ಫುಟ್ʼಪಾತ್ ಪಾರ್ಕಿಂಗ್ ಹೆಚ್ಚಳ
ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದರೆ ಸಾವಿರ ರುಪಾಯಿ ದಂಡ ವಿಧಿಸಲು ಅವಕಾಶವಿದೆ. ಇದೇ ರೀತಿ ಮುಂದುವರೆದರೆ ವಾಹನವನ್ನು ಟೋಯಿಂಗ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಇನ್ನು ವಾಹನವನ್ನು ಸಂಚರಿಸಿದರೆ, ಸಾವಿರ ರುಪಾಯಿ ದಂಡದೊಂದಿಗೆ, ಪುನಾರಾವರ್ತನೆ ಮಾಡಿದರೆ ನ್ಯಾಯಾಲಯದ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದು ಮಾಡುವುದಕ್ಕೂ ಅವಕಾಶ ನೀಡಲಾಗಿದೆ.
-
ಅಪರ್ಣಾ ಎ.ಎಸ್. ಬೆಂಗಳೂರು
ಪಾದಚಾರಿ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚಳ
೨ ವರ್ಷದಲ್ಲಿ 15000 ಕೇಸ್ ಫುಟ್‌ಪಾತ್ ಪಾರ್ಕಿಂಗ್ ಹೆಚ್ಚಳ
ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನ ನಿಲ್ದಾಣದ್ದೇ ಬಹುದೊಡ್ಡ ತಲೆನೋವಾಗಿದೆ. ಪಾರ್ಕಿಂಗ್‌ಗೆ ಜಾಗ ಸಿಗದೇ, ಪಾದಚಾರಿ ಮಾರ್ಗ ದಲ್ಲಿಯೇ ವಾಹನ ನಿಲ್ದಾಣ ಮಾಡುತ್ತಿರುವವರ ವಿರುದ್ಧ ಕಳೆದ ಎರಡು ವರ್ಷದಲ್ಲಿ ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿರುವುದು ಇದೀಗ ಬಹಿರಂಗವಾಗಿದೆ.
ಸಾರ್ವಜನಿಕರು ನಡೆದುಕೊಂಡು ಹೋಗಲು ಅನುಕೂಲವಾಗಲು ಪಾದಚಾರಿ ಮಾರ್ಗವನ್ನು ಮೀಸಲಿಡಲಾಗಿದೆ. ಆದರೆ ಸಂಚಾರ ದಟ್ಟನೆಯಿಂದ ತಪ್ಪಿಸಿಕೊಂಡು ಹೋಗಲು ಹಾಗೂ ಪಾರ್ಕಿಂಗ್ ಜಾಗ ಸಿಗದೇ ಪಾದಚಾರಿ ಮಾರ್ಗದ ಮೇಲೆಯೇ ವಾಹನ ಓಡಿಸುವುದು ಪಾದಚಾರಿಗಳಿಗೆ ಸಮಸ್ಯೆಯಾಗುತ್ತದೆ.
ಇದರೊಂದಿಗೆ ಹಲವು ಬಾರಿ ಇದರಿಂದಲೇ ಅಪಘಾತಗಳು ಸಂಭವಿಸಿರುವ ಘಟನೆಗಳಿವೆ. ಆದ್ದರಿಂದ ಕಳೆದ ಎರಡು ವರ್ಷದಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿರು ವವರಿಗೆ ಬಿಎನ್‌ಎಸ್ ಕಾಯಿದೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಕೇಸ್ʼಗಳನ್ನು ದಾಖಲಿಸಿದ್ದರೆ, ವಾಹನ ಸಂಚರಿಸಿರುವ ವಿರುದ್ಧ 31 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...
ವಾಹನ ನಿಲುಗಡೆಗೆ ಸಾವಿರ ರು.ದಂಡ: ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದರೆ ಸಾವಿರ ರುಪಾಯಿ ದಂಡ ವಿಧಿಸಲು ಅವಕಾಶವಿದೆ. ಇದೇ ರೀತಿ ಮುಂದುವರೆದರೆ ವಾಹನವನ್ನು ಟೋಯಿಂಗ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಇನ್ನು ವಾಹನವನ್ನು ಸಂಚರಿಸಿದರೆ, ಸಾವಿರ ರುಪಾಯಿ ದಂಡದೊಂದಿಗೆ, ಪುನಾರವರ್ತಿತನೆ ಮಾಡಿದರೆ ನ್ಯಾಯಾಲಯದ ಮೂಲಕ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದು ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ವರ್ಷದಿಂದ ವರ್ಷಕ್ಕೆ ವಾಹನ ಸಂಚಾರ ಹಾಗೂ ನಿಲುಗಡೆ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ,
ಅಪಘಾತ ನಿಯಂತ್ರಣ ಕ್ರಮ
ಈ ನಡುವೆ ಪಾದಚಾರಿಗಳ ಅನುಕೂಲಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಕ್ರಮಕೈಗೊಂಡರೂ, ಅಪಘಾತಗಳ ಸಂಖ್ಯೆ ಕಡಿಮೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಪಾದಚಾರಿ ಗಳು ಏಕಾಏಕಿ ರಸ್ತೆ ನುಗ್ಗಬಾರದು ಎಂದು ರಸ್ತೆಗಳ ಮಧ್ಯೆ ಎತ್ತರಿಸಿದ ಕಬ್ಬಿಣದ ಗ್ರೀಲ್‌ಗಳನ್ನು ಅಳವಡಿಸಲು ಹಾಗೂ ಪಾದಚಾರಿಗಳ ಸುರಕ್ಷತಾ ದೃಷ್ಠಿಯಿಂದ ಅವಶ್ಯಕತೆ ಇರುವ ಲೇನ್ ಮಾರ್ಕಿಂಗ್-216, ಜೀಬ್ರಾ ಕ್ರಾಸಿಂಗ್- 363, ಗ್ರಿಲ್ ಬ್ಯಾರಿಕೇಡ್-112 ಹಾಗೂ ಪೆಲಿಕಾನ್ ಸಿಗ್ನಲ್-45 ಸ್ಥಳಗಳಲ್ಲಿ ಮಾಡುವಂತೆ ಗೃಹ ಇಲಾಖೆ ಬಿಬಿಎಂಪಿಗೆ ಪತ್ರ ಬರೆದಿದೆ. ಇದರೊಂದಿಗೆ 101 ಜಾಗದಲ್ಲಿ ಸ್ಕೈವಾಕ್ ಸಿದ್ಧಪಡಿಸುವಂತೆಯೂ ಸಲಹೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
*
ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಮೃತ
ರಾಜಧಾನಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷ ದಲ್ಲಿ 1609 ಮಂದಿ ಮೃತಪಟ್ಟಿದ್ದಾರೆ. ಈ 1609 ಮಂದಿ ಪೈಕಿ 400 ಕ್ಕೂ ಹೆಚ್ಚು ಪಾದಚಾರಿಗಳೇ ಇರುವುದು ಬಹಿರಂಗವಾಗಿದೆ. ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುವಾಗಲೂ, ಅನೇಕ ಸಮಯದಲ್ಲಿ ವಾಹನ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸಿದೆ ಎನ್ನುವುದು ಬಹಿರಂಗವಾಗಿದೆ. ಎರಡು ವರ್ಷದ ಅವಧಿಯಲ್ಲಿ ನಡೆದಿರುವ 8754 ಅಪಘಾತ ಪ್ರಕರಣಗಳ ಪೈಕಿ 249 ಮಂದಿ ಪಾದಚಾರಿಗಳೇ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನುಳಿದಂತೆ, 1609 ಮಂದಿ ಮೃತಪಟ್ಟಿದ್ದರೆ, 4928 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದಂತೆ 2574 ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.