3 ರೀತಿಯ ದುಃಖಗಳು ಮತ್ತು ಮುಕ್ತಿಯ ಮಾರ್ಗ
ಭೌತಿಕ ದುಃಖವು ಬಾಹ್ಯ ಪ್ರಪಂಚದಿಂದ, ಅಂದರೆ ಆಸ್ತಿಗಳು, ಆಸೆಗಳು, ಸಂಬಂಧಗಳು, ಮಹತ್ವಾಕಾಂಕ್ಷೆ ಗಳು, ವೈಫಲ್ಯಗಳು ಮತ್ತು ಬಾಂಧವ್ಯಗಳಿಂದ ಉದ್ಭವಿಸುತ್ತವೆ. ಮನುಷ್ಯರು ನಿರಂತರವಾಗಿ ಹೋಲಿಸಿ ಕೊಳ್ಳುವುದಲ್ಲದೆ ಸ್ಪರ್ಧಾತ್ಮಕವಾಗಿ ಬದುಕುತ್ತಾರೆ, ಹೆಚ್ಚಿನದನ್ನು ಬಯಸುತ್ತಾರೆ ಮತ್ತು ನಷ್ಟಕ್ಕೆ ಹೆದರುತ್ತಾರೆ. ಒಬ್ಬರ ನಿರೀಕ್ಷೆಗಳು ಈಡೇರದಿದ್ದಾಗ, ಮನಸ್ಸು ದುಃಖಿಸುತ್ತದೆ. ಅವುಗಳನ್ನು ಪೂರೈಸಿ ದಾಗಲೂ, ಅವುಗಳನ್ನು ಕಳೆದುಕೊಳ್ಳುವ ಭಯವು ಮತ್ತೆ ದುಃಖವನ್ನು ಸೃಷ್ಟಿಸುತ್ತದೆ.
-
ಸತ್ ಶ್ರೀ ಸುಬ್ರಹ್ಮಣ್ಯ ಶಿವಬಾಲನ್
ಈ ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯನೂ ಅನಿವಾರ್ಯವಾಗಿ ಭೌತಿಕ, ಶಾರೀರಿಕ ಮತ್ತು ಮಾನಸಿಕ ಎಂದು 3 ರೀತಿಯ ದುಃಖಗಳಿಗೆ ಒಳಗಾಗುತ್ತಾನೆ. ಈ ನೋವುಗಳು ವಿಭಿನ್ನ ಮೂಲ ಗಳಿಂದ ಉದ್ಭವಿಸುವಂತೆ ಕಂಡುಬಂದರೂ, ಇವೆಲ್ಲದರ ಹಿಂದೆ ನಿಜವಾಗಿ ನೋವಿನಿಂದ ಬಳಲು ವುದು ಮನಸ್ಸು.
ಯಾರೆಷ್ಟೇ ಶ್ರೀಮಂತರಾಗಿದ್ದರೂ, ಶಕ್ತಿಶಾಲಿಯಾಗಿದ್ದರೂ ಅಥವಾ ವಿದ್ಯಾವಂತರಾಗಿದ್ದರೂ ದುಃಖಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುಃಖಗಳು ಶಿಕ್ಷೆಗಳಲ್ಲ; ಅವು ಮನುಷ್ಯನ ಅಸ್ತಿತ್ವದ ವಾಸ್ತವತೆಗಳು ಮತ್ತು ಆಧ್ಯಾತ್ಮಿಕ ವಿಕಾಸದ ಅವಕಾಶಗಳಾಗಿವೆ.
- ಭೌತಿಕ ದುಃಖ
ಭೌತಿಕ ದುಃಖವು ಬಾಹ್ಯ ಪ್ರಪಂಚದಿಂದ, ಅಂದರೆ ಆಸ್ತಿಗಳು, ಆಸೆಗಳು, ಸಂಬಂಧಗಳು, ಮಹತ್ವಾ ಕಾಂಕ್ಷೆಗಳು, ವೈಫಲ್ಯಗಳು ಮತ್ತು ಬಾಂಧವ್ಯಗಳಿಂದ ಉದ್ಭವಿಸುತ್ತವೆ. ಮನುಷ್ಯರು ನಿರಂತರವಾಗಿ ಹೋಲಿಸಿಕೊಳ್ಳುವುದಲ್ಲದೆ ಸ್ಪರ್ಧಾತ್ಮಕವಾಗಿ ಬದುಕುತ್ತಾರೆ, ಹೆಚ್ಚಿನದನ್ನು ಬಯಸುತ್ತಾರೆ ಮತ್ತು ನಷ್ಟಕ್ಕೆ ಹೆದರುತ್ತಾರೆ. ಒಬ್ಬರ ನಿರೀಕ್ಷೆಗಳು ಈಡೇರದಿದ್ದಾಗ, ಮನಸ್ಸು ದುಃಖಿಸುತ್ತದೆ. ಅವುಗಳನ್ನು ಪೂರೈಸಿದಾಗಲೂ, ಅವುಗಳನ್ನು ಕಳೆದುಕೊಳ್ಳುವ ಭಯವು ಮತ್ತೆ ದುಃಖವನ್ನು ಸೃಷ್ಟಿಸುತ್ತದೆ.
ಮನುಷ್ಯರು ನಿರಂತರವಾಗಿ ಲಾಭ ಮತ್ತು ನಷ್ಟ, ಹೊಗಳಿಕೆ ಮತ್ತು ತೆಗಳಿಕೆ, ಯಶಸ್ಸು ಮತ್ತು ವೈಫಲ್ಯ, ಬಾಂಧವ್ಯ ಮತ್ತು ಪ್ರತ್ಯೇಕತೆಯಿಂದ ತೊಂದರೆಗೊಳಗಾಗುತ್ತಾರೆ. ಮನಸ್ಸು ಭೌತಿಕ ವಸ್ತುಗಳು ಮತ್ತು ಸಂಬಂಧಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡಾಗ, ಅದು ಚಂಚಲ ವಾಗುವುದಲ್ಲದೆ ನಿರೀಕ್ಷೆಗಳು, ನಿರಾಶೆಗಳು ಮತ್ತು ಅಭದ್ರತೆಗಳಿಂದ ಬಳಲುತ್ತದೆ. ಬಾಹ್ಯ ಸಾಧನೆ ಗಳಲ್ಲಿ ಸಂತೋಷವಿದೆ ಎಂದು ಮನುಷ್ಯನು ನಂಬುವವರೆಗೆ ಈ ದುಃಖ ಮುಂದುವರಿಯುತ್ತದೆ. ಹೀಗಾಗಿ, ಮನಸ್ಸು ಲೌಕಿಕ ಆಸೆಗಳು ಮತ್ತು ಬಾಂಧವ್ಯಗಳಿಗೆ ಬದ್ಧರಾಗಿರುವವರೆಗೆ ಭೌತಿಕ ದುಃಖಕ್ಕೆ ಅಂತ್ಯವಿಲ್ಲ.
ಇದನ್ನೂ ಓದಿ: Susan Thomas Column: ಸಣ್ಣ ಹೂವು ಕೂಡ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು !
- ಶಾರೀರಿಕ ದುಃಖ
ದೇಹವು ಒಂದು ದಿನ ನಾಶವಾಗುವುದರಿಂದ, ಹುಟ್ಟಿನಿಂದ ಸಾಯುವವರೆಗೆ ಶರೀರವು ನೋವು, ರೋಗ, ವಯಸ್ಸಾಗುವುದು ಮತ್ತು ಕ್ಷೀಣವಾಗುವಿಕೆಗೆ ಒಳಗಾಗುತ್ತದೆ. ಯಾವುದೇ ಔಷಧ ಅಥವಾ ಸೌಕರ್ಯವು ಮನುಷ್ಯನನ್ನು ಶಾಶ್ವತವಾಗಿ ಅಮರ ಅಥವಾ ನೋವುರಹಿತವಾಗಿಸಲು ಸಾಧ್ಯವಿಲ್ಲ. ಆದರೆ ಇಲ್ಲಿಯೂ, ದೇಹವು ಸ್ವತಃ ಬಳಲುವುದಿಲ್ಲ. ಅದು ಕೇವಲ ಬದಲಾವಣೆಗಳಿಗೆ ಒಳಗಾಗುತ್ತದೆ. ದೇಹದೊಂದಿಗೆ ಗುರುತಿಸಿಕೊಳ್ಳುವುದು ಮತ್ತು ಅದರ ನೋವನ್ನು ನನ್ನ ನೋವು ಎಂದು ಹೇಳಿ ಕೊಳ್ಳುವುದು ಮನಸ್ಸು. ಮನಸ್ಸು ದೇಹದಿಂದ ಬೇರ್ಪಟ್ಟು ಅದರ ನಿಜವಾದ ಪ್ರತ್ಯೇಕತೆಯನ್ನು ಅರಿತುಕೊಂಡ ಕ್ಷಣ, ದೈಹಿಕ ನೋವು ಕೂಡ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತದೆ.
ಆದ್ದರಿಂದ, ದೇಹದೊಂದಿಗೆ ಮನಸ್ಸಿನ ಗುರುತಿಸಿಕೊಳ್ಳುವಿಕೆಯಿಂದ ಮಾತ್ರ ದೈಹಿಕ ನೋವು ಸಹ ಉಳಿಯುತ್ತದೆ.ಜನಿಸುವ ಪ್ರತಿಯೊಂದು ದೇಹವು ಒಂದು ದಿನ ನಾಶವಾಗಬೇಕು ಮತ್ತು ದೇಹ ದೊಂದಿಗೆ ಗುರುತಿಸಿಕೊಳ್ಳುವ ಪ್ರತಿಯೊಂದು ಮನಸ್ಸು ಈ ಶಾಶ್ವತವಲ್ಲದ ನೋವನ್ನು ಅನುಭವಿಸ ಬೇಕು; ಇದು ಪ್ರಕೃತಿಯ ನಿಯಮ. ಜನನ, ಬೆಳವಣಿಗೆ, ಕ್ಷೀಣವಾಗುವಿಕೆ ಮತ್ತು ಸಾವು, ಶಾರೀರಿಕ ಅಸ್ತಿತ್ವದ ತಪ್ಪಿಸಲಾಗದ ಚಕ್ರವಾಗಿದೆ. ಹೀಗೆ, ಮೊದಲ ಎರಡು ದುಃಖಗಳು ಎಲ್ಲಾ ಮನುಷ್ಯರಿಗೆ ಸಾಮಾನ್ಯವಾಗಿವೆ. ಒಳ್ಳೆಯವರು ಅಥವಾ ಕೆಟ್ಟವರು, ಶ್ರೀಮಂತ ಅಥವಾ ಬಡವ, ವಿಶ್ವಾಸಿ ಅಥವಾ ನಂಬಿಕೆಯಿಲ್ಲದವನು ಎಂಬ ಭೇದವಿಲ್ಲದೆ ಎಲ್ಲರಿಗೂ ವಸ್ತು ಮತ್ತು ದೇಹಾಧಾರಿತ ದುಃಖಗಳಿರು ತ್ತವೆ. ಆದರೆ ಇವು ಮುಕ್ತಿಗೆ ಅಡೆತಡೆಗಳಲ್ಲ; ಬದಲಾಗಿ, ಈ ಭೌತಿಕ ಅಥವಾ ದೈಹಿಕ ಜೀವನದಲ್ಲಿ ಯಾವುದೂ ಶಾಶ್ವತ ಶಾಂತಿಯನ್ನು ನೀಡಲು ಸಾಧ್ಯವಿಲ್ಲ ಎಂದು ನೆನಪು ಮಾಡುತ್ತವೆ.
ಮಾನಸಿಕ ದುಃಖ
ಮಾನಸಿಕ ದುಃಖವು ಅತ್ಯಂತ ಸೂಕ್ಷ್ಮವಾದರೂ ಅತ್ಯಂತ ಶಕ್ತಿಶಾಲಿಯಾಗಿದೆ. ಇದು ಮನಸ್ಸಿ ನಿಂದಲೇ ಸೃಷ್ಟಿಸಲ್ಪಟ್ಟ ಆಲೋಚನೆಗಳು, ಭಾವನೆಗಳು ಮತ್ತು ನೆನಪುಗಳಿಂದ ಉದ್ಭವಿಸುತ್ತದೆ. ಕೋಪ, ಅಸೂಯೆ, ದ್ವೇಷ, ಭಯ ಮತ್ತು ದುಃಖ ಇವೆಲ್ಲವೂ ಮನಸ್ಸಿನಿಂದ ಹುಟ್ಟಿಕೊಳ್ಳುತ್ತವೆ. ಹೀಗೆ ತೊಂದರೆಗೊಳಗಾದ ಮನಸ್ಸು ಎಡೆ ನೋಡುವಾಗ ತೊಂದರೆಯನ್ನೇ ನೋಡುತ್ತದೆ; ಶಾಂತಿಯುತ ಮನಸ್ಸು ದುಃಖದಲ್ಲಿಯೂ ಶಾಂತಿಯನ್ನು ನೋಡುತ್ತದೆ. ಹೀಗಾಗಿ, ಒಬ್ಬರ ಸಂತೋಷ ಅಥವಾ ದುಃಖವನ್ನು ನಿರ್ಧರಿಸುವುದು ಮನಸ್ಸಿನ ಸ್ಥಿತಿಯಾಗಿದೆ.
ಒಬ್ಬ ಸಾಧಕನು ಆಧ್ಯಾತ್ಮಿಕತೆಯ ಕಡೆಗೆ ತಿರುಗಿ ಮುಕ್ತಿಯ ಮಾರ್ಗದಲ್ಲಿ ಪ್ರಯಾಣಿಸಲು ಪ್ರಾರಂಭಿ ಸಿದಾಗ, ಮೂರನೆಯ ಮತ್ತು ಹೆಚ್ಚು ಸೂಕ್ಷ್ಮ ರೀತಿಯ ದುಃಖ ಅಂದರೆ ಮನಸ್ಸಿನ ದುಃಖ ಪ್ರಾರಂಭ ವಾಗುತ್ತದೆ. ಈ ದುಃಖವು ಯಾವುದೇ ಬಾಹ್ಯ ಘಟನೆ ಅಥವಾ ಶಾರೀರಿಕ ನೋವಿನಿಂದ ಉಂಟಾಗುವುದಿಲ್ಲ.
ಇದು ಸಂಪೂರ್ಣವಾಗಿ ಆಂತರಿಕವಾಗಿದ್ದು, ಸುಪ್ತ ಮನಸ್ಸಿನ ಶುದ್ಧೀಕರಣದಿಂದ ಉದ್ಭವಿಸುತ್ತದೆ, ಅಲ್ಲಿ ಹಿಂದಿನ ಜನ್ಮಗಳಲ್ಲಿ ಅಸಂಖ್ಯಾತ ಮುದ್ರಣಗಳು ಸಂಗ್ರಹವಾಗಿರುತ್ತವೆ. ಸುಪ್ತ ಪ್ರಜ್ಞೆಯಲ್ಲಿ ಮನಸ್ಸು ಎಲ್ಲಾ ಅನುಭವಗಳಾದ ಕೋಪ, ಅಸೂಯೆ, ಆಸೆ, ಭಯ, ದ್ವೇಷ ಮತ್ತು ಅನೇಕ ಜೀವಿತಾವಧಿಗಳಲ್ಲಿ ಸಂಗ್ರಹವಾದ ಬಾಂಧವ್ಯಗಳ ಅವಶೇಷಗಳನ್ನು ಒಳಗೊಂಡಿರುವ ನೆನಪಿನ ಗುಪ್ತ ಕೋಣೆಯಂತಿದೆ.
ಗುರುಗಳ ಊರ್ಜೆಯು, ಮೌನೀಕರಣ ಮತ್ತು ಸ್ಮರಣೆಯ ಮೂಲಕ ಅನ್ವೇಷಕನನ್ನು ಶುದ್ಧೀಕರಿಸಲು ಪ್ರಾರಂಭಿಸಿದಾಗ, ಈ ಗುಪ್ತ ಕಲ್ಮಶಗಳು ಜಾಗೃತ ಮನಸ್ಸಿನಲ್ಲಿ ಚಡಪಡಿಕೆ, ಕಿರಿಕಿರಿ ಅಥವಾ ಮಾನಸಿಕ ನೋವಿನ ರೂಪದಲ್ಲಿ ಹೊರಹೊಮ್ಮಲು ಪ್ರಾರಂಭಿಸುತ್ತವೆ.
ಈ ಹಂತದಲ್ಲಿ, ಯಾವುದೇ ಕಾರಣವಿಲ್ಲದೆ ತಾನು ಮಾನಸಿಕವಾಗಿ ಬಳಲುತ್ತಿರುವುದೇಕೆಂದು ಸಾಧಕನಿಗೆ ಅರ್ಥವಾಗದೆ ಇರಬಹುದು. ಆದರೆ ನಿಜವಾಗಿ ಇದು ಶುದ್ಧೀಕರಣದ ಪ್ರಕ್ರಿಯೆಯಾಗಿದೆ. ಇದರಲ್ಲಿ ಏನೂ ಉಳಿಯದಂತೆ ಮನಸ್ಸನ್ನು ಪದರ ಪದರವಾಗಿ ಸ್ವಚ್ಛಗೊಳಿಸಲಾಗುತ್ತದೆ. ಈ ಹಂತಕ್ಕೆ ಹೆಚ್ಚಿನ ಸಕಾರಾತ್ಮಕತೆ, ತಾಳ್ಮೆ ಮತ್ತು ಶರಣಾಗತಿ ಬೇಕಾಗುತ್ತವೆ.
ವಿರೋಧಿಸದ ಅಥವಾ ದೂರಿಲ್ಲದ ಸಕಾರಾತ್ಮಕ ವ್ಯಕ್ತಿ ಮಾತ್ರ ಈ ಅದೃಶ್ಯ ಆಂತರಿಕ ನೋವನ್ನು ಸಹಿಸಿಕೊಳ್ಳಬಲ್ಲ. ಈ ಹಂತದಲ್ಲಿ ನಕಾರಾತ್ಮಕತೆ, ಅನುಮಾನ ಅಥವಾ ಭಯವು ಶುದ್ಧೀಕರಣ ವನ್ನು ನಿಧಾನಗೊಳಿಸುತ್ತದೆ. ಆದ್ದರಿಂದ, ಎಲ್ಲಾ ದುಃಖಗಳನ್ನು ದೂರಿಲ್ಲದೆ ಸ್ವೀಕರಿಸಲು, ಸಕಾರಾತ್ಮಕವಾಗಿರಲು ಮತ್ತು ನಿರಂತರ ಗುರುಸ್ಮರಣೆ ಮಾಡಲು ಗುರುಗಳು ಸಾಧಕನಿಗೆ ಸೂಚಿಸು ತ್ತಾರೆ.
ಮನಸ್ಸು- ಎಲ್ಲಾ ದುಃಖಗಳ ಮೂಲ: ನಾವು ಆಳವಾಗಿ ವಿಶ್ಲೇಷಿಸಿದಾಗ, ಮೂರು ರೀತಿಯ ದುಃಖ ಗಳಿಗೆ ಮನಸ್ಸು ಮಾತ್ರ ಕಾರಣ ಎಂದು ಅರಿವಾಗುತ್ತದೆ. ಅದು ಭೌತಿಕ ನೋವಿಗೆ ಕಾರಣವಾಗುವ ಆಸೆಗಳನ್ನು ಸೃಷ್ಟಿಸುತ್ತದೆ, ದೇಹದೊಂದಿಗೆ ಗುರುತಿಸಿಕೊಳ್ಳುತ್ತದೆ ಮತ್ತು ಶಾರೀರಿಕ ನೋವನ್ನು ಅನುಭವಿಸುತ್ತದೆ ಹಾಗೂ ಅದು ತನ್ನದೇ ಆದ ಗೊಂದಲವನ್ನು ಮಾನಸಿಕ ನೋವು ಎಂದು ಸೃಷ್ಟಿಸುತ್ತದೆ.
ಆದ್ದರಿಂದ, ಮನಸ್ಸನ್ನೇ ಕರಗಿಸುವುದು ದುಃಖವನ್ನು ಕೊನೆಗೊಳಿಸುವ ಏಕೈಕ ಮಾರ್ಗವಾಗಿದೆಯೇ ವಿನಾ, ಬಾಹ್ಯ ಪ್ರಪಂಚವನ್ನು ಬದಲಾಯಿಸುವ ಮೂಲಕ ಅಲ್ಲ. ಮನಸ್ಸಿನ ಈ ಕರಗುವಿಕೆಯನ್ನು ಮನೋನಾಶ ಎನ್ನಲಾಗುತ್ತದೆ.
ಗುರುಗಳ ಪಾತ್ರ ಮತ್ತು ಮೌನೀಕರಣ: ಈ ಮಾನಸಿಕ ಶುದ್ಧೀಕರಣದ ಸಮಯದಲ್ಲಿ, ಗುರುಗಳ ಉಪಸ್ಥಿತಿ ಮತ್ತು ಸ್ಮರಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಧಕನು ಗುರುಗಳ ಸ್ಮರಣೆ ಯೊಂದಿಗೆ ಮೌನೀಕರಣದಲ್ಲಿ ಕುಳಿತಾಗ, ಗುರುಗಳ ದೈವಿಕ ಊರ್ಜೆಯು ಸಾಧಕನ ಮನಸ್ಸನ್ನು ಪ್ರವೇಶಿಸುತ್ತದೆ ಹಾಗೂ ಸುಪ್ತ ಪ್ರಜ್ಞೆಯ ಕಲ್ಮಶಗಳನ್ನು ಸುಡಲು ಸಹಾಯ ಮಾಡುತ್ತದೆ.
ಈ ಊರ್ಜೆಯ ಪ್ರಸಾರವು ಕಣ್ಣುಗಳಿಗೆ ಗೋಚರಿಸುವುದಿಲ್ಲ, ಆದರೆ ನಿಶ್ಚಲತೆಯ ಆಳದಲ್ಲಿ ಅದರ ಅನುಭವವಾಗುತ್ತದೆ. ಗುರುಗಳು ದುಃಖವನ್ನು ತೆಗೆದು ಹಾಕುತ್ತಿಲ್ಲ, ಆದರೆ ಅದನ್ನು ಪರಿವರ್ತಿಸು ತ್ತಿದ್ದಾರೆ. ಸಾಧಕನ ಮನಸ್ಸಿನಲ್ಲಿರುವ ಹಿಂದಿನ ಮುದ್ರಣಗಳು, ಆಲೋಚನೆಗಳು ಮತ್ತು ಪ್ರತಿಕ್ರಿಯೆ ಗಳಿಂದ ಮುಕ್ತಗೊಳಿಸುವ ಮೂಲಕ ಅವನ ಸುಪ್ತಪ್ರಜ್ಞೆಯ ಶುದ್ಧೀಕರಣದ ನೋವನ್ನು ಶಾಂತಿ ಯಾಗಿ ಪರಿವರ್ತಿಸುತ್ತಾರೆ. ಈ ಶುದ್ಧೀಕರಣ ಊರ್ಜೆಯನ್ನು ಪಡೆಯಲು ಮತ್ತು ಆಂತರಿಕ ಪರಿವರ್ತನೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸಲು ಸಾಧಕನು ನಿಯತವಾಗಿ ಗುರುಗಳ ಸಾಂಗತ್ಯದಲ್ಲಿರಬೇಕು.
ಮನೋನಾಶ- ವಿಮೋಚನೆಯ ಮಾರ್ಗ: ಮನೋನಾಶ ಎಂದರೆ ಬುದ್ಧಿಯ ನಾಶ ಅಥವಾ ಮಾನಸಿಕ ಕ್ರಿಯೆಯ ನಷ್ಟವಲ್ಲ; ಇದು ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ಗುರುತಿಸಿಕೊಳ್ಳುವಿಕೆಯ ಭ್ರಮೆಯನ್ನು ಸಂಪೂರ್ಣ ನಾಶಮಾಡುವುದು ಆಗಿದೆ. ಮನಸ್ಸು ಆಲೋಚನೆಗಳ ನಿರಂತರ ಹರಿವನ್ನು ಹೊರತುಪಡಿಸಿ ಬೇರೇನೂ ಅಲ್ಲ. ಆಲೋಚನೆಗಳು ನಾಶವಾದಾಗ, ಮನಸ್ಸೂ ನಾಶ ವಾಗುತ್ತದೆ. ಉಳಿದಿರುವುದು ಶುದ್ಧ ಅರಿವು- ಶಾಶ್ವತ, ಶಾಂತಿಯುತ ಮತ್ತು ದೈವಿಕವಾದ ಆತ್ಮ. ಮನೋನಾಶವನ್ನು ಸಾಧಿಸಿದಾಗ, ಒಬ್ಬನು ಭೌತಿಕ ಪ್ರಪಂಚದೊಂದಿಗೆ ಇರುವ ಎಲ್ಲಾ ಬಂಧನ ಗಳಿಂದ ಮುಕ್ತನಾಗುತ್ತಾನೆ. ಆಸೆಗಳು ಮತ್ತು ಮೋಹಗಳು ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತವೆ, ಏಕೆಂದರೆ ಅವುಗಳನ್ನು ನನ್ನದು ಎಂದು ಹೇಳಲು ನಾನು ಇಲ್ಲ.
ಮನಸ್ಸಿನೊಂದಿಗೆ ಗುರುತಿಸಿಕೊಳ್ಳುವಿಕೆಯನ್ನು ಅವಲಂಬಿಸಿರುವ ದುಃಖವು ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ. ಸಾಧಕನು ಮುಕ್ತಿಯನ್ನು ಪಡೆಯುತ್ತಾನೆ, ಅದು ಶುದ್ಧ ಅಸ್ತಿತ್ವ, ಆನಂದ ಮತ್ತು ಮೌನದ ಸ್ಥಿತಿ. ಮುಕ್ತಿಯ ತುತ್ತತುದಿ: ಸುಪ್ತ ಮನಸ್ಸು ಶುದ್ಧವಾದಾಗ, ಸಾಧಕನು ಮುಕ್ತಿಯ ತುತ್ತ ತುದಿ ಎಂದು ಕರೆಯಲ್ಪಡುವ ಹಂತವನ್ನು ತಲುಪುತ್ತಾನೆ- ಅಲ್ಲಿ ಮನಸ್ಸು ಬಹಳ ಸೂಕ್ಷ್ಮ ಮತ್ತು ಮೌನವಾಗುತ್ತದೆ.
ಈ ಅಂಚಿನಲ್ಲಿ, ಸಾಧಕನು ಇನ್ನೂ ಮುಂದೆ ಲೌಕಿಕ ಸನ್ನಿವೇಶಗಳಿಗೆ ಅಥವಾ ದೈಹಿಕ ಅಸ್ವಸ್ಥತೆ ಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅವನು ನಿಶ್ಚಲತೆಯಲ್ಲಿ ಎಲ್ಲವನ್ನೂ ಗಮನಿಸುತ್ತಾನೆ, ಇಡೀ ಜಗತ್ತು ಚಲಿಸುತ್ತಿದರೂ, ಅವನು ಚಲನರಹಿತನಾಗಿರುತ್ತಾನೆ. ಇದು ಸುಪ್ತ ಮನಸ್ಸಿನ ಅಂತಿಮ ಶುದ್ಧೀಕರಣ ಪ್ರಾರಂಭವಾಗುವ ಹಂತ. ಮುಕ್ತಿಗಾಗಿ ಇದು ತೀವ್ರವಾದ ಆಂತರಿಕ ಮಂಥನವನ್ನು ಉಂಟುಮಾಡ ಬಹುದು.
ಇನ್ನೂ ಮಿಕ್ಕಿರುವ ಕೊನೆಯ ಸಂಸ್ಕಾರಗಳ ಗುರುತುಗಳು ಮನಸ್ಸಿನ ಮೇಲ್ಮೈಗೆ ಬರುತ್ತವೆ. ಈ ಅವಧಿಯು ಸೂಕ್ಷ್ಮ ಮತ್ತು ತೀವ್ರವಾಗಿರುತ್ತದೆ, ಆದರೆ ಅದರ ನಂತರ ಸಾಧಕನು ಸಂಪೂರ್ಣ ಶಾಂತಿಯ ಸ್ಥಿತಿಯನ್ನು ಪ್ರವೇಶಿಸುತ್ತಾನೆ, ಅದು ‘ಚಿವಂ’ ಸ್ಥಿತಿ- ಅನಂತ ನಿಶ್ಚಲತೆ.
ಆತ್ಮಸಾಕ್ಷಾತ್ಕಾರ: ಮನೋನಾಶದ ಮೂಲಕ, ವ್ಯಕ್ತಿಯೊಬ್ಬರು ‘ನಾನು ಯಾರು?’ ಎಂಬುದರ ಅಂತಿಮ ಜ್ಞಾನವನ್ನು ಪಡೆಯುತ್ತಾರೆ. ಇದು ಆತ್ಮಸಾಕ್ಷಾತ್ಕಾರ ಅಥವಾ ಜ್ಞಾನೋದಯದ ಅನುಭವ. ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಅಲ್ಲ ಎಂಬ ಅರಿವು ಬರುತ್ತದೆ. ದೇವರು ಹೊರಗೆ ಅಲ್ಲ ಆದರೆ ಒಳಗೆ ಅಂದರೆ ನಿಶ್ಚಲತೆ, ಮೌನ ಮತ್ತು ಬಾಹ್ಯಾಕಾಶದ ರೂಪದಲ್ಲಿ ಇzನೆ ಎಂದು ಅವರು ಕಂಡುಕೊಳ್ಳುತ್ತಾರೆ. ಮನಸ್ಸು ಇರುವವರೆಗೆ, ಈ ಸತ್ಯವು ಮರೆಯಾಗಿರುತ್ತದೆ.
ಮನಸ್ಸು ಕರಗಿದಾಗ, ದೈವಿಕತೆಯು ಸ್ವಾಭಾವಿಕವಾಗಿ ತನ್ನನ್ನು ತಾನು ಬಹಿರಂಗಪಡಿಸುತ್ತದೆ. ಇದು ‘ಚಿವಂ’ ಸ್ಥಿತಿ ಅಂದರೆ, ಮನಸ್ಸಿನ ಶುದ್ಧ, ಅನಂತ ಮತ್ತು ನಿಜವಾದ ಶೂನ್ಯದ ಸ್ಥಿತಿಗೆ ರೂಪಾಂತರ ಗೊಳ್ಳುವುದು.
ಮುಕ್ತಿಯು ಜೀವನದ ಅಂತ್ಯವಲ್ಲ; ಅದು ಮನಸ್ಸಿನ ಗೊಂದಲಗಳ ಅಂತ್ಯ. ಎಲ್ಲಾ ಭೌತಿಕ, ದೈಹಿಕ ಮತ್ತು ಮಾನಸಿಕ ದುಃಖಗಳು ತಮ್ಮ ಉದ್ದೇಶವನ್ನು ಪೂರೈಸಿ ಕರಗಿದಾಗ, ಸಾಧಕನು ನಿಜವಾದ ಶೂನ್ಯ ಸ್ಥಿತಿಯನ್ನು ಅನುಭವಿಸುತ್ತಾನೆ. ಆ ಸ್ಥಿತಿಯಲ್ಲಿ, ಯಾವುದೇ ಕರ್ತೃ ಇಲ್ಲ, ಅನು ಭವಿಸುವವನೂ ಇಲ್ಲ, ದ್ವಂದ್ವವೂ ಇಲ್ಲ. ಸಾಧಕನು ಅನಂತ ಆಕಾಶದೊಂದಿಗೆ ಅಂದರೆ ನಿಜವಾದ ದೇವರ ಸ್ಥಿತಿಯೊಂದಿಗೆ ಒಂದಾಗುತ್ತಾನೆ. ಇದೇ ಮುಕ್ತಿಯ ಸ್ಥಿತಿ.
ಇದೇ ಮನಸ್ಸಿನ ಅಂತಿಮ ರೂಪಾಂತರಗೊಳ್ಳುವಿಕೆ; ಏಕೆಂದರೆ ಈ ಸ್ಥಿತಿಯಲ್ಲಿ ಬಳಲುವುದಕ್ಕೆ ಎನೂ ಉಳಿದಿಲ್ಲ. ಈ ಸ್ಥಿತಿಯಲ್ಲಿ ಮನುಷ್ಯನು ದೈವಿಕತೆಯಲ್ಲಿ ಲೀನವಾಗಿದ್ದಾನೆ. ಮನಸ್ಸು ‘ಚಿವಂ’ ಅಂದರೆ ಶುದ್ಧ ಮತ್ತು ಅನಂತ ನಿಶ್ಚಲತೆಯಾಗಿ ಪರಿವರ್ತನೆಗೊಂಡಿದೆ.
ಸಾರಾಂಶ: ಪ್ರಪಂಚದಿಂದ ತಪ್ಪಿಸಿಕೊಳ್ಳುವ ಮೂಲಕ ಮುಕ್ತಿಯನ್ನು ಸಾಧಿಸಲಾಗುವುದಿಲ್ಲ, ಆದರೆ ಅದಕ್ಕೆ ಅಂಟಿಕೊಳ್ಳುವ ಮನಸ್ಸನ್ನು ಕರಗಿಸುವ ಮೂಲಕ ಸಾಧಿಸಲಾಗುತ್ತದೆ. ‘ಚಿವಾಲಿಟಿ ಪದ್ಧತಿ’ಯಲ್ಲಿ ಮನಸ್ಸನ್ನು ಶಾಂತಗೊಳಿಸಲು ಮತ್ತು ಅದನ್ನು ಮುಕ್ತಿಯ ಕಡೆಗೆ ಕೊಂಡೊಯ್ಯಲು ಮೌನೀಕರಣದ ಅಭ್ಯಾಸವನ್ನು ಅಳವಡಿಸಲಾಗಿದೆ. ಮನಸ್ಸು ನಿಶ್ಚಲವಾದಾಗ, ಆತ್ಮವು ಸ್ವತಃ ಹೊಳೆಯುತ್ತದೆ. ಮನೋನಾಶವೇ ಮುಕ್ತಿ. ಮನಸ್ಸು ಕೊನೆಗೊಳ್ಳುವಲ್ಲಿ, ದೇವರ ಸ್ಥಿತಿಯು ಪ್ರಾರಂಭ ವಾಗುತ್ತದೆ.