ಪೋರ್ಚುಗಲ್‌ಗೆ ತೆರಳುತ್ತಿದ್ದ ಭಾರತೀಯ ದಂಪತಿ, 3 ವರ್ಷದ ಮಗು ಅಪಹರಣ!
Kidnap Case: ಪೋರ್ಚುಗಲ್‌ಗೆ ವಲಸೆ ಹೋಗಲು ಯತ್ನಿಸುತ್ತಿದ್ದ ಭಾರತೀಯ ದಂಪತಿ ಮತ್ತು ಅವರ ಮೂರು ವರ್ಷದ ಮಗಳನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಹರಣಾಕಾರರು ಅವರ ಬಿಡುಗಡೆಗೆ 2 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಧರ್ಬಿಕ ಚಿತ್ರ -
ಲಿಬಿಯಾ: ಪೋರ್ಚುಗಲ್‌ಗೆ ವಲಸೆ ಹೋಗಲು ಯತ್ನಿಸುತ್ತಿದ್ದ ಭಾರತೀಯ ದಂಪತಿ ಮತ್ತು ಅವರ ಮೂರು ವರ್ಷದ ಮಗಳನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಹರಣಾಕಾರರು ಅವರ ಬಿಡುಗಡೆಗೆ 2 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಈ ಕುಟುಂಬವು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಬಾದಲ್‌ಪುರ ಗ್ರಾಮದವರಾಗಿದ್ದು ; ಅವರನ್ನು ಕಿಸ್ಮತ್‌ಸಿನ್ಹ್ ಚಾವ್ಡಾ, ಅವರ ಪತ್ನಿ ಹೀನಾಬೆನ್ ಮತ್ತು ಮಗಳು ದೇವಾಂಶಿ ಎಂದು ಗುರುತಿಸಲಾಗಿದೆ.
ಕಿಸ್ಮತ್ಸಿನ್ಹ್ ಅವರ ಸಹೋದರ ವಾಸಿಸುವ ಪೋರ್ಚುಗಲ್‌ಗೆ ಹೋಗುತ್ತಿದ್ದಾಗ ಕುಟುಂಬವನ್ನು ಲಿಬಿಯಾದಲ್ಲಿ ಅಪಹರಿಸಲಾಯಿತು ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಸೋಲಂಕಿ ತಿಳಿಸಿದ್ದಾರೆ. ನವೆಂಬರ್ 29 ರಂದು ಗುಜರಾತ್‌ನ ಅಹಮದಾಬಾದ್‌ನಿಂದ ದುಬೈಗೆ ವಿಮಾನದಲ್ಲಿ ತೆರಳಿದ್ದರು. ಬಳಿಕ ಅಲ್ಲಿಂದ ಅವರು ಲಿಬಿಯಾದ ಬೆಂಗಾಜಿ ನಗರಕ್ಕೆ ಹೋದರು ಅಲ್ಲಿ ಅವರನ್ನು ಅಪಹರಿಸಲಾಯಿತು ಎಂದು ತಿಳಿದು ಬಂದಿದೆ. ಕುಟುಂಬವು ಯುರೋಪಿಯನ್ ರಾಷ್ಟ್ರದಲ್ಲಿ ನೆಲೆಸಲು ಬಯಸಿತ್ತು ಮತ್ತು ಪೋರ್ಚುಗಲ್ ಮೂಲದ ಏಜೆಂಟ್ ಸಹಾಯದಿಂದ ಪ್ರಯಾಣಿಸುತ್ತಿತ್ತು. ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಸೋಲಂಕಿ ತಿಳಿಸಿದ್ದಾರೆ.
ಚಾವ್ಡಾ ಅವರ ಸಹೋದರ ಪೋರ್ಚುಗಲ್‌ನಲ್ಲಿ ನೆಲೆಸಿದ್ದಾರೆ ಮತ್ತು ಅವರು ಪೋರ್ಚುಗಲ್ ಮೂಲದ ಏಜೆಂಟ್ ಸಹಾಯದಿಂದ ಪ್ರಯಾಣಿಸುತ್ತಿದ್ದರು. ಕುಟುಂಬವು ಅಲ್ಲಿ ನೆಲೆಸುವ ಉದ್ದೇಶದಿಂದ ಪ್ರಯಾಣಿಸುತ್ತಿತ್ತು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಏಜೆಂಟರು ಭಾರತೀಯರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬವನ್ನು ಅಪಹರಿಸಿದ ನಂತರ, ಅಪಹರಣಕಾರರು ಮೆಹ್ಸಾನಾದಲ್ಲಿರುವ ಅವರ ಸಂಬಂಧಿಕರನ್ನು ಸಂಪರ್ಕಿಸಿ 2 ಕೋಟಿ ರೂ. ಸುಲಿಗೆ ಬೇಡಿಕೆ ಇಟ್ಟರು, ನಂತರ ಸಂಬಂಧಿಕರು ಶುಕ್ರವಾರ ಸಹಾಯಕ್ಕಾಗಿ ಜಿಲ್ಲಾಧಿಕಾರಿ ಎಸ್‌ಕೆ ಪ್ರಜಾಪತಿ ಅವರನ್ನು ಸಂಪರ್ಕಿಸಿದ್ದಾರೆ.
: ಶಾಲೆ ಮೇಲೆ ಬಂಧೂಕುದಾರಿಗಳ ದಾಳಿ; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, 12 ಶಿಕ್ಷಕರ ಅಪಹರಣ, ಹೆಚ್ಚಿದ ಆತಂಕ
ಈ ವರ್ಷದ ಜುಲೈನಲ್ಲಿ, ನೈಜರ್‌ನ ದೋಸೊ ಪ್ರದೇಶದಲ್ಲಿ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ರಂಜಿತ್ ಸಿಂಗ್ ಎಂಬ ಭಾರತೀಯ ವ್ಯಕ್ತಿಯನ್ನು ಅಪರಿಚಿತ ಬಂದೂಕುಧಾರಿಗಳು ಅಪಹರಿಸಿದ್ದರು . ಬಂದೂಕುಧಾರಿಗಳು ಇತರ ಇಬ್ಬರು ಭಾರತೀಯರನ್ನು ಸಹ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ರಂಜಿತ್ ಸಿಂಗ್ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ನಿವಾಸಿ. ನೈಜೀರಿಯಾದ ರಾಜಧಾನಿ ನಿಯಾಮಿಯಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ದೋಸೊದಲ್ಲಿ ನಿರ್ಮಾಣ ಸ್ಥಳವೊಂದರ ಕಾವಲು ಕಾಯುತ್ತಿದ್ದ ಸೇನಾ ಘಟಕದ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ನಡೆಸಿ ಅವರನ್ನು ಅಪಹರಿಸಿದ್ದರು.