ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಶಕುಂತಲಾ-ಜೈದೇವ್‌ಗೆ ಜೈಲು ಶಿಕ್ಷೆ ಫಿಕ್ಸ್; ಮನೆಯವರೆದುರು ಹೊರಬಿತ್ತು ಅವಳಿ - ಜವಳಿ ಸತ್ಯ

Amruthadhaare Serial: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಧಾರಾವಾಹಿಯ ಅಂತಿಮ ಸಂಚಿಕೆಯ ಪ್ರೊಮೋವನ್ನು ವಾಹಿನಿ ಹಂಚಿಕೊಂಡಿದ್ದು, ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇಷ್ಟು ದಿನ ಕಥೆಯಲ್ಲಿ ನಡೆಯುತ್ತಿದ್ದ ಆಸ್ತಿ ವಿಚಾರದ ಸಂಚು, ದ್ರೋಹ ಹಾಗೂ ಸೇಡಿನ ಆಟಕ್ಕೆ ಕೊನೆಗೂ ತೆರೆ ಬೀಳುವ ಸಮಯ ಹತ್ತಿರವಾಗಿದೆ. ಅದರಲ್ಲೂ ಶಕುಂತಲಾ ಮತ್ತು ಜೈದೇವ್ ಅವರ ಮುಂದಿನ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆಯಿದೆ. ಇದೀಗ ಭೂಮಿಕಾ - ದೀಪಿಕಾ ಅವಳಿ - ಜವಳಿ ಅನ್ನೋ ಸತ್ಯ ಮನೆಯವರೆದುರು ಸತ್ಯ ಹೊರಬಿದ್ದಿದೆ.

Amruthadhaare Serial : ಶಕುಂತಲಾ-ಜೈದೇವ್‌ಗೆ ಜೈಲು ಶಿಕ್ಷೆ ಫಿಕ್ಸ್!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Nov 12, 2026 9:56 AM

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ' (Amruthadhaare) ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಧಾರಾವಾಹಿಯ ಅಂತಿಮ ಸಂಚಿಕೆಯ ಪ್ರೊಮೋವನ್ನು ವಾಹಿನಿ ಹಂಚಿಕೊಂಡಿದ್ದು, ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇಷ್ಟು ದಿನ ಕಥೆಯಲ್ಲಿ ನಡೆಯುತ್ತಿದ್ದ ಆಸ್ತಿ ವಿಚಾರದ ಸಂಚು, ದ್ರೋಹ ಹಾಗೂ ಸೇಡಿನ ಆಟಕ್ಕೆ ಕೊನೆಗೂ ತೆರೆ ಬೀಳುವ ಸಮಯ ಹತ್ತಿರವಾಗಿದೆ. ಅದರಲ್ಲೂ ಶಕುಂತಲಾ (Shakuntala) ಮತ್ತು ಜೈದೇವ್ (jaidev) ಅವರ ಮುಂದಿನ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆಯಿದೆ. ಇದೀಗ ಭೂಮಿಕಾ - ದೀಪಿಕಾ ಅವಳಿ - ಜವಳಿ ಅನ್ನೋ ಸತ್ಯ ಮನೆಯವರೆದುರು ಸತ್ಯ ಹೊರಬಿದ್ದಿದೆ.

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಮತ್ತು ಜೈದೇವ್ ಸೇರಿಕೊಂಡು ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಹಲವು ತಂತ್ರಗಳನ್ನು ರೂಪಿಸಿದ್ದರು. ಗೌತಮ್ ಮತ್ತು ಭೂಮಿಕಾಳನ್ನು ಸಂಕಷ್ಟಕ್ಕೆ ಸಿಲುಕಿಸುವ ಮೂಲಕ ಆಸ್ತಿಯ ಮೇಲೆ ಹಿಡಿತ ಸಾಧಿಸುವುದು ಅವರ ಉದ್ದೇಶವಾಗಿತ್ತು. ಆದರೆ ಇದೀಗ ಅವರ ಎಲ್ಲಾ ಕುತಂತ್ರಗಳಿಗೆ ಅಂತ್ಯ ಹಾಡಲು ಗೌತಮ್ ಸಿದ್ಧನಾಗಿದ್ದಾನೆ.

ಇದನ್ನೂ ಓದಿ: Rakesh Adiga: ಎಂಗೇಜ್‌ ಆದ್ರು ರಾಕೇಶ್ ಅಡಿಗ; ಹುಡುಗಿ ಯಾರು?

ಇದೀಗ ಶಕುಂತಲಾ ಹಾಗೂ ಜೈದೇವ್‌ ಸೇರಿ ದೀಪಿಕಾ ಕಿಡ್ನಾಪ್‌ ಮಾಡಿ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಅದೇ ಹೊತ್ತಿಗೆ ಭೂಮಿಕಾ ತಾಯಿ ಕರೆ ಮಾಡಿ ದೀಪಿಕಾ ನಿನ್ನ ಅಕ್ಕ, ನೀವಿಬ್ಬರು ಅವಳಿ ಜವಳಿ ಎಂಬ ಸತ್ಯ ಹೇಳಿದ್ದಾಳೆ. ಆಸ್ತಿ ಪತ್ರಕ್ಕೆ ಸಹಿ ಮಾಡುತ್ತಿರುವ ದೀಪಿಕಾಳನ್ನು ತಡೆದಿದ್ದಾಳೆ ಭೂಮಿ.



ವಾಹಿನಿ ಬಿಡುಗಡೆ ಮಾಡಿರುವ ಅಂತಿಮ ಸಂಚಿಕೆಯ ಪ್ರೊಮೋದಲ್ಲಿ ಶಕುಂತಲಾ ಪಾತ್ರಧಾರಿಯನ್ನು ಜೈಲಿನ ಬಿಳಿ ಸಮವಸ್ತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಶಕುಂತಲಾ ತನ್ನ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಲಿದ್ದಾಳೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಜೈದೇವ್ ಕೂಡ ಆಕೆಯ ಜೊತೆ ಜೈಲು ಸೇರಲಿದ್ದಾನೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Bigg Boss Kannada 13: ಚಾಕು ತಂದ ಗಾನವಿ ಗೌಡ, ಬಗೆದುಬಿಡ್ತೀನಿ ಎಂದ ಮಂಜ! ಸವಾಲ್‍‍ಗೆ ಸವಾಲ್!

ಇಷ್ಟು ದಿನ ಭೂಮಿಕಾ ಮತ್ತು ಗೌತಮ್ ವಿರುದ್ಧ ಸಂಚು ರೂಪಿಸುತ್ತಿದ್ದ ಶಕುಂತಲಾ ಹಾಗೂ ಜೈದೇವ್‌ಗೆ ಇದೀಗ ತಿರುಗೇಟು ನೀಡುವ ಸಮಯ ಬಂದಿದೆ. ಗೌತಮ್‌ನ ಈ ನಾಟಕಕ್ಕೆ ಶಕುಂತಲಾ ಬಲಿಯಾಗುತ್ತಾಳಾ? ಆಸ್ತಿಯ ಆಸೆಯಿಂದ ಜೈದೇವ್ ಮತ್ತೆ ಹೊರಬರುತ್ತಾನಾ? ಇಬ್ಬರ ಕುತಂತ್ರಗಳು ಕೊನೆಗೂ ಬಯಲಾಗುತ್ತವೆಯಾ ಎಂಬ ಪ್ರಶ್ನೆಗಳಿಗೆ ಅಂತಿಮ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಶಕುಂತಲಾಳ ಜೈಲುವಾಸದ ಸುಳಿವು ನೀಡಿರುವ ಪ್ರೊಮೋ ಈಗಾಗಲೇ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಮೃತಧಾರೆ ಧಾರಾವಾಹಿಯ ಕೊನೆಯ ಸಂಚಿಕೆ ಹಲವು ಕುತೂಹಲಗಳಿಗೆ ತೆರೆ ಎಳೆಯಲಿದ್ದು, ಗೌತಮ್ ಮತ್ತು ಭೂಮಿಕಾಳ ಕಥೆ ಸುಖಾಂತ್ಯ ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.