ʻಬಿಗ್ ಬಾಸ್ ಕನ್ನಡ 12ʼ ಮುಗಿಯೋದ್ರೊಳಗೆ ಅಶ್ವಿನಿ ಗೌಡ - ಧ್ರುವಂತ್ ಕನಸನ್ನು ನನಸು ಮಾಡಿದ ʻಕಿಚ್ಚʼ ಸುದೀಪ್; ಕಣ್ಣೀರಿಟ್ಟ ರಾಜಮಾತೆ!
Bigg Boss Kannada 12 Update: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಒಂದು ವಾರ ಬಾಕಿ ಇರುವಂತೆ, ಕಿಚ್ಚ ಸುದೀಪ್ ಅವರು ಈ ಸೀಸನ್‌ನ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಅಶ್ವಿನಿ ಗೌಡ ಮತ್ತು ಧ್ರುವಂತ್‌ಗೆ ನೀಡಿ ಗೌರವಿಸಿದ್ದಾರೆ. ಈ ಸೀಸನ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗದ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಪಡೆಯಬೇಕೆಂಬ ದೊಡ್ಡ ಕನಸಿತ್ತು.
-
ʻಬಿಗ್ ಬಾಸ್ ಕನ್ನಡ ಸೀಸನ್ 12’ ಮುಗಿಯಲು ಇನ್ನೇನು ಒಂದು ವಾರ ಮಾತ್ರ ಬಾಕಿ ಇದೆ. ಈ ಬಾರಿ 112 ದಿನ ಬಿಗ್ ಬಾಸ್ ನಡೆಯುತ್ತಿರುವುದು ವಿಶೇಷ. ಅಂದಹಾಗೆ, ಈ ವಾರವೇ ಸುದೀಪ್ ಕೊನೆಯದಾಗಿ ಕಿಚ್ಚನ ಚಪ್ಪಾಳೆ ನೀಡುವುದು. ವಿಶೇಷವೆಂದರೆ, ಅದು ಕೊನೆಯದಾಗಿ ಅಶ್ವಿನಿ ಗೌಡ ಅವರಿಗೆ ಸಿಕ್ಕಿದೆ. ಅವರಿಷ್ಟೇ ಅಲ್ಲ, ಧ್ರುವಂತ್‌ಗೂ ದಕ್ಕಿದೆ. ಸಾಮಾನ್ಯವಾಗಿ ಕಿಚ್ಚನ ಚಪ್ಪಾಳೆಯು ವಾರದಲ್ಲಿ ಒಬ್ಬರಿಗೆ ಸಿಗುತ್ತದೆ. ಆದರೆ, ಈ ವಾರ ಇಬ್ಬರಿಗೂ ಸಿಕ್ಕಿದೆ. ಅದೇ ಈ ವಾರದ ಸ್ಪೆಷಾಲಿಟಿ.
ಕನಸು ನನಸಾಯಿತು
ಈ ಸೀಸನ್‌ನಲ್ಲಿ ಗಿಲ್ಲಿ, ರಕ್ಷಿತಾ ಸೇರಿದಂತೆ ಅನೇಕರು ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದಾರೆ. ಆದರೆ ಅಶ್ವಿನಿ ಗೌಡಗೆ ಮಾತ್ರ ಸಿಕ್ಕಿರಲಿಲ್ಲ. ಅವರು ಕ್ಯಾಪ್ಟನ್ ಕೂಡ ಆಗಿರಲಿಲ್ಲ. ಹಾಗಾಗಿ, ಕೊನೆಯ ಪಕ್ಷ ಕಿಚ್ಚನ ಚಪ್ಪಾಳೆಯನ್ನಾದರೂ ಪಡೆದುಕೊಳ್ಳಬೇಕು ಎಂದುಕೊಂಡಿದ್ದರು. ಅದು ಸಿಕ್ಕಿರಲಿಲ್ಲ. ಅದೊಂದು ಕನಸು ಅವರಲ್ಲಿತ್ತು. ಈ ವಾರ ಬಿಟ್ಟರೇ, ಮತ್ತೆಂದು ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತಿರಲಿಲ್ಲ. ಆದರೆ ಕೊನೆ ವಾರದಲ್ಲಿ ಕಿಚ್ಚ ಸರ್ಪ್ರೈಸ್ ನೀಡಿದ್ದು, ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ.
Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
ಇದೇ ವಾರ ಅವರು ಉತ್ತಮ ಪಡೆದುಕೊಂಡಿದ್ದರು. ಇದೀಗ ಕಿಚ್ಚನ ಚಪ್ಪಾಳೆಯೂ ಅವರಿಗೆ ಸಿಕ್ಕಿರುವುದು ಅವರ ಖುಷಿಗೆ ಕಾರಣವಾಗಿದೆ. ಅದೇ ಖುಷಿಯಲ್ಲಿ ಅವರು ಭಾವುಕರಾಗಿ ಕಣ್ಣೀರಿಟಿದ್ದಾರೆ.
BBK 12: ಬಿಗ್ ಬಾಸ್ ಕಾಲೇಜ್ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ
ಇಂದಿನ (ಜ.10) ʻವಾರದ ಕತೆ ಕಿಚ್ಚನ ಜೊತೆʼ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕಿಚ್ಚನ ಚಪ್ಪಾಳೆಯನ್ನು ನೀಡಿದ್ದಾರೆ. "ಈ ವಾರದ ಎಪಿಸೋಡ್‌ಗಳನ್ನು ನೋಡಿದಾಗ ನನಗೆ ಕಾಣಿಸಿದ್ದು ಒಂದು ವ್ಯಕ್ತಿಯ ಹಠ, ಫೋಕಸ್ ಮಾತ್ರ. ಎಲ್ಲಿ ಅವಮಾನಗಳು ಆಗುತ್ತವೋ, ಅದೇ ಬಾಯಿಗಳಿಂದ ನಾವು ಹೊಗಳಿಸಿಕೊಳ್ಳುತ್ತೇವೆ, ಅಲ್ವಾ? ಅಲ್ಲಿಯೇ ಗೆಲುವಿನ ಪ್ರಾರಂಭ. ಈ ಸೀಸನ್‌ನ ಕೊನೆಯ ʻಕಿಚ್ಚನ ಚಪ್ಪಾಳೆʼ ಅಶ್ವಿನಿ ಗೌಡ ಹಾಗೂ ಧ್ರುವಂತ್‌ಗೆ..." ಎಂದು ಕಿಚ್ಚ ಸುದೀಪ್ ಘೋಷಿಸುತ್ತಿದ್ದಂತೆಯೇ, ಇಬ್ಬರು ಸಂತೋಷದ ಅಲೆಯಲ್ಲಿ ತೇಲಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿಗೆ ದಾರಿ ಮಾಡಿಕೊಡಲಿದ್ದು, ಫಿನಾಲೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಆಟದ ರೋಚಕತೆ ಹೆಚ್ಚಿದೆ.