ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rakesh Adiga: ಎಂಗೇಜ್‌ ಆದ್ರು ರಾಕೇಶ್ ಅಡಿಗ; ಹುಡುಗಿ ಯಾರು?

Rakesh Adiga: ಬಿಗ್‌ ಬಾಸ್ʼ ಖ್ಯಾತಿಯ ರಾಕೇಶ್‌ ಅಡಿಗ ಅವರು ಎಂಗೇಜ್‌ ಆಗಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಇದೀಗ ಎಂಗೇಜ್‌ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ರಾಕೇಶ್ ಅಡಿಗರ ಭಾವಿ ಪತ್ನಿಯ ಹೆಸರು ಮಾಧುರಿ ಸಿಂಗ್. ಮಾಧುರಿ ಸಿಂಗ್ ಜೊತೆ ರಿಂಗ್ ಬದಲಿಸಿರುವ ಅಡಿಗ, ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ.

Rakesh Adiga: ಎಂಗೇಜ್‌ ಆದ್ರು ರಾಕೇಶ್ ಅಡಿಗ; ಹುಡುಗಿ ಯಾರು?

ರಾಕೇಶ್‌ ಅಡಿಗ -

Yashaswi Devadiga
Yashaswi Devadiga Nov 12, 2026 8:28 AM

`ಬಿಗ್‌ ಬಾಸ್ʼ ಖ್ಯಾತಿಯ ರಾಕೇಶ್‌ (Rakesh adiga) ಅಡಿಗ ಅವರು ಎಂಗೇಜ್‌ ಆಗಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಇದೀಗ ಎಂಗೇಜ್‌ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ರಾಕೇಶ್ ಅಡಿಗರ ಭಾವಿ ಪತ್ನಿಯ ಹೆಸರು ಮಾಧುರಿ ಸಿಂಗ್ (Madhuri singh). ಮಾಧುರಿ ಸಿಂಗ್ ಜೊತೆ ರಿಂಗ್ ಬದಲಿಸಿರುವ ಅಡಿಗ, ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ತಮ್ಮ ಜೀವನ ಸಂಗಾತಿಯ ಬಗ್ಗೆ ಮಾತನಾಡಿದ್ದ ರಾಕೇಶ್ ಅಡಿಗ ಅವರ ಹೇಳಿಕೆ ಅಭಿಮಾನಿಗಳ ಗಮನ ಸೆಳೆದಿತ್ತು. ತಮ್ಮ ನಿರೀಕ್ಷೆಗೆ ತಕ್ಕ ಹುಡುಗಿ ಸಿಕ್ಕಿದ್ದಾರೆ ಎನ್ನುವುದಕ್ಕಿಂತ, ತಮ್ಮ ಜೀವನಕ್ಕೆ ಅಗತ್ಯವಿರುವಂತಹ ವ್ಯಕ್ತಿ ಸಿಕ್ಕಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ರಾಕೇಶ್ ಅಡಿಗ ಅವರ ಮದುವೆ ವಿಚಾರ ಮುನ್ನಲೆಗೆ ಬಂದಿತ್ತು.

ರಾಕೇಶ್ ಅಡಿಗ ಅವರು 2009ರಲ್ಲಿ ಬಿಡುಗಡೆಯಾದ 'ಜೋಶ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿಯೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಅವರು, ನಂತರ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: Bigg Boss Kannada 13: ಮಂಜ -ಯಶಸ್‌ ನಡುವಿನ ವೈಮನಸ್ಸು; ಮತ್ತೆ ರದ್ದಾಯ್ತು ಟಾಸ್ಕ್!

'ಜೋಶ್' ಚಿತ್ರದ ಬಳಿಕ 'ಮನಸಾಲಜಿ', 'ಪರಿ', 'ಯಾರೇ ಕೂಗಾಡಲಿ', 'ನಂದ ಗೋಕುಲ', 'ಮಂದಹಾಸ', 'ಕರ್ನಾಟಕ ಅಯೋಧ್ಯಪುರಂ', 'ಕೋಟಿಗೊಬ್ಬ ಲವ್ ಸ್ಟೋರಿ', 'ಪ್ರೀತಿಯಿಂದ', 'ಮಂಡ್ಯ ಟು ಮುಂಬೈ', 'ನಟೋರಿಯಸ್', 'ಡವ್' ಹಾಗೂ 'ನೈಟ್ ಔಟ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಲೂಸ್ ಮಾದ ಯೋಗಿ ಅಭಿನಯದ 'ಅಲೆಮಾರಿ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕೇಶ್ ಅಡಿಗ, ತಮ್ಮ ನಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ನಾಯಕನಾಗಿ ಮಾತ್ರವಲ್ಲದೆ ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೂ ಉತ್ತಮವಾಗಿ ನಟಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದರು.

ಇದನ್ನೂ ಓದಿ: Anirudh Kavya Maran Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಿರುದ್ಧ್–ಕಾವ್ಯಾ ಮಾರನ್! ಫಸ್ಟ್‌ ಫೋಟೊ ಔಟ್‌

ಇನ್ನು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ರಾಕೇಶ್ ಅಡಿಗ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಬಿಗ್ ಬಾಸ್ ಮನೆಯಲ್ಲಿನ ಅವರ ವ್ಯಕ್ತಿತ್ವ ಹಾಗೂ ಆಟದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು.

ಇತ್ತೀಚೆಗೆ 'ನಾನು ಮತ್ತು ಗುಂಡ 2' ಸಿನಿಮಾದಲ್ಲಿಯೂ ನಟಿಸಿರುವ ರಾಕೇಶ್ ಅಡಿಗ, ತಮ್ಮ ಸಿನಿಮಾ ಪಯಣವನ್ನು ಮುಂದುವರಿಸಿದ್ದಾರೆ.