ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕದನ ವಿರಾಮ ಮಾತುಕತೆಗೆ ಇರಾನ್ ಒಪ್ಪಿಕೊಳ್ಳಲು ಮುಖ್ಯ ಕಾರಣ ಚೀನಾ: ಡೊನಾಲ್ಡ್ ಟ್ರಂಪ್

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ವಿರಾಮಕ್ಕೆ ಬರಲು ಮೇಲ್ನೋಟಕ್ಕೆ ಪಾಕಿಸ್ತಾನ ಕಾರಣ ಎಂಬಂತೆ ಕಂಡು ಬರುತ್ತಿದ್ದರೂ ಇದು ಪಾಕಿಸ್ತಾನದಿಂದ ಅಲ್ಲ ಚೀನಾದಿಂದ ಆಗಿರುವುದು ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಟೆಹರಾನ್ ಕದನ ವಿರಾಮದ ಮಾತುಕತೆಗೆ ಬರುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ಮಾತುಕತೆಗೆ ಬರಲು ಚೀನಾ ಕಾರಣ: ಡೊನಾಲ್ಡ್ ಟ್ರಂಪ್

ಸಂಗ್ರಹ ಚಿತ್ರ -

ವಾಷಿಂಗ್ಟನ್: ಅಮೆರಿಕ (america), ಇಸ್ರೇಲ್ (israel) ಮತ್ತು ಇರಾನ್ (iran) ನಡುವೆ ನಡೆಯುತ್ತಿರುವ ಸಂಘರ್ಷ (iran war) ವಿರಾಮ (Ceasefire) ಹಂತ ತಲುಪವಲ್ಲಿ ಚೀನಾ (China) ಪ್ರಮುಖ ಪಾತ್ರ ವಹಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( US President Donald Trump ) ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಮತ್ತು ಇರಾನ್ ಕದನ ವಿರಾಮದಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿದೆ. ಯುದ್ಧ ಕಡಿಮೆಯಾದ ಮೇಲೆ ತಾವು ಮೇ ಮಧ್ಯ ಭಾಗದಲ್ಲಿ ಚೀನಾ ಪ್ರವಾಸ ಮಾಡುವುದಾಗಿ ಅವರು ತಿಳಿಸಿದರು.

ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಚೀನಾವು ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕದನ ವಿರಾಮ ಮಾತುಕತೆಗೆ ಟೆಹರಾನ್ ಬರಲು ಬೀಜಿಂಗ್ ಸಹಾಯ ಮಾಡಿದೆ ಎಂದು ಟ್ರಂಪ್ ತಿಳಿಸಿದರು.

ಕದನ ವಿರಾಮ ಮಾತುಕತೆಗಾಗಿ ಇರಾನ್ ಅಮೆರಿಕವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ ಪ್ರಧಾನಿ ಶೆಹಬಾಜ್ ಷರೀಫ್

ಟೆಹರಾನ್‌ನೊಂದಿಗೆ ಕದನ ವಿರಾಮ ಒಪ್ಪಂದದ ಕುರಿತು ಮಾತುಕತೆ ನಡೆಸುವಂತೆ ಮಾಡುವಲ್ಲಿ ಚೀನಾ ಭಾಗಿಯಾಗಿದೆ ಎಂದ ಅವರು, ಯುದ್ಧ ಕಡಿಮೆಯಾದ ಮೇಲೆ ಅಂದರೆ ಮೇ ಮಧ್ಯ ಭಾಗದಲ್ಲಿ ತಾವು ಚೀನಾಕ್ಕೆ ಪ್ರಯಾಣಿಸುವ ಮೊದಲು ಯುದ್ಧ ಕಡಿಮೆಯಾಗುವಂತೆ ಮಾಡಲು ಚೀನಾ ಕೂಡ ಪ್ರಮುಖ ಪಾತ್ರವಹಿಸಿದೆ. ಈ ಹಿಂದೆ ತಮ್ಮ ಪ್ರವಾಸ ಮಾರ್ಚ್ ಅಂತ್ಯಕ್ಕೆ ನಿಗದಿಯಾಗಿತ್ತು. ಆದರೆ ಯುದ್ಧದ ಕಾರಣ ಮುಂದೂಡಲಾಗಿತ್ತು ಎಂದು ಹೇಳಿದರು.

ಬೀಜಿಂಗ್, ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಇನ್ನು ಹಲವು ರಾಷ್ಟ್ರಗಳು ಯುದ್ಧ ಕೊನೆಗೊಳಿಸಿ ಶಾಂತಿ ಮಾರ್ಗವನ್ನು ಆಯ್ದುಕೊಳ್ಳಲು ಇರಾನ್ ಮೇಲೆ ಒತ್ತಡ ಹೇರುತ್ತಿವೆ. ಈ ನಿಟ್ಟಿನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಚೀನಾ ಅಧಿಕಾರಿಗಳು ನಿರಂತರ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ಅಮೆರಿಕನ್ ಏಜೆನ್ಸಿಗೆ ತಿಳಿಸಿವೆ ಎನ್ನಲಾಗಿದೆ.

ಈ ಕುರಿತು ಚೀನಾ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ ಬೀಜಿಂಗ್ ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಇನ್ನು ಹಲವು ರಾಷ್ಟ್ರಗಳು ಕದನ ವಿರಾಮಕ್ಕೆ ಇರಾನ್ ಮೇಲೆ ತಮ್ಮ ಪ್ರಭಾವ ಬೀರುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾನ್ ಯುದ್ಧದ ಕುರಿತು ಚೀನಾದ ವಿದೇಶಾಂಗ ಸಚಿವಾಲಯ ಬೀಜಿಂಗ್ ಪಾತ್ರದ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯು ಯುದ್ಧ ಪ್ರಾರಂಭವಾದಾಗಿನಿಂದ ಬೀಜಿಂಗ್ ವಿಶ್ವ ಶಾಂತಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿತ್ತು.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಎಲ್ಲಾ ಪಕ್ಷಗಳು ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು. ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸಬೇಕು. ವಿಶ್ವ ಆರ್ಥಿಕತೆ ಮತ್ತು ಇಂಧನ ಭದ್ರತೆಯ ಮೇಲೆ ಸಂಘರ್ಷದ ಪರಿಣಾಮದ ಬಗ್ಗೆ ಚೀನಾ ತೀವ್ರ ಕಳವಳ ಹೊಂದಿದೆ ಎಂದು ತಿಳಿಸಿದ್ದರು.

ಭಾರತಕ್ಕೆ ಭೇಟಿ ನೀಡಿದ ಬಾಂಗ್ಲಾದೇಶ ವಿದೇಶಾಂಗ ಸಚಿವ; ಎರಡು ದೇಶಗಳ ಸಂಬಂಧ ಮತ್ತೆ ವೃದ್ಧಿಸುತ್ತ?

ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ರಕ್ಷಿಸಲು ವಿಶ್ವ ಸಂಸ್ಥೆ ನಿರ್ಣಯ ವ್ಯಕ್ತ ಪಡಿಸಿದಾಗ ರಷ್ಯಾದೊಂದಿಗೆ ಚೀನಾ ಕೂಡ ಮಂಗಲವಾರ ವೀಟೋ ಚಲಾಯಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಚೀನಾದ ವಿಶ್ವಸಂಸ್ಥೆಯ ರಾಯಭಾರಿ ಫು ಕಾಂಗ್, ನಾಗರಿಕತೆ ಉಳಿವಿನ ಮೇಲೆ ಅಮೆರಿಕ ಬೆದರಿಕೆ ಹಾಕುತ್ತಿರುವಾಗ ಈ ನಿರ್ಣಯವನ್ನು ಅಂಗೀಕರಿಸುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು.