ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಳ್ಳುಳ್ಳಿ ಸೇವನೆಯಿಂದ ಪಾರ್ಶ್ವವಾಯು ತಡೆಯಬಹುದೇ? ವೈದ್ಯರ ಸಲಹೆ ಏನು?

Health Tips: ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡ ಒಂದಾಗಿದೆ. ಇದು ಅಡುಗೆಯ ರುಚಿ ಹೆಚ್ಚು ಮಾಡುವುದಲ್ಲದೆ ವೈಜ್ಞಾನಿಕವಾಗಿಯೂ ಹಲವು ಆರೋಗ್ಯ ಲಾಭಗಳನ್ನು ಹೊಂದಿದೆ. ಅದರಲ್ಲೂ ಪ್ರತಿದಿನ ಬೆಳ್ಳುಳ್ಳಿ ಸೇವನೆ ಮಾಡಿದರೆ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಪಾರ್ಶ್ವವಾಯು ತಡೆಗಟ್ಟಲು ಬೆಳ್ಳುಳ್ಳಿ ಸಹಕಾರಿಯೇ?

ಇಂಟರ್ ನೆಟ್ ಚಿತ್ರ -

Profile
Pushpa Kumari Sep 22, 2026 7:00 AM

ನವದೆಹಲಿ: ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥಗಳಲ್ಲಿ ಬೆಳ್ಳುಳ್ಳಿ (Garlic For Every Day) ಕೂಡ ಒಂದಾಗಿದೆ. ಇದು ಅಡುಗೆಯ ರುಚಿ ಹೆಚ್ಚು ಮಾಡುವುದಲ್ಲದೆ ವೈಜ್ಞಾನಿಕವಾಗಿಯೂ ಹಲವು ಆರೋಗ್ಯ ಲಾಭಗಳನ್ನು ಹೊಂದಿದೆ. ಅದರಲ್ಲೂ ಪ್ರತಿದಿನ ಬೆಳ್ಳುಳ್ಳಿ ಸೇವನೆ ಮಾಡಿದರೆ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.  ಇದೀಗ ಬೆಳ್ಳುಳ್ಳಿಯ ಸಂಪೂರ್ಣ ಆರೋಗ್ಯ ಲಾಭ ಪಡೆಯಲು ಹೇಗೆ ಬಳಸಬೇಕು ಎನ್ನುವ ಮಾಹಿತಿ ಇಲ್ಲಿದೆ.

​ಹೇಗೆ ಸೇವನೆ ಮಾಡಬೇಕು?

ಹಸಿ ಬೆಳ್ಳುಳ್ಳಿಯ ಎಸಳನ್ನು ಜಜ್ಜಿದ ಅಥವಾ ಸಣ್ಣದಾಗಿ ಹೆಚ್ಚಿದ ತಕ್ಷಣ ಸೇವಿಸಬೇಡಿ. ಅದನ್ನು 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಇಟ್ಟರೆ ಒಳ್ಳೆಯದು. ಈ ಸಮಯದಲ್ಲಿ ಬೆಳ್ಳುಳ್ಳಿ ಯಲ್ಲಿರುವ ಕಿಣ್ವಗಳು ಪೋಷಕಾಂಶವನ್ನು ಉತ್ಪಾದಿ ಸುತ್ತವೆ.ಹಾಗಾಗಿ ಸ್ವಲ್ಪ ಸಮಯದ ನಂತರವೇ ಸೇವಿಸಿ.

ಹಸಿಯಾಗಿಯೇ ಸೇವಿಸಿ:

ಬೆಳ್ಳುಳ್ಳಿಯನ್ನು ಅತಿಯಾಗಿ ಬೇಯಿಸುವುದರಿಂದ ಅದರಲ್ಲಿರುವ ಸೂಕ್ಷ್ಮ ಕಿಣ್ವಗಳು ನಾಶವಾಗುತ್ತವೆ. ಜಜ್ಜಿದ ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಅಥವಾ ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದು ಅತ್ಯಂತ ಉಪಯೋಗಕಾರಿ

Vishwavani health: ಮದುವೆ ಬಳಿಕ ಮಹಿಳೆ ದಪ್ಪಗಾಗಲು ಕಾರಣವೇನು? ಹೇಗೆ ಇದನ್ನು ನಿಯಂತ್ರಿಸುವುದು? ಇಲ್ಲಿದೆ ಟಿಪ್ಸ್‌

ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ:

ಬೆಳ್ಳುಳ್ಳಿಯ ಅತ್ಯುತ್ತಮ ಆರೋಗ್ಯ ಲಾಭ ಅಂದ್ರೆ ಪ್ರತಿದಿನ ಒಂದು ಎಸಳು ಹಸಿ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತನಾಳಗಳು ಸಕ್ರಿಯಗೊಂಡು ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಪಾರ್ಶ್ವವಾಯು ಬರುವ ಅಪಾಯ ಕಡಿಮೆಯಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ:

ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಪ್ರಮಾಣ ಹೆಚ್ಚಾಗಿದ್ದು  ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳ ವಿರುದ್ಧ ಹೋರಾಟ ನಡೆಸುತ್ತವೆ.ಇದರಿಂದ ಯಾವುದೇ ಖಾಯಿಲೆ ಬರದಂತೆ ತಡೆಯಬಹುದು.

ರಕ್ತ ಶುದ್ಧೀಕರಣ ಮಾಡುತ್ತದೆ:

ಬೆಳ್ಳುಳ್ಳಿಯಲ್ಲಿ ಸಲ್ಫರ್ ಎನ್ನುವ ಅಂಶ ಹೇರಳವಾಗಿ ಇರುವುದರಿಂದ ಇದು ರಕ್ತವನ್ನು ಶುದ್ಧೀಕರಿಸಿ ದೇಹದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಸಾಮಾನ್ಯ ಶೀತದ ವಿರುದ್ಧ ಹೋರಾಡುತ್ತದೆ:

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಬೆಳ್ಳುಳ್ಳಿ ಸಹಕಾರಿಯಾಗಿದೆ. ಇದು ಪ್ರತಿರಕ್ಷಣಾ ಕಾರ್ಯವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ, ಶೀತ,ಕೆಮ್ಮು ಉಂಟಾಗುವ ತೊಡಕುಗಳ ವಿರುದ್ಧ ದೇಹವನ್ನು ರಕ್ಷಣೆ ಮಾಡುತ್ತದೆ.