ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿದ್ದು ಮೇಲೆ ಎಚ್‌ಡಿಕೆಗೆ ದಿಢೀರ್ ಪ್ರೀತಿ, ಬಿಜೆಪಿಗೆ ಭೀತಿ, ಸರಕಾರಕ್ಕೆ ತನಿಖೆ ಇಕ್ಕಟ್ಟು: ಸ್ಟಿಂಗ್‌ ಆಪರೇಷನ್ ಅಪಾಯದ ರಿಂಗ್‌ನಲ್ಲಿ ಕಾಂಗ್ರೆಸ್

ರಾಜ್ಯ ರಾಜಕಾರಣ ಮೇಲ್ನೋಟಕ್ಕೆ ನಿಂತ ನೀರಂತೆ ಕಂಡರೂ ನಾಲ್ಕು ದಿನಗಳಿಂದ ಮಾಧ್ಯಮ ಗಳಲ್ಲಿ ತೇಲಿ ಬಂದಿರುವ ಸ್ಟಿಂಗ್ ಆಪರೇಷನ್ ಕಾವಿನಿಂದ ಕಾದು ಕುದಿಯುಂತಾಗಿದೆ. ಇದೀಗ ಅದು ಎಲ್ಲ ಹಂತವನ್ನೂ ಮೀರಿ ಆಡಳಿತ ಮತ್ತು ಪ್ರತಿಪಕ್ಷಗಳ ಒಳ ರಾಜಕಾರಣವನ್ನು ಹೊಕ್ಕಿ ಅಲ್ಲಿಯೂ ಅನೇಕ ಸಂಗತಿಗಳು ಸ್ಫೋಟಗೊಳ್ಳುವಂತಾಗಿದೆ.

ಸ್ಟಿಂಗ್‌ ಆಪರೇಷನ್ ಅಪಾಯದ ರಿಂಗ್‌ನಲ್ಲಿ ಕಾಂಗ್ರೆಸ್

-

Profile
Ashok Nayak Oct 13, 2026 9:22 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ‌

ರಾಜ್ಯದ ಮಾಧ್ಯಮಗಳಲ್ಲಿ ಒಣ ಹವೆಯಂತೆ ತೇಲಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕಾರಣದ ತಾಪಮಾನವನ್ನೇ ಅಡಿಸಿದೆ. ಯುವತಿಯೊಬ್ಬಳ ಜತೆ ಮಾತನಾಡುತ್ತಿರುವ ವಿಡಿಯೊ ತುಣುಕಿನ ಸ್ಟಿಂಗ್ ಆಪರೇಷನ್ ಎನ್ನುವ ಸುದ್ದಿಯೊಂದಕ್ಕೆ ತಲೆ, ಬಾಲ ಇಲ್ಲದೆ ಅಸ್ಪಷ್ಟ ವಾಗಿದ್ದರೂ ಅದರಿಂದಾದ ತಲ್ಲಣ ಅಪಾರ.

ರಾಜ್ಯ ರಾಜಕಾರಣ ಮೇಲ್ನೋಟಕ್ಕೆ ನಿಂತ ನೀರಂತೆ ಕಂಡರೂ ನಾಲ್ಕು ದಿನಗಳಿಂದ ಮಾಧ್ಯಮ ಗಳಲ್ಲಿ ತೇಲಿ ಬಂದಿರುವ ಸ್ಟಿಂಗ್ ಆಪರೇಷನ್ ಕಾವಿನಿಂದ ಕಾದು ಕುದಿಯುಂತಾಗಿದೆ. ಇದೀಗ ಅದು ಎಲ್ಲ ಹಂತವನ್ನೂ ಮೀರಿ ಆಡಳಿತ ಮತ್ತು ಪ್ರತಿಪಕ್ಷಗಳ ಒಳ ರಾಜಕಾರಣವನ್ನು ಹೊಕ್ಕಿ ಅಲ್ಲಿಯೂ ಅನೇಕ ಸಂಗತಿಗಳು ಸ್ಫೋಟಗೊಳ್ಳುವಂತಾಗಿದೆ. ಅಂದರೆ ಸಂಪುಟದ ಐವರು ಸಚಿವರ ಮೇಲೆಯೂ ಸ್ಟಿಂಗ್ ಆಪರೇಷನ್ ನಡೆದಿದೆ ಎನ್ನಲಾಗಿದ್ದು, ಎಲ್ಲ ಸಚಿವರು ಎಚ್ಚರ ದಿಂದಿರಬೇಕೆಂದು ಮಖ್ಯಮಂತ್ರಿ ಅವರಿಂದಲೇ ಎಚ್ಚರಿಕೆ ಸಂದೇಶ ರವಾನೆಯಾಗಿ ರುವುದರಿಂದ ರಾಜಕೀಯ ನಾಯಕರ ಪರಸ್ಪರ, ಅನುಮಾನದಿಂದ ನೋಡುವಂತಾಗಿದೆ.

ಆದರೂ ಆ ಸ್ಪಿಂಗ್ ವಿಡಿಯೊದ ಬಗ್ಗೆ ಯಾವುದೇ ರಾಜಕೀಯ ನಾಯಕರು ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಬದಲಾಗಿ ಇದನ್ನು ತನಿಖೆ ಮಾಡಬೇಕೆಂದಷ್ಟೇ ಹೇಳುತ್ತಿದೆ. ಹೆಚ್ಚುತ್ತಿರುವ ಒತ್ತಡ ಮತ್ತು ಮುಜುಗರ ಗಮನಸಿದರೆ ಸರಕಾರ ಶೀಘ್ರವೇ ಈ ಬಗ್ಗೆ ತನಿಖೆ ನಡೆಸುವ ನಿರ್ಧಾರಕ್ಕೆ ಬರುವ ಸಾಧ್ಯತೆ ಕಾಣುತ್ತಿದೆ. ಏಕೆಂದರೆ ಈ ವಿಚಾರದಲ್ಲಿ ಸರಕಾರ ಒಂದು ರೀತಿ ಇಕ್ಕಟ್ಟು ಅನುಭವಿಸುತ್ತಿದೆ. ಅಂದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುವುದಕ್ಕೂ ಆಗುತ್ತಿಲ್ಲ. ಇಲ್ಲವೇ ತೀರಾ ನಿರ್ಲಕ್ಷ್ಯ ಮಾಡಿ ಎಲ್ಲವನ್ನು ಅಲ್ಲಗಳೆಯುವ ಸ್ಥಿತಿಯಲ್ಲೂ ಇಲ್ಲ.

ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 11: ರಾಜ ಪ್ರದ್ಯುಮ್ನನ ಆಸ್ಥಾನದಲ್ಲಿ ನಡೆದ ಬ್ರಹ್ಮಹತ್ಯೆಯ ದೋಷ

ಆಡಳಿತ ಪಕ್ಷದ ನಾಯಕರು, ಪ್ರತಿಪಕ್ಷ ನಾಯಕರು ಸೇರಿದಂತೆ ಎಲ್ಲರೂ ಈ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯಿಸುತ್ತಿzರೆ. ಅಷ್ಟೇ ಏಕೆ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದು ತನಿಖೆಯಾದರೆ ಒಳ್ಳೆಯದು ಎನ್ನುವ ರೀತಿ ಮಾತನಾಡಿzರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತ್ರ ಸ್ಟಿಂಗ್ ಆಪರೇಷನ್ ಅನ್ನು ಸಾರ್ವಜನಿಕ ವಾಗಿ ಪ್ರತಿದಿನ eಪಿಸುತ್ತಾ ಸರಕಾರದ, ಆಡಳಿತದ ಮುಖ್ಯಸ್ಥರು ಮತ್ತು ಆಡಳಿತದಿಂದ ಹೊರ ಗುಳಿದ ಅಸಮಾಧಾನಿತ ನಾಯಕರನ್ನು ಕೆಣಕುತ್ತಿದ್ದಾರೆ. ಈ ಮೂಲಕ ಇದರ ಗರಿಷ್ಠ ಲಾಭ ಪಡೆಯಲು ಅವರು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಬಗ್ಗೆ ದಿನದಿನಕ್ಕೂ ಪ್ರೀತಿಯ ಮಾತುಗಳನ್ನು ಉದುರಿಸಲಾರಂಭಿಸಿzರೆ. ಮೂರು ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಅವರಿಲ್ಲ ದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಇರುತ್ತಿಲ್ಲ ಎಂದು ಬರೀ ಕಾಂಗ್ರೆಸ್ ನವರು ಮಾತ್ರವಲ್ಲ, ಬಿಜೆಪಿ ಯವರೂ ಹುಬ್ಬೇರಿಸುವಂತೆ ಮಾಡಿದ್ದರು. ಈಗ ಇನ್ನೂ ಮುಂದೆ ಹೋಗಿ ಸಿದ್ದರಾಮಯ್ಯ ಅವರ ವಿಚಾರವಾಗಿ ತಾವೇ ಪ್ರಶ್ನೆಗಳನ್ನು ಹಾಕಿ, ಉತ್ತರವನ್ನೂ ನೀಡಿದ್ದಾರೆ.

ಅಂದರೆ, ಸಿದ್ದರಾಮಯ್ಯ ಅವರ ಬಗ್ಗೆ ಈಗ ಕುಮಾರಸ್ವಾಮಿಗೆ ಏಕೆ ತುಂಬಾ ಪ್ರೀತಿ ಬಂದಿದೆ ಎಂದು ಕೇಳುತ್ತಿದ್ದೀರಾ. ಹೌದು. ಸ್ವಾಮಿ, ಅವರ ನಮಗೆ ಮೇಲೆ ಪ್ರೀತಿ ಇರುತ್ತದೆ. ಅವರು ನಮ್ಮ ಪಕ್ಷದಲ್ಲಿ ಇದ್ದವರು. ಅವರನ್ನು ನಿಮ್ಮ ಪಕ್ಷಕ್ಕೆ ಕರೆದುಕೊಂಡು ಹೋಗಿ ಚೆನ್ನಾಗಿ ದುಡಿಸಿಕೊಂಡು ಕೆಳಗೆ ಇಳಿಸಿದ ನಂತರ ಈಗ ಇಂಥ ಕೆಟ್ಟ ವಾತಾವರಣ ನಿರ್ಮಾಣ ಆಗುವಂತೆ ಮಾಡಿದ್ದೀರ ಇದು ಸರಿಯಾ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ. ಆದರೆ ಸ್ಟಿಂಗ್ ಬಳಸಿಕೊಳ್ಳುವ ವಿಚಾರ ದಲ್ಲಿ ಬಿಜೆಪಿ ನಿರ್ಲಕ್ಷ್ಯ ತೋರುತ್ತಿರುವುದು ಗೋಚರವಾಗುತ್ತಿದ್ದು, ಇದು ಜೆಡಿಎಸ್‌ಗೆ ಲಾಭವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಹೀಗಾಗಿ ಒಂದು ಕಡೆ ಸ್ಪಿಂಗ್ ವಿಚಾರ ಅನುಮಾನಗಳ ಹುತ್ತ ಸ್ಫೋಟಿಸಿ ಕುದಿಯುವಂತೆ ಮಾಡಿದ್ದರೆ, ಮತ್ತೊಂದು ಕಡೆ ಜೆಡಿಎಸ್ ನಾಯಕರಲ್ಲಿ ಉಕ್ಕಿಸಿ ಸಿದ್ದರಾಮಯ್ಯ ಪ್ರೀತಿಯ ಬಗ್ಗೆ ಹತ್ತಹಲವು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ಹಾಗೆ ಅವರ ಮುಂದಿನ ನಡೆ ಬಗ್ಗೆ ಕೂಡ ಅನೇಕ ನಿರೀಕ್ಷೆಗಳು ಮೂಡುವಂತೆ ಎನ್ನುತ್ತಾರೆ ಕಾಂಗ್ರೆಸ್ ಹಿರಿಯ ಸಚಿವರು. ಈ ಮಧ್ಯೆ, ಸ್ಟಿಂಗ್ ಆಪರೇಷನ್ ವಿಚಾರ ಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆಯೂ ಇದ್ದು, ಇದಕ್ಕೂ ಮುನ್ನವೇ ಸರಕಾರ ತನಿಖೆ ಮಾಡುವ ನಿರ್ಧಾರ ಪ್ರಕಟಿಸುವ ಸಂಭವ ಕಾಣುತ್ತಿದೆ.

ಸ್ಟಿಂಗ್ ಅಪಾಯ ತರುವ ಸಾಧ್ಯತೆ

ಸ್ಟಿಂಗ್ ಆಪರೇಷನ್ ಎನ್ನಲಾಗುವ ವಿಡಿಯೊಗಳು ತುಣುಕು ಸರಣಿಯಲ್ಲಿ ಬರುತ್ತಿರುವುದರಿಂದ ಇದರ ಬಗ್ಗೆ ಯಾವುದೇ ರಾಜಕೀಯ ನಾಯಕರಿಗೂ ಸ್ಪಷ್ಟತೆ ಸಿಗುತ್ತಿಲ್ಲ. ಹೀಗಾಗಿ ಪ್ರತಿಪಕ್ಷಗಳು ಕೂಡ ಇದರ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲಾಗದೆ ಬರೀ ತನಿಖೆಗಷ್ಟೇ ಒತ್ತಾಯಿಸುತ್ತಿವೆ. ಸ್ಟಿಂಗ್ ನಡೆಸಿದ ಖಾಸಗಿ ಸಂಸ್ಥೆ ಹಾಗೂ ಅದರ ಸಮಯ, ಉದ್ದೇಶದ ಬಗ್ಗೆ ಸಾರ್ವಜನಿಕವಾಗಿ ಅಥವಾ ಸರಕಾರಕ್ಕೆ ಸೂಕ್ತ ಮಾಹಿತಿಗಳು ಲಭ್ಯವಾಗುವವರೆಗೂ ತನಿಖೆ ಆಗುವ ಸಾಧ್ಯತೆ ಕಡಿಮೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೂ ಸಚಿವರ ಸ್ಟಿಂಗ್ ನಡೆದಿರುವ ಬಗ್ಗೆ ಮುಖ್ಯಮಂತ್ರಿ ಅವರೇ ಎಚ್ಚರಿ ಸಿರುವುದರಿಂದ ಬಹುತೇಕ ಎಲ್ಲ ಸಚಿವರೂ ಅದೇ ಗುಂಗಿ ನಲ್ಲಿ ಗಾಬರಿಗೊಂಡಿದ್ದಾರೆ. ಸ್ಟಿಂಗ್ ವಿಚಾರ ಈಗಾಗಲೇ ಸರಕಾರಕ್ಕೆ ಮುಜುಗರ ತರುವಂತದ್ದು, ಇದನ್ನು ಅಲಕ್ಷ್ಯ ಮಾಡಿದಷ್ಟೂ ಅಪಾಯ ಎನ್ನುವ ಮಾಹಿತಿಯೂ ಇದೆ.

ಅವರಿಗೇಕೆ ಪ್ರೀತಿ, ಬಿಜೆಪಿಗೆ ಏಕೆ ಭೀತಿ?

ಇತ್ತೀಚೆಗೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಬಗ್ಗೆ ನೀಡುತ್ತಿರುವ ಪ್ರೀತಿಯ ಹೇಳಿಕೆಗಳು ಕಾಂಗ್ರೆಸ್ ನಾಯಕರನ್ನು ಸಿಟ್ಟಿಗೆಬ್ಬಿಸಿದ್ದರೆ, ಬಿಜೆಪಿಯವರಿಗೆ ನಿzಗೆಡುವಂತೆ ಮಾಡಿದೆ ಎನ್ನಲಾಗಿದೆ. ಕುಮಾರಸ್ವಾಮಿ ಅವರಿಗಿರುವ ಸಿದ್ದರಾಮಯ್ಯ ಪ್ರೀತಿಯ ಹಿಂದೆ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಸಂದೇಶ ಸಾರುವುದು ಒಂದು ಕಡೆಯಾಗಿದೆ ಎನ್ನಲಾಗಿದೆ.

ಮತ್ತೊಂದು ಕಡೆ ಸಿದ್ದರಾಮಯ್ಯ ಅವರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್ ಪರ ಒಲವು ಬರುವಂತೆ ಮಾಡುವುದಾಗಿದೆ ಎಂದು ಹೇಳಲಾಗಿದೆ. ಅದರಲ್ಲೂ ಮುಂಬರುವ ಜಿ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯ ಇದರ ಪ್ರಯೋಗ ಸಾಧ್ಯವೇ ಎನ್ನುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಒಂದು ವೇಳೆ ಹೀಗಾನಾದರೂ ನಡೆದಿದ್ದೇ ಆದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ತಮ್ಮ ಜತೆ ಇರುವುದೇ ಎನ್ನುವ ಭೀತಿ ಬಿಜೆಪಿಯ ಕೆಲವು ನಾಯಕರದ್ದಾಗಿದೆ ಎಂದು ಬಿಜೆಪಿಯ ಕೆಲವು ಶಾಸಕರು ತಿಳಿಸಿದ್ದಾರೆ.