Bigg Boss Kannada 12: ಈ ವಾರ ಬಿಗ್‌ಬಾಸ್ ಮನೆಯಿಂದ ಇವರಿಬ್ಬರಲ್ಲಿ ಒಬ್ಬರಿಗೆ ಗೇಟ್‌ಪಾಸ್?
ಈ ವಾರ ಕ್ಯಾಪ್ಟನ್ ರಘು ಅವರಿಗೆ ಕಾಲೇಜಿನ ಪ್ರಿನ್ಸಿಪಾಲ್ ಪವರ್ ನೀಡಲಾಗಿತ್ತು. ಈ ವಾರ ಟಾಸ್ಕ್‌ನ ಆರಂಭದಲ್ಲೇ ಕಂಟಸ್ಟಂಟ್‌ಗಳ ಮಧ್ಯ ಬಿನ್ನಾಭಿಪ್ರಾಯಗಳು ಮೂಡಿ ಕೆಲವರ ನಡುವೆ ಜಗಳಕ್ಕೆ ಕಾರಣವಾಯಿತು. ಇದೆಲ್ಲದರ ನಡುವೆಯೇ ಕೆಲವರು ತಮ್ಮ ಆಟವನ್ನು ಚೆನ್ನಾಗಿ ಆಡಿದ್ದಲ್ಲದೇ, ಮನರಂಜನೆಯನ್ನೂ ನೀಡಿದ್ದಾರೆ. ಆದರೆ ಸುದೀಪ್ ಅವರು ಮನೆಯವರ ಕಿರುಚಾಟದ ಬಗ್ಗೆ ಎಚ್ಚರಿಕೆ ನೀಡಿ, ರಘು ಅವರ ಆಟಕ್ಕೆ ಫಿದಾ ಆಗಿ ಚಪ್ಪಾಳೆ ಕೂಡ ಕೊಟ್ಟಿದ್ದಾರೆ.
bigg boss kannada -
Yashaswi Devadiga
Nov 2, 2025 8:10 AM
ಬಿಗ್ ಬಾಸ್ ಸೀಸನ್ 12 (Bigg Boss Kannada 12) ಈ ವಾರ ಸಂಪೂರ್ಣವಾಗಿ ಬಿಬಿ ಕಾಲೇಜುವಾಗಿ ಬದಲಾಗಿತ್ತು. ಹೀಗಾಗಿ ನೀಲಿ ತಂಡದ ಧನುಷ್ ಮುಂದಿನ ವಾರಾಂತ್ಯದವರೆಗೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಹಾಗೇ ಈ ವಾರದ ಕಳಪೆ ಧ್ರುವಂತ್ ಆದರೆ ಉತ್ತಮ ಜಾಹ್ನವಿ ಪಡೆದುಕೊಂಡಿದ್ದಾರೆ.
ಪ್ರತಿ ಬಾರಿ ಕಿಚ್ಚನ ಚಪ್ಪಾಳೆ, ಎಲಿಮಿನೇಶನ್ ಸೇರಿದಂತೆ ಅನೇಕ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತದೆ. ಅದರಲ್ಲಿಯೂ ಕೆಲವೊಮ್ಮೆ ನೆಟ್ಟಿಗರು ಊಹಿಸಿದ್ದೇ ಸತ್ಯವಾಗುತ್ತದೆ. ಈ ಬಾರಿಗೂ ಎರಡು ಸ್ಪರ್ಧಿಗಳ ಹೆಸರು ಕೇಳಿಬರುತ್ತಿದೆ. ಇವರಿಬ್ಬರಲ್ಲಿ ಒಬ್ಬರು ಮನೆಯಿಂದ ಹೊರಹೋಗೋದು ಕನ್‌ಫರ್ಮ್ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ! ಹಾಗಾದ್ರೆ ಯಾರದು?
ರಘು ಅವರ ಆಟಕ್ಕೆ ಫಿದಾ
ಈ ವಾರ ಕ್ಯಾಪ್ಟನ್ ರಘು ಅವರಿಗೆ ಕಾಲೇಜಿನ ಪ್ರಿನ್ಸಿಪಾಲ್ ಪವರ್ ನೀಡಲಾಗಿತ್ತು. ಈ ವಾರ ಟಾಸ್ಕ್‌ನ ಆರಂಭದಲ್ಲೇ ಕಂಟಸ್ಟಂಟ್‌ಗಳ ಮಧ್ಯ ಬಿನ್ನಾಭಿಪ್ರಾಯಗಳು ಮೂಡಿ ಕೆಲವರ ನಡುವೆ ಜಗಳಕ್ಕೆ ಕಾರಣವಾಯಿತು. ಇದೆಲ್ಲದರ ನಡುವೆಯೇ ಕೆಲವರು ತಮ್ಮ ಆಟವನ್ನು ಚೆನ್ನಾಗಿ ಆಡಿದ್ದಲ್ಲದೇ, ಮನರಂಜನೆಯನ್ನೂ ನೀಡಿದ್ದಾರೆ. ಆದರೆ ಸುದೀಪ್ ಅವರು ಮನೆಯವರ ಕಿರುಚಾಟದ ಬಗ್ಗೆ ಎಚ್ಚರಿಕೆ ನೀಡಿ, ರಘು ಅವರ ಆಟಕ್ಕೆ ಫಿದಾ ಆಗಿ ಚಪ್ಪಾಳೆ ಕೂಡ ಕೊಟ್ಟಿದ್ದಾರೆ.
ಈ ವಾರ ಬಿಗ್‌ಬಾಸ್ ಸ್ಪರ್ಧಿಗಳನ್ನು ಎರಡು ತಂಡಗಳನ್ನಾಗಿ ಮಾಡಲಾಗಿತ್ತು. ಆದರೆ ಕೊನೆಯಲ್ಲಿ ಧನುಷ್ ಅವರು ಕ್ಯಾಪ್ಟನ್ ಆದರು. ಇನ್ನು ಈ ವಾರ ರಾಶಿಕಾ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಮತ್ತು ಮಲ್ಲಮ್ಮ ಇವರೆಲ್ಲರು ನಾಮಿನೇಟ್ ಆಗಿದ್ದಾರೆ. ಹಿಂದಿನ ವಾರ ವೋಟಿಂಗ್ ಲೈನ್ ಓಪನ್ ಇಲ್ಲದ ಕಾರಣ ಯಾರು ಮನೆಯಿಂದ ಹೂರ ಹೋಗಲ್ಲಿಲ್ಲ.
ಈ ಸ್ಪರ್ಧಿ ಔಟ್?
ಸೋಷಿಯಲ್ ಮೀಡಿಯಾ ಚರ್ಚೆಗಳ ಪ್ರಕಾರ ಮಲ್ಲಮ್ಮ ಹೋಗಬಹುದು ಎನ್ನಲಾಗುತ್ತಿದೆ. ಜೊತೆಗೆ ಮನೆಯಿಂದ ಹೊರ ಬರಬಹುದಾದ ಎಲ್ಲ ಸಾಧ್ಯತೆಗಳಿರೋದು ಕಂಟೆಸ್ಟೆಂಟ್ ಧ್ರುವಂತ್ ಎನ್ನಲಾಗುತ್ತಿದೆ. ಏಕೆಂದರೆ ಅವರ ಆಟದ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.
ಬಿಗ್ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್!
ಬಿಗ್ ಬಾಸ್ ಶುರುವಾಗಿನಿಂದ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ಅಪಸ್ವರ ಕೇಳಿ ಬರುತ್ತಲೇ ಇತ್ತು. ಅದುವೇ ಸ್ಪರ್ಧಿಗಳ ಅತಿರೇಕದ ವರ್ತನೆ, ಕಿರುಚಾಟ, ಕೂಗಾಟ. ಈ ಬಗ್ಗೆ ಸುದೀಪ್ ಅವರು ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.ನೀವು ಮಾಡ್ತಿರೋದು ಸರಿ ಅಲ್ಲ ಎಂದು ಹೇಳಿದ್ದಾರೆ. ನೀವು ಹೊರಗೆ ಜೋಕರ್ಸ್ ರೀತಿ ಕಾಣಿಸುತ್ತಿದ್ದೀರಿ .
ಹೊರಗೆ ಸಾಕಷ್ಟು ದೃಷ್ಟಿ ಕೋನ ಇದೆ. ಗುಂಪು ಮಾಡಿದ್ದರೂ, ಟೀಂ ಆಗಿ ಯಾರೂ ಆಡಿಲ್ಲ ಎಂದರು. ಈ ಹಿಂದೆ ಕುಟುಂಬದವರು ಕಾಲ್ ಮಾಡಿ ಮಾತನಾಡಿದ್ದರು. ಆದರೆ ಸ್ಪರ್ಧಿಗಳು ಆ ಮಾತನ್ನೇ ನಂಬಿಕೊಂಡು ಇದ್ದರು. ಈ ಬಗ್ಗೆ ಸುದೀಪ್ ಅವರು ಪ್ರಸ್ತಾಪಿಸಿ, ಮನೆಯವರ ಮಾತನ್ನು ನೀವು ನಂಬಿದರೆ ನಿಮ್ಮಷ್ಟು ದೊಡ್ಡ ಮುಟ್ಠಾಳರು ಮತ್ತೊಬ್ಬರು ಇಲ್ಲ ಎಂದು ನೇರವಾಗಿಯೇ ಹೇಳಿದರು.
ಸದಸ್ಯರಿಗೆ ದೊಡ್ಡ ಟಾಸ್ಕ್
ಇನ್ನು ಈ ವಾರ ಸುದೀಪ್ ಅವರು ಮನೆಯ ಸದಸ್ಯರಿಗೆ ದೊಡ್ಡ ಟಾಸ್ಕ್ ಕೊಟ್ಟು ಇಡೀ ಮನೆಯನ್ನೇ ನಾಮಿನೇಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ವಾರ ಟಾಸ್ಕ್ ಇಲ್ಲದೇ ನಿಮ್ಮನ್ನ ನೀವು ಪ್ರೂವ್ ಮಾಡಿಕೊಳ್ಳಬೇಕು ಅಂತ ನೇರಾ ಚಾಲೆಂಜ್ ಹಾಕಿದ್ದಾರೆ ಕಿಚ್ಚ ಸುದೀಪ್. ಒಂದು ಕ್ಷಣ ಸ್ಪರ್ಧಿಗಳು ಕೂಡ ಥಂಡಾ ಹೊಡೆದಿದ್ದಾರೆ. ಅದು ಅಲ್ಲದೇ ಒಬ್ಬರನ್ನೂ ಬಿಡದೇ ನಾಮಿನೇಟ್ ಮಾಡಿರೋದು ಸ್ಪರ್ಧಿಗಳಿಗೆ ಇದು ದೊಡ್ಡ ಟಾಸ್ಕ್ ಆಗಿಬಿಟ್ಟಿದೆ.