ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತ್ನಿ, ಮಕ್ಕಳು ಸೇರಿ 6 ಮಂದಿಯನ್ನು ಕೊಂದ ಪಾಪಿ ಶವವಾಗಿ ಪತ್ತೆ; ಆತ್ಮಹತ್ಯೆ ಶಂಕೆ

ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಆರು ಮಂದಿಯನ್ನು ಕೊಂದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ರೈತ ಪಿ. ರಾಜ್ ಕುಮಾರ್ ಎಂಬಾತ ಮೂರು ದಿನಗಳ ಹಿಂದೆ ತನ್ನ ಕುಟುಂಬದವರನ್ನು ಕೊಂದು ನಾಪತ್ತೆಯಾಗಿದ್ದನು. ಇದೀಗ ಅವನ ಶವ ರಂಗಾರೆಡ್ಡಿ ಜಿಲ್ಲೆಯ ಕೊತ್ತೂರು ಮಂಡಲದ ಪೆಂಜಾರ್ಲಾ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ.

ಕುಟುಂಬದ 6 ಮಂದಿಯನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

ಸಂಗ್ರಹ ಚಿತ್ರ -

ತೆಲಂಗಾಣ: ತನ್ನ ವಿರುದ್ಧ ಪೋಕ್ಸೋ ಪ್ರಕರಣ (POCSO Act) ದಾಖಲಿಸಿದ್ದ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಆರು ಮಂದಿಯನ್ನು ಕೊಂದಿದ್ದ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ (Telangana crime) ನಡೆದಿದೆ. ರೈತ ಪಿ. ರಾಜ್ ಕುಮಾರ್ ಎಂಬಾತ ಮೂರು ದಿನಗಳ ಹಿಂದೆ ತನ್ನ ಕುಟುಂಬ ಸದಸ್ಯರನ್ನು ಕೊಂದು ಬಳಿಕ ನಾಪತ್ತೆಯಾಗಿದ್ದನು. ಇದೀಗ ಅವನ ಶವ ನೆರೆಯ ರಂಗಾರೆಡ್ಡಿ ಜಿಲ್ಲೆಯ (Rangareddy district) ಕೊತ್ತೂರು ಮಂಡಲದ ಪೆಂಜಾರ್ಲಾ ಗ್ರಾಮದ ಹೊರವಲಯದಲ್ಲಿ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 10ರಂದು ರಾತ್ರಿ ಪಿ. ರಾಜ್‌ಕುಮಾರ್ ತನ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಕುಟುಂಬದ ಇಬ್ಬರು ಸದಸ್ಯರ ಮೇಲಿನ ಸಿಟ್ಟಿನಿಂದ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಆರು ಮಂದಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಇದರ ಬಳಿಕ ಪೊಲೀಸರು ಅವನ ಬಗ್ಗೆ ಮಾಹಿತಿ ನೀಡಿದವರಿಗೆ 2 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಲ್ಲದೇ 12 ತಂಡಗಳನ್ನು ರಚಿಸಿ ತನಿಖೆಯನ್ನು ಪ್ರಾರಂಭಿಸಿದ್ದರು.

ಚಿಲ್ಲರೆ ಹಣ ಇಲ್ಲವೆಂದು ಪ್ರಯಾಣ ನಿರಾಕರಣೆ ಬೇಡ

ರಂಗಾರೆಡ್ಡಿ ಜಿಲ್ಲೆಯ ಕೊತ್ತೂರು ಮಂಡಲದ ಪೆಂಜಾರ್ಲಾ ಗ್ರಾಮದ ಹೊರವಲಯದಲ್ಲಿ ಅಪರಿಚಿತ ವ್ಯಕ್ತಿಯ ಶವ ಬಿದ್ದಿರುವುದಾಗಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ತಲುಪಿ ಶವ ರಾಜ್‌ಕುಮಾರ್ ನದ್ದು ಎಂಬುದನ್ನು ಗುರುತಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಫ್ಯೂಚರ್ ಸಿಟಿ ಪೊಲೀಸ್ ಆಯುಕ್ತ ತರುಣ್ ಜೋಶಿ, ಜುಲೈ 10ರಂದು ಆತ ಧರಿಸಿದ್ದ ಬಟ್ಟೆ ಮತ್ತು ನೆರೆಹೊರೆಯವರು ನೀಡಿರುವ ಚಹರೆಯ ಗುರುತಿನಿಂದ ಶವ ರಾಜ್ ಕುಮಾರ್ ನದ್ದು ಎಂದು ಕಂಡು ಹಿಡಿಯಲಾಗಿದೆ. ಆತನ ಜೇಬಿನಲ್ಲಿ ಒಂದು ಸೆಲ್ ಫೋನ್, ಬಸ್ ಟಿಕೆಟ್‌ಗಳು, 1,260 ರೂ. ನಗದು ಮತ್ತು ಒಂದು ಬಾಟಲ್ ಕಳೆ ನಾಶಕವನ್ನು ಪತ್ತೆಯಾಗಿದೆ ಎಂದು ತಿಳಿಸಿದರು.

ಆತ ಕಳೆ ನಾಶಕ ಸೇವಿಸಿರಬಹುದು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಆತ್ಮಹತ್ಯೆ ಹೌದೋ ಅಲ್ಲವೋ ಎಂಬುದನ್ನು ತಿಳಿಯಲು ಸಾಧ್ಯ. ಆತನ ಮೊಬೈಲ್ ನಲ್ಲಿ ವಿಡಿಯೋವೊಂದು ಪತ್ತೆಯಾಗಿದೆ. ಇದರಲ್ಲಿ ಆತ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಾಗಿ ಹೇಳಿದ್ದನು.

ವಿಡಿಯೋದಲ್ಲಿ ತನ್ನ ಕುಟುಂಬದ ಹುಡುಗಿಯೊಬ್ಬಳ ಹೆಸರನ್ನು ಆತ ಹೇಳಿದ್ದು, ಆಕೆಯ ಕುಟುಂಬ ತನ್ನಿಂದ ಹಣ ಸಂಗ್ರಹಿಸಿ ಮೋಸ ಮಾಡಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರಿಂದಾಗಿಯೇ ತಾನು ಇವತ್ತು ಸಾಯಬೇಕಾದ ಪರಿಸ್ಥಿತಿ ಬಂದಿದೆ. ನಾವು ಹಿಂದೆ ಶಾಬಾದ್ ಮಂಡಲದಲ್ಲಿ ನೆರೆಹೊರೆಯವರಾಗಿದ್ದೆವು ಎಂದು ಹೇಳಿದ್ದಾನೆ.

ತನ್ನ ಇಬ್ಬರು ಗಂಡು ಮಕ್ಕಳಿಗೆ ಬರಬೇಕಾದ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದೇನೆ. ಹುಡುಗಿಯ ಕುಟುಂಬ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ತನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾನೆ.

ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಸಾಲಗಾರನಾಗಿದ್ದ ಆತ ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನು. ಆತನ ಬಳಿ 16 ಸಿಮ್ ಕಾರ್ಡ್‌ಗಳು ಮತ್ತು ಹಲವಾರು ಫೋನ್‌ಗಳ ಕೂಡ ಇವೆ. ಬೆಟ್ಟಿಂಗ್‌ನಿಂದಾಗಿ 2 ಕೋಟಿ ರೂ. ಗಳಿಗೂ ಹೆಚ್ಚು ಸಾಲ ಹೊಂದಿದ್ದನು ಎಂದು ಆತನ ಕುಟುಂಬ ದೂರಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿಸಿಯೂಟ ಸೇವಿಸಿ ಬಾಗಲಕೋಟೆ ಸರ್ಕಾರಿ ಶಾಲೆಯ 12 ಮಕ್ಕಳು ಅಸ್ವಸ್ಥ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿದ್ದನು. ಜುಲೈ 10ರಂದು ಆತ ಹುಡುಗಿಯ ಮನೆಗೆ ಹೋಗಿ ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಂದು, ಬಳಿಕ ಹುಡುಗಿಯನ್ನು ಕಾರಿನಲ್ಲಿ ತನ್ನ ಊರು ಧೈವಲ್ಗುಡಕ್ಕೆ ಕರೆದೊಯ್ದು ಸರೋವರದ ಬಳಿ ಇರಿದು ಕೊಂದಿದ್ದಾನೆ. ಅನಂತರ ಮನೆಗೆ ಬಂದು ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದಿದ್ದಾನೆ. ಘಟನೆ ನಡೆದ ತಕ್ಷಣವೇ ತಂದೆಗೆ ಕರೆ ಮಾಡಿ ತಾನು ಮಾಡಿರುವ ಅಪರಾಧದ ಬಗ್ಗೆ ಹೇಳಿ ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.