ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭೂ ಒತ್ತುವರಿ ತೆರವು, ಬದ್ಧತೆ ಮೆರೆದ ಡಾ.ಪ್ರತಿಭಾ

ಜಮೀನು ಒತ್ತುವರಿ ತೆರವು ಸಂಬಂಧ ಪ್ರಕರಣ ದಾಖಲಿಸುವುದು ಕೇವಲ ನಾಲ್ಕು ದಿನ ಮಾತ್ರ. ನಂತರ ಎಲ್ಲವೂ ಮೌನ ವಾಗಲಿದೆ ಎಂದು ಲಘುವಾಗಿ ಮಾತನಾಡಿದವರೇ ಹೆಚ್ಚು. ಆದರೆ ಈಗ ಹಾಗೆ ಮಾತನಾಡಿದವರೆಲ್ಲರೂ ಅಚ್ಚರಿಪಡುವ ರೀತಿ ಸರಕಾರಿ ಜಮೀನು ಅತಿಕ್ರಮಣ ಮಾಡುವವರಲ್ಲಿ ನಡುಕ ಹುಟ್ಟಿಸಿ ಯಾರ ಟೀಕೆಗೂ ಅಥವಾ ಹೊಗಳಿಕೆಗೂ ಲಕ್ಷ್ಯ ನೀಡದೆ ಒತ್ತುವರಿ ತೆರವನ್ನು ಅತ್ಯಂತ ಧೈರ್ಯದಿಂದ ನಡೆಸುತ್ತಿದ್ದಾರೆ

ಭೂ ಒತ್ತುವರಿ ತೆರವು, ಬದ್ಧತೆ ಮೆರೆದ ಡಾ.ಪ್ರತಿಭಾ

-

Profile
Ashok Nayak Aug 15, 2026 1:16 PM

ರಮೇಶ್ ಹೆಗಡೆ ಗುಂಡೂಮನೆ, ಸಾಗರ

ತಾಲೂಕು ಆಡಳಿತದ ಜವಾಬ್ದಾರಿ ಹೊತ್ತು ಹೊಸದಾಗಿ ಬಂದಾಗ ಅನೇಕ ಅಧಿಕಾರಿಗಳು ತಾವು ಖಡಕ್ ಎಂದು ತೋರಿಸಿಕೊಳ್ಳುವ ಇರಾದೆಯಿಂದ ಒಂದಷ್ಟು ಸರಕಾರದ ಪರ ಮತ್ತು ಜನಪರ ಕಾರ್ಯ ಮಾಡುವುದು ಸಹಜ. ಇದು ಕೆಲ ದಿನಗಳ ನಂತರ ಎಲ್ಲರಂತೆ ಮಾಮೂಲು ಎನ್ನುವ ಸ್ಥಿತಿಗೆ ಬರುವವರೇ ಹೆಚ್ಚು. ಆದರೆ ಕೆಲ ತಿಂಗಳುಗಳ ಹಿಂದೆ ಸಾಗರ ತಾಲೂಕಿಗೆ ತಹಸೀಲ್ದಾರ್ ಆಗಿ ಬಂದ ಡಾ. ಆರ್.ಪ್ರತಿಭಾ ಮಾತ್ರ ಸ್ವಲ್ಪ ಭಿನ್ನವಾಗಿ ತಮ್ಮ ಪ್ರಾಮಾಣಿಕತೆಯ ಕಾರ್ಯಾಸಕ್ತಿ ಮೂಲಕ ಒಳ್ಳೆಯ ಅಧಿಕಾರಿ ಎಂದು ಪ್ರಶಂಸೆ ಪಡೆಯುತ್ತಿದ್ದಾರೆ.

ಸಾಗರದಲ್ಲಿ ಅಧಿಕಾರಿಗಳು ಹೆಸರು ಮಾಡುವುದು ಸುಲಭ ಸಾಧ್ಯವಲ್ಲ. ಅದರಲ್ಲಿಯೂ ಕಂದಾಯ ಇಲಾಖೆ ಎಂದರೆ ಒಂದು ತರ ಬೆಂಕಿ ಇದ್ದ ಹಾಗೆ ಆದರೆ ಆ ಎಲ್ಲ ಅರಿವು ಹೊಂದಿಯೇ ನಿರ್ಧಾಕ್ಷಿಣ್ಯ ವಾಗಿ ಅಕ್ರಮದ ವಿರುದ್ದ ಅಬ್ಬರಿಸುತ್ತಿರುವ ಪ್ರತಿಭಾ ಅವರ ಕಾರ್ಯ ವೈಖರಿ ವಿಶೇಷ.

ಇದನ್ನೂ ಓದಿ: Shimoga Airport: ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಅದರಲ್ಲಿಯೂ ಜಮೀನು ಒತ್ತುವರಿ ತೆರವು ಸಂಬಂಧ ಪ್ರಕರಣ ದಾಖಲಿಸುವುದು ಕೇವಲ ನಾಲ್ಕು ದಿನ ಮಾತ್ರ. ನಂತರ ಎಲ್ಲವೂ ಮೌನ ವಾಗಲಿದೆ ಎಂದು ಲಘುವಾಗಿ ಮಾತನಾಡಿದವರೇ ಹೆಚ್ಚು. ಆದರೆ ಈಗ ಹಾಗೆ ಮಾತನಾಡಿದವರೆಲ್ಲರೂ ಅಚ್ಚರಿಪಡುವ ರೀತಿ ಸರಕಾರಿ ಜಮೀನು ಅತಿಕ್ರಮಣ ಮಾಡುವವರಲ್ಲಿ ನಡುಕ ಹುಟ್ಟಿಸಿ ಯಾರ ಟೀಕೆಗೂ ಅಥವಾ ಹೊಗಳಿಕೆಗೂ ಲಕ್ಷ್ಯ ನೀಡದೆ ಒತ್ತುವರಿ ತೆರವನ್ನು ಅತ್ಯಂತ ಧೈರ್ಯದಿಂದ ನಡೆಸುತ್ತಿದ್ದಾರೆ.

ಇತ್ತೀಚೆಗೆ ಹಲವು ಒತ್ತಡಗಳ ನಡುವೆಯೂ ಅಕ್ರಮ ಗಣಿಗಾರಿಕೆಯ ಮೇಲೆ ದಾಳಿ ನಡೆಸಿದ್ದ ಅವರು ಅಕ್ರಮ ಒತ್ತುವರಿಯ ವಿರುದ್ದವೂ ವಿರಮಿಸದೆ ಕಾರ್ಯ ಮಾಡುತ್ತಲೇ ಇದ್ದಾರೆ. ಗುರುವಾರ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಭಾನುಕುಳಿ ಗ್ರಾಮದ 44ನೇ ಸರ್ವೇ ನಂಬರ್ ನ ಜಮೀನಿನ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸರಕಾರಿ ಜಮೀನಿನ ಒತ್ತುವರಿ ಎಂದಿದ್ದರೂ ದಕ್ಕುವುದಿಲ್ಲ ಎಂಬ ರೀತಿಯ ಸಂದೇಶ ನೀಡಿದ್ದಾರೆ. ಅಲ್ಲದೆ ಒತ್ತುವರಿ ತೆರವುಗೊಳಿಸಿದ ಪ್ರದೇಶ ದಲ್ಲಿ ಅತಿಕ್ರಮಣ ನಿಷೇಧಿಸಿದೆ ಎಂಬ ಫಲಕ ಕೂಡ ಹಾಕಿದ್ದಾರೆ. ಮುಂದೆ ಎಲ್ಲಿಯೇ ಒತ್ತುವರಿ ಮಾಡಿದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಸಾಗರ ತಾಲೂಕಿಗೆ ಈ ರೀತಿಯ ತಹಸೀಲ್ದಾರ್ ಬೇಕಿತ್ತು ಎಂದವರೂ ಇದ್ದಾರೆ. ಹಾಗೇ ಇನ್ನೂ ಟೀಕಿಸುವವರೂ ಇದ್ದಾರೆ. ಆದರೆ ಸರಕಾರಿ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸಿ ದಿಟ್ಟತನ ಮೆರೆದಿದ್ದಾರೆ. ಅವರ ಈ ಜನಪರ ನಿಲುವಿನ ದಿಟ್ಟ ಕಾರ್ಯ ಹೀಗೆ ಮುಂದುವರಿಯಲಿ..