ಪ್ಲಂಬೆಕ್ಸ್ ಇಂದಿಯಾ 2026ಕ್ಕೆ ಇಂದು ಚಾಲನೆ, ನೀರಿನ ಭದ್ರತೆ ಮತ್ತು ಸುಸ್ಥಿರ ನಗರ ವ್ಯವಸ್ಥೆಗಳಿಗೆ ಆದ್ಯತೆ
ಮೊದಲ ದಿನದಲ್ಲಿ ನಗರದ ಪ್ರಮುಖ ನೀರಿನ ಸವಾಲುಗಳು ಮತ್ತು ನೀತಿಯ ಚೌಕಟ್ಟುಗಳ ಕುರಿತು ಬೆಳಕು ಚೆಲ್ಲಲಾಯತು. ವಿಕಾಸ್ ಬ್ರಹ್ಮಾವರ್ (ಟ್ರಾನ್ಸ್ ವಾಟರ್ ಸಿಸ್ಟಂ ಪ್ರೈ.ಲಿ.), ಡಾ.ಶಿಹಾಬುದ್ದೀನ್ ಎ. ಮಳಿಯೆಕ್ಕಲ್ (ಐಐಟಿ ತಿರುಪತಿ), ಡಾ. ಪ್ರಮೋದ್ ಕುಮಾರ್ (ಐಐಎಸ್ಸಿ, ಬೆಂಗಳೂರು) ಮತ್ತು ಆರ್ಕಿಟೆಕ್ಟ್ ವಿ. ವಿಶ್ವನಾಥ್ (ವೈವಿ ಆರ್ಕಿಟೆಕ್ಟ್ಸ್) ಒಳನೋಟಯುಕ್ತ ಚರ್ಚೆಗಳನ್ನು ನಡೆಸಿದರು.
-
ಬೆಂಗಳೂರು: ಪ್ಲಂಬೆಕ್ಸ್ ಇಂಡಿಯಾ 2026 ಇಂದು ಉದ್ಘಾಟನಾ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿದ್ದು ಸತ್ವ ಗ್ರೂಪ್ ನಿರ್ದೇಶಕ ಮಹೇಶ್ ಕುಮಾರ್ ಖೇತಾನ್, ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರ ಅವರೊಂದಿಗೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: TATA Mumbai Marathon 2026: ಅಂತಾರಾಷ್ಟ್ರೀಯ, ಭಾರತೀಯ ಎಲೀಟ್ ಓಟಗಾರರು ಸಜ್ಜು!
1ನೇ ದಿನದ ಪ್ರಮುಖಾಂಶಗಳು
ಮೊದಲ ದಿನದಲ್ಲಿ ನಗರದ ಪ್ರಮುಖ ನೀರಿನ ಸವಾಲುಗಳು ಮತ್ತು ನೀತಿಯ ಚೌಕಟ್ಟುಗಳ ಕುರಿತು ಬೆಳಕು ಚೆಲ್ಲಲಾಯತು. ವಿಕಾಸ್ ಬ್ರಹ್ಮಾವರ್ (ಟ್ರಾನ್ಸ್ ವಾಟರ್ ಸಿಸ್ಟಂ ಪ್ರೈ.ಲಿ.), ಡಾ.ಶಿಹಾಬುದ್ದೀನ್ ಎ. ಮಳಿಯೆಕ್ಕಲ್ (ಐಐಟಿ ತಿರುಪತಿ), ಡಾ. ಪ್ರಮೋದ್ ಕುಮಾರ್ (ಐಐಎಸ್ಸಿ, ಬೆಂಗಳೂರು) ಮತ್ತು ಆರ್ಕಿಟೆಕ್ಟ್ ವಿ. ವಿಶ್ವನಾಥ್ (ವೈವಿ ಆರ್ಕಿಟೆಕ್ಟ್ಸ್) ಒಳನೋಟಯುಕ್ತ ಚರ್ಚೆಗಳನ್ನು ನಡೆಸಿದರು.
ನೀರಿನ ಭದ್ರತೆ ಸಾಧಿಸುವುದು, ಸುಸ್ಥಿರ ಅಂತರ್ಜಲ ನಿರ್ವಹಣೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಸದೃಢ ನಗರ ನೀರಿನ ವ್ಯವಸ್ಥೆಗಳನ್ನು ರೂಪಿಸುವ ಕುರಿತು ಚರ್ಚೆಗಳು ನಡೆದವು.