ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?
ಇಂತಿಪ್ಪ ಶಿವಕುಮಾರ್, 2023ರ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದ ರಿಂದಲೇ, ಎರಡೂವರೆ ವರ್ಷಗಳ ಹಿಂದೆ ವಾಗ್ದಾನ ಮಾಡಿದಂತೆ, ‘ನನ್ನ ಕೆಲಸಕ್ಕೆ ನ್ಯಾಯ ಕೊಡಿ, ವಚನಭ್ರಷ್ಟರಾಗಬೇಡಿ. ನಮ್ಮ ಸಮುದಾಯ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗ ಬೇಡಿ’ ಎಂದು ದಿಲ್ಲಿ ದೊರೆಗಳ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ, ತಮ್ಮ ಪಟ್ಟಾಭಿಷೇಕದ ಸಮಯ ನಿಗದಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.