ಐಪಿಎಲ್ ಟಿಕೆಟ್ ಕೇಳಿ ಮರ್ಯಾದೆ ಕಳೆದುಕೊಂಡ ಶಾಸಕರು
ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ಐಪಿಎಲ್ ನೋಡಲು ಐದು ಟಿಕೆಟ್ ಕೊಡಿಸಬೇಕು, ಶಾಸಕರಿಗಾಗಿ ವಿಐಪಿ ಜಾಗ ಮಾಡಬೇಕು ಎಂದು ಸ್ಪೀಕರ್‌ಗೆ ದುಂಬಾಲು ಬಿದ್ದ ಘಟನೆ ಹಾಗೂ ಐದು ಟಿಕೆಟ್ ಕೊಡಿಸುವಂತೆ ಸರಕಾರಕ್ಕೆ ಸೂಚನೆ ನೀಡಿರುವ ನಡೆ ತೀವ್ರ ಅಕ್ಷೇಪಕ್ಕೆ ಕಾರಣವಾಗಿದೆ.
-
ಹಲವರ ವಿರೋಧ, ಅಶೋಕ್ ಮನವಿಗೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅಸಮಾಧಾನ
ಐಪಿಎಲ್‌ಗೆ ನೋಡಲು ವಿಐಪಿ ಟ್ರೀಟ್‌ಮೆಂಟ್ ಕೇಳಿದ್ದ, ಮನೆಮಂದಿಗೆಲ್ಲ ನೋಡಲು ಅನುವಾಗುವಂತೆ ಐದು ಟಿಕೆಟ್‌ಗೆ ವಿಧಾನಸಭೆಯಲ್ಲಿ ಬೇಡಿಕೊಂಡಿದ್ದ ಶಾಸಕರ ಪರಿಗೆ ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ಐಪಿಎಲ್ ನೋಡಲು ಐದು ಟಿಕೆಟ್ ಕೊಡಿಸಬೇಕು, ಶಾಸಕರಿಗಾಗಿ ವಿಐಪಿ ಜಾಗ ಮಾಡಬೇಕು ಎಂದು ಸ್ಪೀಕರ್‌ಗೆ ದುಂಬಾಲು ಬಿದ್ದ ಘಟನೆ ಹಾಗೂ ಐದು ಟಿಕೆಟ್ ಕೊಡಿಸು ವಂತೆ ಸರಕಾರಕ್ಕೆ ಸೂಚನೆ ನೀಡಿರುವ ನಡೆ ತೀವ್ರ ಅಕ್ಷೇಪಕ್ಕೆ ಕಾರಣವಾಗಿದೆ.
ಶಾಸಕರಾಗಿದ್ದವರು, ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡುವುದು ಬಿಟ್ಟು, ಈ ರೀತಿ ಟಿಕೆಟ್ ಕೊಡಿಸುವಂತೆ ಒತ್ತಡ ಹೇರಲು ಸದನವನ್ನು ಬಳಸಿಕೊಂಡಿರುವುದು ಸರಿಯಲ್ಲ. ಅದರಲ್ಲಿಯೂ ಜನಪ್ರತಿನಿಧಿಗಳಾದವರು ಜನರೊಂದಿಗೆ ಕುಳಿತು ಕ್ರಿಕೆಟ್ ನೋಡುವುದರಲ್ಲಿ ತಪ್ಪೇನಿದೆ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ.
ಶಾಸಕರು ಇರುವುದು ಶಾಸನ ಮಾಡುವುದಕ್ಕೆ, ಸವಾರಿ ಮಾಡಲು ಅಲ್ಲ. ಬೆಟ್ಟಿಂಗ್ ದಂಧೆ ಮಾಡಿ ಶಾಸಕರಾದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಟಿಕೆಟ್‌ಗೆ ಹೀಗೆ ಅಂಗಲಾಚುವ ಶಾಸಕರಿಂದ ಕ್ಷೇತ್ರದ ಸಮಸ್ಯೆಗೆ ಪರಿಹಾರ ಸಾಧ್ಯವೇ? ಎನ್ನುವ ಆಕ್ರೋಶದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ.
ಇದನ್ನೂ ಓದಿ: IPL cricket match: ಇಂದಿನಿಂದ ಐಪಿಎಲ್ ಪಂದ್ಯ, ನಮ್ಮ ಮೆಟ್ರೋದಿಂದ ರಾತ್ರಿ 2 ಗಂಟೆಯವರೆಗೆ ರೈಲು
ಅಶೋಕ್ ನಡೆಗೆ ಕಿಡಿ: ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಕೆಲ ಶಾಸಕರು ಟಿಕೆಟ್ ಕೇಳಿದ್ದಕ್ಕಿಂತಲೂ, ಪ್ರತಿಪಕ್ಷ ನಾಯಕನಾಗಿರುವ, ಪರ‍್ಯಾಯ ಸಿಎಂ ಆಗಿ ಕಾರ್ಯನಿರ್ವಹಿಸ ಬೇಕಿರುವ ಆರ್.ಅಶೋಕ್ ಟಿಕೆಟ್‌ಗೆ ಅಂಗಲಾ ಚುವ ಸ್ಥಿತಿಯಿದೆ ಎಂದು ಹೇಳಿಕೆ ನೀಡಿರು ವುದು ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೂ ಟಿಕೆಟ್ ಕೊಡಿಸ ಬೇಕೆಂದು ಅಶೋಕ್ ಮಾಡಿರುವ ಮನವಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಇದರೊಂದಿಗೆ ಹಲವು ನಾಯಕರು, ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೂತವರಿಂದ ಈ ರೀತಿಯ ನಡೆಯ ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಶಾಸಕರ ಟಿಕೆಟ್ ವಿಷಯದಲ್ಲಿ ನೀಡಿರುವ ಹೇಳಿಕೆ ತಪ್ಪು. ಆದರೆ ಈ ರೀತಿಯ ಬೇಡಿಕೆ ಅಶ್ಚರ್ಯ ಅನ್ನಿಸುತ್ತಿಲ್ಲ. ಈ ರೀತಿ ಟಿಕೆಟ್ ಕೇಳುವ ಮೂಲಕ ಅವರ ಆದ್ಯತೆಗಳೇನು ಎನ್ನುವುದನ್ನು ಬಹಿರಂಗಪಡಿಸು ತ್ತಿದ್ದಾರೆ. ರಾಜ್ಯದ ನೈಜ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸುವ ಬದಲು ಈ ರೀತಿಯ ಬೇಡಿಕೆ ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಶಾಸಕರಾದ ಮಾತ್ರಕ್ಕೆ ಉಚಿತ ಟಿಕೆಟ್, ಪ್ರತ್ಯೇಕ ಗ್ಯಾಲರಿ ಏಕೆ? ಸಾರ್ವಜನಿಕರೊಂದಿಗೆ ಕುಳಿತುಕೊಳ್ಳಲು ನಿರಾಕ ರಿಸಿದ ಶಾಸಕರು ತಾವು ಪ್ರತಿನಿಧಿಸುವ ಜನರಿಗಿಂತ ಮೇಲಿದ್ದೇವೆ ಎಂಬುವುದನ್ನು ಬಹಿರಂಗಪಡಿಸಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಷತ್‌ನಲ್ಲಿ ಬೇಡಿಕೆ; ಹೊರಟ್ಟಿ ಗರಂ: ವಿಧಾನಸಭೆಯ ರೀತಿಯಲ್ಲಿಯೇ ವಿಧಾನಪ ರಿಷತ್ ನಲ್ಲಿಯೂ ಹೆಚ್ಚುವರಿ ಟಿಕೆಟ್‌ಗೆ ಕೆಲ ಪರಿಷತ್ ಸದಸ್ಯರು ಬೇಡಿಕೆ ಇಟ್ಟಿದ್ದರು. ಆದರೆ ಸಭಾಪತಿ ಬಸವರಾಜ ಹೊರಟ್ಟಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಐಪಿಎಲ್ ಟಿಕೆಟ್‌ಗಾಗಿ ಭಿಕ್ಷೆ ಬೇಡೋ ಪರಿಪಾಠ ನನಗೆ ಸರಿ ಕಾಣುವು ದಿಲ್ಲ. ಬೇಕಾದವರು ದುಡ್ಡು ಕೊಟ್ಟು ಕ್ರಿಕೆಟ್ ನೋಡಲಿ. ಬೇಡ ಅಂದವರು ಬಿಡಿ. ಆದರೆ ಕ್ರಿಕೆಟ್ ನೋಡಲು ಹೋಗುವ ಶಾಸಕರಿಗೆ ಗೌರವ ನೀಡಬೇಕು ಎಂದು ಸರಕಾರಕ್ಕೆ ಸೂಚಿಸಿದ್ದಾರೆ.
ಡಿಸಿಎಂ, ಸಿಎಂ ಜತೆ ವೆಂಕಿ ಭೇಟಿ
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿದಂತೆ ಕೆಎಸ್‌ಸಿಎ ಪದಾಧಿಕಾರಿಗಳು ಶುಕ್ರ ವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕು ಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆಗಿರುವ ಚರ್ಚೆ, ಹೆಚ್ಚುವರಿ ಟಿಕೆಟ್ ಕೊಡಿಸುವ ಸಂಬಂದ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಪರಿಶೀಲಿಸಿ ಪ್ರತಿಕ್ರಿಯಿಸುವ ಭರವಸೆಯನ್ನು ವೆಂಕಟೇಶ್ ಪ್ರಸಾದ್ ನೀಡಿದ್ದಾರೆ ಎನ್ನಲಾಗಿದೆ
ಐಪಿಎಲ್ ರಂಗಿಗೆ ಕ್ಷಣಗಣನೆ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿ ಯಾಗಲಿವೆ. ಕಾಲ್ತುಳಿತ ಘಟನೆಯ ಬಳಿಕ ಸುಮಾರು 9 ತಿಂಗಳು ಸೂತಕದ ವಾತಾವರಣ ವಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ಪಿಎಲ್ ರಂಗು ಕಾಣಿಸಿಕೊಂಡಿದೆ.
ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟವರ ಸ್ಮರಣಾರ್ಥ 11 ಸೀಟುಗಳನ್ನು ಶಾಶ್ವತವಾಗಿ ಖಾಲಿ ಬಿಡಲು ತೀರ್ಮಾನಿಸಿರುವ ಕೆಎಸ್‌ಸಿಎ ಮತ್ತು ಆರ್‌ಸಿಬಿ, ಉದ್ಘಾಟನಾ ಪಂದ್ಯದಲ್ಲಿ ಯಾವುದೇ ಮನರಂಜನಾ ಕಾರ‍್ಯಕ್ರಮಗಳಿಲ್ಲದೆ ಸರಳವಾಗಿ ಪಂದ್ಯವನ್ನು ಆರಂಭಿಸಲು ನಿರ್ಧರಿಸಿದೆ.
ಕಳೆದ ಜೂನ್ ತಿಂಗಳಲ್ಲಿ ನಡೆದ ದುರಂತದಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರು ನಗರ ಪೊಲೀಸರು ಶನಿವಾರದ ಪಂದ್ಯಾವಳಿಗೆ ಬರೋಬ್ಬರಿ 2 ಸಾವಿರ ಪೊಲೀಸರ ಸರ್ಪಗಾವಲು ಹಾಕಿದ್ದಾರೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು 4 ಗಂಟೆ ಮುಂಚಿತವಾಗಿ ಟಿಕೆಟ್ ಹೊಂದಿದವರು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸಿಎಸ್ ನೇತೃತ್ವದಲ್ಲಿ ಸಭೆ
ಈ ನಡುವೆ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಶುಕ್ರವಾರ ಕೆಎಸ್ʼಸಿಎ ಪದಾಧಿಕಾರಿಗಳು ಹಾಗೂ ಅಽಕಾರಿಗಳೊಂದಿಗೆ ಸುರಕ್ಷತೆ ಕುರಿತಾಗಿ ಸುದೀರ್ಘ ಸಭೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು. ಕ್ರಿಕೆಟ್ ಪ್ರೇಮಿಗಳ ಸುರಕ್ಷತೆಗೆ ಕ್ರೀಡಾಂಗಣದ ಒಳಗೆ ಮತ್ತು ಕ್ರೀಡಾಂಗಣದ ಸುತ್ತ ರೂಪಿಸಿರುವ ಭದ್ರತಾ ವ್ಯವಸ್ಥೆ, ನಗರದ ಸಂಚಾರ ವ್ಯವಸ್ಥೆ ಯಲ್ಲಿ ಮಾಡಿಕೊಳ್ಳಲಾಗಿರುವ ಬದಲಾವಣೆಗಳು, ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣದ ಒಳಗೆ ಕುಡಿಯುವ ನೀರು ಸೇರಿದಂತೆ ಇತರೆ ಅತ್ಯವಶ್ಯಕ ಸಂಗತಿಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು. ಮೆಟ್ರೋ ರೈಲಿನ ಮೇಲೆ ಬೀಳುವ ಪ್ರಯಾಣಿಕರ ಸಾಂದ್ರತೆ, ಮೆಟ್ರೋ ಸಂಚರಿಸುವ ವೇಳಾಪಟ್ಟಿ, ಮೆಟ್ರೋ ನಿಲ್ದಾಣಗಳಲ್ಲಿ ಮಾಡಿಕೊಳ್ಳಲಾಗಿರುವ ಹೆಚ್ಚುವರಿ ಭದ್ರತೆ, ಸುರಕ್ಷತೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಣ್ಣ ಅಹಿತಕರ ಘಟನೆಗೂ ಅವಕಾಶ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಕೆಎಸ್‌ಸಿಎ ಆಡಳಿತ ಮಂಡಳಿ, ಪದಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಪ್ರಮುಖರಿದ್ದರು.
![]()
ಎಸ್‌ಸಿಎ ಅಥವಾ ಯಾವುದೇ ಕ್ರೀಡಾ ಸಂಸ್ಥೆ ಶಾಸಕರಿಗೆ ಉಚಿತ ಟಿಕೆಟ್ ಏಕೆ ನೀಡಬೇಕು? ಇದು ಸರಿಯಲ್ಲ. ಜನಸಾಮಾನ್ಯರು ಟಿಕೆಟ್ ಖರೀದಿಸಬೇಕಾದರೆ, ಶಾಸಕರು ಕೂಡ ಟಿಕೆಟ್ ಖರೀದಿಸಬೇಕು. ಶಾಸಕರ ಬೇಡಿಕೆ ಹಾಗೂ ನಡೆ ತಪ್ಪು ಹಾಗೂ ಇದನ್ನು ನಾವು ವಿರೋಧಿಸ ಬೇಕು.
-ತೇಜಸ್ವಿ ಸೂರ್ಯ, ಸಂಸದ
![]()
ಒಬ್ಬ ಶಾಸಕ, ಜನಪ್ರತಿನಿಧಿ ಆಗಿರುವವರು ಜನಸಾಮಾನ್ಯರಿಗಿಂತ ವಿಭಿನ್ನ, ವಿಐಪಿ ಎಂಬುದು ಖಂಡಿತವಾಗಿ ಒಳ್ಳೆಯ ಬೆಳವಣಿಗೆ ಅಲ್ಲ. ವೈಯಕ್ತಿಕವಾಗಿ ಈ ಬೇಡಿಕೆಯನ್ನು ನಾನು ಒಪ್ಪುವುದಿಲ್ಲ. ಉಚಿತ ಕ್ರಿಕೆಟ್ ಟಿಕೆಟ್ ಪಡೆಯುವುದಕ್ಕೆ ನನ್ನ ಬೆಂಬಲವಿಲ್ಲ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ