ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊರಗಜ್ಜ ದೈವಕ್ಕೆ ಹರಕೆಯ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್; ಅಭಿಮಾನಿಗಳು ಹೇಳಿದ್ದೇನು?

ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ, ಶನಿವಾರ ರಾತ್ರಿ ಹರಕೆಯ ಕೋಲ ಸೇವೆ ಸಲ್ಲಿಸಿದ್ದಾರೆ. ಕರಾವಳಿಯ ಶಕ್ತಿಶಾಲಿ ದೈವದ ಕೃಪೆಗೆ ಪಾತ್ರರಾಗಿರುವ ವಿಡಿಯೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಕೊರಗಜ್ಜನ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್

-

Avinash GR
Avinash GR May 17, 2026 9:22 PM

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ 'ಡಿಂಪಲ್ ಕ್ವೀನ್' ರಚಿತಾ ರಾಮ್ ಅವರು ಕುಟುಂಬ ಸಮೇತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ನೆಲೆಸಿರುವ ಕಾರಣಿಕದ ದೈವ ಕೊರಗಜ್ಜನ ಕೋಲ ಸೇವೆಯಲ್ಲಿ ಭಾಗಿಯಾಗಿದ್ದಾರೆ.

ಬೆಂಜನಪದವಿನ ವಿಜಯ್ ಎಂಬುವವರ ಮನೆಯಲ್ಲಿ ಆರಾಧಿಸಿಕೊಂಡು ಬರಲಾಗುತ್ತಿರುವ, ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಈಡೇರಿಸುವ ಕೊರಗಜ್ಜ ದೈವದ ಸನ್ನಿಧಿಗೆ ಶನಿವಾರ (ಮೇ 16) ರಾತ್ರಿ ಭೇಟಿ ನೀಡಿದ ನಟಿ, ಹರಕೆಯ ರೂಪದಲ್ಲಿ ಕೋಲ ಸೇವೆ ಸಮರ್ಪಿಸಿದರು.

ಸ್ಯಾಂಡಲ್‌ವುಡ್‌ನಲ್ಲಿ 14 ವರ್ಷ ಪೂರೈಸಿದ ʻಡಿಂಪಲ್‌ ಕ್ವೀನ್‌ʼ ರಚಿತಾ ರಾಮ್; ಬುಲ್‌ಬುಲ್‌ನಿಂದ ಲೇಡಿ ಸೂಪರ್‌ ಸ್ಟಾರ್‌ವರೆಗೆ

ರಚಿತಾಗೆ ಫ್ಯಾನ್ಸ್‌ ಮೆಚ್ಚುಗೆ

ಸದ್ಯ ಅವರು ದೈವದ ಸೇವೆಯಲ್ಲಿ ನಿರತರಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಬೆಂಗಳೂರಿನಲ್ಲಿ ನೆಲೆಸಿದ್ದರೂ ತುಳುನಾಡಿನ ಕಾರಣಿಕ ದೈವದ ಮೇಲೆ ವಿಶೇಷ ಭಕ್ತಿ ಇಟ್ಟುಕೊಂಡು, ಬಿಡುವಿಲ್ಲದ ವೇಳೆಯಲ್ಲೂ ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸಿರುವ ರಚಿತಾ ರಾಮ್‌ ಅವರ ಈ ನಡೆಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಚಿತಾ ರಾಮ್‌ ಅವರ ದೈವದ ಮೇಲಿನ ಭಕ್ತಿಯನ್ನು ಕೊಂಡಾಡಿದ್ದಾರೆ.

ಕೋಲ ಸೇವೆಯ ಉದ್ದೇಶವೇನು?

ರಚಿತಾ ರಾಮ್ ಅವರು ನಿರ್ದಿಷ್ಟವಾಗಿ ಯಾವ ವೈಯಕ್ತಿಕ ಉದ್ದೇಶ ಅಥವಾ ಹರಕೆಗಾಗಿ ಈ ಕೋಲ ಸೇವೆ ನೀಡಿದ್ದಾರೆ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಿಲ್ಲವಾದರೂ, ಚಿತ್ರರಂಗದಲ್ಲಿ ಅವರ 14 ವರ್ಷಗಳ ಯಶಸ್ವಿ ಪಯಣದ ಕೃತಜ್ಞತೆಯಾಗಿ, ಶೀಘ್ರದಲ್ಲೇ ಪ್ರಕಟವಾಗಲಿರುವ ಅವರ ಮುಂದಿನ ಹೊಸ ಚಿತ್ರಗಳ ಯಶಸ್ಸಿಗಾಗಿ ಅವರು ದೈವದ ಆಶೀರ್ವಾದ ಬೇಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಭೇಟಿಯ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರು ಮತ್ತು ದೈವದ ಪಾತ್ರಿಗಳು ನಟಿಗೆ ಪ್ರಸಾದ ನೀಡಿ ಆಶೀರ್ವದಿಸಿದರು.‌

ಸ್ವಾಮಿ ಕೊರಗಜ್ಜ ಕಾಪುಲೆ ಎಂದ ರಚಿತಾ

ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿ ರಚಿತಾ

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಅತ್ಯಂತ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿರುವ ರಚಿತಾ ರಾಮ್, ಮೊನ್ನೆಯಷ್ಟೇ ಚಿತ್ರರಂಗದಲ್ಲಿ ಸತತ 14 ವರ್ಷಗಳ ಸುದೀರ್ಘ ಪಯಣವನ್ನು ಪೂರೈಸಿದ್ದಾರೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಪರಭಾಷೆಯ ಚಿತ್ರರಂಗದಿಂದಲೂ ಅವರಿಗೆ ಸಾಲು ಸಾಲು ಅವಕಾಶಗಳು ಹರಿದುಬರುತ್ತಿದ್ದು, ಇತ್ತೀಚೆಗೆ ತಮಿಳಿನ ಕೂಲಿ ಸಿನಿಮಾದಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಸದ್ಯ ಅವರು ಧ್ರುವ ಸರ್ಜಾ ನಾಯಕತ್ವದ ಬಹುನಿರೀಕ್ಷಿತ ‘ಕ್ರಿಮಿನಲ್’ ಹಾಗೂ ಸತೀಶ್ ನೀನಾಸಂ ಜೊತೆಗಿನ ಹಿಟ್ ಚಿತ್ರದ ಸೀಕ್ವೆಲ್ ‘ಅಯೋಗ್ಯ 2’ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.