ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕದಲ್ಲಿ ವಿಮಾನ ಹಾರಾಟ ನಿರ್ಬಂಧ ತೆರವು

US Airports Shutdown: ಶ್ವೇತಭವನದಲ್ಲಿ ತಡರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಸೀನ್ ಡಫಿ, ಅಮೆರಿಕದ ವಾಯುಪ್ರದೇಶವನ್ನು ರಾತ್ರಿ 8.15ಕ್ಕೆ (ಅಮೆರಿಕದ ಪೂರ್ವ ಕಾಲಮಾನ) ವಿಮಾನ ಹಾರಾಟಕ್ಕೆ ಮುಕ್ತಗೊಳಿಸಲಾಗಿದೆ ಎಂದಿದ್ದಾರೆ. ಆದರೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ವಿಮಾನ ಹಾರಾಟ ನಿರ್ಬಂಧ ತೆರವು

US Airports -

Abhilash BC
Abhilash BC Nov 14, 2026 9:31 AM

ವಾಷಿಂಗ್ಟನ್‌, ನ.14: ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ನಡುವಿನ ಸಂವಹನ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಯಾಗಿರುವ ಹಿನ್ನೆಲೆ ಅಮೆರಿಕದಲ್ಲಿ 11000 ಕ್ಕೂ ಹೆಚ್ಚು ವಿಮಾನಗಳ ಹಾರಾಟಕ್ಕೆ ತತ್ಕಾಲಿಕ ತಡೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ.

ಹಳೆಯ ತಂತ್ರಜ್ಞಾನ ಉಪಕರಣಗಳಲ್ಲಿನ ದೋಷದಿಂದ ಈ ಸಮಸ್ಯೆ ಉಂಟಾಗಿದೆಯೇ ಹೊರತು, ಸೈಬರ್ ದಾಳಿ ಅಥವಾ ಮೈಕ್ರೋಸಾಫ್ಟ್‌ನ ಜಾಗತಿಕ ಸೇವಾ ವ್ಯತ್ಯಯಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶ್ವೇತಭವನದಲ್ಲಿ ತಡರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಸೀನ್ ಡಫಿ, ಅಮೆರಿಕದ ವಾಯುಪ್ರದೇಶವನ್ನು ರಾತ್ರಿ 8.15ಕ್ಕೆ (ಅಮೆರಿಕದ ಪೂರ್ವ ಕಾಲಮಾನ) ವಿಮಾನ ಹಾರಾಟಕ್ಕೆ ಮುಕ್ತಗೊಳಿಸಲಾಗಿದೆ ಎಂದಿದ್ದಾರೆ. ಆದರೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗಬಹುದು ಎಂದು ತಿಳಿಸಿದ್ದಾರೆ.

"ವಾಯುಪ್ರದೇಶವನ್ನು ಮುಕ್ತಗೊಳಿಸಿದ್ದೇವೆ ಎಂದ ಮಾತ್ರಕ್ಕೆ ಎಲ್ಲ ವಿಮಾನಗಳೂ ತಕ್ಷಣ ಹಾರಾಟ ಆರಂಭಿಸುತ್ತವೆ ಎಂದಲ್ಲ. ಸಹಜ ಸ್ಥಿತಿಗೆ ಮರಳಲು ಸಮಯ ಹಿಡಿಯಬಹುದು" ಎಂದು ಅವರು ಹೇಳಿದ್ದಾರೆ.

ಅಕ್ರಮ ಸಂಬಂಧಕ್ಕೆ ಎನ್‌ವಿಡಿಯಾ ಸಿಇಒ ತಲೆದಂಡ; ಕೊನೆಗೂ ರಾಜೀನಾಮೆ ಕೊಟ್ಟ ಜನ್ಸನ್ ಹುವಾಂಗ್

ಆದಾಗ್ಯೂ, ವಿಮಾನಯಾನ ಸಂಸ್ಥೆಗಳು ವಿಮಾನಗಳು ಮತ್ತು ಸಿಬ್ಬಂದಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿರುವುದರಿಂದ, ಪ್ರಯಾಣಿಕರು ಇನ್ನೂ ವಿಳಂಬ ಅಥವಾ ವಿಮಾನ ರದ್ದತಿಯನ್ನು ಎದುರಿಸುವ ಸಾಧ್ಯತೆಯಿದೆ.

ನ್ಯೂಯಾರ್ಕ್‌ನ ಕೆನಡಿ ವಿಮಾನ ನಿಲ್ದಾಣದಲ್ಲಿ, ರೈಲಿ ಅಲೆಕ್ಸಿಸ್ ಹೋಮ್ಸ್ ಅವರು ತಮ್ಮ ಸಹೋದರನ ಸಂಗೀತ ಕಾರ್ಯಕ್ರಮದಲ್ಲಿ ಸಮಯಕ್ಕೆ ಸರಿಯಾಗಿ ಒರೆಗಾನ್‌ಗೆ ತಲುಪಲು ಆಶಿಸಿದ್ದರು. ಆದರೆ, ಸುಮಾರು ಎರಡು ಗಂಟೆಗಳ ವಿಳಂಬದ ನಂತರ, ಅವರ ವಿಮಾನವನ್ನೇ ರದ್ದುಗೊಳಿಸಲಾಯಿತು.

ವಿಮಾನಗಳ ಹಾರಾಟದ ಮಾಹಿತಿ ನೀಡುವ ಫ್ಲೈಟ್‌ರಾಡಾರ್24 ಸಂಸ್ಥೆಯೂ ಉಪಕರಣಗಳಲ್ಲಿನ ತಾಂತ್ರಿಕ ದೋಷದಿಂದಾಗಿ ವಿಮಾನಗಳ ಹಾರಾಟಕ್ಕೆ ತತ್ಕಾಲಿಕ ತಡೆ ನೀಡಲಾಗಿತ್ತು. ಅಮೆರಿಕದ ರಾಷ್ಟ್ರೀಯ ವಾಯುಪ್ರದೇಶ ವ್ಯವಸ್ಥೆಯ ವಿವಿಧ ಆವರ್ತನಗಳಲ್ಲಿಯೂ (ಫ್ರೀಕ್ವೆನ್ಸಿ) ಸಮಸ್ಯೆ ಕಾಣಿಸಿಕೊಂಡಿದೆ ಎಂದು ಎಫ್‌ಎಎ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.