KIGI ಕೊಹೋರ್ಟ್ 4ಗೆ ಅರ್ಜಿ ಆಹ್ವಾನ: ಗೇಮ್ ಡೆವಲಪರ್‌ಗಳಿಗೆ ಕ್ರಾಫ್ಟನ್ ಇಂಡಿಯಾ ಬೆಂಬಲ ವಿಸ್ತರಣೆ
ಮೊಬೈಲ್ ಗೇಮ್‌ಗಳಲ್ಲಿ ಈಗಾಗಲೇ ಬೀಟಾ ಅಥವಾ ಸಾಫ್ಟ್ ಲಾಂಚ್ ಹಂತದಲ್ಲಿರುವ ಯೋಜನೆ ಗಳು ಹಾಗೂ ಪಿಸಿ ಗೇಮ್‌ಗಳಲ್ಲಿ ಸ್ಟೀಮ್‌ನಲ್ಲಿ ಲೈವ್ ಡೆಮೊ ಹೊಂದಿ ಗೇಮಿಂಗ್ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಯೋಜನೆಗಳು ಅರ್ಜಿ ಸಲ್ಲಿಸಬಹುದು. ಆರಂಭಿಕ ಹಂತದ ತಂಡಗಳು ಮತ್ತು ಹೊಸ ಆಲೋಚನೆಗಳೂ ಕಾರ್ಯಕ್ರಮದ ಪ್ರಮುಖ ಭಾಗವಾಗಿಯೇ ಮುಂದುವರಿಯಲಿವೆ.
-
ಬೆಂಗಳೂರು: ಭಾರತದ ಗೇಮ್ ಡೆವಲಪ್‌ಮೆಂಟ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿ ಸುವ ಉದ್ದೇಶದಿಂದ ಕ್ರಾಫ್ಟನ್ ಇಂಡಿಯಾ ತನ್ನ ಗೇಮಿಂಗ್ ಇನ್‌ಕ್ಯುಬೇಟರ್ ಕಾರ್ಯಕ್ರಮದ KIGI ಕೊಹೋರ್ಟ್ 4 ಅನ್ನು ಘೋಷಿಸಿದೆ. ಸೆ.22ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.
2023ರಲ್ಲಿ ಆರಂಭವಾದ KIGI, ದೇಶದ ಗೇಮ್ ಡೆವಲಪರ್‌ಗಳಿಗೆ ಆರ್ಥಿಕ ನೆರವು, ತಜ್ಞರ ಮಾರ್ಗ ದರ್ಶನ ಹಾಗೂ ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಬೆಂಬಲ ನೀಡುತ್ತಿದೆ. ಇದುವರೆಗೆ ಮುಖ್ಯವಾಗಿ ಆರಂಭಿಕ ಹಂತದ ತಂಡಗಳು ಮತ್ತು ಹೊಸ ಪರಿಕಲ್ಪನೆಗಳಿಗೆ ಬೆಂಬಲ ನೀಡುತ್ತಿದ್ದ ಕಾರ್ಯಕ್ರಮ, ಕೊಹೋರ್ಟ್ 4ರಿಂದ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿರುವ ಗೇಮ್‌ಗಳಿಗೂ ಅವಕಾಶ ನೀಡಲಿದೆ.
ಇದನ್ನೂ ಓದಿ: Online Gaming Bill 2025: ಆನ್‌ಲೈನ್ ಗೇಮಿಂಗ್ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ
ಮೊಬೈಲ್ ಗೇಮ್‌ಗಳಲ್ಲಿ ಈಗಾಗಲೇ ಬೀಟಾ ಅಥವಾ ಸಾಫ್ಟ್ ಲಾಂಚ್ ಹಂತದಲ್ಲಿರುವ ಯೋಜನೆ ಗಳು ಹಾಗೂ ಪಿಸಿ ಗೇಮ್‌ಗಳಲ್ಲಿ ಸ್ಟೀಮ್‌ನಲ್ಲಿ ಲೈವ್ ಡೆಮೊ ಹೊಂದಿ ಗೇಮಿಂಗ್ ಸಮುದಾಯ ದಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಯೋಜನೆಗಳು ಅರ್ಜಿ ಸಲ್ಲಿಸಬಹುದು. ಆರಂಭಿಕ ಹಂತದ ತಂಡಗಳು ಮತ್ತು ಹೊಸ ಆಲೋಚನೆಗಳೂ ಕಾರ್ಯಕ್ರಮದ ಪ್ರಮುಖ ಭಾಗವಾಗಿಯೇ ಮುಂದುವರಿಯಲಿವೆ.
ಕ್ರಾಫ್ಟನ್ ಇಂಡಿಯಾ ಇನ್‌ಕ್ಯುಬೇಟರ್ ಪ್ರೋಗ್ರಾಂ ಮುಖ್ಯಸ್ಥ ಅನುಜ್ ಸಹಾನಿ ಮಾತನಾಡಿ, “ಆಲೋಚನೆಯ ಹಂತದಿಂದ ಮಾರುಕಟ್ಟೆ ಪ್ರವೇಶದವರೆಗೆ ಪ್ರತಿಭಾವಂತ ಭಾರತೀಯ ತಂಡಗಳಿಗೆ ಅಗತ್ಯ ಸಂಪನ್ಮೂಲ ಮತ್ತು ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶ,” ಎಂದರು.
ಕ್ರಾಫ್ಟನ್ ಇಂಡಿಯಾ ಸಿಇಒ ಸೀನ್ ಹ್ಯೂನಿಲ್ ಸೋನ್, ಭಾರತವನ್ನು ಜಾಗತಿಕ ಗೇಮಿಂಗ್ ಸೃಜನ ಶೀಲ ಶಕ್ತಿಯಾಗಿ ರೂಪಿಸುವ ನಿಟ್ಟಿನಲ್ಲಿ KIGI ಕೊಹೋರ್ಟ್ 4 ಮತ್ತೊಂದು ಪ್ರಮುಖ ಹೆಜ್ಜೆ ಎಂದು ತಿಳಿಸಿದ್ದಾರೆ.
KIGI ಕೊಹೋರ್ಟ್ 1ರ ಸ್ಟುಡಿಯೋಗಳು ಯಶಸ್ವಿ ಸಾಫ್ಟ್ ಲಾಂಚ್ ಸಾಧಿಸಿದ್ದರೆ, ಕೊಹೋರ್ಟ್ 2ರ ಮುಂಬೈ ಮೂಲದ ಸಿಂಗ್ಯುಲರ್ ಸ್ಕೀಮ್ ಅಭಿವೃದ್ಧಿಪಡಿಸಿದ ‘ಫ್ರಾಂಟಿಯರ್ ಪಾಲಾಡಿನ್’ ಏಪ್ರಿಲ್ 24, 2026ರಂದು ಸ್ಟೀಮ್‌ನಲ್ಲಿ ಬಿಡುಗಡೆಯಾದ ಮೊದಲ KIGI ಪಿಸಿ ಗೇಮ್ ಆಗಿದೆ.
ಸುಮಾರು 1,000 ಅರ್ಜಿಗಳಿಂದ ಆಯ್ಕೆಗೊಂಡ ಕೊಹೋರ್ಟ್ 3ರಲ್ಲಿ ಕ್ಸೋಡ್ ಗೇಮ್ಸ್ ಸ್ಟುಡಿಯೋ, ಇವೊಲ್ವ್‌ಎಕ್ಸ್ ಗೇಮ್ಸ್, ಈಥರ್ ಗೇಮ್ಸ್ ಮತ್ತು ರೆಡ್‌ಡೆವಿಲ್ ಸ್ಟುಡಿಯೋ ಸೇರಿವೆ. ಆಸಕ್ತ ತಂಡಗಳು ಕ್ರಾಫ್ಟನ್ ಇಂಡಿಯಾ ವೆಬ್‌ಸೈಟ್ ಮೂಲಕ ಕೊಹೋರ್ಟ್ 4ಕ್ಕೆ ಅರ್ಜಿ ಸಲ್ಲಿಸಬಹುದು.