ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶ್ರೀಮದ್‌ ಭಾಗವತದ ಮಹಿಮೆ

ಪೂರ್ವದಲ್ಲಿ ತುಂಗಾತೀರದಲ್ಲಿ ಒಂದು ಪಟ್ಟಣ. ಅಲ್ಲಿ ವೇದಶಾಸ್ತ್ರ ಪಂಡಿತನಾದ ಆತ್ಮದೇವ ಎನ್ನುವ ಬ್ರಾಹ್ಮಣ ಇದ್ದನು. ಅವನಿಗೆ ಸಂತಾನ ಭಾಗ್ಯವಿರಲಿಲ್ಲ. ಒಮ್ಮೆ ಆ ಊರಿಗೆ ಬಂದ ಯತಿ ಗಳು ಅವನಿಗೆ ಆಶೀರ್ವದಿಸಿ ಒಂದು ಹಣ್ಣನ್ನು ನೀಡುತ್ತಾರೆ. ಇದನ್ನು ಪತ್ನಿಗೆ ಕೊಡು ಎನ್ನುತ್ತಾರೆ. ಆದರೆ ಆತನ ಪತ್ನಿಗೆ ಅದರಲ್ಲಿ ನಂಬಿಕೆ ಇಲ್ಲದ ಕಾರಣ ಕೊಟ್ಟಿಗೆಯಲ್ಲಿದ್ದ ಗೋವಿಗೆ ಅದನ್ನು ನೀಡಿ ಬಿಡುತ್ತಾಳೆ.

Roopa Gururaj Column: ಶ್ರೀಮದ್‌ ಭಾಗವತದ ಮಹಿಮೆ

-

ಒಂದೊಳ್ಳೆ ಮಾತು

ಪೂರ್ವದಲ್ಲಿ ತುಂಗಾತೀರದಲ್ಲಿ ಒಂದು ಪಟ್ಟಣ. ಅಲ್ಲಿ ವೇದಶಾಸ್ತ್ರ ಪಂಡಿತನಾದ ಆತ್ಮದೇವ ಎನ್ನುವ ಬ್ರಾಹ್ಮಣ ಇದ್ದನು. ಅವನಿಗೆ ಸಂತಾನ ಭಾಗ್ಯವಿರಲಿಲ್ಲ. ಒಮ್ಮೆ ಆ ಊರಿಗೆ ಬಂದ ಯತಿ ಗಳು ಅವನಿಗೆ ಆಶೀರ್ವದಿಸಿ ಒಂದು ಹಣ್ಣನ್ನು ನೀಡುತ್ತಾರೆ. ಇದನ್ನು ಪತ್ನಿಗೆ ಕೊಡು ಎನ್ನುತ್ತಾರೆ. ಆದರೆ ಆತನ ಪತ್ನಿಗೆ ಅದರಲ್ಲಿ ನಂಬಿಕೆ ಇಲ್ಲದ ಕಾರಣ ಕೊಟ್ಟಿಗೆಯಲ್ಲಿದ್ದ ಗೋವಿಗೆ ಅದನ್ನು ನೀಡಿ ಬಿಡುತ್ತಾಳೆ.

ಬ್ರಾಹ್ಮಣ ದೂರ ದೇಶಕ್ಕೆ ಕೆಲಸದ ನಿಮಿತ್ತ ಹೋಗಿದ್ದಾಗ, ಗರ್ಭಿಣಿಯಾಗಿದ್ದ ತನ್ನ ತಂಗಿಯ ಮಗು ವನ್ನೇ ಕೇಳಿ ಪಡೆದು ಗಂಡನನ್ನೂ ಅದೇ ತಮ್ಮ ಮಗುವೆಂದು ನಂಬಿಸುತ್ತಾಳೆ. ಆ ಮಗುವಿಗೆ ದುಂದುಕಾರಿ ಅಂತ ಹೆಸರನ್ನು ಇಡುತ್ತಾರೆ. ಇತ್ತ ಕೊಟ್ಟಿಗೆಯಲ್ಲಿ ಇದ್ದ ಹಸು ಆ ಹಣ್ಣು ತಿಂದು ಒಂದು ಗಂಡು ಮಗುವಿಗೆ ಜನ್ಮ ನೀಡುತ್ತದೆ. ಅದರ ಕಿವಿ ಆಕಳ ಹಾಗೇ ಇದ್ದ ಕಾರಣ ಅವನಿಗೆ ಗೋಕರ್ಣ ಅಂತ ನಾಮಕರಣ ಮಾಡುತ್ತಾರೆ.

ಕಾಲ ಕ್ರಮೇಣ ಇಬ್ಬರು ಬೆಳೆದು, ದೊಡ್ಡವರಾಗಿ ದುಂದುಕಾರಿ ದುಷ್ಟ ಪ್ರವೃತ್ತಿ ಉಳ್ಳವನಾಗಿ ಲೋಕ ಕಂಟಕನಾಗುತ್ತಾನೆ. ಗೋಕರ್ಣ ಒಳ್ಳೆಯ ಪಂಡಿತನಾಗುತ್ತಾನೆ. ತನ್ನ ಮಗನ ದುಷ್ಟ ಕಾರ್ಯಗಳನ್ನು ನೋಡಿ ಮನಸ್ಸು ಬೇಸರವಾಗಿ ಆ ಬ್ರಾಹ್ಮಣ ವಾನಪ್ರಸ್ಥ ಶ್ರಾಮ ಹೋಗಿ ಶ್ರೀ ಮದ್ಭಾಗವತ ದಶಮ ಸ್ಕಂದ ಪಾರಾಯಣ ಮಾಡುತ್ತಾ ದೇಹತ್ಯಾಗ ಮಾಡಿ ಸದ್ಗತಿ ಪಡೆಯುತ್ತಾನೆ.

ಇದನ್ನೂ ಓದಿ: Roopa Gururaj Column: ತಾಯಿಯ ಪ್ರೀತಿ ಅತೀ ಶ್ರೇಷ್ಠವಾದುದು

ಇವನ ದುಷ್ಟ ಕೃತ್ಯ ಗಳನ್ನು ಕಂಡು ಅವನ ತಾಯಿಯು ಸಹ ಪ್ರಾಣತ್ಯಾಗ ಮಾಡುವಳು. ದುಂದು ಕಾರಿ ತನ್ನ ದುಶ್ಚಟಗಳಿಂದಲೇ ಎಲ್ಲ ಕಳೆದುಕೊಂಡು ಸಾವನ್ನಪ್ಪಿ ಪ್ರೇತವಾಗುತ್ತಾನೆ. ಅದರಿಂದ ಬಹಳ ಭಾದಿತನಾಗಿ ತನ್ನ ಮನೆಗೆ ಬಂದು ತನ್ನ ಸಹೋದರ ನಾದ ಗೋಕರ್ಣನ ಮುಂದೆ ಕಾಣಿಸಿ ಕೊಂಡು ಹಿಂದೆ ಮಾಡಿದ ಪಾಪ ಕೃತ್ಯಗಳಿಂದ ಈ ಜನ್ಮ ಬಂದಿದೆ.

ಬಹಳ ಕಷ್ಟವಾಗಿದೆ. ನನಗೆ ಇದರಿಂದ ಮುಕ್ತಿ ಕೊಡಿಸು ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಗೋಕರ್ಣ ‘ನಿನ್ನ ಶ್ರಾದ್ಧ ಕರ್ಮಗಳು ಎಲ್ಲಾ ಮಾಡಿದ್ದೇನೆ. ಗಯಾ ಶ್ರಾದ್ಧ ಸಹ ಆಗಿದೆ. ಆದರು ನಿಮಗೆ ಈ ಜನುಮ ಹೋಗಿಲ್ಲ ಅಂದರೆ ವಿಚಾರ ಮಾಡಿ ಹೇಳುವೆ’ ಅಂತ ಹೇಳಿ ಬಲ್ಲವರನ್ನು ಕೇಳಲು ಎಲ್ಲರು ಸೂರ್ಯ ದೇವನನ್ನ ಎನ್ನುತ್ತಾರೆ.

ಆಗ ಸೂರ್ಯದೇವನ ಕುರಿತು ಗೋಕರ್ಣ ಪ್ರಾರ್ಥನೆ ಮಾಡಿ ‘ನನ್ನ ಅಣ್ಣನ ಪ್ರೇತ ಜನ್ಮ ನಿವಾರಣೆ ಬಗ್ಗೆ ಹೇಳಬೇಕು.. ಅಂತ ಕೇಳಿದಾಗ ಶ್ರೀಮದ್ ಭಾಗವತ ಸಪ್ತಾಹ ಮಾಡಲು ಸೂರ್ಯದೇವನ ಆಜ್ಞೆ ಆಗುತ್ತದೆ. ಅದರಂತೆ ತನ್ನ ಮನೆಯ ಹತ್ತಿರ ತುಂಗಭದ್ರಾ ತೀರದಲ್ಲಿ ಸಪ್ತಾಹ ಮಾಡುತ್ತಾನೆ. ಎಲ್ಲಾ ಜನರು, ಭಾಗವತ ಕೇಳುವುದಕ್ಕೆ ಬರುತ್ತಾರೆ.

ದುಂದುಕಾರಿ ಪ್ರೇತ ಜನ್ಮ ಇದ್ದ ಕಾರಣ ಕೂಡಲು ಆಗದೇ ಗಾಳಿಯ ರೂಪದಲ್ಲಿ ಬಂದು ಅಲ್ಲಿ ಇದ್ದ ಬಿದಿರಿನ ಕೋಲಿನಲ್ಲಿ ಕುಳಿತು ನಿತ್ಯ ಭಾಗವತ ಕೇಳುತ್ತಾ ಇದ್ದ. ಆ ಬಿದಿರಿಗೆ ಏಳು ಗಂಟುಗಳು ಇದ್ದವು. ಒಂದೊಂದು ದಿನ ಭಾಗವತ ಕೇಳಿದಾಗಲೂ ಅದರಲ್ಲಿದ್ದ ಪ್ರತಿ ಗಂಟು ಆ ದಿನ ದೊಡ್ಡ ಶಬ್ದ ಮಾಡಿ ಒಡೆಯುತ್ತಾ ಇತ್ತು. ಏಳನೆಯ ದಿನ ಸಪ್ತಾಹ ಮುಗಿದಾಗ ಏಳನೆಯ ಗಂಟು ಒಡೆದು ತನ್ನ ಪ್ರೇತ ಜನ್ಮವನ್ನು ಕಳೆದುಕೊಂಡು ಸುಂದರವಾದ ದಿವ್ಯ ರೂಪದಿಂದ, ತುಳಸಿ ಮಾಲೆಯನ್ನು ಧರಿಸಿ, ಪೀತಾಂಬರಧಾರಿಯಾಗಿ ಆಭರಣಗಳನ್ನು ಧರಿಸಿದ ದುಂದುಕಾರಿ ಹೊರ ಬಂದು ಎಲ್ಲಾರಿಗೂ ನಮಸ್ಕರಿಸಿ ‘ಶ್ರೀ ಮದ್ಭಾಗವತ ಶ್ರವಣದಿಂದ ನನ್ನ ಎಲ್ಲಾ ಪಾಪಗಳು, ಪ್ರೇತ ಜನ್ಮ ಹೋಯಿತು’ ಅಂತ ಹೇಳಿ ಇದರ ಮಹಿಮೆಯನ್ನು ವರ್ಣಿಸುತ್ತಾನೆ ಮತ್ತು ವಿಷ್ಣು ಲೋಕ ವನ್ನು ಸೇರುತ್ತಾನೆ.

ಈ ರೀತಿ ಶ್ರೀ ಮದ್ಭಾಗವತ ಶ್ರವಣದಿಂದ ಅಜ್ಞಾನದ ಗಂಟು ಒಡೆದು ಹೃದಯದ ಸಂಶಯ ಪರಿಹಾರವಾಗಿ ಸಕಲ ಪಾಪಕರ್ಮಗಳು ಪರಿಹಾರವಾಗಿವ ಹೋಗುತ್ತದೆ ಎನ್ನುತ್ತಾರೆ..ಇದೇ ಶ್ರೀ ಮದ್ಭಾಗವತದ ಮಹಿಮೆ.