ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

₹5.65 ಲಕ್ಷ ಆರಂಭಿಕ ಬೆಲೆಯಲ್ಲಿ ಹೊಚ್ಚ ಹೊಸ ನಿಸ್ಸಾನ್ ಗ್ರಾವೈಟ್ ಬಿಡುಗಡೆ ಭಾರತದಲ್ಲಿ ನಿಸ್ಸಾನ್‌ ನ ಹೊಸ ಪ್ರಯಾಣ ಆರಂಭ

ಭಾರತದಿಂದ ಪ್ರೇರಿತ, ಭಾರತದಲ್ಲೇ ನಿರ್ಮಿತ ಮತ್ತು ಭಾರತೀಯರಿಗಾಗಿ ಸಿದ್ಧಪಡಿಸಿದ" ಈ ಗ್ರಾವೈಟ್ ಎಂಪಿವಿ, ನಿಸ್ಸಾನ್ ಮೋಟಾರ್ ಇಂಡಿಯಾದ ವಿನೂತನ ಉತ್ಪನ್ನ ಸರಣಿಯ ಮೊದಲ ಉತ್ಪನ್ನವಾಗಿದ್ದು, ಇದು ಭಾರತೀಯ ಮಾರುಕಟ್ಟೆಯ ಬಗ್ಗೆ ಕಂಪನಿಗಿರುವ ಬದ್ಧತೆಯನ್ನು ಸಾರುತ್ತದೆ ಮತ್ತು ಸಂಸ್ಥೆಯು ದೇಶದಲ್ಲಿ ಹೊಂದಿರುವ ಬಲವಾದ ಅಸ್ತಿತ್ವ ವನ್ನು ತೋರಿಸುತ್ತದೆ

ಭಾರತದಲ್ಲಿ ನಿಸ್ಸಾನ್‌ ನ ಹೊಸ ಪ್ರಯಾಣ ಆರಂಭ

-

Ashok Nayak
Ashok Nayak Feb 18, 2026 10:22 PM

ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ನಿಸ್ಸಾನ್ ಮೋಟಾರ್ ಇಂಡಿಯಾ ಇಂದು ತನ್ನ ಬಹುನಿರೀಕ್ಷಿತ 'ನಿಸ್ಸಾನ್ ಗ್ರಾವೈಟ್' ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ₹5.65 ಲಕ್ಷ ಆಕರ್ಷಕ ಆರಂಭಿಕ ಬೆಲೆಯಲ್ಲಿ ಈ ಕಾರು ಲಭ್ಯವಿದೆ. ಇದು ಅತ್ಯಾಧುನಿಕ ಹಾಗೂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿರುವ 7-ಸೀಟರ್ ಎಂಪಿವಿ ಆಗಿದ್ದು, ಈ ಮೂಲಕ ಭಾರತದಲ್ಲಿ ನಿಸ್ಸಾನ್ ನ ಹೊಸ ಅಧ್ಯಾಯ ಆರಂಭವಾಗಿದೆ.

"ಭಾರತದಿಂದ ಪ್ರೇರಿತ, ಭಾರತದಲ್ಲೇ ನಿರ್ಮಿತ ಮತ್ತು ಭಾರತೀಯರಿಗಾಗಿ ಸಿದ್ಧಪಡಿಸಿದ" ಈ ಗ್ರಾವೈಟ್ ಎಂಪಿವಿ, ನಿಸ್ಸಾನ್ ಮೋಟಾರ್ ಇಂಡಿಯಾದ ವಿನೂತನ ಉತ್ಪನ್ನ ಸರಣಿಯ ಮೊದಲ ಉತ್ಪನ್ನವಾಗಿದ್ದು, ಇದು ಭಾರತೀಯ ಮಾರುಕಟ್ಟೆಯ ಬಗ್ಗೆ ಕಂಪನಿಗಿರುವ ಬದ್ಧತೆಯನ್ನು ಸಾರುತ್ತದೆ ಮತ್ತು ಸಂಸ್ಥೆಯು ದೇಶದಲ್ಲಿ ಹೊಂದಿರುವ ಬಲವಾದ ಅಸ್ತಿತ್ವ ವನ್ನು ತೋರಿಸುತ್ತದೆ.

"ಗ್ರಾವೈಟ್" ಎಂಬ ಹೆಸರನ್ನು 140 ಕೋಟಿ ಭಾರತೀಯರಿಂದ ಮತ್ತು ದೇಶದ ವೈವಿಧ್ಯತೆ ಯನ್ನು ಸಾರುವ 19,000 ಪ್ರಾದೇಶಿಕ ಭಾಷೆಗಳು ಹಾಗೂ ಆಚರಣೆಗಳ ಸ್ಫೂರ್ತಿಯಿಂದ ಇಡಲಾಗಿದೆ. ಭಾರತೀಯ ಕುಟುಂಬಗಳ ಬೆಳೆಯುತ್ತಿರುವ ಆಸೆಗಳನ್ನು ಪೂರೈಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ವಿಶಾಲವಾದ ಸ್ಥಳಾವಕಾಶ, ಆರಾಮದಾಯಕತೆ ಮತ್ತು ದೈನಂದಿನ ಬಳಕೆಗೆ ಪೂರಕವಾದ ಸೌಲಭ್ಯ ಹೊಂದಿದೆ ಮತ್ತು ಅದ್ಭುತ ರೋಡ್ ಪ್ರೆಸೆನ್ಸ್ ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿಸ್ಸಾನ್ ಮತ್ತು ಇನ್ಫಿನಿಟಿ (ಮಧ್ಯಪ್ರಾಚ್ಯ, ಕೆಎಸ್‌ಎ, ಸಿಐಎಸ್ ಮತ್ತು ಭಾರತದ ವಿಭಾಗೀಯ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು) ಥಿಯರ್ರಿ ಸಬ್ಬಾಗ್ ಅವರು, "ನಿಸ್ಸಾನ್‌ ನ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತವು ಅತ್ಯಂತ ಪ್ರಮುಖ ಕೇಂದ್ರವಾಗಿದೆ. ಕಳೆದ ಒಂದು ವರ್ಷದಲ್ಲಿ ನಾವು ನಮ್ಮ ಕಾರ್ಯಾಚರಣೆಗಳನ್ನು ಬಲಪಡಿಸುವುದು, ನೆಟ್‌ ವರ್ಕ್ ವಿಸ್ತರಣೆ ಮತ್ತು ಹೊಸ ಉತ್ಪನ್ನಗಳ ಬಿಡುಗಡೆಯ ಮೂಲಕ ಈ ಮಾರುಕಟ್ಟೆಯ ಬಗ್ಗೆ ಹೆಚ್ಚು ಗಮನ ಇರುವು ದನ್ನು ಸಾಬೀತುಪಡಿಸಿದ್ದೇವೆ. ಹೊಸ ನಿಸ್ಸಾನ್ ಗ್ರಾವೈಟ್ ಮೂಲಕ ನಾವು ಕೇವಲ ಒಂದು ಉತ್ಪನ್ನದ ಬಿಡುಗಡೆ ಮಾಡುತ್ತಿರುವುದು ಮಾತ್ರವಲ್ಲ, ಇದು ಭಾರತದಲ್ಲಿ ನಿಸ್ಸಾನ್‌ ನ ನಿರಂತರ ಬೆಳವಣಿಗೆಯ ಆರಂಭದ ಹಂತವಾಗಿದೆ. ಚೆನ್ನೈನಲ್ಲಿರುವ ನಮ್ಮ ಘಟಕದಲ್ಲಿ ಸ್ಥಳೀಯ ಉತ್ಪಾದನೆ ಮಾಡುವ ಮೂಲಕ ಮತ್ತು ಭವಿಷ್ಯದ ಯೋಜನೆಗಳನ್ನು ಹೊಂದುವ ಮೂಲಕ ನಾವು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧಿಸಲು, ಬೆಳೆಯಲು ಮತ್ತು ಮುನ್ನಡೆ ಸಾಧಿಸಲು ಸಜ್ಜಾಗಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ: TATA Mumbai Marathon 2026: ಅಂತಾರಾಷ್ಟ್ರೀಯ, ಭಾರತೀಯ ಎಲೀಟ್ ಓಟಗಾರರು ಸಜ್ಜು!

ನಿಸ್ಸಾನ್ ಮೋಟಾರ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಸೌರಭ್ ವತ್ಸಾ ಮಾತನಾಡಿ, “ಹೊಸ ನಿಸ್ಸಾನ್ ಗ್ರಾವೈಟ್ ಭಾರತೀಯ ಕುಟುಂಬಗಳ ಅವಶ್ಯಕತೆ ಮತ್ತು ಮಹತ್ವಾಕಾಂಕ್ಷೆಗಳಿಂದ ಸ್ಫೂರ್ತಿ ಪಡೆದು ತಯಾರಾಗಿದೆ. ಇದರ ಬದಲಾಯಿಸಬಹುದಾದ ಸೀಟುಗಳ ವಿನ್ಯಾಸದಿಂದ ಹಿಡಿದು ಅದರ ಅದ್ಭುತ ಲುಕ್ ವರೆಗೆ ಪ್ರತಿಯೊಂದು ವಿವರವೂ ಭಾರತೀಯ ಗ್ರಾಹಕರು ಹೇಗೆ ಜೀವಿಸುತ್ತಾರೆ, ಪ್ರಯಾಣಿಸುತ್ತಾರೆ ಮತ್ತು ಬೆಳೆಯುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ನಮಗೆ 'ಗ್ರಾವೈಟ್' ಕೇವಲ ಒಂದು ಹೊಸ ಉತ್ಪನ್ನ ಮಾತ್ರವಲ್ಲ, ಇದು ಭಾರತದ ಸಾರಿಗೆ ಅಗತ್ಯಗಳಿಗೆ ಪೂರಕವಾದ ವಾಹನಗಳನ್ನು ವಿನ್ಯಾಸ ಗೊಳಿಸಲು, ತಯಾರಿಸಲು ಮತ್ತು ಹೂಡಿಕೆ ಮಾಡಲು ನಿಸ್ಸಾನ್ ಬದ್ಧವಾಗಿದೆ ಎಂಬುದಕ್ಕೆ ಒಂದು ಪುರಾವೆಯಾಗಿದೆ” ಎಂದು ಹೇಳಿದರು.

ವಿನ್ಯಾಸ ಮತ್ತು ಸ್ಫೂರ್ತಿ

ಹೊಸ ನಿಸ್ಸಾನ್ ಗ್ರಾವೈಟ್ ನಿಸ್ಸಾನ್‌ ನ ಜಾಗತಿಕ ವಿನ್ಯಾಸ ಶೈಲಿಗೆ ಅನುಗುಣವಾಗಿ ವಿಶಿಷ್ಟ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಇದರ ಎತ್ತರದ ವಿನ್ಯಾಸ, ಬಲಿಷ್ಠವಾದ ಬಾಡಿ ಲೈನ್‌ ಗಳು, ಎದ್ದು ಕಾಣುವ ವೀಲ್ ಆರ್ಚ್‌ ಗಳು ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಭಾರತದ ವೈವಿಧ್ಯಮಯ ರಸ್ತೆಗಳಿಗೆ ಸೂಕ್ತವಾಗಿದೆ.

ಗ್ರಾವೈಟ್ ತನ್ನ ವಿಭಾಗದಲ್ಲಿ ಬಾನೆಟ್‌ ನ ಮೇಲೆ ವಿಶಿಷ್ಟವಾದ 'ಬ್ರ್ಯಾಂಡಿಂಗ್' ಮತ್ತು ಹಿಂಭಾಗದ ಬಾಗಿಲಿನ ಮೇಲೆ ವಿಶಿಷ್ಟ 'ಬ್ಯಾಡ್ಜಿಂಗ್' ಹೊಂದಿರುವ ಏಕೈಕ ವಾಹನವಾಗಿದೆ. ಈ ಬೋಲ್ಡ್ ವಿನ್ಯಾಸವು ಕಾರಿನ ವಿಶಿಷ್ಟತೆಯನ್ನು ಸಾರುವುದಲ್ಲದೆ, ಜನಮಾನಸದಲ್ಲಿ ಸುಲಭವಾಗಿ ಉಳಿಯುವಂತೆ ಮಾಡುತ್ತದೆ.

ನಿಸ್ಸಾನ್‌ ನ ವಿಶಿಷ್ಟ 'ಸಿ' ಆಕಾರದ ವಿನ್ಯಾಸವು ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಎದ್ದು ಕಾಣುತ್ತಿದ್ದು, ಬ್ರ್ಯಾಂಡ್ ಅನ್ನು ತಕ್ಷಣವೇ ಗುರುತಿಸುವಂತೆ ಮಾಡುತ್ತದೆ. ಜೊತೆಗೆ ಇದು ವಾಹನಕ್ಕೆ ಪ್ರೀಮಿಯಂ ಮತ್ತು ಸಮಕಾಲೀನ ರೂಪವನ್ನು ಒದಗಿಸುತ್ತದೆ.

ಹೊರಭಾಗದ ಪ್ರಮುಖ ವೈಶಿಷ್ಟ್ಯಗಳು

  • ಸಂಪೂರ್ಣ ಎಲ್‌ಇಡಿ ವ್ಯವಸ್ಥೆ.
  • ಆಕರ್ಷಕ ಎಲ್‌ಇಡಿ ಹೆಡ್‌ ಲೈಟ್‌ ಗಳು.
  • ಕ್ರಿಸ್ಟಲ್ ಎಡ್ಜ್ ಎಲ್‌ಇಡಿ ಟೈಲ್ ಲ್ಯಾಂಪ್‌ ಗಳು.
  • ಎಲ್‌ಇಡಿ ಫಾಗ್ ಲ್ಯಾಂಪ್‌ ಗಳು.
  • ವಿಶಿಷ್ಟ 'ಪಿಯಾನೋ ಬ್ಲಾಕ್' 2ಡಿ ಗ್ರಿಲ್.
  • ಫಂಕ್ಷನಲ್ ರೂಫ್ ರೈಲ್ಸ್.
  • ವಿಶಾಲವಾಗಿ ತೆರೆದುಕೊಳ್ಳುವ ಬಾಗಿಲುಗಳು.

ಒಳಾಂಗಣ: ಕುಟುಂಬಕ್ಕೆ ಆರಾಮ ಒದಗಿಸುವ ಅದ್ಭುತ ಸ್ಥಳಾವಕಾಶ

ನಿಸ್ಸಾನ್ ಗ್ರಾವೈಟ್ ತನ್ನ ವಿಶಾಲವಾದ ಕ್ಯಾಬಿನ್ ಮತ್ತು ವಿನೂತನ ಬದಲಾಯಿಸಬಹು ದಾದ ಸೀಟುಗಳ ವ್ಯವಸ್ಥೆಯೊಂದಿಗೆ ಕುಟುಂಬ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ದೈನಂದಿನ ಓಡಾಟ ಮತ್ತು ಸುದೀರ್ಘ ಪ್ರಯಾಣ ಎರಡಕ್ಕೂ ಸರಿ ಹೊಂದುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಮೂರೂ ಸಾಲುಗಳಲ್ಲಿ ಅತ್ಯುತ್ತಮ ಆರಾಮದಾಯಕತೆ ಯನ್ನು ನೀಡುತ್ತದೆ.

ಪ್ರೀಮಿಯಂ ಸುಯೆಡ್ ಮತ್ತು ಲೆದರೆಟ್ ಕ್ವಿಲ್ಟೆಡ್ ಸೀಟುಗಳು ಪ್ರಯಾಣದ ಸುಖವನ್ನು ಹೆಚ್ಚಿಸುತ್ತವೆ. ಮೊದಲ ಸಾಲಿನಲ್ಲಿ ಭುಜ ಮತ್ತು ಮೊಣಕೈಗಳಿಗೆ ಹೆಚ್ಚಿನ ಜಾಗವಿದ್ದು, ಎರಡನೇ ಮತ್ತು ಮೂರನೇ ಸಾಲುಗಳಲ್ಲಿ ತಲೆ (ಹೆಡ್ ರೂಮ್) ಮತ್ತು ಮೊಣಕಾಲುಗಳಿಗೆ (ನೀ ರೂಮ್) ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ. ಇದು ಎಲ್ಲಾ ಪ್ರಯಾಣಿಕರಿಗೂ ಆರಾಮದಾಯಕ ಅನುಭವ ನೀಡುತ್ತದೆ.

ಬದಲಾಯಿಸಬಹುದಾದ ಸೀಟುಗಳ ಸೌಲಭ್ಯಗಳು ಈ ಕೆಳಗಿನಂತಿವೆ:

  • 2 ರಿಂದ 7 ಪ್ರಯಾಣಿಕರಿಗೆ ಸರಿಹೊಂದುವಂತೆ ಸೀಟುಗಳನ್ನು ಹೊಂದಿಸಿಕೊಳ್ಳ ಬಹುದು.
  • 625 ಲೀಟರ್‌ ಗಳವರೆಗಿನ ಬೂಟ್ ಸ್ಪೇಸ್ ಒದಗಿಸಲು ಮೂರನೇ ಸಾಲಿನ ಸೀಟು ಗಳನ್ನು ಸುಲಭವಾಗಿ ತೆಗೆಯಬಹುದು.

ಬೂಟ್ ಸ್ಪೇಸ್ (ಸಾಮಾನು ಇರಿಸುವ ಸ್ಥಳ) ವಿಶೇಷತೆಗಳು:

  • 5- ಸೀಟರ್ ವ್ಯವಸ್ಥೆಯಲ್ಲಿ 625 ಲೀಟರ್‌ ಗಳು
  • 6- ಸೀಟರ್ ವ್ಯವಸ್ಥೆಯಲ್ಲಿ 320 ಲೀಟರ್‌ ಗಳು
  • 7- ಸೀಟರ್ ವ್ಯವಸ್ಥೆಯಲ್ಲಿ 84 ಲೀಟರ್‌ ಗಳು

5-ಸೀಟರ್ ವ್ಯವಸ್ಥೆಯಲ್ಲಿ 625 ಲೀಟರ್‌ ಗಳ ಲಗೇಜ್ ಸಾಮರ್ಥ್ಯ ಹೊಂದಿರುವ ಗ್ರಾವೈಟ್ ಅತ್ಯುತ್ತಮ ಪ್ರಾಯೋಗಿಕ ಸೌಲಭ್ಯ ಒದಗಿಸುತ್ತದೆ.

ಮೂರು ಸಾಲುಗಳ ಏಸಿ ವೆಂಟ್‌ ಗಳನ್ನು ಹೊಂದಿರುವ ಟ್ರಾಪಿಕಲೈಸ್ಡ್ ಏಸಿ ವ್ಯವಸ್ಥೆಯು ಇಡೀ ಕ್ಯಾಬಿನ್‌ ನಲ್ಲಿ ಉತ್ತಮ ಗಾಳಿಯ ಸಂಚಾರ ಇರುವಂತೆ ನೋಡಿಕೊಳ್ಳುತ್ತದೆ. ಇದರೊಂದಿಗೆ ಎರಡನೇ ಸಾಲಿಗೆ ಪ್ರತ್ಯೇಕ ಏರ್-ಕಂಡೀಷನಿಂಗ್ ನಿಯಂತ್ರಣಗಳು, ನೆಕ್ ಸಪೋರ್ಟ್‌ ಗಳು, ಮೊದಲ ಸಾಲಿನ ಆರ್ಮ್‌ ರೆಸ್ಟ್ ಒದಗಿಸಲಾಗಿದೆ ಮತ್ತು ಎರ್ಗೋ ನಾಮಿಕ್ ಆಗಿ ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ.

ಗ್ರಾವೈಟ್ ತನ್ನ ವಿಭಾಗದಲ್ಲೇ ಅತ್ಯುತ್ತಮವಾದ ಕ್ಯಾಬಿನ್ ಸ್ಟೋರೇಜ್ ವ್ಯವಸ್ಥೆಯನ್ನು ನೀಡುತ್ತದೆ, ಅವುಗಳೆಂದರೆ:

  • ಲೋವರ್ ಕೂಲ್ಡ್ ಗ್ಲೋವ್ ಬಾಕ್ಸ್
  • ಅಪ್ಪರ್ ಗ್ಲೋವ್ ಬಾಕ್ಸ್
  • ಕೂಲ್ಡ್ ಸೆಂಟರ್ ಕನ್ಸೋಲ್ ಸ್ಟೋರೇಜ್
  • ಬುದ್ಧಿವಂತಿಕೆಯಿಂದ ವಿನ್ಯಾಸಗೊಳಿಸಲಾದ ಹಲವಾರು ಸ್ಟೋರೇಜ್ ಸ್ಥಳಗಳು

ತಂತ್ರಜ್ಞಾನ ಮತ್ತು ಕನೆಕ್ಟಿವಿಟಿ

ಹೊಸ ನಿಸ್ಸಾನ್ ಗ್ರಾವೈಟ್ ಹೆಚ್ಚಿನ ಸೌಕರ್ಯ ಮತ್ತು ಚಾಲನಾ ಆರಾಮದಾಯಕತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

ಪ್ರಮುಖ ವೈಶಿಷ್ಟ್ಯಗಳು:

  • ವೈರ್‌ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಹೊಂದಿರುವ 20.32 ಸೆಂಮೀ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್.
  • 17.78 ಸೆಂ.ನೀ ಪೂರ್ಣ ಡಿಜಿಟಲ್ ಅಡ್ವಾನ್ಸ್ಡ್ ಮಲ್ಟಿ ಫಂಕ್ಷನಲ್ ಕ್ಲಸ್ಟರ್.
  • ವೈರ್‌ಲೆಸ್ ಚಾರ್ಜರ್.
  • ಫಾಲೋ ಮಿ ಹೋಮ್ ಸೌಲಭ್ಯ ಹೊಂದಿರುವ ಆಟೋ ಎಲ್‌ಇಡಿ ಹೆಡ್‌ ಲ್ಯಾಂಪ್
  • ವಾಕ್ ಅವೇ ಲಾಕ್ (ಡಬ್ಲ್ಯೂಎಎಲ್) ಮತ್ತು ಅಪ್ರೋಚ್ ಅನ್‌ ಲಾಕ್ (ಎಯುಎಲ್) ಸೌಲಭ್ಯ
  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ ಗಳು.

ಪ್ರಮಾಣಿತ ಸಮಗ್ರ ಸುರಕ್ಷತೆ

ಕುಟುಂಬಗಳಿಗೆ ನೆಮ್ಮದಿಯ ಪ್ರಯಾಣ ಸೌಲಭ್ಯ ನೀಡಲು ವಿನ್ಯಾಸಗೊಳಿಸಲಾದ 30+ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಗ್ರಾವೈಟ್ ಅದ್ಭುತ ಸುರಕ್ಷತೆ ಒದಗಿಸುತ್ತದೆ.

ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳು:

  • 6 ಏರ್‌ ಬ್ಯಾಗ್‌ ಗಳು
  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇ ಎಸ್ ಸಿ)
  • ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್)
  • ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ ಎಸ್ ಎ)
  • ಬ್ರೇಕ್ ಅಸಿಸ್ಟ್ ಸಿಸ್ಟಮ್ (ಬಿಎಎಸ್)
  • ಇಬಿಡಿ ಜೊತೆಗೆ ಎಬಿಎಸ್
  • ಎಲ್ಲಾ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ರಿಮೈಂಡರ್

ಒಟ್ಟಾರೆಯಾಗಿ, ಈ ವೈಶಿಷ್ಟ್ಯಗಳು ಚಾಲನಾ ಸಂದರ್ಭಗಳಲ್ಲಿ ಹೆಚ್ಚಿನ ಸ್ಥಿರತೆ, ಸೊಗಸಾದ ನಿರ್ವಹಣೆ ಒದಗಿಸುತ್ತವೆ ಮತ್ತು ಪ್ರಯಾಣಿಕರಿಗೆ ಉತ್ತಮ ರಕ್ಷಣೆ ಒದಗಿಸುತ್ತವೆ.

ಪವರ್‌ ಟ್ರೇನ್: ದೈನಂದಿನ ಆನಂದದಾಯಕ ಚಾಲನೆಗಾಗಿ

ಹೊಸ ನಿಸ್ಸಾನ್ ಗ್ರಾವೈಟ್ ಪರಿಣಾಮಕಾರಿ ಮತ್ತು ಸುಧಾರಿತ ಪೆಟ್ರೋಲ್ ಎಂಜಿನ್ ಹೊಂದಿದ್ದು, ಭಾರತೀಯ ಕುಟುಂಬಗಳ ದೈನಂದಿನ ಪ್ರಯಾಣ ಅಗತ್ಯಗಳನ್ನು ಪೂರೈಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ನಗರ ಮತ್ತು ಹೆದ್ದಾರಿ ರಸ್ತೆಗಳಲ್ಲಿ ಉತ್ತಮ ಆಕ್ಸಲರೇಷನ್ ಸೌಲಭ್ಯ, ಆರಾಮದಾಯಕ ಪ್ರಯಾಣ ಸೌಲಭ್ಯ ಮತ್ತು ಸ್ಥಿರವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಪವರ್‌ ಟ್ರೇನ್‌ ನ ಮುಖ್ಯಾಂಶಗಳು

  • ಎಂಜಿನ್: 1.0ಲೀ, 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್
  • ಗರಿಷ್ಠ ಪವರ್: 72 ಪಿಎಸ್ @6250 ಆರ್ ಪಿ ಎಂ
  • ಗರಿಷ್ಠ ಟಾರ್ಕ್: 96 ಎನ್ಎಂ@3400-3600 ಆರ್ ಪಿ ಎಂ
  • ಟ್ರಾನ್ಸ್‌ ಮಿಷನ್: 5-ಸ್ಪೀಡ್ ಮ್ಯಾನುಯಲ್ ಮತ್ತು 5-ಸ್ಪೀಡ್ ಇಝಡ್- ಶಿಫ್ಟ್ (ಎಎಂಟಿ)
  • ಇಂಧನ ದಕ್ಷತೆ: 19.6 ಕಿಮೀ/ಲೀ (ಎಟಿ), 19.3 ಕಿಮೀ/ಲೀ (ಎಂಟಿ)

ಈ ಸಂಯೋಜನೆಯು ಗ್ರಾಹಕರಿಗೆ ವಿಶ್ವಾಸಾರ್ಹತೆ, ಸುಲಭ ಬಳಕೆ ಮತ್ತು ದೈನಂದಿನ ಉಪಯುಕ್ತತೆಗೆ ನೆರವಾಗುತ್ತದೆ. ಇದು ಇಂಧನ ದಕ್ಷತೆ ಮತ್ತು ಸುಧಾರಿತ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಆಧುನಿಕ ಭಾರತೀಯ ಕುಟುಂಬಗಳ ಅಗತ್ಯಗಳಿಗೆ ಪೂರಕವಾಗಿದೆ.

ಲಿಮಿಟೆಡ್ ಲಾಂಚ್ ಎಡಿಷನ್: ಉನ್ನತ ಅನುಭವ

ಹೊಸ ನಿಸ್ಸಾನ್ ಗ್ರಾವೈಟ್ ಸೀಮಿತ ಅವಧಿಯ 'ಲಾಂಚ್ ಎಡಿಷನ್' ನಲ್ಲಿ ಲಭ್ಯವಿದ್ದು, ಇದು ಹೆಚ್ಚಿನ ಆರಾಮದಾಯಕತೆ, ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಒದಗಿಸುತ್ತದೆ.

ಪ್ರಮುಖ ವಿಶೇಷತೆಗಳು:

  • ಜೆಬಿಎಲ್ ಕಂಪನಿಯ ಪ್ರೀಮಿಯಂ ಸ್ಪೀಕರ್‌ ಗಳು
  • ಡ್ಯುಯಲ್ ಡ್ಯಾಶ್ ಕ್ಯಾಮ್
  • ಏರ್ ಪ್ಯೂರಿಫೈಯರ್
  • ಆಂಬಿಯೆಂಟ್ ಮೂಡ್ ಲೈಟ್
  • ನೆಕ್ ಕುಶನ್
  • ಲಂಬರ್ ಕುಶನ್
  • ಸಿ-ಆಕಾರದ ಏರೋ ಆಕ್ಸೆಂಟ್‌ ಗಳು
  • ವೀಲ್ ಆರ್ಚ್ ಏರೋ ಇನ್ಸರ್ಟ್‌ ಗಳು
  • ಡ್ರಿಫ್ಟ್ ಫ್ಲೋ ಗ್ರಾಫಿಕ್ಸ್
  • ಡೋರ್ ವೈಸರ್
  • ಪ್ರೀಮಿಯಂ ಕ್ರೋಮ್ ಬೆಲ್ಟ್‌ ಲೈನ್
  • ಕ್ರೋಮ್ ಗೇರ್ ಬೆಜೆಲ್

ಬೆಲೆ ವಿವರ:

ವೇರಿಯೆಂಟ್

ಎಕ್ಸ್ ಶೋರೂಮ್ (ರೂ, ಲಕ್ಷಗಳಲ್ಲಿ)

ವಿಸಿಯಾ

5,65,000

ಅಸೆಂಟಾ

6,59,000

ಎನ್-ಕನೆಕ್ಟಾ

7,20,000

ಟೆಕ್ನಾ

7,91,000

ಎನ್-ಕನೆಕ್ಟಾ ಎಎಮ್‌ಟಿ

7,80,000

ಟೆಕ್ನಾ ಎಎಮ್‌ಟಿ

8,49,000

ಭಾರತದಲ್ಲೇ ನಿರ್ಮಿತ. (ಮೇಡ್ ಇನ್ ಇಂಡಿಯಾ) ಭಾರತಕ್ಕೆ ಬದ್ಧ. (ಕಮಿಟೆಡ್ ಟು ಇಂಡಿಯಾ)

ನಿಸ್ಸಾನ್‌ ನ ವಿನೂತನ ಉತ್ಪನ್ನ ಸರಣಿಯಲ್ಲಿ ಎರಡನೇ ಪ್ರಮುಖ ಮಾದರಿಯಾಗಿರುವ 'ಹೊಸ ಗ್ರಾವೈಟ್', ಭಾರತದಲ್ಲಿ ಬ್ರ್ಯಾಂಡ್‌ ನ ಉತ್ಪನ್ನಗಳ ಪುನರುತ್ಥಾನದ ಪಯಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್‌ ನ ಯಶಸ್ಸಿನ ಮೇಲೆ ಇದನ್ನು ನಿರ್ಮಿಸಲಾಗಿದ್ದು, ಮ್ಯಾಗ್ನೈಟ್ ಈಗಾಗಲೇ ಭಾರತದಿಂದ ಜಾಗತಿಕ ಮಾರುಕಟ್ಟೆ ಗಳಿಗೆ ರಫ್ತಾಗುತ್ತಿದೆ ಮತ್ತು ದೇಶದಾದ್ಯಂತ ವಿಸ್ತರಿಸುತ್ತಿರುವ ಡೀಲರ್ ನೆಟ್‌ ವರ್ಕ್‌ ನ ಬೆಂಬಲವನ್ನು ಹೊಂದಿದೆ. ಗ್ರಾವೈಟ್ ಈ ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕಲಿದೆ.

2026ರ ಮಧ್ಯಭಾಗದಲ್ಲಿ ಬರಲಿರುವ 'ಟೆಕ್ಟಾನ್ ಸಿ-ಎಸ್‌ಯುವಿ' ಮತ್ತು 2027ರ ಆರಂಭ ದಲ್ಲಿ ಬರಲಿರುವ '7-ಸೀಟರ್ ಸಿ-ಎಸ್‌ಯುವಿ' ಮಾದರಿಗಳೊಂದಿಗೆ, ನಿಸ್ಸಾನ್‌ ಅದ್ಭುತ ಭವಿಷ್ಯದ ಕಾರ್ಯಸೂಚಿ ಹೊಂದಿದ್ದು, ಇದು ಭಾರತೀಯ ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಬಲವಾದ ಅಸ್ತಿತ್ವವನ್ನು ಸಾಧಿಸುವ ಸಂಸ್ಥೆಯ ವಿಶ್ವಾಸವನ್ನು ಸೂಚಿಸುತ್ತದೆ.

ಹೊಸ ನಿಸ್ಸಾನ್ ಗ್ರಾವೈಟ್ ₹5.65 ಲಕ್ಷಗಳ ಆಕರ್ಷಕ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಯಾಗಿದೆ.

*

ನಿಸ್ಸಾನ್ ಮೋಟಾರ್ ಇಂಡಿಯಾದ ಹೊಸ ಉತ್ಪನ್ನಗಳ ಸರಣಿಯ ಮೊದಲ ಉತ್ಪನ್ನ ಇದಾಗಿದ್ದು, ಭಾರತದಲ್ಲಿ ಬ್ರ್ಯಾಂಡ್‌ ನ ಪುನಶ್ಚೇತನದ ಪ್ರಯಾಣದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

  • ಆಧುನಿಕ ಭಾರತೀಯ ಕುಟುಂಬಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, 140 ಕೋಟಿ ಭಾರತೀಯರು ಮತ್ತು ಅವರ ಬದಲಾಗುತ್ತಿರುವ ಸಂಚಾರ ಅಗತ್ಯಗಳಿಂದ ಸ್ಫೂರ್ತಿ ಪಡೆದು ಇದನ್ನು ನಿರ್ಮಿಸಲಾಗಿದೆ.
  • ನಿಸ್ಸಾನ್‌ ನ ವಿಶಿಷ್ಟ ‘ಸಿ’ ವಿನ್ಯಾಸ ಶೈಲಿಯ ಜೊತೆಗೆ ಆಕರ್ಷಕ ಲುಕ್ ಮತ್ತು ವಿಭಿನ್ನ ಅಸ್ಮಿತೆಯನ್ನು ಹೊಂದಿದೆ.
  • 2 ರಿಂದ 7 ಸೀಟುಗಳವರೆಗೆ ಬದಲಾಯಿಸಬಹುದಾದ ವ್ಯವಸ್ಥೆ ಮತ್ತು ಸಾಮಾನು ಗಳನ್ನು ಇರಿಸಲು ವರ್ಗದಲ್ಲೇ ಅತ್ಯುತ್ತಮವಾದ ಬೂಟ್ ಸ್ಪೇಸ್ ಅನ್ನು ಹೊಂದಿದ್ದು, ಅಸಾಧಾರಣ ಸೌಕರ್ಯ ಒದಗಿಸುತ್ತದೆ.
  • 30+ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಇದರಲ್ಲಿ 6 ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಬ್ರೇಕ್ ಅಸಿಸ್ಟ್ ಒಳಗೊಂಡಿವೆ.
  • ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಹೊಸ ನಿಸ್ಸಾನ್ ಗ್ರಾವೈಟ್ ಫಾರೆಸ್ಟ್ ಗ್ರೀನ್, ಓನಿಕ್ಸ್ ಬ್ಲಾಕ್, ಬ್ಲೇಡ್ ಸಿಲ್ವರ್, ಸ್ಟಾರ್ಮ್ ವೈಟ್ ಮತ್ತು ಮೆಟಾಲಿಕ್ ಗ್ರೇ ಬಣ್ಣಗಳಲ್ಲಿ ದೊರೆಯಲಿದೆ.
  • ಲಿಮಿಟೆಡ್ ಲಾಂಚ್ ಎಡಿಷನ್ ಕೂಡ ದೊರೆಯಲಿದ್ದು, ಇದು ಹೆಚ್ಚಿನ ಆರಾಮದಾಯಕತೆ ಮತ್ತು ಅನುಕೂಲಕ್ಕಾಗಿ ಪ್ರೀಮಿಯಂ ತಂತ್ರಜ್ಞಾನಗಳನ್ನು ಒಳಗೊಂಡಿದೆ.
  • ಚೆನ್ನೈನಲ್ಲಿ ಉತ್ಪಾದನೆ ಆಗುತ್ತಿದ್ದು, ಭಾರತದಲ್ಲಿ ಸ್ಥಳೀಯವಾಗಿ ತಯಾರಿಸುವ ಮೂಲಕ ದೇಶದ ಮಾರುಕಟ್ಟೆಗೆ ನಿಸ್ಸಾನ್ ತನ್ನ ದೀರ್ಘಕಾಲದ ಬದ್ಧತೆಯನ್ನು ಸಾರಿದೆ.
  • ಗ್ರಾಹಕರಿಗೆ ಸುಲಭವಾಗಿ ತಲುಪಲು ಮತ್ತು ಉತ್ತಮ ಅನುಭವ ನೀಡಲು ಟಿಯರ್ I ಮತ್ತು ಟಿಯರ್ II ನಗರಗಳಲ್ಲಿ ನಿಸ್ಸಾನ್ ತನ್ನ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ.