ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು
ಮನುಷ್ಯನಿಗೆ ಒಂದು ‘ಪರಮಮಿತಿ’ ಎಂಬುದಿದೆ. ಉದಾಹರಣೆಗೆ ಮನುಷ್ಯ ಹೆಚ್ಚೆಂದರೆ ಎಷ್ಟು ಭಾರ ಎತ್ತಬಹುದು? ಗ್ರೆಗ್ ಅರ್ನ್ಸ್‌ಟ್ ಎನ್ನುವ ಕೆನೆಡಿಯನ್ 24 ಕ್ವಿಂಟಲ್ ಎತ್ತಿದ್ದ. ಅದು 1993ರಲ್ಲಿ. ಆ ದಾಖಲೆಯನ್ನು ಇಂದಿಗೂ, ಯಾರಿಗೂ ಮುರಿಯಲಾಗಿಲ್ಲ. ವೇಗದ ಓಟ ಎಂದರೆ- ಹೆಚ್ಚೆಂದರೆ ಉಸೇನ್ ಬೋಲ್ಟನಷ್ಟು. ಉಸೇನ್ ಬೋಲ್ಟ್ ನ ನೂರು ಮೀಟರ್ ಓಟದ ದಾಖಲೆ 9.58 ಸೆಕೆಂಡ್. ಹಿಂದಿನ ದಾಖಲೆಯೂ ಅವನದೇ- 9.63 ಸೆಕೆಂಡ್. ಇಲ್ಲಿನ ಎರಡು ದಾಖಲೆಯ ಸಮಯದ ಅಂತರ ನೋಡಿ. 0.18 ಸೆಕೆಂಡ್- ಅಷ್ಟರಲ್ಲಿ ಉಸೇನ್ ಬೋಲ್ಟ್ ಕ್ರಮಿಸಿದ್ದು 1.87 ಮೀಟರ್! ಆತ ಅಷ್ಟು ವೇಗದಲ್ಲಿ ಓಡಿದ್ದು 2009ರಲ್ಲಿ. ಅದಾಗಿ ಒಂದೂ ವರೆ ದಶಕವೇ ಕಳೆದಿದೆ.