ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಗುವಿನ ಮೊದಲ ಮಾತೇ ಮಾತೃಭಾಷೆ: ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ

ಕನ್ನಡ ತಾಯಿ ತನ್ನ ಕಂದನೊಂದಿಗೆ ಸಂವಹನ ಮಾಡುವ ಭಾಷೆಯೇ ಮಾತೃಭಾಷೆ. ಜಗತ್ತಿನಲ್ಲಿ ಈಗ ಏಳು ಸಾವಿರಕ್ಕೂ ಹೆಚ್ಚಿನ ಭಾಷೆಗಳಿದ್ದು,ಪ್ರತಿ 30 ರಿಂದ 40 ಕಿಲೋ ಮೀಟರ್ ಗೆ ಭಾಷೆಯ ಶೈಲಿಯಲ್ಲಿ ವಿಭಿನ್ನತೆಯಿರುತ್ತದೆ. ನೂರಾರು ಭಾಷೆಗಳು ಅಳಿದು ಹೋಗಿದ್ದು, ಹಲವಾರು ಭಾಷೆಗಳು ಅಳಿವಿನಂಚಿನಲ್ಲಿವೆ.ಭಾಷೆಯೆAದೆರೆ ಅದು ಬದುಕು ಸಂಸ್ಕೃತಿಯ ಸಾರ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶ್ವ ಮಾತೃಭಾಷಾ ದಿನಾಚರಣೆ

-

Ashok Nayak
Ashok Nayak Feb 22, 2026 10:57 AM

ಚಿಕ್ಕಬಳ್ಳಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ತಾಯಿ ತನ್ನ ಕಂದನೊಂದಿಗೆ ಸಂವಹನ ಮಾಡುವ ಭಾಷೆಯೇ ಮಾತೃಭಾಷೆ. ಜಗತ್ತಿನಲ್ಲಿ ಈಗ ಏಳು ಸಾವಿರಕ್ಕೂ ಹೆಚ್ಚಿನ ಭಾಷೆಗಳಿದ್ದು,ಪ್ರತಿ 30 ರಿಂದ 40 ಕಿಲೋ ಮೀಟರ್ ಗೆ ಭಾಷೆಯ ಶೈಲಿಯಲ್ಲಿ ವಿಭಿನ್ನತೆಯಿರುತ್ತದೆ. ನೂರಾರು ಭಾಷೆಗಳು ಅಳಿದು ಹೋಗಿದ್ದು, ಹಲವಾರು ಭಾಷೆಗಳು ಅಳಿವಿನಂಚಿನಲ್ಲಿವೆ. ಭಾಷೆಯೆಂದೆರೆ ಅದು ಬದುಕು ಸಂಸ್ಕೃತಿಯ ಸಾರ ಎಂದರು.

ಇದನ್ನೂ ಓದಿ: Chikkaballapur News: 10 ಸಾವಿರ ಮಂದಿಗೆ ಉಚಿತ ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಸಿ.ಎಂ. ಬೈರೇಗೌಡ

ಭಾಷೆ ಅಳಿದರೆ ಸಂಸ್ಕೃತಿಯು ಅಳಿದಂತೆ.ಭಾಷೆಗಳು ಅಳಿಯದೇ ಉಳಿಯಬೇಕಾದರೆ ಅವುಗಳನ್ನು ಮಾತನಾಡಿದಾಗ ಮಾತ್ರ ಉಳಿಸಲು ಸಾಧ್ಯ. ಭಾಷೆಯೆಂಬುದು ಭಾವನೆ ಗಳನ್ನು ಅಭಿವ್ಯಕ್ತಿಸುವ ಸಾಧನ.ಮಂಡೇಲಾ ರವರು ಹೇಳಿದಂತೆ ಅವರ ಭಾಷೆಯಲ್ಲಿ ಮಾತನಾಡಿದರೆ ತಲೆಗೆ ಮುಟ್ಟುತ್ತೆ ಅವರ ಮಾತೃಭಾಷೆಯಲ್ಲಿ ಮಾತನಾಡಿದರೆ ಅವರ ಹೃದಯ ತಟ್ಟುತ್ತೆ.ಕನ್ನಡದ ಕಣ್ವ ಬಿ.ಎಂ.ಶ್ರೀ ಹೇಳುವಂತೆ,ತಾಯ ಕಾಲ ಮದಲು ಕುಡಿದು ನಲ್ಮೆಯಿಂದ ತೊದಲು ನುಡಿದು ಗೆಳೆಯರೊಡನೆ ಕೂಡಿ ಕಳೆದು ಆಡುವ ಭಾಷೆಯೇ ಮಾತೃಭಾಷೆ ಎಂದು ಹೇಳಿದ್ದಾರೆ. ಯಾವುದೇ ಭಾಷೆಗಳನ್ನು ಪರಭಾಷೆಯು ಅನ್ಯ ಭಾಷೆಗಳ ಪ್ರಭಾವದಿಂದ ಅಳಿದು ಹೋಗದಂತೆ ತಡೆಯಬೇಕಾದರೆ ಎಲ್ಲರಲ್ಲೂ ಭಾಷಾ ಪ್ರೇಮವು ಮಸುಕಾಗದಂತೆ ಜಾಗೃತಿ ವಹಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಕಸಾಪದ ಪ್ರತಿನಿಧಿ ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಬಾಂಗ್ಲಾದೇಶದಲ್ಲಿ ನಡೆದ ಮಾತೃಭಾಷಾ ಚಳುವಳಿಯಲ್ಲಿ ನಡೆದ ಹಲವರ ಬಲಿದಾನದಿಂದಾಗಿ ವಿಶ್ವ ಸಂಸ್ಥೆ ಯು 1999ರಿಂದ ವಿಶ್ವ ಮಾತೃಭಾಷೆಯ ದಿನವನ್ನು ಘೋಷಣೆ ಮಾಡಿತು ಎಂದು ತಿಳಿಸಿದರು.

2000 ಇಸ್ವಿಯಿಂದ ವಿಶ್ವಸಂಸ್ಥೆಯು ಮಾತೃಭಾಷಾ ದಿನವನ್ನು ಆಚರಿಸುತ್ತಾ ಬಂದಿದೆ. ಮಾತೃಭಾಷೆಯ ದಿವು ಈ ವರ್ಷ ಬೆಳ್ಳಿಮಹೋತ್ಸವವನ್ನು ಆಚರಿಸುತ್ತಿದೆ.ಮಾತೃ ಭಾಷೆಯ ಮಹತ್ವ,ಭಾಷಾ ವೈವಿದ್ಯತೆ ಮತ್ತು ಭಾಷಾ ಸಂರಕ್ಷಣಯೇ ಈ ವರ್ಷದ ವಿಶ್ವ ಸಂಸ್ಥೆಯ ಘೋಷವಾಕ್ಯವಾಗಿದೆ ಎಂದು ತಿಳಸಿಸದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಜಿ.ಡಿ.ಚಂದ್ರಯ್ಯ, ಮಾತೃಭಾಷೆಯೆಂದರೆ ತಾಯಿಗೆ ಸಮಾನ ಪ್ರಪಂಚದಲ್ಲಿ ಬಹುತೇಕ ದೊಡ್ಡ ದೊಡ್ಡ ಮಹನೀಯರು ಮಾತೃಭಾಷಾ ಶಿಕ್ಷಣ ಕಲಿತವರೇ ಆಗಿದ್ದಾರೆ. ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪಡೆಯುವಲ್ಲಿ ಮಾತೃ ಭಾಷೆಯ ಮಹತ್ವ ಬಹಳ ದೊಡ್ಡದು ಎಂದರು.

ಕಸಾಪ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ ರವರು ಮಾತೃ ಭಾಷೆಯ ಮಹತ್ವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಸದಸ್ಯರಾದ ಅಣ್ಣಮ್ಮ,ಜಿ.ಎಂ.ವೆಂಕಟೇಶ್, ಉಪನ್ಯಾಸಕರಾದ ಹರೀಶ್ ಬಾಬು ಇತರರು ಹಾಜರಿದ್ದರು.