Bigg Boss Kannada 12: ಇದೊಂದು ವಿಚಾರದಲ್ಲಿ ರಘು - ರಕ್ಷಿತಾ ಭ್ರಮೆಯಲ್ಲಿ ಇದ್ದಾರಂತೆ! ಗಿಲ್ಲಿ, ಕಾವ್ಯ ನೇರ ಮಾತು
Gilli Nata: ಬಿಗ್ ಬಾಸ್ ಸೀಸನ್ 12ರಲ್ಲಿ ಈ ವಾರ ಕಾವ್ಯ ಅವರು ಕ್ಯಾಪ್ಟನ್ ಆಗಿದ್ದಾರೆ. ಇದನ್ನು ರಕ್ಷಿತಾ ಅವರು ವಿರೋಧ ಮಾಡಿದ್ದಾರೆ. ಈ ಬಗ್ಗೆ ಹಾಗೂ ಅಶ್ವಿನಿ ಅವರು ತಾಯಿ ಬಗ್ಗೆ ಮಾತನಾಡಿರುವ ಬಗ್ಗೆಯೂ ಕಿಚ್ಚ ಚರ್ಚಿಸಿದ್ದಾರೆ. ಶನಿವಾರ ಸ್ವಲ್ಪ ಗರಂ ಆಗಿದ್ದರೂ ಭಾನುವಾರ ಕಿಚ್ಚ ಕಾಮಿಡಿಯೇ ಪಂಚಾಯ್ತಿ ನಡೆಸುತ್ತಾರೆ. ಇದೀಗ ಪ್ರೋಮೋ ಔಟ್ ಆಗಿದೆ. ಗಿಲ್ಲಿ ಸಖತ್ ಕಾಮಿಡಿ ಚಟಾಕಿ ಹಾರಿಸಿದ್ದಾರೆ. ಅಷ್ಟೇ ಅಲ್ಲ ಯಾರೂ ಭ್ರಮೆಯಲ್ಲಿ ಇದ್ದಾರೆ ಅನ್ನೋದನ್ನ ಹೇಳಬೇಕು. ಯಾವ ಭ್ರಮೆಯಲ್ಲಿದ್ದಾರೆ ಎನ್ನುವುದನ್ನು ಹೇಳಿ ಸೂಜಿಯಿಂದ ಬಲೂನ್ ಒಡೆದು ಹಾಕುವ ಟಾಸ್ಕ್ ಬಿಗ್ ಬಾಸ್ ಕೊಟ್ಟಿದ್ದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಈ ವಾರ ಕಾವ್ಯ ಅವರು ಕ್ಯಾಪ್ಟನ್ (Kavya Rakshitha) ಆಗಿದ್ದಾರೆ. ಇದನ್ನು ರಕ್ಷಿತಾ ಅವರು ವಿರೋಧ ಮಾಡಿದ್ದಾರೆ. ಈ ಬಗ್ಗೆ ಹಾಗೂ ಅಶ್ವಿನಿ ಅವರು ತಾಯಿ ಬಗ್ಗೆ ಮಾತನಾಡಿರುವ ಬಗ್ಗೆಯೂ ಕಿಚ್ಚ (Sudeep) ಚರ್ಚಿಸಿದ್ದಾರೆ. ಶನಿವಾರ ಸ್ವಲ್ಪ ಗರಂ ಆಗಿದ್ದರೂ ಭಾನುವಾರ ಕಿಚ್ಚ ಕಾಮಿಡಿಯೇ ಪಂಚಾಯ್ತಿ ನಡೆಸುತ್ತಾರೆ. ಇದೀಗ ಪ್ರೋಮೋ ಔಟ್ ಆಗಿದೆ. ಗಿಲ್ಲಿ (Gilli Nata) ಸಖತ್ ಕಾಮಿಡಿ ಚಟಾಕಿ ಹಾರಿಸಿದ್ದಾರೆ. ಅಷ್ಟೇ ಅಲ್ಲ ಯಾರೂ ಭ್ರಮೆಯಲ್ಲಿ ಇದ್ದಾರೆ ಅನ್ನೋದನ್ನ ಹೇಳಬೇಕು. ಯಾವ ಭ್ರಮೆಯಲ್ಲಿದ್ದಾರೆ ಎನ್ನುವುದನ್ನು ಹೇಳಿ ಸೂಜಿಯಿಂದ ಬಲೂನ್ ಒಡೆದು ಹಾಕುವ ಟಾಸ್ಕ್ ಬಿಗ್ ಬಾಸ್ ಕೊಟ್ಟಿದ್ದರು.
ಇಬ್ಬಿಬ್ಬರಿಗೆ ಒಟ್ಟಿಗೆ ಕಣ್ಣು ಕಟ್ಟಿ ಅವರ ಮುಂದೆ ಒಂದಷ್ಟು ತಿಂಡಿ ತಿನಿಸು ಇಡಲಾಗಿದೆ. ಕೈಯಿಂದ ಮುಟ್ಟದೇ ಟೇಸ್ಟ್ ಮಾಡಿ, ವಾಸನೆ ನೋಡಿ ಆ ತಿನಿಸು ಏನು ಎಂದು ಗುರ್ತಿಸಬೇಕು. ರಜತ್ ಹಾಗೂ ಗಿಲ್ಲಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಟಾಸ್ಕ್ ಕೊಡಲಾಗಿದೆ. ಟೇಸ್ಟ್ ಮಾಡಿ ಆ ತಿನಿಸುಗಳು ಯಾವುದು ಎಂದು ಗುರ್ತಿಸಲು ಇಬ್ಬರೂ ಪರದಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ತಾನೊಂದು ಬಗೆದರೆ ದೈವವೊಂದು ಬಗೆದಂತೆ! ಟ್ರೋಲ್ ಆದ ರಕ್ಷಿತಾ; ಧ್ರುವಂತ್‌ಗೆ ಮೆಚ್ಚುಗೆ ಏಕೆ?
ಮೊದಲಿಗೆ ಗಿಲ್ಲಿಗೆ ಟೇಸ್ಟ್ ಗೊತ್ತಾಗದೇ ರವೆ ಥರ ಇದೆ ಎಂದರು. ನನಗೆ ಕೊರೋನಾ ಬಂದಿದ್ಯಾ ಅಂತ ಗಿಲ್ಲಿ ಹೇಳ್ತಾರೆ. ಸೋತು ಬಿಡೋಣ ಬಿಡೋಲೋ ಅಂತ ರಜತ್ ಹೇಳಿದ ಕೂಡಲೇ ಪಕ್ಕಾ ಸೋತ್ವಿ ಎಂದು ಗಿಲ್ಲಿ ಹೇಳಿದ್ದಾರೆ. ಇನ್ನು ಈ ವಿಡಿಯೋ ಕಂಡು ವೀಕ್ಷಕರು ಸಂತಸ ಹೊರ ಹಾಕಿದ್ದಾರೆ.
ರಕ್ಷಿತಾ ಈ ಭ್ರಮೆಯಲ್ಲಿ ಇದ್ದಾರಾ?
ಇನ್ನೊಂದು ಪ್ರೋಮೋ ಕೂಡ ವೈರಲ್ ಆಗಿದೆ. ಯಾರೂ ಭ್ರಮೆಯಲ್ಲಿ ಇದ್ದಾರೆ ಅನ್ನೋದನ್ನ ಹೇಳಬೇಕು. ಯಾವ ಭ್ರಮೆಯಲ್ಲಿದ್ದಾರೆ ಎನ್ನುವುದನ್ನು ಹೇಳಿ ಸೂಜಿಯಿಂದ ಬಲೂನ್ ಒಡೆದು ಹಾಕುವ ಟಾಸ್ಕ್ ಬಿಗ್ ಬಾಸ್ ಕೊಟ್ಟಿದ್ದರು.
ಫ್ರೆಂಡ್‌ಶಿಪ್ ಹೆಸರಿನಲ್ಲಿ ʻನಾನು ರಘು ಅಣ್ಣನಿಗೆ ಅವಮಾನ ಮಾಡಿ ನೋವು ಮಾಡ್ತಿದ್ದೀನಿ ಎನ್ನುವ ಭ್ರಮೆಯಲ್ಲಿದ್ದಾರೆ. ಅದು ಸುಳ್ಳುʼ ಎಂದು ರಘು ಬಗ್ಗೆ ಗಿಲ್ಲಿ ಹೇಳಿದರು. ಧ್ರುವಂತ್ ಕೂಡ ರಕ್ಷಿತಾ ಬಗ್ಗೆ, ʻಅವರು ಹೇಳಿದ್ದೇ ಕರೆಕ್ಟ್. ಅವರು ಬಿಟ್ಟರೆ ಯಾರೂ ಸರಿ ಇಲ್ಲ ಎನ್ನುವ ಭ್ರಮೆ ಅಲ್ಲಿ ಇದ್ದಾರೆ ಎಂದರು. ಕಾವ್ಯ ಕೂಡ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಇಲ್ಲದೇ ಸ್ಪಾರ್ಕೇ ಇರಲ್ಲ ಅನ್ನೋ ಭ್ರಮೆಯಲ್ಲಿʼ ಇದ್ದಾರೆ. ಗಿಲ್ಲಿಗೆ ನಿನ್ನ ಕಳಿಸಿಯೇ ಹೋಗುತ್ತೇನೆ ಅಂದಿದ್ದರು. ಕಾನ್‌ಫಿಡೆಂಟ್‌ಕ್ಕಿಂತ ಓವರ್ ಕಾನ್‌ಫಿಡೆಂಟ್ ಜಾಸ್ತಿ ಇದೆ ಎಂದರು.
ಯಾರು ಮನೆಯಿಂದ ಹೋಗ್ತಾರೆ?
ಫಿನಾಲೆಗೆ ಇನ್ನು 3 ವಾರ ಮಾತ್ರ ಬಾಕಿಯಿದೆ. ಸದ್ಯ ಮನೆಯೊಳಗೆ 11 ಮಂದಿ ಸ್ಪರ್ಧಿಗಳಿದ್ದಾರೆ. ಹಾಗಾಗಿ ಮುಂದಿನ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: Bigg Boss Kannada 12: ಚೈತ್ರಾಗೆ ಉರಿಸೋದು ಅಂದ್ರೆ ಗಿಲ್ಲಿಗೆ ಒಂಥರಾ ಖುಷಿ ಅಂತೆ!
ಮೂಲಗಳ ಪ್ರಕಾರ, ಅತಿಥಿಗಳಾಗಿ ಮನೆಯೊಳಗೆ ಇಷ್ಟು ದಿವಸ ಇದ್ದ ಚೈತ್ರಾ ಮತ್ತು ರಜತ್ ಅವರನ್ನು ಹೊರಗೆ ಈ ವಾರ ಕರೆಸಿಕೊಳ್ಳಲಾಗುತ್ತಿದೆಯಂತೆ. ಈ ವಾರ ಕೂಡ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ನಡೆಯೋದಿಲ್ಲ. ಯಾಕೆಂದರೆ, ಕಳೆದ ವಾರದಂತೆ ಈ ವಾರ ಕೂಡ ವೋಟಿಂಗ್ ಲೈನ್ಸ್ ತೆರೆದಿಲ್ಲ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಸ್ಪಂದನಾ ಸೋಮಣ್ಣ, ಮಾಳು ನಿಪನಾಳ್ ಸೇರಿದಂತೆ ಒಂದಷ್ಟು ನಾಮಿನೇಟ್ ಆಗಿದ್ದರು,