ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಲಾಭವಿಲ್ಲದೆ ಯಾರು ಅನಗತ್ಯವಾಗಿ ಸಹಾಯ ಮಾಡುವುದಿಲ್ಲ

ಬೆಕ್ಕು ಬಂದ ನಂತರ ,ಇಲಿ ಸಿಂಹದ ಗುಹೆಯ ಕಡೆ ತಲೆ ಹಾಕಲೇ ಇಲ್ಲ. ಸಿಂಹ ಆರಾಮಾಗಿ ನಿದ್ರೆ ಮಾಡುತ್ತಿತ್ತು. ಅದರ ಕೇಸರಗಳೆಲ್ಲಾ ಪುನಃ ಪುಷ್ಕಳವಾಗಿ ಬೆಳೆಯಿತು. ಈಗ ಸಿಂಹ ಬಹಳ ನಿಶ್ಚಿಂತೆ ಯಿಂದ ನಿದ್ರಿಸುತ್ತಿತ್ತು. ಅಕಸ್ಮಾತಾಗಿ ಎಲ್ಲಾದರೂ ಇಲಿಯ ಕಿಚಿಕಿಚಿ ಶಬ್ದ ಕೇಳಿದ ತಕ್ಷಣ, ಬೆಕ್ಕಿಗೆ, ಅದನ್ನು ಹಿಡಿದು ಸಾಯಿಸು, ಎಂದು ಹೇಳಿ, ಅದಕ್ಕೆ ಇನ್ನಷ್ಟು ಒಳ್ಳೆಯ ಆಹಾರವನ್ನು ಕೊಟ್ಟು ಉಪಚ ರಿಸುತ್ತಿತ್ತು. ಹಾಗಾಗಿ ಬೆಕ್ಕು ದಷ್ಟಪುಷ್ಟವಾಗಿ ಬೆಳೆಯತೊಡಗಿತು.

ಲಾಭವಿಲ್ಲದೆ ಯಾರು ಅನಗತ್ಯವಾಗಿ ಸಹಾಯ ಮಾಡುವುದಿಲ್ಲ

ಒಂದೊಳ್ಳೆ ಮಾತು

rgururaj628@gmail.com

ಒಂದು ಬೆಟ್ಟದ ತಪ್ಪಲಿನಲ್ಲಿ ಮಹಾ ಪರಾಕ್ರಮಿಯಾದ ಸಿಂಹವೊಂದು ವಾಸಿಸುತ್ತಿತ್ತು.ಗುಹೆಯಲ್ಲಿ ಅದು ಗಾಢವಾಗಿ ನಿದ್ದಿಸುತ್ತಿದ್ದಾಗ ಅದರ ಕೇಸರಗಳನ್ನು ಇಲಿಯೊಂದು ಬಂದು ತುಂಡರಿಸಿ ಹಾಕು ತ್ತಿತ್ತು. ಸಿಂಹ ನಿದ್ರೆಯಿಂದ ಎಚ್ಚೆತ್ತು, ತುಂಡಾದ ತನ್ನ ಕೇಸರಗಳನ್ನು ನೋಡಿದಾಗ, ಅದಕ್ಕೆ ವಿಪರೀತವಾಗಿ ಸಿಟ್ಟು ಬರುತ್ತಿತ್ತು. ಇದೆಲ್ಲಾ ಇಲಿಯದೇ ಕೆಲಸವೆಂದು ಅದಕ್ಕೆ ಗೊತ್ತಾಗಿ, ಇಲಿ ಇರುವ ಬಿಲದ ಬಳಿ ಹೋಗಿ ನೋಡಿ ದಾಗ ಎಲ್ಲೂ ಇಲಿಯ ಸುಳಿವೇ ಸಿಗುತ್ತಿರಲಿಲ್ಲ. ಇದೊಂದು ಮಹಾ ಕಿಲಾಡಿ ಇಲಿಯೆಂದು ಸಿಂಹಕ್ಕೆ ಗೊತ್ತಾಯಿತು. ಇದನ್ನು ಹೇಗಾದರೂ ಹಿಡಿಯಲೇ ಬೇಕೆಂದು ಬಹಳವಾಗಿ ಯೋಚಿಸಿತು.

ಆಗ ಅದಕ್ಕೆ ಒಂದು ಉಪಾಯ ಹೊಳೆಯಿತು. ಈ ಇಲಿಯನ್ನು ಹಿಡಿಯಲು ಬೆಕ್ಕೇ ಸರಿ ಎಂದು ಕೊಂಡು, ಬೆಟ್ಟದ ಪಕ್ಕದಲ್ಲಿರುವ ಒಂದು ಹಳ್ಳಿಗೆ ಹೋಗಿ, ಅಲ್ಲಿ ಒಂದು ಬೆಕ್ಕನ್ನು ಭೇಟಿ ಮಾಡಿ, ಅದಕ್ಕೆ ಮಾಂಸದ ಆಸೆ ಹುಟ್ಟಿಸಿ, ಅದನ್ನು ತನ್ನ ಗವಿಯ ಬಳಿಗೆ ಕರೆದು ತಂದಿತು. ಅದಕ್ಕೆ ತನ್ನ ಗುಹೆಯ ಬಳಿಯಲ್ಲಿ ಇರಲು ಅವಕಾಶ ಮಾಡಿಕೊಟ್ಟು, ಅದಕ್ಕೆ ತಿನ್ನಲು ಬೇಕಾದಷ್ಟು ಆಹಾರ ವನ್ನು ಒದಗಿಸಿಕೊಟ್ಟಿತು.

ಬೆಕ್ಕು ಬಂದ ನಂತರ ,ಇಲಿ ಸಿಂಹದ ಗುಹೆಯ ಕಡೆ ತಲೆ ಹಾಕಲೇ ಇಲ್ಲ. ಸಿಂಹ ಆರಾಮಾಗಿ ನಿದ್ರೆ ಮಾಡುತ್ತಿತ್ತು. ಅದರ ಕೇಸರಗಳೆಲ್ಲಾ ಪುನಃ ಪುಷ್ಕಳವಾಗಿ ಬೆಳೆಯಿತು. ಈಗ ಸಿಂಹ ಬಹಳ ನಿಶ್ಚಿಂತೆ ಯಿಂದ ನಿದ್ರಿಸುತ್ತಿತ್ತು. ಅಕಸ್ಮಾತಾಗಿ ಎಲ್ಲಾದರೂ ಇಲಿಯ ಕಿಚಿಕಿಚಿ ಶಬ್ದ ಕೇಳಿದ ತಕ್ಷಣ, ಬೆಕ್ಕಿಗೆ, ಅದನ್ನು ಹಿಡಿದು ಸಾಯಿಸು, ಎಂದು ಹೇಳಿ, ಅದಕ್ಕೆ ಇನ್ನಷ್ಟು ಒಳ್ಳೆಯ ಆಹಾರವನ್ನು ಕೊಟ್ಟು ಉಪಚರಿಸುತ್ತಿತ್ತು. ಹಾಗಾಗಿ ಬೆಕ್ಕು ದಷ್ಟಪುಷ್ಟವಾಗಿ ಬೆಳೆಯತೊಡಗಿತು.

ಇದನ್ನೂ ಓದಿ: Roopa Gururaj Column: ಬಾಲ ಶಂಕರಾಚಾರ್ಯರಿಗೆ ಕಾಳಿಕಾದೇವಿ

ಬೆಕ್ಕಿನ ಹೆದರಿಕೆಯಿಂದ ಇಲಿ ಬಿಲಬಿಟ್ಟು ಹೊರಗೆ ಬರುವುದನ್ನೇ ಕಡಿಮೆ ಮಾಡಿತು. ಬಿಲದಲ್ಲೇ ಕುಳಿತು,ಹಸಿವೆಯಿಂದ ಬಹಳವಾಗಿ ಒದ್ದಾಡತೊಡಗಿತು. ಹಸಿವಿನಿಂದ ಬಳಲಿ,ಉಸಿರು ನಿಂತು ಹೋಗುವಂತೆ ಅದಕ್ಕೆ ಭಾಸವಾಗತೊಡಗಿತು. ಹೊಟ್ಟೆಯ ಹಸಿವು ತಡೆಯಲಾರದೆ, ಹೇಗಾದರೂ ಆಗಲಿ ಎಂದುಕೊಂಡು ಧೈರ್ಯದಿಂದ ಹೊರಗೆ ಬಂದಾಗ, ಬೆಕ್ಕು ಗಬಕ್ಕನೆ ಅದನ್ನು ಹಿಡಿದು ತಿಂದು ಬಿಟ್ಟಿತು.

ಬೆಕ್ಕು ಇಲಿಯನ್ನು ಹಿಡಿದು ತಿಂದಿದ್ದನ್ನು ನೋಡಿ, ಸಿಂಹಕ್ಕೆ ಈಗ ಬಹಳ ನಿರಾಳವಾಯಿತು.ಹೇಗೂ ಇಲಿ ಸತ್ತು ಹೋಯಿತು, ಇನ್ನು ತಾನು ಚಿಂತೆ ಇಲ್ಲದೆ,ಆರಾಮಾಗಿ ನಿದ್ರಿಸಬಹುದು, ತನಗೆ ಇನ್ನು ಬೆಕ್ಕಿನ ಅವಶ್ಯಕತೆ ಇಲ್ಲ ಎಂದುಕೊಂಡು, ಬೆಕ್ಕಿಗೆ ಆಹಾರ ಕೊಡುವುದನ್ನು ನಿಲ್ಲಿಸಿ, ಬೆಕ್ಕಿನ ಕಡೆ ತಿರುಗಿಯೂ ನೋಡದೆ, ಅದನ್ನು ನಿರ್ಲಕ್ಷಿಸತೊಡಗಿತು .ಬೆಕ್ಕು ಹೊಟ್ಟೆ ಹಸಿವಿನಿಂದ ಬಹಳವಾಗಿ ಸೊರಗಿ ಹೋಯಿತು.

ಇನ್ನು ಸಿಂಹಕ್ಕೆ ತನ್ನ ಅವಶ್ಯಕತೆ ಇಲ್ಲ ಎನ್ನುವುದು ಅದಕ್ಕೆ ಅರಿವಾಯಿತು. ಬೇರೆ ದಾರಿ ಕಾಣದೆ, ಮುಖ ಸಪ್ಪಗೆ ಮಾಡಿಕೊಂಡು ಅಲ್ಲಿಂದ ಕಾಲು ಕಿತ್ತಿತು. ಈ ಕಥೆ ನಮ್ಮ ಅನೇಕರಿಗೆ ಜೀವನದಲ್ಲಿ ಅನುಭವಕ್ಕೆ ಕೂಡ ಬಂದಿರುತ್ತದೆ. ಕೆಲವೊಮ್ಮೆ ಕೆಲವರು ನಮಗೆ ಅನಗತ್ಯವಾಗಿ ಸಹಾಯ ಮಾಡು ತ್ತಿರುತ್ತಾರೆ, ನಮ್ಮನ್ನು ಬಹಳ ಮೇಲ್ರಿಸಿ ಮುತುವರ್ಜಿಯಿಂದ ನೋಡಿಕೊಳ್ಳುತ್ತಿರುತ್ತಾರೆ.

ಆಗೆಲ್ಲಾ ನಾವು ಇದು ನಮ್ಮದೇ ವರ್ಚಸ್ಸು ಎಂದು ಮೈಮರೆಯುತ್ತೇವೆ. ಆದರೆ ಸ್ವಲ್ಪ ಜಾಣ್ಮೆ ಯಿಂದ ಗಮನಿಸಿ ನೋಡಿದಾಗ ಅದರ ಹಿಂದೆ ಕಾರಣಗಳು ಬೇರೆಯೇ ಇರುತ್ತದೆ. ಅವರ ಅನುಕೂಲ ಕ್ಕಾಗಿ ನಮ್ಮಿಂದ ಮತ್ತಾವುದೋ ಕೆಲಸವನ್ನು ಮಾಡಿಸಿಕೊಳ್ಳಲು ಅವರು ನಮಗೆ ಮನೆ ಹಾಕು ತ್ತಿರುತ್ತಾರೆ. ಇದು ಬಹಳ ಕಾಲ ನಡೆಯುವುದಿಲ್ಲ. ಅವರ ಕೆಲಸ ಮುಗಿದ ಕೂಡಲೇ ಅವರ ಧೋರಣೆ ಗಳು ಕೂಡ ಬದಲಾಗುತ್ತದೆ. ಯಾರೂ ಹೆಚ್ಚು ಕಾಲ ನಾಟಕ ಮಾಡಲು ಸಾಧ್ಯವಿಲ್ಲ. ಜೀವನದಲ್ಲಿ ಶಾರ್ಟ್ ಕಟ್ ಗಳಿರುವುದಿಲ್ಲ.

ಹಾಗಾಗಿ ಚಿಕ್ಕ ಸಮಯದಲ್ಲಿ ಯಾರಾದರೂ ಬಹಳ ಆತ್ಮೀಯರಾದರೆ ನಮಗೆ ಬಹಳ ಸಹಾಯ ಮಾಡುತ್ತಿದ್ದರೆ, ನಮಗೆ ಲಾಭ ಮಾಡಿ ಕೊಡುವ ಬಗ್ಗೆ ಮಾತನಾಡುತ್ತಿದ್ದರೆ, ಎಚ್ಚರದಿಂದಿರಿ. ಇಲ್ಲದಿದ್ದರೆ ನಮ್ಮನ್ನು ಟಿಶ್ಯೂ ಪೇಪರ್ ನಂತೆ ಬಳಸಿ ಬಿಸಾಕುತ್ತಾರೆ.