ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ತಾನೊಂದು ಬಗೆದರೆ ದೈವವೊಂದು ಬಗೆದಂತೆ! ಟ್ರೋಲ್‌ ಆದ ರಕ್ಷಿತಾ; ಧ್ರುವಂತ್‌ಗೆ ಮೆಚ್ಚುಗೆ ಏಕೆ?

Rakshitha Shetty: ಬಿಗ್‌ ಬಾಸ್‌ ಮನೆಯಲ್ಲಿ ಧ್ರುವಂತ್‌ ಹಾಗೂ ರಕ್ಷಿತಾ ಸೀಕ್ರೆಟ್‌ ರೂಂನಲ್ಲಿ ಇದ್ದಾರೆ. ಇಬ್ಬರ ವಾದವೂ ಜೋರಾಗಿದೆ. ಕಿತ್ತಾಡಿಕೊಂಡೇ ಇದ್ದಾರೆ. ಇದರ ಜೊತೆಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೂಡ ಕೊಟ್ಟಿದ್ದಾರೆ. ಕೆಲವು ಟೀಂ ರಚನೆ ನಿರ್ಧಾರಗಳನ್ನು ಧ್ರುವಂತ್‌ ಹಾಗೂ ರಕ್ಷಿತಾಗೆ ವಹಿಸಿದ್ದಾರೆ. ಆದರೀಗ ರಕ್ಷಿತಾ ಪ್ಲ್ಯಾನ್‌ ಉಲ್ಟಾ ಆದಂತಿದೆ. ವೈರಲ್‌ ವಿಡಿಯೋದಲ್ಲಿ ಏನಿದೆ?

ಟ್ರೋಲ್‌ ಆದ ರಕ್ಷಿತಾ; ಧ್ರುವಂತ್‌ಗೆ ಮೆಚ್ಚುಗೆ ಏಕೆ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 16, 2025 10:08 AM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಧ್ರುವಂತ್‌ ಹಾಗೂ ರಕ್ಷಿತಾ (Dhruvanth Rakshitha) ಸೀಕ್ರೆಟ್‌ ರೂಂನಲ್ಲಿ ಇದ್ದಾರೆ. ಇಬ್ಬರ ವಾದವೂ ಜೋರಾಗಿದೆ. ಕಿತ್ತಾಡಿಕೊಂಡೇ ಇದ್ದಾರೆ. ಇದರ ಜೊತೆಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೂಡ ಕೊಟ್ಟಿದ್ದಾರೆ. ಕೆಲವು ಟೀಂ ರಚನೆ ನಿರ್ಧಾರಗಳನ್ನು ಧ್ರುವಂತ್‌ ಹಾಗೂ ರಕ್ಷಿತಾಗೆ ವಹಿಸಿದ್ದಾರೆ. ಬಿಗ್‌ ಬಾಸ್‌ (Bigg boss Kannada 12). ಆದರೀಗ ರಕ್ಷಿತಾ ಪ್ಲ್ಯಾನ್‌ ಉಲ್ಟಾ ಆದಂತಿದೆ. ವೈರಲ್‌ ವಿಡಿಯೋದಲ್ಲಿ (Viral) ಏನಿದೆ?

ಮಾಳು ಅವರನ್ನು ಸೇವ್ ಮಾಡಿ, ಕಾವ್ಯಾ ಅವರನ್ನು ನಾಮಿನೇಟ್ ಮಾಡಬೇಕು ಎಂಬುದು ರಕ್ಷಿತಾ ಶೆಟ್ಟಿ ವಾದ ಆಗಿತ್ತು. ಆದರೆ, ಈ ವಾದವನ್ನು ಧ್ರುವಂತ್ ಅವರು ಒಪ್ಪಿಲ್ಲ. ಮಾಳುಗೆ ಹೋಲಿಸಿದರೆ ಕಾವ್ಯಾ ಸಮರ್ಥ ವ್ಯಕ್ತಿ. ಅವರನ್ನು ನಾಮಿನೇಟ್ ಮಾಡೋದು ಸರಿ ಅಲ್ಲ ಎಂದು ಧ್ರುವಂತ್ ವಾದ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸೀಕ್ರೆಟ್ ರೂಮ್ ಬಗ್ಗೆ ರಘುಗೆ ಸಿಕ್ತಾ ಸುಳಿವು? ಗಿಲ್ಲಿ ಬಳಿ ಹೇಳಿದ್ದೇನು?

ಆದರೆ ರಕ್ಷಿತಾ ಪ್ಲಾನ್‌ ಪ್ಲಾಪ್‌ ಆದಂತಿದೆ. ಎರಡನೇ ಟಾಸ್ಕ್‌ನಲ್ಲಿ ಗಿಲ್ಲಿ, ಕಾವ್ಯ, ಚೈತ್ರಾ, ರಘು ಟಾಸ್ಕಲ್‌ ವಿನ್‌ ಆಗಿದ್ದಾರೆ. ಈ ವಿಡಿಯೋ ವೈರಲ್‌ ಮಾಡಿ ತಾನೊಂದು ಬಗೆದರೆ, ದೈವ ಇನ್ನೊಂದು ಬಗೆಯುವುದು ಎಂದು ವಿಡಿಯೋ ಶೇರ್‌ ಮಾಡಿದ್ದಾರೆ ನೆಟ್ಟಿಗರು.

ತಪ್ಪುಗಳನ್ನು ಎತ್ತಿ ಹಿಡಿದ ಧ್ರುವಂತ್‌!

ನಿನ್ನೆಯ ಸಂಷಿಕೆಯಲ್ಲಿಯೂ ಧ್ರುವಂತ್‌, ರಕ್ಷಿತಾ ಅವರ ಕೆಲವೊಂದು ತಪ್ಪುಗಳನ್ನು ಎತ್ತಿ ಹೇಳಿದರು. ಎದುರಿನವರು ಏನಾದರೂ ಹೇಳುವಾಗ ರಕ್ಷಿತಾ ಶೆಟ್ಟಿ ಓಡೋಡಿ ಹೋಗುತ್ತಾರೆ. ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ. ಈ ವಿಷಯವನ್ನು ಧ್ರುವಂತ್ ಅವರು ಎತ್ತಿ ಹೇಳಿದ್ದಾರೆ.

ರಕ್ಷಿತಾ ನಿದ್ದೆಗೆ ಜಾರಿದಾಗ ನೀನು ಜನರನ್ನು ಮಂಗ ಮಾಡಬಹುದು ಆದರೆ, ಬಿಗ್ ಬಾಸ್​ನ ಅಲ್ಲ ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲ ನೀನು ಎಲ್ಲರಿಗೂ ಕಟೆಂಟ್‌ ಕೊಡ್ತೀಯಾ. ರಕ್ಷಿತಾ ಅಂತ ಇದ್ದಾರೆ ಅಂದ್ರೆ, ನಿನ್ನತ್ರ ಟಾಪಿಕ್‌ ಇದೆ ಅಂತ ಅರ್ಥ ಎಂದಿದ್ದಾರೆ.



ಇನ್ನುರಕ್ಷಿತಾ ವಿಡಿಯೋಗೆ ಧ್ರುವಂತ್ ಕೇಜ್ ನ ಕುತಂತ್ರದ ಆಟದ ಪ್ರದರ್ಶನವನ್ನು ಬಹಿರಂಗಪಡಿಸಿದರು. ರಕ್ಷಿತಾ ಮುಖವಾಡ ಕೊನೆಗೂ ಕಳಚಿದೆ. ಕಾವ್ಯ ಮೇಲೆ ಇಷ್ಟೊಂದು ದ್ವೇಷ ಏಕೆ? ಕಾವ್ ಗಿಲ್ಲಿ ಜೊತೆ ಹೆಚ್ಚು ಸಮಯ ಕಳೆಯುವುದರಿಂದಲೇ? ಕುತಂತ್ರಕ್ಕೆ ಒಂದು ಮುಖವಿದ್ದರೆ, ಅದು ಬೇರೆ ಯಾರೂ ಅಲ್ಲ, ರಕ್ಷಿತಾ ಅಂತ ಬರೆದುಕೊಂಡಿದ್ದಾರೆ ನೆಟ್ಟಿಗರು.



ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಫಿನಾಲೆ ಯಾವಾಗ? ಕಿಚ್ಚ ಸುದೀಪ್‌ ಏನಂದ್ರು?

ಇಬ್ಬರ ಮಧ್ಯೆ ಕಿರಕ್​​ಗಳು ಆಗುತ್ತಲೇ ಇವೆ. ಈ ಮಧ್ಯೆ ಧ್ರುವಂತ್ ಅವರನ್ನು ರಕ್ಷಿತಾ ಟೀಕಿಸಿದ್ದಾರೆ. ‘ನಿಮ್ಮನ್ನು ಸೀಕ್ರೆಟ್​ ರೂಂಗೆ ಬಿಟ್ಟು ತಪ್ಪು ಮಾಡಿದೆ ಎಂದು ಬಿಗ್ ಬಾಸ್​ಗೂ ಅನಿಸುತ್ತಿದೆ’ ಎಂಬುದಾಗಿ ರಕ್ಷಿತಾ ಹೇಳಿದ್ದಾರೆ.