ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Avinash GR

Senior Digital Content Editor

raamsuta@gmail.com

ಅವಿನಾಶ್‌ ಜಿ ಆರ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯವನ್ನು ಪಡೆದುಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ 2 ವರ್ಷ ಸಿನಿಮಾ ವರದಿಗಾರನಾಗಿ, 4 ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. ʻವಿಜಯ ಕರ್ನಾಟಕʼ ವೆಬ್‌ನಲ್ಲಿ 6 ವರ್ಷ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ‌ʻಸೀನಿಯರ್ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ʼ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನಗಳು, ಸಿನಿಮಾ ವಿಮರ್ಶೆಗಳು, ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆ, ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ರಾಜಕೀಯ, ಪ್ರವಾಸ, ಓದು ಇವರ ಆಸಕ್ತಿಗಳಾಗಿವೆ. ಪ್ರಸ್ತುತ ʻವಿಶ್ವವಾಣಿʼ ಡಿಜಿಟಲ್‌ನಲ್ಲಿ ʻಸೀನಿಯರ್‌ ಡಿಜಿಟಲ್‌ ಕಂಟೆಂಟ್‌ ಎಡಿಟರ್‌ʼ ಆಗಿ ಕೆಲಸ ಮಾಡುತ್ತಿದ್ದಾರೆ.

Articles
ರಜನಿಕಾಂತ್‌ ವಾಸ ಮಾಡ್ತಿರುವ ಏರಿಯಾದಲ್ಲೇ ಐಷಾರಾಮಿ ಮನೆ ಖರೀದಿಸಿದ ನಟಿ ನಯನತಾರಾ; ಇದರ ಬೆಲೆ ಎಷ್ಟು ಗೊತ್ತಾ?

ಚೆನ್ನೈನ ಅತ್ಯಂತ ದುಬಾರಿ ಏರಿಯಾದಲ್ಲಿ ಐಷಾರಾಮಿ ಮನೆ ಖರೀಸಿದಿ ನಟಿ ನಯನತಾರಾ

Nayanthara's New Luxury Home: ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಚೆನ್ನೈನ ಅತ್ಯಂತ ಹೈ-ಪ್ರೊಫೈಲ್ ಏರಿಯಾವಾದ ಪೊಯೆಸ್‌ ಗಾರ್ಡನ್‌ನಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು ಖರೀದಿ ಮಾಡಿದ್ದಾರೆ. 'ಲೆಗಸಿ' ವಸತಿ ಸಂಕೀರ್ಣದ 4 ಮತ್ತು 5ನೇ ಮಹಡಿಯಲ್ಲಿ ಈ ಮನೆ ಇದೆ.

ರಶ್ಮಿಕಾ ಮಂದಣ್ಣ ಶೇರ್‌ ಮಾಡಿದ ರಿಸೆಪ್ಷನ್‌ ವಿಡಿಯೋದಲ್ಲಿ ‌ʻಕನ್ನಡʼ ಹಾಡು; ಕೊಡವ ಸಂಪ್ರದಾಯ ಮರೆಯದ ನ್ಯಾಷನಲ್‌ ಕ್ರಶ್‌ಗೆ ಫ್ಯಾನ್ಸ್‌ ಮೆಚ್ಚುಗೆ

rashmika mandanna wedding reception video

Rashmika Mandanna Vijay Deverakonda Wedding Reception: ನಟಿ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಅದ್ದೂರಿ ಆರತಕ್ಷತೆಯ ವಿಡಿಯೋಗೆ ಇತ್ತೀಚೆಗೆ ವೈರಲ್ ಆಗಿರುವ ಪುರಂದರ ದಾಸರ 'ತುಳಸಿ' ದಾಸಪದವನ್ನು ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರು ಧರಿಸಿದ್ದ ಮೈಸೂರು ಸಿಲ್ಕ್ ಸೀರೆಯ ಬ್ಲೌಸ್ ಮೇಲೆ ಕೊಡವರ ಸಾಂಪ್ರದಾಯಿಕ 'ಕತ್ತಿ'ಯ ವಿನ್ಯಾಸವಿದ್ದು, ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದ ಅವರಿಗೆ ಕನ್ನಡಿಗರು ಭೇಷ್ ಎಂದಿದ್ದಾರೆ.

ತೆಲುಗು ನಿರ್ದೇಶಕನಿಗೆ ಗ್ರೀನ್‌ ಸಿಗ್ನಲ್‌ ಕೊಡ್ತಾರಾ ಹೃತಿಕ್‌ ರೋಷನ್?‌ ‌ʻಹೊಂಬಾಳೆ ಫಿಲ್ಮ್ಸ್‌ʼ ಜೊತೆ ಸಿನಿಮಾ ಮಾಡೋದ್ಯಾವಾಗ?

ತೆಲುಗು ನಿರ್ದೇಶಕನ ಜತೆ ಹೃತಿಕ್ ಹೈ-ವೋಲ್ಟೇಜ್ ಆಕ್ಷನ್ ಚಿತ್ರ! ಯಾವಾಗ ಶುರು?

Hrithik Roshan Upcoming Movies: ನಟ ಹೃತಿಕ್ ರೋಷನ್ ಅವರು ತೆಲುಗಿನ ಖ್ಯಾತ ನಿರ್ದೇಶಕ ಬಾಬಿ ಕೊಲ್ಲಿ ಅವರ ಹೊಸ ಕಥೆಗೆ ಮಾರುಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೃತಿಕ್ ಅವರಿಗೆ ಸ್ಕ್ರಿಪ್ಟ್ ವಿವರಿಸಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ಸ್ಕ್ರಿಪ್ಟ್‌ ರೈಟರ್‌ ಕೋನಾ ವೆಂಕಟ್ ತಿಳಿಸಿದ್ದಾರೆ.

ಒಂದೇ ಸಾಂಗ್‌ನಲ್ಲಿ ಸಾವಿರ ನೃತ್ಯಗಾರರ ಡ್ಯಾನ್ಸ್‌; 'ನಾಗಬಂಧಂ' ಚಿತ್ರದ 'ನಮೋ ರೇ' ಹಾಡಿನ ಮೂಲಕ ಸೃಷ್ಟಿಯಾಯ್ತು ಹೊಸ ದಾಖಲೆ

ಹಾಡಿನ ಮೂಲಕವೇ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ 'ನಾಗಬಂಧಂ' ಸಿನಿಮಾ

Nagabandham Song Record: ಅಭಿಷೇಕ್ ನಾಮಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ನಾಗಬಂಧಂ' ಈಗ ತನ್ನ 'ನಮೋ ರೇ' ಹಾಡಿನ ಮೂಲಕ ಗಮನ ಸೆಳೆಯುತ್ತಿದೆ. ಈ ಒಂದು ಹಾಡಿನಲ್ಲಿ ಬರೋಬ್ಬರಿ 1 ಸಾವಿರ ನೃತ್ಯಗಾರರನ್ನು ಬಳಸಿಕೊಳ್ಳುವ ಮೂಲಕ ಚಿತ್ರತಂಡ ಹೊಸ ದಾಖಲೆ ಬರೆದಿದೆ.

ಅಬ್ಬಬ್ಬಾ! ಅದ್ಧೂರಿಯಾಗಿ ನಡೆದ ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ ಮದುವೆಗೆ ಖರ್ಚಾದ ಹಣ ಇಷ್ಟೊಂದಾ?

ರಶ್ಮಿಕಾ-ವಿಜಯ್ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಇದು ದುಬಾರಿ ಕಲ್ಯಾಣ!

Virosh Wedding Expenses: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವವು ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ಅತ್ಯಂತ ವೈಭವೋಪೇತವಾಗಿ ನಡೆದಿದೆ. ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಈ ಮದುವೆಗೆ ಮತ್ತು ದೇಶಾದ್ಯಂತ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಗೆ ದುಬಾರಿ ಮೊತ್ತವೇ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

Rani Serial: ಜೈಲಿನ ಗೋಡೆಗಳ ನಡುವೆ ಅರಳುವ ಅಮ್ಮ-ಮಗಳ ಬಾಂಧವ್ಯದ ಕಥೆ; ಕಿರುತೆರೆ ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡಲು ಬರ್ತಿದ್ದಾಳೆ 'ರಾಣಿ'

ಕಲರ್ಸ್‌ ಕನ್ನಡದಲ್ಲಿ ಮಾ.9 ರಿಂದ ಶುರುವಾಗಲಿದೆ ಹೊಸ ಧಾರಾವಾಹಿ 'ರಾಣಿ'

Rani Serial Launch: ಕಲರ್ಸ್‌ ಕನ್ನಡ ವಾಹಿನಿಯು ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ 'ರಾಣಿ' ಎಂಬ ಹೊಸ ಮೆಗಾ ಧಾರಾವಾಹಿಯನ್ನು ಪ್ರಸಾರ ಮಾಡಲಿದೆ. ಇದು ವಿಧಿಯಾಟದಿಂದ ಜೈಲಿನಲ್ಲಿ ಹುಟ್ಟಿದ ಮಗು ಮತ್ತು ಆಕೆಯ ತಾಯಿಯ ನಡುವಿನ ನಿಷ್ಕಲ್ಮಶ ಪ್ರೀತಿಯ ಕಥೆಯನ್ನ ಒಳಗೊಂಡಿದೆ.

Photos: ರಶ್ಮಿಕಾ-ವಿಜಯ್ ದೇವರಕೊಂಡ ವೆಡ್ಡಿಂಗ್ ರಿಸೆಪ್ಷನ್; ಹೈದರಾಬಾದ್‌ನಲ್ಲಿ ನಡೆದ ಈ ಕಲರ್‌ಫುಲ್‌ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು?

Photos: ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದ ʻವಿರೋಶ್‌ʼ ಮದುವೆ ಆರತಕ್ಷತೆ

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ( Vijay Deverakonda) ದಂಪತಿಯ ವಿವಾಹ ಆರತಕ್ಷತೆ (wedding reception ) ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ತೆಲುಗು ಚಿತ್ರರಂಗದ ತಾರೆಯರಾದ ಚಿರಂಜೀವಿ, ನಾಗಾರ್ಜುನ, ಅಲ್ಲು ಅರ್ಜುನ್, ರಾಮ್ ಚರಣ್, ಶ್ರೀಲೀಲಾ, ಕರಣ್ ಜೋಹರ್, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕೂಡ ಈ ಆರತಕ್ಷತೆಗೆ ಆಗಮಿಸಿ, ನವಜೋಡಿಗೆ ಹಾರೈಸಿದ್ದಾರೆ. ಸ್ಯಾಂಡಲ್‌ವುಡ್‌ ನಟಿಯರಾದ ಆಶಿಕಾ ರಂಗನಾಥ್‌, ಶ್ರೀಲೀಲಾ, ಅನುಷಾ ರೈ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಈ ಕಲರ್‌ಫುಲ್‌ ಸಮಾರಂಭದ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.

'ಕೃಷ್ಣ ರುಕ್ಕು' ಸೀರಿಯಲ್‌ಗೆ ನಾಯಕಿಯಾದ ಮೌನ ಗುಡ್ಡೆಮನೆ; ಮತ್ತೆ ಕಿರುತೆರೆಗೆ ಮರಳಿದ ಎಸ್. ನಾರಾಯಣ್

ʻರುಕ್ಕುʼ ಪಾತ್ರದಲ್ಲಿ ಮೌನ ಗುಡ್ಡೆಮನೆ ಮಿಂಚಿಂಗ್; ಬರ್ತಿದೆ ಹೊಸ ಧಾರಾವಾಹಿ

Krishna Rukku New Serial: ಕಿರುತೆರೆಯ ನಂ.1 ವಾಹಿನಿ ಜೀ ಕನ್ನಡವು ಮಾರ್ಚ್ 9 ರಿಂದ ಸಂಜೆ 6:30ಕ್ಕೆ 'ಕೃಷ್ಣ ರುಕ್ಕು' ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲಿದೆ. ಅಣ್ಣನ ಅಗಲಿಕೆಯ ನಂತರ ಕುಟುಂಬದ ಜವಾಬ್ದಾರಿ ಹೊತ್ತ ರುಕ್ಕು ಎಂಬ ಧೈರ್ಯವಂತ ಹುಡುಗಿಯ ಕಥೆ ಇದಾಗಿದೆ.

Toxic: ಯಶ್‌ ತೆಗೆದುಕೊಂಡ ಒಂದು ನಿರ್ಧಾರದಿಂದ ಚಿತ್ರರಂಗದ ಲೆಕ್ಕಾಚಾರಗಳೇ ಬುಡಮೇಲು! ಪವನ್‌ ಕಲ್ಯಾಣ್‌ ಸಿನಿಮಾ ರಿಲೀಸ್‌ ಡೇಟ್‌ ಕೂಡ ಚೇಂಜ್!‌

ಯಶ್ ನಿರ್ಧಾರದಿಂದ ಸಂಚಲನ; ‌ʻಟಾಕ್ಸಿಕ್ʼ ಜಾಗಕ್ಕೆ ʻಉಸ್ತಾದ್‌ ಭಗತ್‌ ಸಿಂಗ್ʼ

Toxic Effect on Film Releases: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಲ್ಪಟ್ಟಿದ್ದು, ಮಾರ್ಚ್ 19ರಂದು ಸಿಕ್ಕಿರುವ ಖಾಲಿ ಜಾಗವನ್ನು ಬಳಸಿಕೊಳ್ಳಲು ಟಾಲಿವುಡ್‌ನ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಸಜ್ಜಾಗಿದ್ದಾರೆ.

ಶಿವಮೊಗ್ಗದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಸಮಂತಾ ಹೊಸ ಸಿನಿಮಾ ಶೂಟಿಂಗ್;‌ ಮಲೆನಾಡ ಬಿಸಿಲು ಕಂಡು ʻಬೇಸಿಗೆ ಶುರುವಾಯ್ತುʼ ಎಂದ ಸ್ಯಾಮ್!‌

ಶಿವಮೊಗ್ಗದಲ್ಲಿ ಮಾ ಇಂಟಿ ಬಂಗಾರಂ ಶೂಟಿಂಗ್; ಸೆಟ್‌ನಲ್ಲಿ ಹೋಳಿ ಆಡಿದ ಸಮಂತಾ

Samantha in Shivamogga: ನಟಿ ಸಮಂತಾ ರುತ್ ಪ್ರಭು ಅಭಿನಯಸಿ, ನಿರ್ಮಾಣ ಮಾಡುತ್ತಿರುವ 'ಮಾ ಇಂಟಿ ಬಂಗಾರಂ' ಸಿನಿಮಾದ ಚಿತ್ರೀಕರಣ ಸದ್ಯ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ. ಈ ಶೂಟಿಂಗ್‌ ಸೆಟ್‌ನಲ್ಲಿಯೇ ಚಿತ್ರತಂಡ ಹೋಳಿ ಹಬ್ಬವನ್ನು ಆಚರಿಸಿಕೊಂಡಿದೆ.

ಪತ್ನಿ ಸಂಗೀತಾಗೆ 250 ಕೋಟಿ ರೂ. ಜೀವನಾಂಶ ಕೊಟ್ಟು ಸೆಟ್ಲ್‌ಮೆಂಟ್‌ ಮಾಡ್ಕೊಳ್ಳೋಕೆ ರೆಡಿಯಾದ್ರಾ ‌ʻದಳಪತಿʼ ವಿಜಯ್? ಏನಿದು ಹೊಸ ವಿಷ್ಯ?

ಚುನಾವಣೆಗೂ ಮುನ್ನ ವಿಚ್ಛೇದನ ಕೇಸ್ ಮುಗಿಸಲು ವಿಜಯ್ ಮಾಸ್ಟರ್ ಪ್ಲಾನ್!

ತಮಿಳು ನಟ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದು ಗೊತ್ತೇ ಇದೆ. ಸದ್ಯ ಸಂಗೀತಾಗೆ ಸಿಗುವ ಜೀವನಾಂಶದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ವಿಜಯ್‌ ಅವರು ಪತ್ನಿಗೆ 250 ಕೋಟಿ ರೂ. ಜೀವನಾಂಶ ನೀಡಿ, ಕೋರ್ಟ್‌ನ ಆಚೆಗೆ ಈ ಕೇಸ್‌ ಅನ್ನು ಇತ್ಯರ್ಥ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರಂತೆ.

ಲಂಡನ್ ಮೂಲದ ಸಂಗೀತಾ ಜೊತೆಗೆ ನಟ ವಿಜಯ್‌ ಮದುವೆ ಫಿಕ್ಸ್‌ ಆಗಿದ್ದೇಗೆ? ಅಸಲಿ ವಿಚಾರವನ್ನ ಬಾಯಿಬಿಟ್ಟಿದ್ದ ʻದಳಪತಿʼ

ಲಂಡನ್ ಮೂಲದ ಸಂಗೀತಾ ಜೊತೆ ʻದಳಪತಿʼ ವಿಜಯ್ ಮದುವೆ ಫಿಕ್ಸ್ ಆಗಿದ್ದೇಗೆ?

Vijay-Sangeetha Marriage Story: ದಳಪತಿ ವಿಜಯ್ ಮತ್ತು ಸಂಗೀತಾ ಅವರ ಮದುವೆಯನ್ನು ವಿಜಯ್ ತಂದೆ ಎಸ್.‌ ಎ. ಚಂದ್ರಶೇಖರ್ ಅವರೇ ನಿಶ್ಚಯಿಸಿದ್ದರು. ಸಂಗೀತಾ ಅವರ ಓದು ಮತ್ತು ಸಂಸ್ಕಾರ ಮೆಚ್ಚಿದ್ದ ವಿಜಯ್ ಪೋಷಕರು, ಮಗನನ್ನು ಲಂಡನ್‌ಗೆ ಕಳುಹಿಸಿ ಮದುವೆಗೆ ಒಪ್ಪಿಸಿದ್ದರು. ಈ ಬಗ್ಗೆ ವಿಜಯ್‌ ಹಲವು ವರ್ಷಗಳ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Yash's Toxic Postponed: 3 ತಿಂಗಳಿಗೆ 3 ಬಿಗ್‌ ಸಿನಿಮಾಗಳು ರಿಲೀಸ್;‌ ಭರ್ಜರಿ ಪ್ಲ್ಯಾನ್‌ ಜೊತೆ ಅಖಾಡಕ್ಕಿಳಿದ ಕನ್ನಡದ ಕೆವಿಎನ್‌ ಪ್ರೊಡಕ್ಷನ್ಸ್‌!

KVN ಪ್ರೊಡಕ್ಷನ್ಸ್ ಗೇಮ್ ಪ್ಲಾನ್; 3 ತಿಂಗಳಲ್ಲಿ 3 ಬಿಗ್‌ ಸಿನಿಮಾಗಳ ಅಬ್ಬರ!

KVN Productions Strategy: 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಿಕೆಯಾಗಿರುವುದು ಯಶ್ ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮಾತ್ರ ಭರ್ಜರಿ ಪ್ಲಾನ್‌ನೊಂದಿಗೆ ಅಖಾಡಕ್ಕಿಳಿದಿದೆ. 3 ತಿಂಗಳಿಗೆ 3 ಚಿತ್ರಗಳನ್ನು ಬ್ಯಾಕ್-ಟು-ಬ್ಯಾಕ್ ರಿಲೀಸ್ ಮಾಡಲು ಸಂಸ್ಥೆ ಸಜ್ಜಾಗಿದೆ.

ಲಕ್ಷ್ಮೀ ನಿವಾಸ, ಶಾಂಭವಿ ಸೀರಿಯಲ್‌ಗಳಿಂದ ನಟಿ ಮಾನಸಾ ಮನೋಹರ್‌ ಹೊರಬಂದಿದ್ದೇಕೆ?‌ ಇಲ್ಲಿದೆ ಅಸಲಿ ಕಾರಣ

ಶಾಂಭವಿ - ಲಕ್ಷ್ಮೀ ನಿವಾಸ ಧಾರಾವಾಹಿಗಳಿಗೆ ಮಾನಸಾ ಗುಡ್‌ಬೈ ಹೇಳಿದ್ದೇಕೆ?

Manasa Manohar: ಜೀ ಕನ್ನಡದ 'ಲಕ್ಷ್ಮೀ ನಿವಾಸ' ಮತ್ತು 'ಶಾಂಭವಿ' ಧಾರಾವಾಹಿಗಳಲ್ಲಿ ಮನೆಮಾತಾಗಿದ್ದ ನಟಿ ಮಾನಸಾ ಮನೋಹರ್ ಅವರು ಆ ಸೀರಿಯಲ್‌ಗಳಿಂದ ಈಗ ಹೊರಬಂದಿದ್ದಾರೆ. ಪ್ರಸ್ತುತ ತುಂಬು ಗರ್ಭಿಣಿಯಾಗಿರುವ ಮಾನಸಾ, ತಮ್ಮ ಆರೋಗ್ಯ ಮತ್ತು ಮಗುವಿನ ಹಿತದೃಷ್ಟಿಯಿಂದ ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದಾರೆ.

Yash: 'ಟಾಕ್ಸಿಕ್' ಜಾಗಕ್ಕೆ 'ಲವ್ ಮಾಕ್‌ಟೇಲ್ 3' ಎಂಟ್ರಿ; ಯುಗಾದಿ ರಜೆಗಳ ಮೇಲೆ ಕಣ್ಣಿಟ್ಟ ʻಡಾರ್ಲಿಂಗ್ʼ ಕೃಷ್ಣ!

Darling Krishna: 'ಟಾಕ್ಸಿಕ್' ಜಾಗಕ್ಕೆ 'ಲವ್ ಮಾಕ್‌ಟೇಲ್ 3' ಎಂಟ್ರಿ!

Love Mocktail 3 Release: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಲ್ಪಟ್ಟ ಕಾರಣ, ಮಾರ್ಚ್ 19ರ ಯುಗಾದಿ ರಜೆಯ ಲಾಭ ಪಡೆಯಲು ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ. 'ಲವ್ ಮಾಕ್‌ಟೇಲ್ 3' ಚಿತ್ರವನ್ನು ಅದೇ ದಿನಾಂಕದಂದು ಬಿಡುಗಡೆ ಮಾಡಲು ವಿತರಣಾ ಜವಾಬ್ದಾರಿ ಹೊತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಮುಂದಾಗಿದೆ.

Toxic: ಜೂನ್‌ ತಿಂಗಳಿನಲ್ಲಿ ಕೆವಿಎನ್‌ ಪ್ರೊಡಕ್ಷನ್ಸ್‌ಗೆ ಎದುರಾಗಲಿದೆಯಾ ದೊಡ್ಡ ಚಾಲೆಂಜ್? ಇದು ಸಾವಿರಾರು ಕೋಟಿ ಮ್ಯಾಟರ್!‌

KVN ಪ್ರೊಡಕ್ಷನ್ಸ್‌ಗೆ ಜೂನ್ 'ಅಗ್ನಿಪರೀಕ್ಷೆ'; ಒಂದೇ ತಿಂಗಳಲ್ಲಿ 2 ಸಿನಿಮಾ?

Yash's Toxic Postponed: ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಏಕಕಾಲಕ್ಕೆ ಎರಡು ಬೃಹತ್ ಸಿನಿಮಾಗಳ ಬಿಡುಗಡೆಯ ಜವಾಬ್ದಾರಿ ಹೊತ್ತಿದೆ. ಯಶ್ ಅಭಿನಯದ 'ಟಾಕ್ಸಿಕ್' ಜೂನ್ 4 ರಂದು ಬಿಡುಗಡೆಯಾಗುವುದು ಖಚಿತವಾಗಿದೆ. ಅತ್ತ, ಮುಂದೂಡಲ್ಪಟ್ಟಿರುವ ದಳಪತಿ ವಿಜಯ್ ಅವರ 'ಜನ ನಾಯಗನ್' ಕೂಡ ಜೂನ್‌ನಲ್ಲೇ ತೆರೆಕಾಣುವ ಸಾಧ್ಯತೆ ಇದೆ.

Yash's Toxic Postponed: ʻಧುರಂಧರ್‌ 2ʼ ಚಿತ್ರಕ್ಕೆ ಸುಗಮವಾಯ್ತು ಹಾದಿ, ಬಾಕ್ಸ್‌ ಆಫೀಸ್‌ನಲ್ಲಿ ರಣವೀರ್‌ ಸಿಂಗ್ ಅಬ್ಬರ ಗ್ಯಾರಂಟಿ!

Dhurandhar 2: ಯಶ್ ಫ್ಯಾನ್ಸ್‌ಗೆ ನಿರಾಸೆ, ರಣವೀರ್‌ಗೆ ಜಾಕ್‌ಪಾಟ್!

Yash Toxic Postponed: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕವನ್ನು ಮಾ.19 ರಿಂದ ಜೂನ್ 4ಕ್ಕೆ ಮುಂದೂಡಲಾಗಿದೆ. ಮಧ್ಯಪ್ರಾಚ್ಯದ ಅನಿಶ್ಚಿತತೆಯ ಕಾರಣ ನೀಡಿರುವ ಚಿತ್ರತಂಡದ ಈ ನಿರ್ಧಾರದಿಂದಾಗಿ, ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಎದುರಾಳಿಗಳೇ ಇಲ್ಲದಂತಾಗಿದೆ.

Majestic 2 Movie: ಪಾತ್ರಕ್ಕಾಗಿ ಹಿಡನ್ ಕ್ಯಾಮೆರಾ ಇಟ್ಕೊಂಡು ಮೆಜೆಸ್ಟಿಕ್‌ನಲ್ಲಿ ರಾತ್ರಿ ಕಳೆದ ನಟಿ ಸಂಹಿತಾ ವಿನ್ಯಾ!

ಪಾತ್ರಕ್ಕಾಗಿ ಇಡೀ ರಾತ್ರಿ ಮೆಜೆಸ್ಟಿಕ್‌ನಲ್ಲಿ ಒಬ್ಬರೇ ಓಡಾಡಿದ ನಟಿ ಸಂಹಿತಾ‌

Majestic 2 Movie Update: ನಟಿ ಸಂಹಿತಾ ವಿನ್ಯಾ ಸದ್ಯ 'ಮೆಜೆಸ್ಟಿಕ್ 2' ಚಿತ್ರಕ್ಕಾಗಿ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಹಳ್ಳಿಯಿಂದ ಬಂದ ಗಾರ್ಮೆಂಟ್ಸ್ ಹುಡುಗಿಯ ಪಾತ್ರ ಮಾಡುತ್ತಿರುವ ಅವರು, ನೈಜತೆಗಾಗಿ ಮೆಜೆಸ್ಟಿಕ್ ಏರಿಯಾದಲ್ಲಿ ಹಿಡನ್ ಕ್ಯಾಮೆರಾ ಹಿಡಿದು ರಾತ್ರಿಪೂರ ಓಡಾಡಿ ಅಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ್ದಾರಂತೆ.

ʻದಿ ಕೇರಳ ಸ್ಟೋರಿ 2ʼ ಸಿನಿಮಾದ ಕಲೆಕ್ಷನ್‌ನಲ್ಲಿ ಮತ್ತೆ ಇಳಿಕೆ; ಅಂದುಕೊಂಡಷ್ಟು ಆಗುತ್ತಿಲ್ಲ ಗಳಿಕೆ!

ಹೇಗಿದೆ 'ದಿ ಕೇರಳ ಸ್ಟೋರಿ 2' ಕಲೆಕ್ಷನ್‌? 4 ದಿನಗಳಲ್ಲಿ ಆದ ಗಳಿಕೆ ಎಷ್ಟು?

The Kerala Story 2 Box Office: ವಿವಾದ ಮತ್ತು ಕಾನೂನು ಹೋರಾಟಗಳ ನಂತರ ಫೆಬ್ರವರಿ 27 ರಂದು ತೆರೆಕಂಡ 'ದಿ ಕೇರಳ ಸ್ಟೋರಿ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದೆ. ಮೊದಲ 4 ದಿನಗಳಲ್ಲಿ ಈ ಚಿತ್ರವು ಕೇವಲ 12.80 ಕೋಟಿ ರೂ. ಗಳಿಕೆಯನ್ನಷ್ಟೇ ಮಾಡಿದೆ.

ʻನೀನಾದೆ ನಾʼ ಸೀರಿಯಲ್ ನಟಿ ರಮಿಕಾ ಶಿವುಗೆ ಸಿಕ್ತು ಸೂಪರ್‌ ಚಾನ್ಸ್; ‌ʻಶ್ರೀರಸ್ತು ಶುಭಮಸ್ತು‌ʼ ಹೀರೋ ಶ್ರೀ ಮಹದೇವ್‌ ಹೊಸ ಸಿನಿಮಾಕ್ಕೆ ನಾಯಕಿ

ಶ್ರೀ ಮಹದೇವ್-ರಮಿಕಾ ಶಿವು ಜೋಡಿಯ ಹೊಸ ಸಿನಿಮಾ 'ಪ್ರೇಮದ ಊರಲಿ'

Premada Oorali Update: 'ಅಕ್ಷಿ' ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ಮನೋಜ್ ಕುಮಾರ್ ಈಗ 'ಪ್ರೇಮದ ಊರಲಿ' ಎಂಬ ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ವಾಪಸಾಗಿದ್ದಾರೆ. ಶ್ರೀ ಮಹದೇವ್ ಮತ್ತು ರಮಿಕಾ ಶಿವು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಹೊಸ ರೂಪದಲ್ಲಿ ಮತ್ತೆ ಬರಲಿದೆ ʻಭೀಮಾ ತೀರದಲ್ಲಿʼ; ತೆಲುಗಿಗೆ ʻಕಡಪʼ ಹೆಸರಿನಲ್ಲಿ ಡಬ್‌ ಆಯ್ತು ʻದುನಿಯಾʼ ವಿಜಯ್‌ ಸಿನಿಮಾ

ತೆಲುಗಿಗೆ 'ಕಡಪ' ಹೆಸರಿನಲ್ಲಿ ಡಬ್ ಆದ 'ಭೀಮಾ ತೀರದಲ್ಲಿ'; ಮಾ.6ಕ್ಕೆ ರಿಲೀಸ್

Bheema Theeradalli Re-Release: ದುನಿಯಾ ವಿಜಯ್ ಅಭಿನಯದ 'ಭೀಮಾ ತೀರದಲ್ಲಿ' ಚಿತ್ರ 14 ವರ್ಷಗಳ ನಂತರ ಹೊಸ ರೂಪದಲ್ಲಿ ತೆರೆಗೆ ಬರಲಿದೆ. ನಿರ್ಮಾಪಕ ಅಣಜಿ ನಾಗರಾಜ್ ಅವರು ಈ ಚಿತ್ರವನ್ನು ನೆಗೆಟಿವ್‌ನಿಂದ ಡಿಜಿಟಲ್ ರೂಪಕ್ಕೆ ತಂದು, ಸ್ವಲ್ಪ ಟ್ರಿಮ್ ಮಾಡಿ ಮಾರ್ಚ್ 6ರಂದು ಬಿಡುಗಡೆ ಮಾಡುತ್ತಿದ್ದಾರೆ.

ʻಕೆಲವರ ಈ ವರ್ತನೆ ಅಸಭ್ಯ, ಅವಮಾನಕಾರಿಯಾಗಿದೆʼ; ಪಾಪರಾಜಿಗಳ ಮೇಲೆ ರೊಚ್ಚಿಗೆದ್ದ ನಟಿ ಸಪ್ತಮಿ ಗೌಡ, ಸಾಥ್‌ ನೀಡಿದ ಸ್ಯಾಂಡಲ್‌ವುಡ್‌!

ಪಾಪರಾಜಿಗಳ ವರ್ತನೆಗೆ ಸಪ್ತಮಿ ಗರಂ; 'ನಮ್ ಕಲೆ ನೋಡಿ, ದೇಹವನ್ನಲ್ಲ' ಎಂದ ನಟಿ

Sapthami Gowda Voice Against Paparazzi: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರ ದೇಹದ ಭಾಗಗಳನ್ನು ಉದ್ದೇಶಪೂರ್ವಕವಾಗಿ ಜೂಮ್ ಮಾಡಿ ವಿಡಿಯೋ ಚಿತ್ರೀಕರಿಸುವ ಪಾಪರಾಜಿಗಳ ವಿರುದ್ಧ ನಟಿ ಸಪ್ತಮಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಅವರ ಬೆಂಬಲಕ್ಕೆ ನಟಿಯರಾದ ರಮ್ಯಾ, ರಕ್ಷಿತಾ ಪ್ರೇಮ್ ಮುಂತಾದವರು ನಿಂತಿದ್ದಾರೆ.

ViRosh: ಹುಟ್ಟೂರಿನ ಶಾಲಾ ಮಕ್ಕಳಿಗೆ ಸ್ಕಾಲರ್‌ಶಿಪ್‌ ಘೋಷಣೆ ಮಾಡಿದ ವಿಜಯ್‌ ದೇವರಕೊಂಡ; ಇದು ವಿರೋಶ್‌ ವೆಡ್ಡಿಂಗ್‌ ಗಿಫ್ಟ್‌

44 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿದ ವಿಜಯ್ ದೇವರಕೊಂಡ

Vijay Deverakonda Scholarship News: ತಮ್ಮ ಹುಟ್ಟೂರು ತುಮ್ಮನಪೇಟೆಯಲ್ಲಿ ಹೊಸ ಫಾರ್ಮ್‌ಹೌಸ್‌ನ ಗೃಹಪ್ರವೇಶ ನೆರವೇರಿಸಿದ ನಟ ವಿಜಯ್ ದೇವರಕೊಂಡ, ಇದೇ ಸಂದರ್ಭದಲ್ಲಿ ಸರ್ಕಾರಿ ಮಕ್ಕಳಿಗೆ ವಿಶೇಷ ಗಿಫ್ಟ್ ಘೋಷಿಸಿದ್ದಾರೆ. 'ದೇವರಕೊಂಡ ಚಾರಿಟಬಲ್ ಟ್ರಸ್ಟ್' ಮೂಲಕ ಅಚ್ಚಂಪೇಟೆ ವಿಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿವೇತನ' ನೀಡುವುದಾಗಿ ತಿಳಿಸಿದ್ದಾರೆ.

'ವಿರೋಶ್' ಸಂಗೀತ್ ಸಂಭ್ರಮದ ಫೋಟೋಗಳು ವೈರಲ್; ‌ʻಆ ರಾತ್ರಿ ನಮಗೆ ಮರೆಯಲಾಗದ ಮೋಜಿನ ಕ್ಷಣʼ ಎಂದ ರಶ್ಮಿಕಾ ಮಂದಣ್ಣ

ಸಂಗೀತ್‌ ಪಾರ್ಟಿಯಲ್ಲಿ ರಾತ್ರಿಯಿಡೀ ಕುಣಿದು ಕುಪ್ಪಳಿಸಿದ ವಿಜಯ್ - ರಶ್ಮಿಕಾ

ನಟ ವಿಜಯ್‌ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಫೆ.26ರಂದು ದಾಂಪತ್ಯ ಬದುಕಿಗೆ ಕಾಲಿಟ್ಟರು. ಸದ್ಯ ಅವರು ಆರತಕ್ಷತೆಯ ತಯಾರಿಯಲ್ಲಿ ಇದ್ದಾರೆ. ಈ ನಡುವೆ ಅವರ ಸಂಗೀತ್‌ ಸಮಾರಂಭದ ಫೋಟೋಗಳು ವೈರಲ್‌ ಆಗಿವೆ. ಆ ಫೋಟೋಗಳನ್ನು ಹಂಚಿಕೊಂಡಿರುವ ವಿರೋಶ್‌ ಜೋಡಿಯ ಶೇರ್‌ ಮಾಡಿಕೊಂಡಿದೆ. ನಟಿ ರಶ್ಮಿಕಾ, "ಆ ರಾತ್ರಿ ಪ್ರೀತಿ, ಆನಂದಬಾಷ್ಪ, ನಗು, ಸಂಗೀತ, ಹಾಡು ಮತ್ತು ಮಿಂಚಿನ ಓಕುಳಿಯಿಂದ ತುಂಬಿತ್ತು. ನಾವು ರಾತ್ರಿಯಿಡೀ ಕುಣಿದು ಕುಪ್ಪಳಿಸಿದೆವು. ನಿಜವಾಗಿಯೂ ಅದು ನಮ್ಮ ಜೀವನದ ಅತ್ಯಂತ ಮೋಜಿನ ರಾತ್ರಿಯಾಗಿತ್ತು!! ವಿಜ್ಜು (ವಿಜಯ್) ಮತ್ತು ನಾನು ಪರಸ್ಪರ ಅಚ್ಚರಿ ನೀಡಬೇಕೆಂದುಕೊಂಡಿದ್ದೆವು.. ಅಲ್ಲಿಂದ ಹಿಡಿದು, ನಮ್ಮ ಕುಟುಂಬದವರು ನಮಗೆ ಸರ್‌ಪ್ರೈಸ್ ನೀಡಲು ಬಯಸಿದ್ದು.. ನಮ್ಮ ಕುಟುಂಬದವರೆಲ್ಲರೂ ಅಷ್ಟು ಮುಕ್ತವಾಗಿ ಮತ್ತು ಅದ್ಭುತವಾಗಿ ನೃತ್ಯ ಮಾಡುವುದನ್ನು ನೋಡಿ ನಮಗಾದ ಆ ಸಂಭ್ರಮ ಮತ್ತು ಆಶ್ಚರ್ಯ ಅಷ್ಟಿಷ್ಟಲ್ಲ" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಕಲರ್‌ಫುಲ್‌ ಫೋಟೋಗಳು.

Loading...