ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ತಿರುಪತಿಯ ತಿಮ್ಮಪ್ಪನಿಗೆ ಕೂದಲು ಕೊಡುವ ಪದ್ದತಿ

ಅಂದಿನಿಂದ ತಿರುಮಲದ ಈ ಬೆಟ್ಟಕ್ಕೆ ‘ನೀಲಾದ್ರಿ’ ಎಂಬ ಹೆಸರು ಬಂತು, ಮತ್ತು ಇಲ್ಲಿ ಮುಡಿ ಕೊಡುವ ನಮ್ಮ ವಿಳಾಸ ಕೂದಲು ನೀಲಾದೇವಿಯ ತ್ಯಾಗದ ಸ್ಮರಣೆಯಾಗಿದೆ. ಪುರಾಣಗಳ ಪ್ರಕಾರ, ಈ ಮುಂಡನ ಪ್ರಕ್ರಿ ಯೆಯು ಕೇವಲ ಬಾಹ್ಯ ಸೌಂದರ್ಯದ ತ್ಯಾಗವಲ್ಲ; ಇದು ಮನುಷ್ಯನ ಅಹಂಕಾರದ ಸಂಕೇತವಾಗಿದೆ.

ತಿರುಪತಿಯ ತಿಮ್ಮಪ್ಪನಿಗೆ ಕೂದಲು ಕೊಡುವ ಪದ್ದತಿ

-

ಒಂದೊಳ್ಳೆ ಮಾತು

ಕಲಿಯುಗದ ಆರಂಭದಲ್ಲಿ ಶ್ರೀನಿವಾಸನು ತಿರುಮಲದ ಶೇಷಾಚಲ ಬೆಟ್ಟಗಳಲ್ಲಿ ವಾಸಿಸುತ್ತಿದ್ದ ದಿನಗಳವು. ಒಮ್ಮೆ ಸ್ವಾಮಿಯು ಹುತ್ತದ ಬಳಿ ವಿಶ್ರಮಿಸುತ್ತಿದ್ದಾಗ, ಆಕಸ್ಮಿಕವಾಗಿ ಅಲ್ಲಿಗೆ ಬಂದ ದನಗಾಹಿಯೊಬ್ಬ ಹಸುವಿನ ಹಾಲು ಹುತ್ತಕ್ಕೆ ಸುರಿಯುತ್ತಿರುವುದನ್ನು ಕಂಡು ಕೋಪಗೊಂಡು ಕೊಡಲಿಯಿಂದ ಹೊಡೆಯುತ್ತಾನೆ. ಆ ಏಟು ನೇರವಾಗಿ ಶ್ರೀನಿವಾಸನ ತಲೆಗೆ ತಗುಲಿ, ಅಲ್ಲಿನ ಕೆಲವು ಕೂದಲುಗಳು ಉದುರಿಹೋಗಿ ಆಳವಾದ ಗಾಯವಾಗುತ್ತದೆ. ಇದನ್ನು ಕಂಡ ಗಂಧರ್ವ ಕನ್ಯೆಯಾದ ನೀಲಾ ದೇವಿ ನೊಂದುಕೊಳ್ಳುತ್ತಾಳೆ. ಜಗತ್ತನ್ನೇ ಸಲಹುವ ಪರಮಾತ್ಮನ ಸುಂದರ ಮುಖಕ್ಕೆ ಈ ಕೊರತೆಯೇ? ಎಂದು ಭಾವಿಸಿದ ಆಕೆ, ತಡಮಾಡದೆ ತನ್ನದೇ ಸುಂದರವಾದ ಕೂದಲನ್ನು ಕತ್ತರಿಸಿ, ಸ್ವಾಮಿಯ ಗಾಯದ ಮೇಲಿಟ್ಟು ಪ್ರೀತಿಯಿಂದ ಉಪಚರಿಸು ತ್ತಾಳೆ.

ನೀಲಾದೇವಿಯ ಈ ನಿಸ್ವಾರ್ಥ ಭಕ್ತಿ ಮತ್ತು ತ್ಯಾಗಕ್ಕೆ ಪ್ರಸನ್ನನಾದ ಶ್ರೀನಿವಾಸನು ಆಕೆಗೆ ಒಂದು ವರವನ್ನು ನೀಡುತ್ತಾನೆ: ಕೂದಲು ಲೌಕಿಕ ಸೌಂದರ್ಯದ ಅತ್ಯುನ್ನತ ನೀವೂ ಬರೆಯಬಹುದು ಸಂಪ್ರದಾಯ ಆರಂಭವಾಯಿತು. ಭಕ್ತರು ಅರ್ಪಿ ಸುವ ಭಾಗ. ಅದನ್ನೇ ನನಗಾಗಿ ತ್ಯಾಗ ಮಾಡಿದ ನಿನಗೆ ಧನ್ಯತೆ ಸಿಗಲಿ. ಇನ್ಮುಂದೆ ನನ್ನ ದರ್ಶನಕ್ಕೆ ಬರುವ ಭಕ್ತರು ತಮ್ಮ ಕೂದಲನ್ನು ನನಗೆ ಅರ್ಪಿಸಿದರೆ, ಅದು ನಿನಗೇ ತಲುಪುತ್ತದೆ. ಹಾಗೆ ಮುಡಿ ಕೊಟ್ಟ ಭಕ್ತರ ಎಲ್ಲಾ ಇಷ್ಟಾರ್ಥಗಳೂ ಈಡೇರಲಿ.

ಅಂದಿನಿಂದ ತಿರುಮಲದ ಈ ಬೆಟ್ಟಕ್ಕೆ ‘ನೀಲಾದ್ರಿ’ ಎಂಬ ಹೆಸರು ಬಂತು, ಮತ್ತು ಇಲ್ಲಿ ಮುಡಿ ಕೊಡುವ ನಮ್ಮ ವಿಳಾಸ ಕೂದಲು ನೀಲಾದೇವಿಯ ತ್ಯಾಗದ ಸ್ಮರಣೆಯಾಗಿದೆ. ಪುರಾಣಗಳ ಪ್ರಕಾರ, ಈ ಮುಂಡನ ಪ್ರಕ್ರಿ ಯೆಯು ಕೇವಲ ಬಾಹ್ಯ ಸೌಂದರ್ಯದ ತ್ಯಾಗವಲ್ಲ; ಇದು ಮನುಷ್ಯನ ಅಹಂಕಾರದ ಸಂಕೇತವಾಗಿದೆ.

ಇದನ್ನೂ ಓದಿ: Roopa Gururaj Column: ನಮ್ಮ ವೇದ ಪುರಾಣಗಳ ದಿವ್ಯದರ್ಶನ

ಕೂದಲು ವ್ಯಕ್ತಿಯೊಬ್ಬನ ಅಂದವನ್ನು ಹೆಚ್ಚಿಸುವ ಪ್ರಮುಖ ಅಂಶ. ಅದನ್ನು ದೇವರಿಗೆ ಒಪ್ಪಿಸು ವುದರ ಮೂಲಕ ಭಕ್ತನು ತನ್ನ ರೂಪ, ಸೌಂದರ್ಯ ಮತ್ತು ಸಂಪತ್ತಿನ ಮೇಲಿನ ಗರ್ವವನ್ನು ತೊರೆದು, ಭಗ ವಂತನ ಸನ್ನಿಧಿಯಲ್ಲಿ ತಾನು ಸಂಪೂರ್ಣ ಶರಣಾಗತನಾಗಿದ್ದೇನೆ ಎಂದು ಸಾರು ತ್ತಾನೆ.

ದೇವರ ಮುಂದೆ ನಾವೆಲ್ಲರೂ ಒಂದೇ ಎಂಬ ಸಮಾನತೆಯ ಭಾವ ಇದರಲ್ಲಿದೆ. ಅನೇಕ ಬಾರಿ ನಾವು ದೇವರಿಗೆ ಹರಿಕೆಗಳನ್ನ ಹೊರುತ್ತೇವೆ. ನಮ್ಮ ಯಾವುದೋ ಕೆಲಸವನ್ನ ಮಾಡಿ ಕೊಡುವಂತೆ ದೈನ್ಯದಿಂದ ಬೇಡಿಕೊಳ್ಳುತ್ತೇವೆ. ಕೆಲಸ ವಾದರೆ ನಿನಗೆ ಕಾಣಿಕೆಯಾಗಿ ಅದನ್ನು ಕೊಡುತ್ತೇನೆ ಇದನ್ನು ಕೊಡುತ್ತೇನೆ ಎಂದು ದೇವರಿಗೆ ಆಮಿಷ ಒಡ್ಡುತ್ತೇವೆ. ಅವನಿಗೆ ಇದಾವುದರ ಅಗತ್ಯ ಇಲ್ಲ ಎಂದು ನಮಗೆ ತಿಳಿದಿದ್ದರೂ ಸಹ, ಕೆಲಸ ವಾದಾಗ ಕೃತಜ್ಞತಾಪೂರ್ವಕವಾಗಿ ಹರಕೆಯನ್ನು ಪೂರ್ಣಗೊಳಿಸುತ್ತೇವೆ.

ಪ್ರತಿ ಬಾರಿ ಹರಕೆ ಹೊತ್ತಾಗ ಅದನ್ನು ಪೂರ್ಣಗೊಳಿಸುವಾಗ ನಮ್ಮಲ್ಲಿ ಅವನ ಬಗ್ಗೆ ಇರುವ ಅಪರಿಮಿತವಾದ ನಂಬಿಕೆ, ಅದೇನೆ ಬಂದರು ಭಗವಂತ ನಮ್ಮನ್ನು ಕಾಯುತ್ತಾನೆ ಎನ್ನುವ ವಿಶ್ವಾಸವೇ ದೇವರು ಅಲ್ಲವೇ? ನಮ್ಮ ಭಾವನೆ ಒಳ್ಳೆಯದಾಗಿದ್ದರೆ, ಆಸೆಗಳು ಪ್ರಾಮಾಣಿಕವಾಗಿದ್ದರೆ ಖಂಡಿತ ಭಗವಂತ ಅದನ್ನು ಈಡೇರಿಸುತ್ತಾನೆ. ಆದರೆ ಇದೆ ನನ್ನ ಶ್ರಮದಿಂದ ಆಗಿದೆ ಎನ್ನುವ ಅಹಂಕಾರ ನಂತರ ನಮ್ಮಲ್ಲಿ ಮೈಗೂಡಿ ಬಿಡುತ್ತದೆ. ಆಗ ನಮ್ಮೊಳಗಿನ ಭಗವಂತನ ಇರುವು ಮಾಯವಾಗುತ್ತದೆ.

ಎಲ್ಲಿಯವರೆಗೆ ನಮಗೆ ಭಗವಂತನ ಬಗ್ಗೆ ಭಕ್ತಿ ಸಮರ್ಪಣಾ ಭಾವ, ವಿನಮ್ರತೆ ಇರುತ್ತದೆಯೋ ಅಲ್ಲಿಯವರೆಗೆ ಭಗವಂತ ನಮ್ಮಲ್ಲಿ ನೆಲೆಸಿರುತ್ತಾನೆ. ಎಂದಿಗೆ ನಮ್ಮಲ್ಲಿ ಅಹಂಕಾರ ಮೈಗೂಡು ತ್ತದೆಯೋ ಅಂದಿಗೆ ನಾವು ಭಗವಂತನಿಂದ ದೂರವೇ! ಆದ್ದರಿಂದಲೇ ಬದುಕಿನಲ್ಲಿ ಎಂದಿಗೂ ಅಹಂಕಾರ ಪಡುವುದು ಬೇಡ. ನಮ್ಮಿಂದ ಒಳ್ಳೆಯದಾದರೆ ಅದು ಭಗವಂತನ ಪ್ರೇರಣೆ. ಬದುಕಿನಲ್ಲಿ ಯಾವುದಾದರೂ ನೆರವೇರದಿದ್ದರೆ ಅದು ಅವನ ಇಚ್ಛೆ ಎಂದು ಸ್ವೀಕರಿಸುವ ಸ್ಥಿತಪ್ರಜ್ಞತೆ ಬೆಳೆಸಿ ಕೊಳ್ಳೋಣ.

ಭಗವದ್ಗೀತೆಯಲ್ಲಿ ಕೃಷ್ಣನು ಹೇಳುವಂತೆ- ಯಾರು ಅಹಂಕಾರವನ್ನು ತೊರೆದು ನನ್ನನ್ನು ಶರಣು ಹೊಂದುತ್ತಾರೋ, ಅವರನ್ನು ನಾನು ರಕ್ಷಿಸುತ್ತೇನೆ. ಅದೇ ರೀತಿ, ತಿರುಪತಿಯಲ್ಲಿ ಮುಡಿ ಕೊಡುವುದು ಭಕ್ತ ಮತ್ತು ಭಗವಂತನ ನಡುವಿನ ಅತ್ಯುನ್ನತ ಭಕ್ತಿಯ ಸಂಕೇತವಾಗಿದೆ.