ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಐಸ್‌ ಕ್ರೀಂ ಬೇಕ ಅಣ್ಣ?ʼʼ: ಸುಡುವ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

Viral Video: ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಹಾಗೂ ಬೈಕ್ ರೈಡರ್ ಒಬ್ಬರು ರಸ್ತೆ ಬದಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಐಸ್ ಕ್ರೀಂ ವಿತರಿಸುವ ಮೂಲಕ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಕಂಡುಬಂದ ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ರಸ್ತೆಬದಿಯ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

ರಸ್ತೆಬದಿಯ ಕಾರ್ಮಿಕರಿಗೆ ಐಸ್ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ -

Profile
Pushpa Kumari Apr 26, 2026 6:06 PM

ಬೆಂಗಳೂರು, ಏ. 26: ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿ ಹೋಗಿದ್ದಾರೆ. ಸುಡು ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಪಾಡು ಕೇಳುವವರೆ ಇಲ್ಲ. ಈ ನಡುವೆ ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಹಾಗೂ ಬೈಕ್ ರೈಡರ್ ಒಬ್ಬರು ರಸ್ತೆ ಬದಿ ಕೆಲಸ ಮಾಡುವ ಕಾರ್ಮಿಕರಿಗೆ ಐಸ್ ಕ್ರೀಂ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಕಂಡುಬಂದ ಈ ಹೃದಯಸ್ಪರ್ಶಿ ವಿಡಿಯೊ (Viral Video) ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಗಳಿಸುತ್ತಿದೆ.

ಹಲವು ನಗರಗಳಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದ, ಹೊರಾಂಗಣ ಕಾರ್ಮಿಕರು ಬಿಸಿಲಿಗೆ ಬೆಂದು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಮೂಲದ ಬೈಕರ್ ಮತ್ತು ಕಂಟೆಂಟ್ ಕ್ರಿಯೇಟರ್ ಲಕ್ಷ್ಮಣ್ ಭಾರ್ತಿ ಕಾರ್ಮಿಕರಿಗೆ ನೆರವಾಗಲು ಮುಂದಾಗಿದ್ದಾರೆ. ಲಕ್ಷ್ಮಣ್ ತಮ್ಮ ಬೈಕಿನಲ್ಲಿ ಕಾರ್ಮಿಕರಿಗೆ ಐಸ್ ಕ್ರಿಮ್ ಕೊಂಡೊಯ್ದಿದ್ದು ಕೇವಲ ಐಸ್‌ ಕ್ರೀಂ ಕೊಡುವುದು ಮಾತ್ರವಲ್ಲದೆ, ಅವರೊಂದಿಗೆ ಪ್ರೀತಿಯಿಂದ ಮಾತನಾಡಿ ಮನ ಗೆದ್ದಿದ್ದಾರೆ.

ವಿಡಿಯೊ ನೋಡಿ:

ನಗರದ ಮೂಲಕ ಬೈಕ್ ರೈಡ್ ಮಾಡುವಾಗ ಅವರು ಜನನಿಬಿಡ ರಸ್ತೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಗುಂಪುಗಳ ಬಳಿ ನಿಲ್ಲಿಸಿದರು. ಆದರೆ ಕೇವಲ ಚಿತ್ರೀಕರಿಸುವ ಬದಲು, ಅವರು ತಮ್ಮ ಬ್ಯಾಗ್‌ನಿಂದ ಐಸ್ ಕ್ರೀಂ ಕೋನ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅನೇಕ ಕಾರ್ಮಿಕರಿಗೆ ಇದು ಮೊದಲಿಗೆ ಅಚ್ಚರಿ ತಂದಿದೆ. ಬಳಿಕ ಅವರು ನಗುತ್ತ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಿಸಿಲಿನಿಂದ ಬಳಲಿದ ಕಾರ್ಮಿಕರ ಮೊಗದಲ್ಲಿ ನಗು ಮೂಡಿದೆ.

ವಿಮೆ ಹಣ ಪಡೆಯಲು ತನ್ನ ಅಂತ್ಯಕ್ರಿಯೆಗೆ ತಾನೇ ಮುಂದಾದ ವ್ಯಕ್ತಿ

ಈ ವಿಡಿಯೊ ತ್ವರಿತವಾಗಿ ನೆಟ್ಟಿಗರ ಗಮನ ಸೆಳೆದಿದ್ದು, ಸಾವಿರಾರು ವೀಕ್ಷಣೆ ಗಳಿಸಿದೆ. ಕಾರ್ಮಿಕರ ಮುಖದಲ್ಲಿ ಅರಳಿದ ನಗು ಮತ್ತು ಕೃತಜ್ಞತೆಯ ಭಾವನೆ ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ಲಕ್ಷ್ಮಣ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಳಕೆದಾರರೊಬ್ಬರು ಇಂತಹ ಸಣ್ಣ ಪುಟ್ಟ ಸಹಾಯ ಎಲ್ಲರಿಗೂ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.