕೊಟ್ಟಿದ್ದೇ ತಪ್ಪು. ಇಂಥದ್ದೊಂದು ಸಂಸ್ಥೆಯಲ್ಲಿ ಆಡಳಿತ, ತಾಂತ್ರಿಕ ತಿಳಿವಳಿಕೆ ಇರುವ ವ್ಯಕ್ತಿಗಳು ಅವಕಾಶ ಕೊಡಬೇಕಿತ್ತು. ತಿರುಪತಿ ಮಾದರಿಯಲ್ಲಿ ವ್ಯವಸ್ಥೆ ನಡೆಯ ಬೇಕು. ವ್ಯವಸ್ಥೆಯನ್ನು ನೀವು ಯಾವ ರೀತಿಯಲ್ಲಿ ರೂಪಿಸುತ್ತಿರೋ ಅದರ ಪ್ರಕಾರ ಕೆಲಸ ನಡೆಯುತ್ತದೆ. ಚಂಪತ್ ರಾಯ್ ಒಬ್ಬರನ್ನು ಮುಂದಿಟ್ಟು ಎಲ್ಲಾ ಅಧಿಕಾರ ಕೊಡಬಾರದಿತ್ತು.
ಇದನ್ನೂ ಓದಿ: Raghav Sharma Nidle Column: ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು
ಪ್ರಶ್ನೆ: ಅಯೋಧ್ಯೆ ಜಮೀನು ಕೇಸ್ ಅಲಹಾಬಾದ್ ಹೈಕೋರ್ಟ್‌ನಲ್ಲಿದ್ದಾಗ ನೀವು ಭಗವಾನ್ ಶ್ರೀರಾಮನ ಪ್ರತಿನಿಯ (ತ್ರಿಲೋಕಿನಾಥ್ ಪಾಂಡೆ) ವಕೀಲರಾಗಿದ್ದವರು. ರಾಮ ಮಂದಿರ ಚಳವಳಿ, ಕಾನೂನು ಹೋರಾಟ ಎಲ್ಲವನ್ನು ಹತ್ತಿರದಿಂದ ನೋಡಿದ್ದೀರಿ. ಈಗಿನ ರಾಮಮಂದಿರ ಹುಂಡಿ ಕಳವು ಪ್ರಕರಣವನ್ನು ಹೇಗೆ ನೋಡ್ತೀರಿ?
ಕೆ.ಎನ್.ಭಟ್: ತುಂಬಾ ತುಂಬಾ ಬೇಸರ ಆಗುತ್ತಿದೆ. ಮನಸ್ಸಿಗೆ ನೋವಾಗುತ್ತಿದೆ. ಸೂತಕದ ಛಾಯೆ ಬಂದ ಹಾಗನಿಸುತ್ತಿದೆ. ನಾನು 2003ನೇ ಇಸವಿಯಿಂದ 2011ರ ತನಕ ಅಯೋಧ್ಯೆ ಜಮೀನು ವಿವಾದ ಕೇಸ್ ನಲ್ಲಿ ವಕೀಲಿಕೆ ಮಾಡಿದ್ದೆ. ಕಾನೂನು ಹೋರಾಟದ ವೇಳೆ ನಾನು ಚಂಪತ್ ರಾಯ್ 7 ವರ್ಷ ಒಟ್ಟಿಗೆ ಕೆಲಸ ಮಾಡಿದ್ದೆವು. ಆಗ ಚಂಪತ್ ರಾಯ್, ಫೈಜಾಬಾದ್‌ನ ವಕೀಲ ಮದನ್ ಮೋಹನ್ ಪಾಂಡೆ, ಭಗವಾನ್ ಶ್ರೀರಾಮನ ಪ್ರತಿನಿಧಿಯಾಗಿದ್ದ ತ್ರಿಲೋಕಿನಾಥ್ ಪಾಂಡೆ (ಈಗ ಅವರಿಲ್ಲ) ವಿಶ್ವ ಹಿಂದೂ ಪರಿಷತ್ತಿನ ಪರವಾಗಿ ನನ್ನಲ್ಲಿಗೆ ಸಲಹೆ ಕೇಳಲು, ಕೊಡಲು ಬರುತ್ತಿದ್ದರು. ಮೂರು ಜನವೂ ತಿಂಗಳಿಗೆ ಕಡಿಮೆ ಯೆಂದರೆ 3 ಸಲ ನನ್ನ ಬಳಿ ಬರುತ್ತಿದ್ದರು. ಹಾಗಾಗಿ ನನಗೆ ಚಂಪತ್ ರಾಯ್ ಅವರ ನಿಕಟ ಪರಿಚಯವಿದೆ. ನಾನು ಅಯೋಧ್ಯೆಗೆ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಹೋಗಿದ್ದೆ ಕೂಡ.
ಪ್ರಶ್ನೆ: ಟ್ರಸ್ಟ್‌ನ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಅವರ ಮೇಲೂ ಆರೋಪಗಳಿವೆ. ದೊಡ್ಡ ತಿಮಿಂಗಿಲಗಳ ಕಣ್ಗಾವಲು ಇಲ್ಲದೆ ಈ ರೀತಿಯ ಕೃತ್ಯ ನಡೆಯಲಿಕ್ಕೆ ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ...
ಕೆ.ಎನ್.ಭಟ್: ಟ್ರಸ್ಟ್‌ನಲ್ಲಿ ಸಾಧು-ಸಂತರು, ನಮ್ಮ ಪೇಜಾವರ ಸ್ವಾಮಿಯವರು ಸೇರಿ ಹಲವ ರಿದ್ದಾರೆ. ಆದರೆ ಆಡಳಿತದ ವಿಚಾರದಲ್ಲಿ ತಿಳಿದ ವರು ಯಾರಾದರೂ ಇರಬೇಕಿತ್ತು. ಮಾಜಿ ಐಎಎಸ್ ಆಫೀಸರ್ ಅಥವಾ ತಜ್ಞರು, ಆಡಳಿತದ ಅನುಭವಿಗಳನ್ನು ನೇಮಿಸದೆ ಚಂಪತ್ ರಾಯ್ ಗೆ ಸಂಪೂರ್ಣ ಅಧಿಕಾರ ಕೊಟ್ಟರು. ಸೆಕ್ರೆಟರಿ ಜನರಲ್‌ಗೆ ಅಧಿಕಾರ ನೀಡಿ ಯಾರನ್ನು ಬೇಕಾದರೂ ತೆಗೆದುಕೊಳ್ಳಬಹುದು, ಯಾರನ್ನು ಬೇಕಾದರೂ ಬಿಡಬಹುದು, ಏನು ಬೇಕಾದರೂ ಮಾಡಬಹುದು ಎಂದೆಲ್ಲಾ ಅಷ್ಟು ಅಧಿಕಾರ ಕೊಟ್ಟದ್ದೇ ತಪ್ಪು. ಏಕೆಂದರೆ ಇಂಥದ್ದೊಂದು ಸಂಸ್ಥೆ ವ್ಯಕ್ತಿಯ ಮೇಲೆ ಹೊಂದಿ ಕೊಂಡಿರುವಂಥದ್ದಲ್ಲ. ಇಲ್ಲಿ ದೊಡ್ಡ ಧಾರ್ಮಿಕ ವ್ಯವಸ್ಥೆ ಇದೆ. ತಿರುಪತಿ ಮಾದರಿಯಲ್ಲಿ ಸಿಸ್ಟಮ್ ನಡೆ ಯಬೇಕು. ವ್ಯವಸ್ಥೆಯನ್ನು ನೀವು ಯಾವ ರೀತಿಯಲ್ಲಿ ರೂಪಿಸುತ್ತಿರೋ ಅದರ ಪ್ರಕಾರ ಕೆಲಸ ನಡೆಯುತ್ತದೆ.. ಚಂಪತ್ ರಾಯ್ ಒಬ್ಬರನ್ನು ಮುಂದಿಟ್ಟು ಎಲ್ಲಾ ಅಧಿಕಾರ ಕೊಡಬಾರದಿತ್ತು.
ಪ್ರಶ್ನೆ: ಬಹುಶಃ ಈ ನಾಚಿಕೆಗೇಡಿನ ಘಟನೆ ಯಿಂದ ಮಂದಿರ ನಡೆಸುವವರು ಪಾಠ ಕಲಿಯಬಹು ದೇನೋ..?
ಕೆ.ಎನ್.ಭಟ್: ನಾನು ಕೇಳಿದ ಮಟ್ಟಿಗೆ ತಿರುಪತಿಯಲ್ಲಿ ನಿತ್ಯ ಸಿಗುವ ಕಾಣಿಕೆ ರಾಮ ಮಂದಿರಕ್ಕಿಂತ ಎಷ್ಟೋ ಜಾಸ್ತಿ. ಅಲ್ಲಿ ನಗದು ಲೆಕ್ಕ ಹಾಕುವುದಕ್ಕೆ ಸರಿಯಾದ ವ್ಯವಸ್ಥೆ ಮಾಡಿದ್ದಾರೆ. ರಾಮ ಜನ್ಮಭೂಮಿ ಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಣಿಕೆ ಹರಿದು ಬಂದು, ವ್ಯತ್ಯಾಸಗಳು ಆಗಬಹುದು ಎಂಬ ಕಲ್ಪನೆ ಇರಲಿಲ್ಲವೇನೋ ಅಂತ ಅನಿಸುತ್ತದೆ. ಈಗ ದಿನಕ್ಕೆ ಏನಾದರೂ 1 ಲಕ್ಷದಷ್ಟು ಸರಾಸರಿ ಜನ ಅಲ್ಲಿಗೆ ಬರುತ್ತಿದ್ದಾರೆ. ಒಬ್ಬ ಸರಾಸರಿ ಎಂದರೆ 50 ರಿಂದ 100 ರು.ಹಾಕಿದ್ರೂ ಎಷ್ಟು ಹಣವಾಯ್ತು ನೋಡಿ. ಅಷ್ಟು ಕೋಟಿ ಹಣ ಪ್ರತಿದಿನ ದೇವರಿಗೆ ಕಾಣಿಕೆ ಬರುತ್ತದೆ ಎಂದಾಗ ಟ್ರಸ್ಟ್‌ನವರು ಯೋಚಿಸಬೇಕಿತ್ತು. ಹಣದ ವ್ಯವಸ್ಥೆಗೆ ಒಂದು ಚೌಕಟ್ಟನ್ನು ನಿರ್ಮಿಸಬೇಕಿತ್ತು. ಅದು ಬಿಟ್ಟು ಆ ಸಾಧು ಈ ಸಾಧು, ಅಲ್ಲಿಯ ಸ್ವಾಮೀಜಿ ಇಲ್ಲಿಯ ಸ್ವಾಮೀಜಿ ಗಳಿಗೆ ಪೂರ್ಣ ಜವಾಬ್ದಾರಿ ನೀಡಿದರೆ ಹೇಗೆ? ಸ್ವಾಮೀಜಿಗಳು ಹಿಂದೆ ಹೋರಾಟ ಮಾಡಿರಬಹುದು. ಆದರೆ ಆಡಳಿತದ ವಿಷಯ ಬಂದಾಗ ಅನುಭವ ಇರುವವರು, ತಾಂತ್ರಿಕ ತಜ್ಞರು ಇರಬೇಕಿತ್ತು. ಈಗ ನೃಪೇಂದ್ರ ಮಿಶ್ರಾ ಅವರು ಟ್ರಸ್ಟ್ ಅಧ್ಯಕ್ಷರು. ಅವರು ನು ಬರೀ ಪ್ರೆಸಿಡೆಂಟ್, ನಾನು ಡೇ-ಟು-ಡೇ ವ್ಯವಹಾರದಲ್ಲಿ ತಲೆಹಾಕುವುದಿಲ್ಲ ಎನ್ನಬಹುದು. ಆದರೂ ಅಂಥವರು ಸೇರಿ ಇಲ್ಲೊಂದು ಚೌಕಟ್ಟು ಹಾಕಬೇಕು. ತಿರುಪತಿ ಅಥವಾ ಬೇರೆ ದೊಡ್ಡ ದೇವಸ್ಥಾನಗಳ ಉದಾಹರಣೆ ತೆಗೆದು ಕೊಂಡು ಹೊಸ ಮಾಡೆಲ್ ಮಾಡಬಹುದಿತ್ತು. ಬಹುಶಃ ಈಗ ನಡೆದ ಘಟನೆಯಿಂದ ಅವರು ಒಂದು ಪಾಠ ಕಲಿತುಕೊಳ್ಳಬಹುದು ಅಂತ ಅನಿಸುತ್ತದೆ.
ಪ್ರಶ್ನೆ: ನೀವು ಚಂಪತ್ ರಾಯ್ ಜತೆ ಬಹಳ ವರ್ಷಗಳ ಒಡನಾಟ ಹೊಂದಿದ್ದವರು. ಚಂಪತ್ ರಾಯ್ ಮತ್ತೆ ಅನಿಲ್ ಮಿಶ್ರಾ ಅವರ ಮೇಲೆ ಆಪಾದನೆಗಳು ಬರ್ತಾ ಇವೆ. ಅವರು ಇಂತಹಾ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ನಿಮಗನಿಸುತ್ತದಾ?
ಕೆ.ಎನ್.ಭಟ್: ಅನಿಲ್ ಮಿಶ್ರಾ ನನಗೆ ಹೆಚ್ಚಿನ ಪರಿಚಯವಿಲ್ಲ. ಚಂಪತ್ ರಾಯ್ ತುಂಬಾ ಹತ್ತಿರ ದಿಂದ ಗೊತ್ತಿತ್ತು. ಅಶೋಕ್ ಸಿಂಘಾಲ್‌ರಿಗೆ ಚಂಪತ್ ರಾಯ್ ಬಹಳ ಆಪ್ತರಾಗಿದ್ದರು. ತುಂಬಾ ಸರಳ ವ್ಯಕ್ತಿ, ಸಂಸಾರ ಇಲ್ಲ, ಏಕಾಂಗಿಯಾಗಿದ್ದಾರೆ ಮತ್ತು ಇಡೀ ರಾಮಮಂದಿರ ಆಂದೋಲನಕ್ಕೆ ಬದ್ಧತೆಯಿಂದ ಕೆಲಸ ಮಾಡಿದ್ದರು. ಗೋಪಾಲ್ ರಾವ್ ಮೇಲೂ ಆರೋಪ ಕೇಳಿಬರುತ್ತಿವೆ. ಇದೆಲ್ಲಾ ಆಲೋಚನೆ ಮಾಡಬೇಕಾದ ವಿಚಾರಗಳು. ಯಾರೋ ಅವರ ನಂಟರನ್ನೆಲ್ಲ ನೇಮಿಸಿ, ಕ್ಯಾಶ್ ಸೇರಿಸಿದ್ರಂತೆಲ್ಲಾ ಚರ್ಚೆ ನಡೆಯುತ್ತಿವೆ. ವಿಷಯಗಳು ಈಗ ತನಿಖೆ ಹಂತದಲ್ಲಿದೆ. ಏನೆಲ್ಲಾ ವಿಷಯ ಹೊರಬರುತ್ತದೆ ನೋಡೋಣ.
ಪ್ರಶ್ನೆ: ಭಕ್ತರ ದೇಣಿಗೆ, ದಾನ, ನೀಡಿದ ರಾಮನ ಮೂರ್ತಿಗಳಿಗೆಲ್ಲಾ ರಿಸಿಪ್ಟ್ ನೀಡಲಿಲ್ಲ ಎಂದೂ ಕೆಲವರು ಆರೋಪಿಸುತ್ತಿದ್ದಾರೆ..?
ಕೆ.ಎನ್.ಭಟ್: ಅಲ್ಲಿ ಮೊದಲು ಏನು ನಡೀತಾ ಇತ್ತು ಎಂದು ನನಗೆ ಗೊತ್ತಿಲ್ಲ. ನಾನು ಅಕ್ಟೋಬರ್ ನಲ್ಲಿ ಹೋಗಿದ್ದಾಗ ಚಂಪತ್ ರಾಯ್ ಅವರೇ ಸ್ವತಃ ನಮ್ಮನ್ನು ದೇವಸ್ಥಾನದಲ್ಲೆಲ್ಲ ಕರೆದುಕೊಂಡು ಹೋಗಿ ಉಪಚಾರ ಮಾಡಿ ಕಳಿಸಿದ್ದರು. ಅಲ್ಲಿ ಈ ಕ್ಯಾಶ್ ವ್ಯವಸ್ಥೆ ಬಗ್ಗೆ ಎಲ್ಲಾ ನಾನು ಕೇಳಿದ್ದೆ. ಅಕೌಂಟಿಂಗ್ ಎಲ್ಲ ಸರಿಯಾಗಿ ನಡೆಯುತ್ತದೆ ಎಂದಿದ್ದರು. ಅವರು ಹೇಳುವಾಗ ಎಲ್ಲಾ ಸಿಸಿಟಿವಿ ಕ್ಯಾಮೆರಾ ಇಟ್ಟಿರುವ ಬಗ್ಗೆ ಇಳಿಸಿದ್ದರು. ನೆಲಮಾಳಿಗೆಯಲ್ಲಿ ಹಣ ಕೌಂಟ್ ಮಾಡುವ ಜಾಗಕ್ಕೆಲ್ಲ ಕರ್ಕೊಂಡು ಹೋಗಿದ್ರು. ಸಿಸಿಟಿವಿ ಕ್ಯಾಮೆರಾಗಳೆಲ್ಲ ಹಾಕಿದ್ದಾರೆ ಎಂದು ಹೇಳಿದ್ದರು. ಈಗ ರಿಸಿಪ್ಟ್ ಕೊಟ್ಟಿಲ್ಲ ಎಂದೆಲ್ಲಾ ಜನ ಕಂಪ್ಲೇಂಟ್ ಮಾಡುತ್ತಾ ಇದ್ದಾರೆ. ಒಟ್ಟಿನಲ್ಲಿ ತುಂಬಾ ಬೇಸರ ಆಗ್ತಾ ಇದೆ. ಇದನ್ನೆಲ್ಲಾ ನಾವು ನೋಡಬೇಕಾಗಿ ಬಂತಲ್ಲಾ ಎಂದು.
ಪ್ರಶ್ನೆ: ನೀವು ಶ್ರೀರಾಮನ ಪ್ರತಿನಿಽಯ ವಕೀಲರಾಗಿ ಕೆಲಸ ಮಾಡಿದ್ದರಿಂದ ಸಹಜವಾಗಿ ಬೇಸರ ಆಗುತ್ತದೆ. ನಿಮ್ಮಂತೆ ಅನೇಕ ಹಿಂದೂ ಶ್ರದ್ಧಾಳುಗಳ ಭಾವನೆಗಳಿಗೆ ಹರ್ಟ್ ಆಗಿದೆ...
ಕೆ.ಎನ್.ಭಟ್: ನಾನು ಅಲ್ಲಿ ಹೋಗಿದ್ದಾಗ ಅಯೋಧ್ಯೆ ನಗರ ಭಾಗದಲ್ಲಿ ಸುತ್ತು ಹಾಕುತ್ತಿದ್ದೆವು. ಹೋಟೆಲ್ ಮಾಲೀಕರೊಬ್ಬರು ಬಂದು ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿ, ನಿಮ್ಮಿಂದಾಗಿ ನಮಗೆಲ್ಲ ಇಲ್ಲಿ ಅಯೋಧ್ಯೆಯಲ್ಲಿ ಜೀವ ಬಂತು, ಇಂದು ಅಯೋಧ್ಯೆ ಹೀಗಾಗಿರುವುದಕ್ಕೆ ನೀವೇ ಕಾರಣ ಎಂದು ಹೇಳಿದ್ದರು. ನಾವು ಜ್ಯುವೆಲ್ಲರಿ ಶಾಪ್‌ಗೆ ಹೋದಾಗ ಅವರು ನಿಮ್ಮ ಕಾರಣದಿಂದಾಗಿ ಇಲ್ಲಿ ವ್ಯಾಪಾರ ಆಗ್ತಾ ಇದೆ ಎಂದು ಲಾಕೆಟ್ ಒಂದನ್ನು ಬಹಳ ಕಡಿಮೆ ಬೆಲೆಗೆ ನೀಡಿದರು. ರಾಮ ಮಂದಿರ ನಿರ್ಮಾಣದಿಂದ ಅನೇಕರಿಗೆ ಪ್ರತ್ಯಕ್ಷವಾಗಿ ಮತ್ತೆ ಪರೋಕ್ಷವಾಗಿ ಅಲ್ಲಿ ಉದ್ಯೋಗ ನಿರ್ಮಾಣ ಆಗಿದೆ. ಇಡೀ ನಗರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಅದೊಂದು ಮಾಡರ್ನ್ ಸಿಟಿಯಾಗಿ ಬದಲಾಗಿದೆ. ದೊಡ್ಡ ದೊಡ್ಡ ಹೋಟೆಲ್‌ಗಳು, ಇಂಡಸ್ಟ್ರಿಗಳು ಬರ್ತಾ ಇವೆ.
ಪ್ರಶ್ನೆ: ಅಂಟಿಕೊಂಡಿರುವ ಕಳಂಕ ನಿವಾರಣೆ ಹೇಗೆ?
ಕೆ ಎನ್.ಭಟ್: 6ನೇ ತಾರೀಕಿಗೆ ಟ್ರಸ್ಟ್‌ನ ಮೀಟಿಂಗ್ ಇದೆ. ಅಲ್ಲಿ ಖಂಡಿತವಾಗಿಯೂ ಚಂಪತ್ ರಾಯ್ ಮತ್ತು ಮಿಶ್ರಾ ಅವರ ರಾಜೀನಾಮೆ ಅಂಗೀಕರಿಸುತ್ತಾರೆ. ಹೊಸ ಟ್ರಸ್ಟಿಗಳಾಗಿ ಹಾಲಿ ಐಎಎಸ್ ಆಫೀಸರ್‌ಗಳನ್ನು ಆಡಳಿತ ಮಂಡಳಿಗೆ ಸೇರಿಸಬೇಕು. ಟ್ರಸ್ಟನ್ನು ಸರಿಯಾಗಿ ಪುನರ್ ರೂಪಿಸಬೇಕು. ಪ್ರಧಾನಮಂತ್ರಿ ಯವರೇ ಇದರ ವಿಷಯದಲ್ಲಿ ಆಸಕ್ತಿ ತೆಗೊಂಡಿದ್ದಾರೆ. ಆದ್ದರಿಂದ ವ್ಯವಸ್ಥೆ ಸರಿಪಡಿಸುತ್ತಾರೆ. ಇಲ್ಲಿ ವಾಸ್ತವದಲ್ಲಿ ಟಾರ್ಗೆಟ್ ಚಂಪತ್ ರಾಯ್ ಅಲ್ಲ, ಟಾರ್ಗೆಟ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್. ಯೋಗಿ ಆಡಳಿತದಲ್ಲಿ ಹೀಗಾಯ್ತು ಎಂದು ಹೇಳುತ್ತಾ ಚುನಾವಣೆ ಬರುವ ಮುನ್ನವೇ ಅವರ ಮೇಲೆ ಒಂದಿಷ್ಟು ಕಳಂಕ ತರಬೇಕು ಎಂಬ ಪ್ಲಾನ್ ಇದೆ. ಇದರಲ್ಲಿ ಪೊಲಿಟಿಕಲ್ ಲಾಭ ನೋಡು ವವರು ಖಂಡಿತ ಇದ್ದಾರೆ.
ಪ್ರಶ್ನೆ: ಹುಂಡಿ ಕಳವು ಪ್ರಕರಣದಿಂದ ಮಥುರಾ ಕೃಷ್ಣ ಜನ್ಮಸ್ಥಾನದ ಹೋರಾಟ, ಅಥವಾ ಕಾಶಿ ಹೋರಾಟದ ಮೇಲೆ ಏನಾದರೂ ಪರಿಣಾಮವಾಗುತ್ತದಾ?
ಕೆ.ಎನ್.ಭಟ್: ಮಥುರಾ ಮತ್ತೆ ಕಾಶಿ ಮೇಲೆ ಅಲ್ಲ, ಯಾವ ದೇವಸ್ಥಾನಕ್ಕೂ ಏನು ಪರಿಣಾಮ ಆಗು ವುದಿಲ್ಲ. ದೇವಸ್ಥಾನಗಳಲ್ಲಿ ಕಳ್ಳತನ ಮಾಮೂಲಿ. ಆದರೆ ಜನರ ಭಕ್ತಿ ಮುಂದುವರಿಯುತ್ತದೆ. ಕಾನೂನು ಹೋರಾಟ ಹಾಗೆಯೇ ಮುಂದುವರಿಯುತ್ತದೆ. ಯೋಗಿ ಆದಿತ್ಯನಾಥ್ ಇನ್ನೊಂದು ಅವಧಿಗೆ ಉತ್ತರ ಪ್ರದೇಶ ಸಿಎಂ ಆದರೆ ಮಥುರಾ, ಕಾಶಿಯನ್ನು ಎಲ್ಲಾ ಸಮಸ್ಯೆಗಳಿಂದ ಬಿಡಿಸಿ ಕೊಂಡು ಬರಲಿದ್ದಾರೆ.
ಟ್ರಸ್ಟ್‌ನವರು ಯೋಚಿಸಬೇಕಿತ್ತು ಅಷ್ಟು ಕೋಟಿ ಹಣ ಪ್ರತಿದಿನ ದೇವರಿಗೆ ಕಾಣಿಕೆ ಬರುತ್ತದೆ ಎಂದಾಗ ಟ್ರಸ್ಟ್‌ನವರು ಯೋಚಿಸಬೇಕಿತ್ತು. ಹಣದ ವ್ಯವಸ್ಥೆಗೆ ಒಂದು ಚೌಕಟ್ಟನ್ನು ನಿರ್ಮಿಸ ಬೇಕಿತ್ತು. ಅದು ಬಿಟ್ಟು ಆ ಸಾಧು ಈ ಸಾಧು, ಅಲ್ಲಿಯ ಸ್ವಾಮೀಜಿ ಇಲ್ಲಿಯ ಸ್ವಾಮೀಜಿಗಳಿಗೆ ಪೂರ್ಣ ಜವಾಬ್ದಾರಿ ನೀಡಿದರೆ ಹೇಗೆ? ಸ್ವಾಮೀಜಿಗಳು ಹಿಂದೆ ಹೋರಾಟ ಮಾಡಿರಬಹುದು. ಆದರೆ ಆಡಳಿತದ ವಿಷಯ ಬಂದಾಗ ಅನುಭವ ಇರುವವರು, ತಾಂತ್ರಿಕ ತಜ್ಞರು ಇರಬೇಕಿತ್ತು ಎಂದು ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್.ಭಟ್ ಹೇಳಿದರು.
![]()
ವಾಸ್ತವದಲ್ಲಿ ಟಾರ್ಗೆಟ್ ಚಂಪತ್ ರಾಯ್ ಅಲ್ಲ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್. ಯೋಗಿ ಆಡಳಿತದಲ್ಲಿ ಹೀಗಾಯ್ತು ಎಂದು ಹೇಳುತ್ತಾ ಚುನಾವಣೆ ಬರುವ ಮುನ್ನವೇ ಅವರ ಮೇಲೆ ಕಳಂಕ ಮೆತ್ತಬೇಕು ಎಂಬ ಹುನ್ನಾರ ಇದೆ.
-ಕೆ.ಎನ್.ಭಟ್ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ