10 ಜನರಿದ್ದ ಇಂಡೋನೇಷ್ಯಾ ವಾಯು ಸಾರಿಗೆ ವಿಮಾನ ನಾಪತ್ತೆ
ಏಳು ಸಿಬ್ಬಂದಿಯೊಂದಿಗೆ ಇಂಡೋನೇಷ್ಯಾ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದ ಇಂಡೋನೇಷ್ಯಾದ ವಾಯು ಸಾರಿಗೆ ವಿಮಾನವು ನಾಪತ್ತೆಯಾಗಿದೆ. ಯೋಗಕರ್ತದಿಂದ ಹೊರಟು ಸುಲವೇಸಿ ದ್ವೀಪದ ಮಕಾಸ್ಸರ್ ನಗರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಹತ್ತು ಮಂದಿ ಪ್ರಯಾಣಿಸುತ್ತಿದ್ದರು. ಇವರ ಹುಡುಕಾಟ ಕಾರ್ಯ ನಡೆಯುತ್ತಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಇಂಡೋನೇಷ್ಯಾ: ಯೋಗಕರ್ತದಿಂದ (Yogyakarta) ಸುಲವೇಸಿ ದ್ವೀಪದ (ulawesi island) ಮಕಾಸ್ಸರ್ (Makassar) ನಗರಕ್ಕೆ ತೆರಳುತ್ತಿದ್ದ ಇಂಡೋನೇಷ್ಯಾ ವಾಯು ಸಾರಿಗೆ ಟರ್ಬೊಪ್ರೊಪ್ ವಿಮಾನವು (Indonesia Air Transport turboprop aircraft) ಶನಿವಾರ ನಾಪತ್ತೆಯಾಗಿದೆ. ವಿಮಾನದ ಸಂಪರ್ಕ ಕಳೆದುಹೋಗಿದ್ದು, ಈ ವಿಮಾನದಲ್ಲಿ ಇಂಡೋನೇಷ್ಯಾದ ಮೂವರು ಅಧಿಕಾರಿಗಳು ಮತ್ತು ಏಳು ಮಂದಿ ಸಿಬ್ಬಂದಿ ಇದ್ದರು. ಈ ವಿಮಾನಕ್ಕಾಗಿ ಹುಡುಕಾಟ ಕಾರ್ಯ ನಡೆಸಲಾಗುತ್ತಿದೆ. ಮಧ್ಯಾಹ್ನ 1 ಗಂಟೆಯ ಅನಂತರ ಮಾನದೊಂದಿಗಿನ ಸಂಪರ್ಕ ಕಡಿತಗೊಂಡಿತು ಎಂದು ವಾಯು ಸಾರಿಗೆ ಇಲಾಖೆಯ ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಶಕ್ತಿ ವಹ್ಯು ಟ್ರೆಂಗೊನೊ, ಇಂಡೋನೇಷ್ಯಾ ವಾಯು ಸಾರಿಗೆ ಟರ್ಬೊಪ್ರೊಪ್ ವಿಮಾನವು ಶನಿವಾರ ಮಧ್ಯಾಹ್ನ 1 ಗಂಟೆಯ ಅನಂತರ ನಾಪತ್ತೆಯಾಗಿದೆ. ಈ ವಿಮಾನವು ಯೋಗಕರ್ತದಿಂದ ಸುಲವೇಸಿ ದ್ವೀಪದ ಮಕಾಸ್ಸರ್ ನಗರಕ್ಕೆ ತೆರಳುತ್ತಿತ್ತು. ಸಮುದ್ರ ವ್ಯವಹಾರ ಮತ್ತು ಮೀನುಗಾರಿಕೆ ಸಚಿವಾಲಯದ ಮೂವರು ಉದ್ಯೋಗಿಗಳು ಇದರಲ್ಲಿದ್ದು, ಈ ಪ್ರದೇಶದಲ್ಲಿನ ಸಂಪನ್ಮೂಲಗಳ ವೈಮಾನಿಕ ಮೇಲ್ವಿಚಾರಣೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.
ಭಯದ ವಾತಾವರಣ, ಇಂಟರ್‌ನೆಟ್ ಇಲ್ಲ; ಅಶಾಂತಿಯ ನಡುವೆ ಇರಾನ್‌ನಿಂದ ತಾಯ್ನಾಡಿಗೆ ಮರಳಿದ ಭಾರತೀಯರು ಹೇಳಿದ್ದೇನು?
ಏಳು ಸಿಬ್ಬಂದಿ ಸದಸ್ಯರು ಸಹ ವಿಮಾನದಲ್ಲಿದ್ದರು. ವಿಮಾನ ಶೋಧ ಕಾರ್ಯಕ್ಕಾಗಿ ಸ್ಥಳೀಯ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಆರಿಫ್ ಅನ್ವರ್ ನೇತೃತ್ವದಲ್ಲಿ ಎಎಫ್ ಪಿ ತಂಡಗಳನ್ನು ರಚಿಸಲಾಗಿದೆ. ವಿಮಾನ ಕೊನೆಯದಾಗಿ ಸಂದೇಶ ಕಳುಹಿಸಿರುವ ಸ್ಥಳ ಮಕಾಸ್ಸರ್‌ನ ಗಡಿಯಲ್ಲಿರುವ ಮಾರೋಸ್ ರೀಜೆನ್ಸಿಯ ಪರ್ವತ ಪ್ರದೇಶವಾಗಿದ್ದು, ಇಲ್ಲಿ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.
🚨🇮🇩#BREAKING | NEWS ⚠️
— Todd Paron🇺🇸🇬🇷🎧👽 (@tparon) January 17, 2026
Update ATR. 42-500 Aircraft belonging to the Indonesian Ministry of Marine affairs and fisheries has gone missing in Indonesia (#PKTHT) your word on how many people were aboard the aircraft.
The aircraft took off from Yogyakarta heading to Makassar before… pic.twitter.com/HMZ7gbyCec
ರಕ್ಷಣಾ ಕಾರ್ಯದಲ್ಲಿ ಭೂ ಮತ್ತು ವಾಯುಪಡೆಯ ಸಿಬ್ಬಂದಿ, ಪೊಲೀಸರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದಾರೆ. ವಿಮಾನವನ್ನು ಹುಡುಕಲು ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಮಕಾಸ್ಸರ್ ಶೋಧ ಮತ್ತು ರಕ್ಷಣಾ ಸಂಸ್ಥೆಯ ಕಾರ್ಯಾಚರಣೆ ಮುಖ್ಯಸ್ಥ ಆಂಡಿ ಸುಲ್ತಾನ್ ತಿಳಿಸಿದ್ದಾರೆ.
ಫ್ರಾನ್ಸ್ ಮೂಲದ ವಿಮಾನ ತಯಾರಕ ಸಂಸ್ಥೆ ಎಟಿಆರ್, ತನ್ನ ವಿಮಾನಗಳಲ್ಲಿ ಒಂದು ಅಪಘಾತವಾಗಿರುವುದಾಗಿ ಹೇಳಿದೆ. ತನಿಖೆಯಲ್ಲಿ ತಾನು ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಅದು ತಿಳಿಸಿದೆ.
ಟ್ರಂಪ್‌ಗೆ ಕೊನೆಗೂ ಒಲಿದ ನೊಬೆಲ್ ಶಾಂತಿ ಪ್ರಶಸ್ತಿ! ಲಾಬಿಗೆ ಮಣಿದರೇ ಮಾರಿಯಾ ಮಚಾದೊ?
ಆಗ್ನೇಯ ಏಷ್ಯಾದ ವಿಶಾಲ ದ್ವೀಪಸಮೂಹವಾದ ಇಂಡೋನೇಷ್ಯಾ, ತನ್ನ ಸಾವಿರಾರು ದ್ವೀಪಗಳನ್ನು ಸಂಪರ್ಕಿಸಲು ವಾಯು ಸಾರಿಗೆಯನ್ನು ಹೆಚ್ಚು ಅವಲಂಬಿಸಿದೆ. ಆದರೆ ದೇಶವು ಕಳಪೆ ವಾಯುಯಾನ ಸುರಕ್ಷತಾ ದಾಖಲೆಯನ್ನು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಹಲವಾರು ದುರಂತಗಳು ಸಂಭವಿಸಿವೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ದಕ್ಷಿಣ ಕಾಲಿಮಂಟನ್ ಪ್ರಾಂತ್ಯದಿಂದ ಹೊರಟ ಸ್ವಲ್ಪ ಸಮಯದ ಅನಂತರ ಅಪಘಾತಕ್ಕೀಡಾಗಿದ್ದು, ಎಲ್ಲರೂ ಸಾವನ್ನಪ್ಪಿದ್ದರು. ಇದಾದ ಎರಡು ವಾರಗಳ ಬಳಿಕ ಮತ್ತೊಂದು ಹೆಲಿಕಾಪ್ಟರ್ ಪಪುವಾ ಜಿಲ್ಲೆಯ ಇಲಾಗದಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದರು.