ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಗಾನವಿ ಕತ್ತಿನ ಮೇಲೆ ಮಂಡಿ ಊರಿದ ಪ್ರಶಾಂತ್; ದೊಡ್ಮನೆಯಲ್ಲಿ ಕಾವೇರಿದ ವಾತಾವರಣ!

Bigg Boss Kannada 13: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಟಾಸ್ಕ್‌ಗಳ ಅಬ್ಬರದ ಜೊತೆಗೆ ಸ್ಪರ್ಧಿಗಳ ನಡುವಿನ ಜಗಳವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗೆಲುವಿಗಾಗಿ ನಡೆಯುತ್ತಿರುವ ಪೈಪೋಟಿ ಇದೀಗ ವೈಯಕ್ತಿಕ ಆರೋಪ ಮತ್ತು ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಈ ವಾರದ ಟಾಸ್ಕ್‌ನಲ್ಲಿ ಪ್ರಶಾಂತ್ ಮತ್ತು ಗಾನವಿ ಗೌಡ ನಡುವೆ ನಡೆದ ಘಟನೆ ಮನೆಯಲ್ಲಿ ದೊಡ್ಡ ಮಟ್ಟದ ಗದ್ದಲ ಸೃಷ್ಟಿಸಿದೆ. ಆಟದ ವೇಳೆ ಪ್ರಶಾಂತ್ ಅವರ ಮಂಡಿ ಗಾನವಿ ಅವರ ಕತ್ತಿನ ಮೇಲೆ ಬಿದ್ದಿದ್ದು, ಇದರಿಂದ ನೋವು ಅನುಭವಿಸಿದ ಗಾನವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bigg Boss Kannada 13: ಗಾನವಿ ಕತ್ತಿನ ಮೇಲೆ ಮಂಡಿ ಊರಿದ ಪ್ರಶಾಂತ್

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 12, 2026 10:43 AM

ಬಿಗ್ ಬಾಸ್ ಕನ್ನಡ (Bigg Boss Kannada 13) ಮನೆಯಲ್ಲಿ ಟಾಸ್ಕ್‌ಗಳ ಅಬ್ಬರದ ಜೊತೆಗೆ ಸ್ಪರ್ಧಿಗಳ ನಡುವಿನ ಜಗಳವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗೆಲುವಿಗಾಗಿ ನಡೆಯುತ್ತಿರುವ ಪೈಪೋಟಿ ಇದೀಗ ವೈಯಕ್ತಿಕ ಆರೋಪ ಮತ್ತು ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಈ ವಾರದ ಟಾಸ್ಕ್‌ನಲ್ಲಿ ಪ್ರಶಾಂತ್ ಮತ್ತು ಗಾನವಿ ಗೌಡ (Prashanth Ganavi Gowda) ನಡುವೆ ನಡೆದ ಘಟನೆ ಮನೆಯಲ್ಲಿ ದೊಡ್ಡ ಮಟ್ಟದ ಗದ್ದಲ ಸೃಷ್ಟಿಸಿದೆ. ಆಟದ ವೇಳೆ ಪ್ರಶಾಂತ್ ಅವರ ಮಂಡಿ ಗಾನವಿ ಅವರ ಕತ್ತಿನ ಮೇಲೆ ಬಿದ್ದಿದ್ದು, ಇದರಿಂದ ನೋವು ಅನುಭವಿಸಿದ ಗಾನವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಕೆರಳಿದ ಗಾನವಿ, ಪ್ರಶಾಂತ್ ವಿರುದ್ಧ ಕತ್ತಿನ ಮೇಲೆ ಕಾಲಿಟ್ಟು ಗಂಡಸ್ತನ ತೋರಿಸುತ್ತಿದ್ದೀಯಾ? ಇದು ಗಂಡಸ್ತನಕ್ಕೆ ಅವಮಾನ ಎಂಬರ್ಥದಲ್ಲಿ ಕಟುವಾಗಿ ಮಾತನಾಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಎದುರಾಳಿ ತಂಡದ ನಾಯಕನ ಫೋಟೋಗೆ ಬಣ್ಣ ಬಳಿಯುವ ಟಾಸ್ಕ್ ನೀಡಲಾಗಿತ್ತು. ಯಾವ ತಂಡದ ನಾಯಕನ ಫೋಟೋಗೆ ಹೆಚ್ಚು ಬಣ್ಣ ಬೀಳುತ್ತದೆಯೋ ಆ ತಂಡ ಸೋಲುತ್ತದೆ ಎಂಬುದು ಆಟದ ನಿಯಮವಾಗಿತ್ತು. ಹೀಗಾಗಿ ತಮ್ಮ ತಂಡದ ನಾಯಕನ ಫೋಟೋವನ್ನು ರಕ್ಷಿಸಿಕೊಳ್ಳಲು ಹಾಗೂ ಎದುರಾಳಿ ತಂಡದ ಫೋಟೋಗೆ ಬಣ್ಣ ಹಚ್ಚಲು ಸ್ಪರ್ಧಿಗಳು ಹರಸಾಹಸಪಟ್ಟರು.

ಇದನ್ನೂ ಓದಿ: Bigg Boss Kannada 13: ಮಂಜ -ಯಶಸ್‌ ನಡುವಿನ ವೈಮನಸ್ಸು; ಮತ್ತೆ ರದ್ದಾಯ್ತು ಟಾಸ್ಕ್!

ಈ ವೇಳೆ ಗಾನವಿ ಅವರು ಯಶಸ್ ಅವರ ಫೋಟೋಗೆ ಬಣ್ಣ ಹಚ್ಚಲು ಮುಂದಾಗಿದ್ದರು. ಇದನ್ನು ತಡೆಯಲು ತಾಂಡವ್ ಪ್ರಯತ್ನಿಸಿದರೆ, ಗಾನವಿ ತಂಡದ ಧನುಷ್ ಕೂಡ ಫೋಟೋ ಬಳಿ ಬಂದಿದ್ದರು. ಧನುಷ್ ಅವರನ್ನು ತಡೆಯುವ ಉದ್ದೇಶದಿಂದ ಪ್ರಶಾಂತ್ ವೇಗವಾಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ನೂಕಾಟದಲ್ಲಿ ಕೆಳಗೆ ಬಿದ್ದಿದ್ದ ಗಾನವಿ ಅವರ ಕತ್ತಿನ ಮೇಲೆ ಪ್ರಶಾಂತ್ ಅವರ ಮಂಡಿ ಬಿದ್ದಿದೆ.

ಇದರಿಂದ ಗಾನವಿ ನೋವಿನಿಂದ ಒದ್ದಾಡಿದ್ದು, ಆಟದ ವೇಳೆ ಇಂತಹ ಘಟನೆ ನಡೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಇಂತಹ ಅಪಾಯಕಾರಿ ಆಟವಾಡಲು ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರು ಹಾಕುತ್ತಾ ಅಸಮಾಧಾನ ಹೊರಹಾಕಿದ್ದಾರೆ.



ಗಾನವಿ ಮಾತಿಗೆ ಸೋನಿಕಾ ಕೌಂಟರ್!

ಘಟನೆ ನಡೆದ ಸಂದರ್ಭದಲ್ಲಿ ತಾವು ಗಮನಿಸಿದ ರೀತಿಯನ್ನು ವಿವರಿಸಿದ ಸೋನಿಕಾ, ಪ್ರಶಾಂತ್ ಅವರ ಕಾಲು ಗಾನವಿ ಕತ್ತಿನ ಮೇಲೆ ಇರಲಿಲ್ಲ ಎಂದು ಹೇಳಿದ್ದಾರೆ. ಸೋನಿಕಾ ಅವರ ಈ ಮಾತು ಗಾನವಿಗೆ ಮತ್ತಷ್ಟು ಕೋಪ ತರಿಸಿದೆ.

ಇದನ್ನೂ ಓದಿ: Bigg Boss Kannada 13: ಚಾಕು ತಂದ ಗಾನವಿ ಗೌಡ, ಬಗೆದುಬಿಡ್ತೀನಿ ಎಂದ ಮಂಜ! ಸವಾಲ್‍‍ಗೆ ಸವಾಲ್!

ತಮ್ಮ ವಿರುದ್ಧ ಮಾತನಾಡಿದ ಸೋನಿಕಾ ಅವರನ್ನು ಗಾನವಿ, 'ಪ್ರಶಾಂತ್ ಚಮಚಾ' ಎಂದು ಕರೆದಿದ್ದಾರೆ. ಇದರಿಂದ ಬೇಸರಗೊಂಡ ಸೋನಿಕಾ ಕೂಡ ಸುಮ್ಮನಿರದೆ ಗಾನವಿಗೆ ತಿರುಗೇಟು ನೀಡಿದ್ದಾರೆ. ನೀನು ಥರ್ಡ್ ಕ್ಲಾಸ್ ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಇದೀಗ ಈ ಘಟನೆಯ ಬಗ್ಗೆ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ವೀಕ್ಷಕರು ಎದುರು ನೋಡುತ್ತಿದ್ದಾರೆ.