ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಮೂತ್ರ ವಿಸರ್ಜನೆ; ಎಫ್‌ಬಿಐ ಮುಖ್ಯಸ್ಥ ಕಾಶ್‌ ಪಟೇಲ್‌ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮುಖ್ಯಸ್ಥ ಕಾಶ್ ಪಟೇಲ್ ಅವರನ್ನು ಬಂಧಿಸಲಾಗಿದೆ. ಸ್ನೇಹಿತರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಸ್ನೇಹಿತರೊಂದಿಗೆ ಅವರು ಮದ್ಯಪಾನ ಮಾಡಿ ಮನೆಗೆ ಹಿಂದಿರುಗುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ತಾನು ಬಂಧನಕ್ಕೆ ಒಳಗಾಗಿದ್ದೆ ಎಂದು ಅವರು ತಿಳಿಸಿದ್ದಾರೆ.

ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಬಂಧನ

ಸಂಗ್ರಹ ಚಿತ್ರ -

ನ್ಯೂಯಾರ್ಕ್: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ () ಮತ್ತು ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ತಮ್ಮನ್ನು ಎರಡು ಬಾರಿ ಬಂಧಿಸಲಾಗಿತ್ತು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (Federal Bureau of Investigation) ಮುಖ್ಯಸ್ಥ ಕಾಶ್ ಪಟೇಲ್ (FBI chief Kash Patel) ಹೇಳಿದ್ದಾರೆ. ಈ ಘಟನೆ ವರ್ಜೀನಿಯಾ (Virginia) ಮತ್ತು ನ್ಯೂಯಾರ್ಕ್ (New York) ನಲ್ಲಿ ನಡೆದಿತ್ತು. ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಮದ್ಯ ಸೇವಿಸಿ ಮನೆಗೆ ನಡೆದುಕೊಂಡು ಹೋಗುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೆ. ಆಗ ಪೊಲೀಸರು ನಮ್ಮನ್ನು ತಡೆದು ಬಂಧಿಸಿದರು ಎಂದು ಹೇಳಿದ್ದಾರೆ.

ಕಾಶ್ ಪಟೇಲ್ ಅವರು 2005ರಲ್ಲಿ ಕೆಲಸ ಮಾಡುತ್ತಿದ್ದ ಮಿಯಾಮಿ-ಡೇಡ್ ಪಬ್ಲಿಕ್ ಡಿಫೆಂಡರ್ ಕಚೇರಿಯ ಸಿಬ್ಬಂದಿ ಫೈಲ್‌ನಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಅವರು ನಾವು ಕೆಲವು ಸ್ಥಳೀಯ ಬಾರ್ ಗಳಿಗೆ ಹೋಗಿ ಮದ್ಯ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಯೌವನದಲ್ಲಿ ತಾನು ಎರಡು ಬಾರಿ ಬಂಧನಕ್ಕೆ ಒಳಗಾಗಿದ್ದೇನೆ. ಒಮ್ಮೆ ವರ್ಜೀನಿಯಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ದ್ರವ್ಯ ಸೇವಿಸಿದ್ದಕ್ಕಾಗಿ ಇನ್ನೊಂದು ಬಾರಿ ಕಾನೂನು ವಿದ್ಯಾರ್ಥಿಯಾಗಿದ್ದಾಗ ನ್ಯೂಯಾರ್ಕ್ ನಗರದ ಬಾರ್‌ನಿಂದ ಹೊರಬಂದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದಕ್ಕೆ ಎಂದು ಅವರು ತಿಳಿಸಿದ್ದಾರೆ.

''ಭೂಮಿ ಸ್ಥಿರವಾಗಿದೆʼʼ ಎನ್ನುವ ಮೂಲಕ ವಿಜ್ಞಾನಕ್ಕೇ ಸವಾಲೆಸಿದ ಮುಸ್ಲಿಂ ವಿದ್ವಾಂಸ; ಮಕ್ಕಳನ್ನು ತಪ್ಪು ದಾರಿಗೆಳೆಯಬೇಡಿ ಎಂದ ನೆಟ್ಟಿಗರು

ಆ ದಿನ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಪ್ರಯತ್ನಿಸಿದ್ದೇವೆ. ಅಷ್ಟರಲ್ಲಿ ಪೊಲೀಸ್ ಕ್ರೂಸರ್ ಬಂದು ನಮ್ಮನ್ನು ತಡೆದು ಬಂದಿಸಿತ್ತು ಎಂದು ಹೇಳಿದ್ದಾರೆ.

ಈ ಕುರಿತ ವರದಿಯನ್ನು ಕಾಶ್ ಪಟೇಲ್ ಅವರ ವಕ್ತಾರೆ ಎರಿಕಾ ನೈಟ್ ತಿರಸ್ಕರಿಸಿದ್ದಾರೆ. ಇದು ಅವರನ್ನು ದುರ್ಬಲಗೊಳಿಸಲು ಮಾಡಿರುವ ಷಡ್ಯಂತ್ರ ಎಂದು ಹೇಳಿರುವ ಅವರು, ಈ ಆರೋಪಗಳು ಪಟೇಲ್ ಅವರ ಎಫ್‌ಬಿಐನ ದಾಖಲೆಯ ಯಶಸ್ಸಿಗೆ ಅಡ್ಡಿಯಾಗಿದೆ ಎಂದು ತಿಳಿಸಿದರು.

ಕಾಶ್ ಪಟೇಲ್ ಅವರನ್ನು ಎಫ್‌ಬಿಐ ನಿರ್ದೇಶಕರನ್ನಾಗಿ ನೇಮಿಸುವ ಮೊದಲು ಅವರ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

2001ರಲ್ಲಿ ವರ್ಜೀನಿಯಾದ ರಿಚ್ಮಂಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಕಾಶ್ ಪಟೇಲ್ ಬಂಧನಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅವರು ಅಪ್ರಾಪ್ತ ವಯಸ್ಕರಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ್ದರು. ವಿದ್ಯಾರ್ಥಿ ಅಭಿಮಾನಿಗಳ ಗುಂಪಾದ ರಿಚ್ಮಂಡ್ ರೌಡೀಸ್ ಅನ್ನು ನಡೆಸಲು ಸಹಾಯ ಮಾಡುತ್ತಿದ್ದ ಅವರು ಒಂದು ದಿನ ಬ್ಯಾಸ್ಕೆಟ್‌ಬಾಲ್ ಆಟವಾಡುತ್ತಿದ್ದಾಗ ಶಾಲಾ ಅಧಿಕಾರಿಯೊಬ್ಬರು ಬಂದು ಹೊರಗೆ ಕರೆದುಕೊಂಡು ಹೋದರು. ಕೇವಲ ಎರಡು ಪೆಗ್ ಸೇವಿಸಿದ್ದಕ್ಕಾಗಿ ಬಂಧಿಸಲಾಯಿತು. ಬಳಿಕ ದಂಡವನ್ನು ಪಾವತಿಸಿ ಕ್ಷಮೆಯಾಚಿಸಿದ ಬಳಿಕ ಬಿಡುಗಡೆ ಮಾಡಲಾಯಿತು.

ಇಸ್ರೇಲ್‌ ಪ್ರಧಾನಿ ನೆತನ್ಯಾಹುಗೆ ಪ್ರಾಸ್ಟೇಟ್ ಕ್ಯಾನ್ಸರ್‌; ಮೆಡಿಕಲ್‌ ರಿಪೋರ್ಟ್‌ನಲ್ಲಿರುವುದೇನು?

ಯಾಕೆ ವಿವಾದ ?

ಇಟಲಿಯಲ್ಲಿ ಯುಎಸ್ ಒಲಿಂಪಿಕ್ ಹಾಕಿ ತಂಡದೊಂದಿಗೆ ಅವರು ಬಿಯರ್ ಕುಡಿಯುತ್ತಿರುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಇದರ ಬಳಿಕ ಅವರ ಅತಿಯಾದ ಮದ್ಯಪಾನ ಮತ್ತು ಗೈರುಹಾಜರಿ ಬಗ್ಗೆ ವಿವಾದ ಹೆಚ್ಚಾಗಿದೆ. ಅವರು ಸಾಮಾಜಿಕ ಕ್ಲಬ್ ಮತ್ತು ಇನ್ನೊಂದು ಖಾಸಗಿ ಕ್ಲಬ್‌ನಲ್ಲಿ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಶ್ ಪಟೇಲ್, ನಾನು ಕೆಲಸದ ಸಮಯದಲ್ಲಿ ಎಂದಿಗೂ ಕುಡಿದಿಲ್ಲ. ಅದಕ್ಕಾಗಿ 250 ಮಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಯಾರಾದರೂ ಇದನ್ನು ಸಾಬೀತು ಪಡಿಸಲು ಬಯಸಿದರೆ ನಾನು ಅವರನ್ನು ನ್ಯಾಯಾಲಯದಲ್ಲಿ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.