Bigg Boss kannada 13: ಎರಡನೇ ಬಾರಿಗೆ ಕ್ಯಾಪ್ಟನ್ ಆದ ಜಗ್ಗ ಮಮ್ಮಿ! ಬಿಕ್ಕಿ ಬಿಕ್ಕಿ ಅತ್ತ ಧನುಷ್
Bigg Boss kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ವಾರದ ಕ್ಯಾಪ್ಟನ್ಸಿ ಸ್ಪರ್ಧೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದು, ಜಗ್ಗ ಮಮ್ಮಿ ಎಂದೇ ಗುರುತಿಸಿಕೊಂಡಿರುವ ಜಗದೀಶ್ ಮತ್ತೊಮ್ಮೆ ಮನೆಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸೀಸನ್ 13ರಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಗೆಲುವಿನ ಹೊಸ್ತಿಲಲ್ಲಿದ್ದ ಧನುಷ್ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಕನ್ನಡ ಸೀಸನ್ 13’ರ (Bigg Boss Kannada 13) ಮನೆಯಲ್ಲಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ವಾರದ ಕ್ಯಾಪ್ಟನ್ಸಿ ಸ್ಪರ್ಧೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದು, ಜಗ್ಗ ಮಮ್ಮಿ ಎಂದೇ ಗುರುತಿಸಿಕೊಂಡಿರುವ ಜಗದೀಶ್ (Jagadeesh) ಮತ್ತೊಮ್ಮೆ ಮನೆಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸೀಸನ್ 13ರಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಗೆಲುವಿನ ಹೊಸ್ತಿಲಲ್ಲಿದ್ದ ಧನುಷ್ (Dhanush) ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಣ್ಣೀರು ಹಾಕಿದ್ದಾರೆ.
ತಾಂಡವ್ ರಾಮ್ ಜೊತೆ ಮೈತ್ರಿ ಮಾಡಿಕೊಂಡ ಜಗದೀಶ್
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸ್ಪರ್ಧಿಗಳಿಗೆ ಜೋಡಿಯಾಗಿ ಮೈತ್ರಿ ಮಾಡಿಕೊಂಡು ಆಟವಾಡುವ ಅವಕಾಶ ನೀಡಲಾಗಿತ್ತು. ಹೀಗಾಗಿ ಮನೆಯ ಸದಸ್ಯರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಈ ವೇಳೆ ಜಗದೀಶ್ ಅವರು ತಾಂಡವ್ ರಾಮ್ ಅವರೊಂದಿಗೆ ಕೈಜೋಡಿಸಿದರು.
ತಾಂಡವ್ ರಾಮ್ ಮತ್ತು ಜಗದೀಶ್ ಜೋಡಿ ಟಾಸ್ಕ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ; Kannada New Movie: ಅದ್ಧೂರಿಯಾಗಿ ನೆರವೇರಿದೆ 'ದ್ರೌಪದಿ' ಸಿನಿಮಾ ಮುಹೂರ್ತ
ಇತ್ತ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮತ್ತೊಂದು ತಂಡದಿಂದ ಧನುಷ್ ಗೌಡ ಪ್ರಬಲ ಪೈಪೋಟಿ ನೀಡುತ್ತಿದ್ದರು. ಪ್ರಶಾಂತ್ ಗೌಡ ಅವರೊಂದಿಗೆ ಜೋಡಿಯಾಗಿ ಆಟವಾಡುತ್ತಿದ್ದ ಧನುಷ್ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಬಾರಿ ಧನುಷ್ ಅವರೇ ಕ್ಯಾಪ್ಟನ್ ಆಗಬಹುದು ಎಂಬ ನಿರೀಕ್ಷೆ ಮನೆಯ ಸದಸ್ಯರಲ್ಲಿತ್ತು.
ಆದರೆ, ಟಾಸ್ಕ್ ನಡೆಯುತ್ತಿದ್ದ ವೇಳೆ ಅನಿರೀಕ್ಷಿತ ಘಟನೆ ಸಂಭವಿಸಿತು. ಪ್ರಶಾಂತ್ ಗೌಡ ಅವರ ಕೈಗೆ ತೀವ್ರವಾಗಿ ಗಾಯವಾಯಿತು. ತಕ್ಷಣ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಅವರಿಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದರು.
ಟಾಸ್ಕ್ನಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸುವುದು ಕಡ್ಡಾಯವಾಗಿದ್ದರಿಂದ ಪ್ರಶಾಂತ್ ಆಟದಿಂದ ಹಿಂದೆ ಸರಿಯಬೇಕಾಯಿತು. ಇದರಿಂದಾಗಿ ಉತ್ತಮವಾಗಿ ಆಡುತ್ತಿದ್ದ ಧನುಷ್ ಗೌಡ ಅವರಿಗೂ ಸ್ಪರ್ಧೆಯಿಂದ ಹೊರಬರುವ ಪರಿಸ್ಥಿತಿ ಎದುರಾಯಿತು.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯ ಹಾವು ಗಾನವಿ! ಸೌಂದರ್ಯ ಶೆಟ್ಟಿ ವಿಡಿಯೋ ಭರ್ಜರಿ ವೈರಲ್
ತಮ್ಮ ಪ್ರಯತ್ನವೆಲ್ಲ ವ್ಯರ್ಥವಾಯಿತಲ್ಲ ಎಂಬ ನೋವಿನಿಂದ ಅವರು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಧನುಷ್ ಅವರ ಭಾವುಕ ಕ್ಷಣ ಮನೆಯ ಇತರ ಸದಸ್ಯರನ್ನೂ ಭಾವುಕರನ್ನಾಗಿಸಿತು.